Home
ಸುದ್ದಿಜಾಲ

ಮಾರುಕಟ್ಟೆಯಲ್ಲಿ ಮತ್ತೆ ಧೂಳೆಬ್ಬಿಸಲು ಸಿದ್ಧವಾದ ಹಾನರ್‌!.ಈ ಬಾರಿ ಅಚ್ಚರಿ ಫೋನ್‌!

ಹಾನರ್‌ 90 ಸ್ಮಾರ್ಟ್‌ಫೋನ್‌ ಮೂಲಕ ಭಾರತೀಯ ಮಾರುಕಟ್ಟೆಗೆ ರೀ ಎಂಟ್ರಿ ಪಡೆದಿರುವ ಹಾನರ್‌ ಮೊಬೈಲ್‌ ಸಂಸ್ಥೆಯು ಹೊಸ ಉತ್ಪನ್ನ ಲಾಂಚ್ ಮಾಡಲು ಈಗ ಮತ್ತಷ್ಟು ಆಕ್ಟಿವ್ ಆಗಿದೆ. ಹಾನರ್‌ 90 ಬಳಿಕ, ಸಂಸ್ಥೆಯು ನೂತನವಾಗಿ ಹಾನರ್‌ 100 ಸ್ಮಾರ್ಟ್‌ಫೊನ್‌ ಸರಣಿ ಅನ್ನು ಚೀನಾ ಮಾರುಕಟ್ಟೆಯಲ್ಲಿ ಘೋಷಿಸಲು ಸಕಲ ರೀತಿ ಸಜ್ಜಾಗುತ್ತಲಿದೆ ಎಂದು ಕೆಲವು ವರದಿಗಳಿಂದ ತಿಳಿದುಬಂದಿದೆ.

ಹೌದು, ಹಾನರ್ ಕಂಪನಿಯು ಸದ್ಯದಲ್ಲೇ ಹಾನರ್‌ 100 ಸ್ಮಾರ್ಟ್‌ಫೊನ್‌ ಸರಣಿ ಪರಿಚಯಿಸುವ ಸಾಧ್ಯತೆಗಳು ಅಧಿಕ ಆಗಿವೆ. ಇನ್ನು ಈ ಸರಣಿಯು ಮೂರು ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರುವ ನಿರೀಕ್ಷೆಗಳು ಇದ್ದು, ಅವುಗಳು ಕ್ರಮವಾಗಿ ಹಾನರ್‌ 100, ಹಾನರ್‌ 100 ಪ್ರೊ ಮತ್ತು ಹಾನರ್‌ 100 GT ಆಗಿರಲಿವೆ. ವೈಬೊದಲ್ಲಿ, ಸ್ಮಾರ್ಟ್ ಪಿಕಾಚು ಎಂಬ ಟಿಪ್‌ಸ್ಟರ್, ಈ ಸರಣಿಯು ಈ ತಿಂಗಳ ಅಂತ್ಯದ ವೇಳೆ ಚೀನಾದಲ್ಲಿ ಲಾಂಚ್ ಆಗಬಹುದು ಎಂದಿದ್ದಾರೆ.

ಮಾರುಕಟ್ಟೆಯಲ್ಲಿ ಮತ್ತೆ ಧೂಳೆಬ್ಬಿಸಲು ಸಿದ್ಧವಾದ ಹಾನರ್‌!.ಈ ಬಾರಿ ಅಚ್ಚರಿ ಫೋನ್‌!

ಅಂದಹಾಗೆ ಲೀಕ್‌ ಮಾಹಿತಿಗಳ ಪ್ರಕಾರ ಮುಂಬರುವ ಹಾನರ್ 100 ಪ್ರೊ ಫೋನ್‌ ಮೊದಲಿಗೆ ಚೀನಾದಲ್ಲಿ ಲಗ್ಗೆ ಇಡಲಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 8 ಜೆನ್ ಪ್ರೊಸೆಸರ್‌ ಸಾಮರ್ಥ್ಯದೊಂದಿಗೆ ಬರುವ ನಿರೀಕ್ಷೆಯಿದೆ. ಹಾಗಾದರೆ ಹಾನರ್ ಸಂಸ್ಥೆಯ ಇತ್ತೀಚಿನ ಹಾನರ್‌ 90 ಫೋನಿನ ಫೀಚರ್ಸ್‌ ಬಗ್ಗೆ ಒಂದು ನೋಟ ಮುಂದೆ ನೋಡೋಣ ಬನ್ನಿರಿ.

