Home
ಸುದ್ದಿಜಾಲ

HMD Skyline ಸ್ಮಾರ್ಟ್‌ಫೋನ್‌ ಲಾಂಚ್‌; 108ಎಂಪಿ ಕ್ಯಾಮೆರಾ, 12GB RAM ಸೌಲಭ್ಯ!

HMD ಮೊಬೈಲ್‌ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹೊಸದಾಗಿ HMD ಸ್ಕೈಲೈನ್ (HMD Skyline) ಹೆಸರಿನ ಮೊಬೈಲ್‌ ಅನ್ನು ಲಾಂಚ್‌ ಮಾಡಿದೆ. ಇನ್ನು ಈ ಮೊಬೈಲ್ ಮೀಡ್‌ರೇಂಜ್‌ ಪ್ರೈಸ್‌ಟ್ಯಾಗ್‌ ರೇಂಜ್‌ನಲ್ಲಿ ಕಾಣಿಸಿಕೊಂಡಿದ್ದು, ಸ್ನ್ಯಾಪ್‌ಡ್ರಾಗನ್‌ 7s ಜೆನ್‌ 2 ಚಿಪ್‌ಸೆಟ್ ಪ್ರೊಸೆಸರ್‌ ಸೌಲಭ್ಯದಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಈ ಫೋನ್‌ 108 ಮೆಗಾ ಪಿಕ್ಸಲ್‌ ಸೆನ್ಸಾರ್‌ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ.

ಹೌದು, HMD ಮೊಬೈಲ್‌ ಸಂಸ್ಥೆಯು ಭಾರತದಲ್ಲಿ ನೂತನವಾಗಿ HMD ಸ್ಕೈಲೈನ್ (HMD Skyline) ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಮೊಬೈಲ್‌ 4,600 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, ಹಾಗೆಯೇ 12GB RAM + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಸಹ ಪಡೆದಿದೆ. ಅಲ್ಲದೇ Qi2 ಸಪೋರ್ಟ್‌ ಜೊತೆಗೆ ವೈರ್‌ಲೆಸ್‌ ಚಾರ್ಜಿಂಗ್‌ ಸಪೋರ್ಟ್‌ ಕೂಡಾ ಒಳಗೊಂಡಿದೆ.

HMD Skyline ಸ್ಮಾರ್ಟ್‌ಫೋನ್‌ ಲಾಂಚ್‌; 108ಎಂಪಿ ಕ್ಯಾಮೆರಾ, 12GB RAM ಸೌಲಭ್ಯ!

ಅಲ್ಲದೇ HMD ಈ ನೂತನ ಫೋನಿನ ಸ್ಕ್ರೀನ್‌ 144Hz ರಿಫ್ರೆಶ್‌ ರೇಟ್‌ ಪಡೆದುಕೊಂಡಿದೆ. ಹಾಗೆಯೇ ಈ ಫೋನ್ ಕ್ಯಾಪ್ಚರ್ ಫ್ಯೂಷನ್, 4x ಆಪ್ಟಿಕಲ್ ಜೂಮ್, ಪೋರ್ಟ್ರೇಟ್ ಮೋಡ್ ನಂತಹ ಕ್ಯಾಮೆರಾ ಆಯ್ಕೆಗಳನ್ನು ಇದು ಒಳಗೊಂಡಿದೆ. ಇನ್ನುಳಿದಂತೆ HMD ಸ್ಕೈಲೈನ್ (HMD Skyline) ಫೋನಿನ ಇತರೆ ಫೀಚರ್ಸ್‌ ಬಗ್ಗೆ ಹಾಗೂ ಬೆಲೆಯ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

HMD ಸ್ಕೈಲೈನ್ ಮೊಬೈಲ್‌ - ಫೀಚರ್ಸ್‌

HMD ಸ್ಕೈಲೈನ್ ಫೋನ್‌ 6.67 ಇಂಚಿನ ಪೂರ್ಣ HD+ ಪೋಲೆಡ್ ಸ್ಕ್ರೀನ್‌ ಅನ್ನು ಹೊಂದಿದ್ದು, ಇದು 1,800 x 2,400 ಪಿಕ್ಸೆಲ್‌ ರೆಸಲ್ಯೂಶನ್ ಪಡೆದಿದೆ. ಅಲ್ಲದೇ 144Hz ರಿಫ್ರೆಶ್ ರೇಟ್, 1,000 nits ಗರಿಷ್ಠ ಬ್ರೈಟ್‌ನೆಸ್ ಮಟ್ಟ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಅನ್ನು ಹೊಂದಿದೆ.

HMD ಸ್ಕೈಲೈನ್ ಫೋನ್‌ ಸ್ನ್ಯಾಪ್‌ಡ್ರಾಗನ್‌ 7s ಜೆನ್‌ 2 ಚಿಪ್‌ಸೆಟ್ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದರ ಜೊತೆಗೆ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಸಹ ಪಡೆದಿದೆ. ಹಾಗೆಯೇ 12 GB RAM + 256 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಸಹ ಪಡೆದಿದೆ.

HMD ಸ್ಕೈಲೈನ್ ಫೋನ್‌ ತ್ರಿವಳಿ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸಲ್‌ ಸೆನ್ಸಾರ್‌ ರಚನೆ ಅನ್ನು ಪಡೆದುಕೊಂಡಿದೆ. ಇನ್ನು ದ್ವಿತೀಯ ಹಾಗೂ ತೃತೀಯ ಕ್ಯಾಮೆರಾಗಳು ಕ್ರಮವಾಗಿ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಹಾಗೂ 13 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಭ್ಯದ ರಚನೆಯಲ್ಲಿ ಇವೆ. ಮುಂಭಾಗದಲ್ಲಿ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.

HMD ಸ್ಕೈಲೈನ್ ಫೋನ್‌ 4,600mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ Qi2 ಸಪೋರ್ಟ್‌ ಜೊತೆಗೆ ವೈರ್‌ಲೆಸ್‌ ಚಾರ್ಜಿಂಗ್‌ ಸಪೋರ್ಟ್‌ ಕೂಡಾ ಒಳಗೊಂಡಿದೆ. ಅಲ್ಲದೇ ಬ್ಲೂಟೂತ್ 5.2, Wi-Fi 802.11 b/g/n/ac/ax/6e, NFC, GPS/A-GPS, ಗೆಲಿಲಿಯೊ L1/L5 ಡ್ಯುಯಲ್-ಬ್ಯಾಂಡ್, ಗ್ಲೋನಾಸ್, BDS, OTG, ಡ್ಯುಯಲ್-ಸಿಮ್ ಆಯ್ಕೆಗಳು ಇವೆ.

ಬೆಲೆ ಹಾಗೂ ಲಭ್ಯತೆಯ ಮಾಹಿತಿ
HMD ಸ್ಕೈಲೈನ್ ಫೋನ್‌ 12GB RAM ಮತ್ತು 256GB ಸ್ಟೋರೇಜ್ ವೇರಿಯಂಟ್‌ ಬೆಲೆಯು 35,999ರೂ. ಗಳು ಆಗಿದೆ. ಇನ್ನು ಈ ಫೋನ್‌ ಇದೇ ಸೆಪ್ಟೆಂಬರ್ 17 ರಿಂದ ಅಮೆಜಾನ್‌ ಹಾಗೂ HMD ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

Best Mobiles in India

English summary
HMD Skyline with Snapdragon 7s Gen 2 SoC launched in India. check out price, specifications, offer, sale date and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+