HMD ಪಲ್ಸ್ ನ ಕಲರ್ ಹಾಗೂ ಫೀಚರ್ಸ್ ಲೀಕ್! ಶೀಘ್ರದಲ್ಲೇ ಲಾಂಚ್...
HMD ಕೆಲವು ದಿನಗಳ ಹಿಂದಷ್ಟೇ ಮೂರು ಫೀಚರ್ ಫೋನ್‌ಗಳನ್ನು ಲಾಂಚ್ ಮಾಡಿತ್ತು. ಇದೀಗ ಪಲ್ಸ್ ಸ್ಮಾರ್ಟ್‌ಫೋನ್‌ನ ಕೆಲವು ಫೀಚರ್ಸ್ ಅನ್ನು ಲೇವಡಿ ಮಾಡಿದೆ. ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರುವ ಮೊದಲ HMD ಫೋನ್‌ಗಳಲ್ಲಿ ಒಂದಾಗಿರಲಿದೆ.
ಹೌದು, ಮುಂಬರುವ ತಿಂಗಳುಗಳಲ್ಲಿ HMD ಬ್ರಾಂಡ್ ಸ್ಮಾರ್ಟ್‌ಫೋನ್‌ಗಳನ್ನು ಪ್ರಕಟಿಸುವುದಾಗಿ HMD ದೃಢಪಡಿಸಿತ್ತು. ಅದರಂತೆ HMD ಪಲ್ಸ್ ಬಗ್ಗೆ ಇದೀಗ ಘೋಷಣೆ ಮಾಡಿದೆ. ಜನಪ್ರಿಯ ಟಿಪ್‌ಸ್ಟರ್ ಆನ್‌ಲೀಕ್ಸ್‌ನ ಸಹಭಾಗಿತ್ವದಲ್ಲಿ ಮೈಸ್ಮಾರ್ಟ್‌ಪ್ರೈಸ್ ಈ ಸಂಬಂಧ ವರದಿ ಮಾಡಿದೆ. ಅದರ ಪ್ರಕಾರ ಪಲ್ಸ್‌ನ ಚಿತ್ರಗಳು ಮತ್ತು ಪ್ರಮುಖ ಫೀಚರ್ಸ್ ಅನ್ನು ಉಲ್ಲೇಖ ಮಾಡಲಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ನಿರೀಕ್ಷೆ ಮಾಡಬಹುದು?. ಯಾವಾಗ ಲಾಂಚ್ ಆಗಲಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

HMD ಪಲ್ಸ: HMD ಪಲ್ಸ್‌ನ ಲೀಕ್ ರೆಂಡರ್ ಗಮನಿಸುವುದಾದರೆ ಪಂಚ್-ಹೋಲ್ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದ್ದು, ಫೋನ್‌ನ ರಿಯರ್ ಪ್ಯಾನಲ್ ಮೇಲಿನ ಎಡ ಮೂಲೆಯಲ್ಲಿ ಕಪ್ಪು ಬಣ್ಣದ ಡ್ಯುಯಲ್ ಕ್ಯಾಮೆರಾ ಮಾಡ್ಯೂಲ್ ಮತ್ತು ಮಧ್ಯದಲ್ಲಿ HMD ಬ್ರ್ಯಾಂಡಿಂಗ್‌ನೊಂದಿಗೆ ಸಂಯೋಜಿಸಲಾಗಿದೆ. ಇದನ್ನು ಮಗನಿಸಿದ್ರೆ ಈ ಸ್ಮಾರ್ಟ್‌ಫೋನ್ ಕಪ್ಪು, ನೀಲಿ ಮತ್ತು ಗುಲಾಬಿಯಂತಹ ಮೂರು ಬಣ್ಣದ ಆಯ್ಕೆಯಲ್ಲಿ ಲಭ್ಯ ಇರಲಿದೆ ಎಂದು ತಿಳಿದುಬಂದಿದೆ.