ಮಾರುಕಟ್ಟೆಯಲ್ಲಿ ಮತ್ತೆ ಧೂಳೆಬ್ಬಿಸಲು ಸಿದ್ಧವಾದ ಹಾನರ್‌!.ಈ ಬಾರಿ ಅಚ್ಚರಿ ಫೋನ್‌!

ಡಿಸ್‌ಪ್ಲೇ ಮಾಹಿತಿ ಹೀಗಿದೆ
ಹಾನರ್‌ ಸಂಸ್ಥೆಯ ಈ ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, ಇದರ ಜೊತೆಗೆ ಈ ಫೋನ್‌ 1,200 x 2,664 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಈ ಫೋನ್‌ 120Hz ನ ರಿಫ್ರೆಶ್ ರೇಟ್‌ ಬೆಂಬಲಿಸಲಿದ್ದು, 1,600 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಪಡೆದುಕೊಂಡಿದೆ.

ಮಾರುಕಟ್ಟೆಯಲ್ಲಿ ಮತ್ತೆ ಧೂಳೆಬ್ಬಿಸಲು ಸಿದ್ಧವಾದ ಹಾನರ್‌!.ಈ ಬಾರಿ ಅಚ್ಚರಿ ಫೋನ್‌!

ಪ್ರೊಸೆಸರ್ ಪವರ್ ಹೀಗಿದೆ
ಹಾನರ್‌ 90 5G ಮೊಬೈಲ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7 ಜೆನ್‌ 1 ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಈ ಫೋನ್‌ ಆಂಡ್ರಾಯ್ಡ್‌13 ಆಧಾರಿತ ಮ್ಯಾಜಿಕ್‌ ಒಎಸ್‌ 7.1 ಸಪೋರ್ಟ್ ಪಡೆದಿದೆ. ಇನ್ನು ಇದು 8 + 256 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಒಳಗೊಂಡಿದೆ.

ವಾವ್ ಎನಿಸುವ ಕ್ಯಾಮೆರಾ
ಹಾನರ್‌ ಸಂಸ್ಥೆಯ ಈ ಸ್ಮಾರ್ಟ್‌ಫೋನ್‌ಗಳ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರಲ್ಲಿ ಮೊದಲ ಕ್ಯಾಮೆರಾ 200 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಹಾಗೆಯೇ 50 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ದೀರ್ಘ ಬ್ಯಾಟರಿ ಬಲ
ಹಾನರ್‌ 90 5G ಈ ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಕೂಡಾ ಪಡೆದುಕೊಂಡಿದ್ದು, ಇದಕ್ಕೆ ಸಪೋರ್ಟ್‌ ಆಗಿ 66W ಫಾಸ್ಟ್‌ ಚಾರ್ಜಿಂಗ್‌ ಅನ್ನು ಒಳಗೊಂಡಿದೆ. ಇದರ ಜೊತೆಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್‌ 5G, 4G, Wi-Fi 6, ಬ್ಲೂಟೂತ್ 5.2, ಜಿಪಿಎಸ್‌, NFC, ಮತ್ತು ಯುಎಸ್‌ಬಿ ಟೈಪ್-C ಪೋರ್ಟ್ ಅನ್ನು ಸಪೋರ್ಟ್ ಹೊಂದಿದೆ.

ಸ್ಟೋರೇಜ್‌ ಮಾಹಿತಿ
ಹಾನರ್‌ ಕಂಪನಿಯ ಈ ಮೊಬೈಲ್‌ 8 + 256 GB ಹಾಗೂ 12GB + 512GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಲಭ್ಯ ಇದೆ. ಈ ಫೋನ್‌ ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಇದು ಆಕರ್ಷಕ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯ ಇದೆ.

Best Mobiles in India

English summary
Honor 100 series launch timeline tipped. specifications, launch date and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+