HMDಯಿಂದ ಬಾರ್ಬಿ ಫ್ಲಿಪ್ ಫೋನ್ ಬಿಡುಗಡೆ; ವಾವ್ ಎನಿಸುವ ಡಿಸೈನ್, ಅಗ್ಗದ ಬೆಲೆ!
ಜನಪ್ರಿಯ HMD ಗ್ಲೋಬಲ್ ಸಂಸ್ಥೆಯು Mattel ಸಹಭಾಗಿತ್ವದಲ್ಲಿ ಬಾರ್ಬಿ ಫೋನ್, ರೆಟ್ರೋ ಫ್ಲಿಪ್ ಫೋನ್ (Barbie Phone retro flip) ಅನ್ನು ಬಿಡುಗಡೆ ಮಾಡಿದೆ. ಈ ನೂತನ ಫ್ಲಿಪ್ ಫೋನ್ ಕರೆ ಮಾಡುವುದು, ಮೆಸೆಜ್ ಕಳುಹಿಸುವುದು ಮತ್ತು ಡಿಜಿಟಲ್ ವ್ಯಾಕುಲತೆ ಇಲ್ಲದೆ ನೈಜ ಜಗತ್ತಿನಲ್ಲಿ ವಾಸಿಸುವ ಫೀಚರ್ಸ್‌ಗಳನ್ನು ಪಡೆದಿದೆ. ಇನ್ನು ಈ ಫೋನ್ ಎರಡು ಬದಲಾಯಿಸಬಹುದಾದ ಹಿಂಭಾಗದ ಕವರ್ ಆಯ್ಕೆಗಳೊಂದಿಗೆ ಕಾಣಿಸಿಕೊಂಡಿದೆ.
ಹೌದು, HMD ಗ್ಲೋಬಲ್ ಸಂಸ್ಥೆಯು ಬಾರ್ಬಿ ಫೋನ್, ರೆಟ್ರೋ ಫ್ಲಿಪ್ ಫೋನ್ (Barbie Phone retro flip) ಅನ್ನು ಅನಾವರಣ ಮಾಡಿದೆ. ಈ ಫೋನ್ 1992 ರ ಸಾಂಪ್ರದಾಯಿಕ ಟೋಟಲಿ ಹೇರ್ ಬಾರ್ಬಿ ಗೊಂಬೆಯ ಗಾಢ ಬಣ್ಣದ ಸುರುಳಿಗಳು ಮತ್ತು ವಿಂಟೇಜ್ 'ಶೂಟಿಂಗ್ ಹಾರ್ಟ್' ವಿನ್ಯಾಸವನ್ನು ಪಡೆದಿರುವುದು ಪ್ಲಸ್ ಪಾಯಿಂಟ್ ಹಾಗೂ ಪ್ರಮುಖ ಹೈಲೈಟ್ ಅಂಶವಾಗಿದೆ.

ಇನ್ನು ಹೂವುಗಳು, ಫ್ಲೆಮಿಂಗೊಗಳು ಮತ್ತು ಮಳೆಬಿಲ್ಲುಗಳು ಸೇರಿದಂತೆ ಆರಾಧ್ಯ ರೆಟ್ರೊ ಬಾರ್ಬಿ ಸ್ಟಿಕ್ಕರ್‌ಗಳ ಮೂಲಕ ಗ್ರಾಹಕರಿಗೆ ತಮ್ಮ ಫೋನ್ ಅನ್ನು ಕಸ್ಟಮೈಸ್ ಮಾಡಲು ಅನುವು ಮಾಡಿಕೊಡುತ್ತದೆ. ಅಲ್ಲದೇ ಇದು ಗುಲಾಬಿ, ಹಳದಿ ಮತ್ತು ನೀಲಿ ಬಣ್ಣಗಳಲ್ಲಿ ಬರುತ್ತದೆ. ಹಾಗಾದರೇ ಈ ಬಾರ್ಬಿ ಫೋನ್, ರೆಟ್ರೋ ಫ್ಲಿಪ್ ಫೋನ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
ಬಾರ್ಬಿ ಫೋನ್ ಫೀಚರ್ಸ್ ಹೀಗಿವೆ
ಬಾರ್ಬಿ ಫೋನ್, ರೆಟ್ರೋ ಫ್ಲಿಪ್ ಫೋನ್ (Barbie Phone retro flip) ಫೋನ್ 2.8 ಇಂಚಿನ QVGA ಆಂತರಿಕ ಸ್ಕ್ರೀನ್ ಅನ್ನು ಪಡೆದಿದ್ದು, ಹಾಗೆಯೇ ಇದು 1.77 ಇಂಚಿನ ಬಾಹ್ಯ ಸ್ಕ್ರೀನ್ ಅನ್ನು ಪಡೆದುಕೊಂಡಿದೆ. ಅಲ್ಲದೇ ಈ ಫೋನ್ Unisoc T107 ಪ್ರೊಸೆಸರ್ ಚಿಪ್‌ಸೆಟ್‌ನಲ್ಲಿ ಕೆಲಸ ಮಾಡುತ್ತದೆ. ಇದು 1450mAh ತೆಗೆಯಬಹುದಾದ ಬ್ಯಾಟರಿ ಸೌಲಭ್ಯ ಪಡೆದಿದ್ದು, ಇದರ ಜೊತೆಗೆ 9 ಗಂಟೆಗಳ ಟಾಕ್ ಟೈಮ್ ಸೌಲಭ್ಯ ಇದೆ.