ಇನ್ನು HMD ಪಲ್ಸ್ 6.56 ಇಂಚಿನ ಐಪಿಎಸ್ ಎಲ್‌ಸಿಡಿ ಪ್ಯಾನೆಲ್ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದ್ದು, ಅದು ಎಚ್‌ಡಿ+ ರೆಸಲ್ಯೂಶನ್ ಸಾಮರ್ಥ್ಯ ಪಡೆದಿರಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಅಲ್ಲದೆ ಯೂನಿಸೋಕ್ T606 ಪ್ರೊಸೆಸರ್‌ನಲ್ಲಿ ಈ ಫೋನ್ ಕಾರ್ಯನಿರ್ವಹಿಸಲಿದ್ದು, 4 GB ಮತ್ತು 8 GB RAM ಇಂಟರ್ ಸ್ಟೋರೇಜ್ ಆಯ್ಕೆ ಪಡೆದುಕೊಂಡಿರಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಇದರ ಜೊತೆಗೆ ಈ HMD ಪಲ್ಸ್ ಅನ್ನು ಮೊದಲೇ ಸ್ಥಾಪಿಸಲಾದ ಆಂಡ್ರಾಯ್ಡ್ 14 ಓಎಸ್ ನೊಂದಿಗೆ ರನ್ ಆಗಲಿದ್ದು, 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಆದರೆ ಇದರ ಚಾರ್ಜಿಂಗ್ ಸಾಮರ್ಥ್ಯಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಫೋನ್ ಇತರೆ ಎರಡು ವೇರಿಯಂಟ್ ಆಯ್ಕೆಯಲ್ಲಿ ಲಭ್ಯ ಇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಂದರೆ ಪಲ್ಸ್ + ಮತ್ತು ಪಲ್ಸ್ ಪ್ರೊ ನಂತಹ ಇತರ ಎರಡು ಮಾದರಿಗಳು ಸೇರಿಕೊಳ್ಳುತ್ತವೆ ಎಂದು ಊಹಿಸಲಾಗಿದೆ.
ಅದಾಗ್ಯೂ ಈ ಎರಡು ವೇರಿಯಂಟ್‌ಗಳ ಬಗ್ಗೆ ಯಾವುದೇ ವಿವರಗಳು ಇನ್ನೂ ಲಭ್ಯವಿಲ್ಲ. ಈ ನಡುಗೆ HMD ಲೆಜೆಂಡ್, ಲೆಜೆಂಡ್+ ಮತ್ತು ಲೆಜೆಂಡ್ ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಸಹ ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಈ ಫೋನ್‌ಗಳನ್ನು ಈ ವರ್ಷದ ಜುಲೈನಲ್ಲಿ ಬಾರ್ಬಿ-ಥೀಮಿನ ಫ್ಲಿಪ್ ಫೋನ್ ಜೊತೆಗೆ ಪಲ್ಸ್ ಮತ್ತು ಲೆಜೆಂಡ್ ಸರಣಿಯನ್ನು ಅನಾವರಣಗೊಳಿಸಬಹುದು ಎಂದು ನಿರೀಕ್ಷಿಸಲಾಗಿದೆ.
HMD ಯಿಂದ ಮೂರು ನೋಕಿಯಾ ಫೀಚರ್ ಫೋನ್: ಈ ನಡುವೆ ನೋಕಿಯಾ (Nokia) ಒಂದೇ ಬಾರಿಗೆ ಮೂರು ಫೀಚರ್ ಫೋನ್‌ಗಳನ್ನು ಲಾಂಚ್ ಮಾಡಿದೆ. ನೋಕಿಯಾ 6310 (2024), ನೋಕಿಯಾ 5310 (2024) ನೋಕಿಯಾ 230 (2024) ಎಂಬ ಮೂರು ಫೀಚರ್ ಫೋನ್‌ಗಳನ್ನು ಈ ವಿಭಾಗದಲ್ಲಿ ಕಾಣಬಹುದಾಗಿದೆ ನೋಕಿಯಾ 230 (2024) ಫೀಚರ್ ಫೋನ್ 2.8-ಇಂಚಿನ QVGA ಡಿಸ್‌ಪ್ಲೇ ಹೊಂದಿದ್ದು, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ 2 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. .
ಅಲ್ಲದೆ ಈ ಫೋನ್‌ನಲ್ಲಿನ ಎರಡೂ ಸೈಟ್‌ನಲ್ಲಿ ಎಲ್‌ಇಡಿ ಫ್ಲ್ಯಾಶ್ ಇದ್ದು, ಯುನಿಸೊಕ್ 6531F ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಇದರ ಜೊತೆಗೆ 8MB RAM ಮತ್ತು 16MB ಇಂಟರ್ ಸ್ಟೋರೇಜ್ ಆಯ್ಕೆ ನೀಡಲಾಗಿದೆ.


Click it and Unblock the Notifications