ಹಾಗೆಯೇ ಈ ಸ್ಟೈಲಿಶ್ ಫೋನ್ 64MB RAM, 128 MB ಆಂತರಿಕ ಸಂಗ್ರಹಣೆ ಸೌಲಭ್ಯ ಪಡೆದಿದ್ದು, ಅಲ್ಲದೇ ಮೈಕ್ರೊ SD ಜೊತೆಗೆ 32GB ವರೆಗೆ ವಿಸ್ತರಿಸಬಹುದಾದ ಮೆಮೊರಿ ಆಯ್ಕೆ ಪಡೆದಿದೆ. ಹಾಗೆಯೇ ಇದು S30+ ಓಎಸ್ ಹೊಂದಿದ್ದು, ಡ್ಯುಯಲ್ ಸಿಮ್ ಸೌಲಭ್ಯ ಸಹ ಇದೆ. ಅಂದಹಾಗೆ ಎಲ್ಇಡಿ ಫ್ಲ್ಯಾಶ್ ಜೊತೆಗೆ VGA ಕ್ಯಾಮೆರಾ ರಚನೆ ಅನ್ನು ಇದು ಪಡೆದುಕೊಂಡಿದೆ.
ಹಾಗೆಯೇ ಈ ಫೋನ್ 3.5mm ಹೆಡ್‌ಫೋನ್ ಜ್ಯಾಕ್, MP3 ಪ್ಲೇಯರ್, FM ರೇಡಿಯೋ (ವೈರ್ಡ್/ವೈರ್‌ಲೆಸ್), ಬ್ಲೂಟೂತ್ 5.0, USB ಟೈಪ್-C ಆಯ್ಕೆಗಳನ್ನು ಕೂಡಾ ಪಡೆದುಕೊಂಡಿದೆ. ಇನ್ನು ನೆಟ್‌ವರ್ಕ್‌ಗಳಲ್ಲಿ ಇದು GSM/GPRS 900/1800, WCDMA, LTE Cat1 ಆಯ್ಕೆ ಪಡೆದಿದೆ. ಇನ್ನು ಇದು 108.4×55.1×18.9mm ಸುತ್ತಳತೆ ರಚನೆ ಪಡೆದಿದ್ದು, 123.5g ತೂಕ ಪಡೆದುಕೊಂಡಿದೆ.
ಬೆಲೆ ಮತ್ತು ಲಭ್ಯತೆ ಮಾಹಿತಿ
HMD ಬಾರ್ಬಿ ಫೋನ್ UK ನಲ್ಲಿ 99 GBP (ಭಾರತದಲ್ಲಿ ಅಂದಾಜು 11,008ರೂ. ಗಳು ಎನ್ನಲಾಗಿದೆ) ಅಥವಾ ಯುರೋಪ್‌ನಲ್ಲಿ 129 ಯೂರೋ (ಭಾರತದಲ್ಲಿ ಅಂದಾಜು 12,085ರೂ. ಗಳು ಎನ್ನಲಾಗಿದೆ) ಹೊಂದಿದೆ. ಇನ್ನು ಈ ಫೋನ್ ಇಂದಿನಿಂದ (ಆಗಸ್ಟ್ 28 ರಿಂದ) ಲಭ್ಯವಿರುತ್ತದೆ. ಹಾಗೆಯೇ ಇದು USD 129 (ಭಾರತದಲ್ಲಿ ಅಂದಾಜು 10,825ರೂ. ಎನ್ನಲಾಗಿದೆ). ಸೆಪ್ಟೆಂಬರ್ 23 ರಿಂದ ಮುಂಗಡ-ಆರ್ಡರ್‌ಗಳೊಂದಿಗೆ ಮತ್ತು ಅಕ್ಟೋಬರ್ 1 ರಿಂದ ಮಾರಾಟವಾಗಲಿದೆ.


Click it and Unblock the Notifications








