Home
ಸುದ್ದಿಜಾಲ

Honor: ಹಾನರ್‌ 200, 200 ಪ್ರೊ ಪ್ರೊಸೆಸರ್‌ ಬಗ್ಗೆ ಮಾಹಿತಿ ಲೀಕ್! ಮೇ 27 ರಂದು ಲಾಂಚ್‌...

ಹಾನರ್‌ ಸ್ಮಾರ್ಟ್‌ಫೋನ್‌ಗಳು (Honor smartphone) ಸ್ಮಾರ್ಟ್‌ಫೋನ್‌ ವಲಯದಲ್ಲಿ ದೊಡ್ಡ ಅಲೆಯನ್ನೇ ಉಂಟು ಮಾಡುತ್ತಿವೆ. ಈ ನಡುವೆ ಹಾನರ್‌ 200, 200 ಪ್ರೊ ಸ್ಮಾರ್ಟ್‌ಫೋನ್‌ ಬಗ್ಗೆ ಕೆಲವು ಮಾಹಿತಿ ಲೀಕ್‌ ಆಗುತ್ತಿದ್ದು, ಗ್ರಾಹಕರಲ್ಲಿ ಕುತೂಹಲ ಹೆಚ್ಚಿಗೆ ಮಾಡಿದೆ.

ಹೌದು, ಮೇ 27 ರಂದು ಹಾನರ್‌ ಚೀನಾದಲ್ಲಿ ಹಾನರ್‌ 200 ಮತ್ತು 200 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು (Honor 200 and 200 Pro smartphones) ಲಾಂಚ್‌ ಮಾಡಲಿದೆ. ಬಿಡುಗಡೆಗೆ ಮುಂಚಿತವಾಗಿ ಬ್ರ್ಯಾಂಡ್ ಈಗಾಗಲೇ ಎರಡೂ ಸ್ಮಾರ್ಟ್‌ಫೋನ್‌ಗಳ ವಿನ್ಯಾಸವನ್ನು ಬಹಿರಂಗಪಡಿಸಿದೆ. ಆದಾಗ್ಯೂ ಫೀಚರ್ಸ್‌ ಅನ್ನು ದೃಢೀಕರಿಸಿಲ್ಲ. ಚೀನೀ ಟಿಪ್‌ಸ್ಟರ್‌ನ ಹೊಸ ಸೋರಿಕೆಯು ಹಾನರ್ 200 ಜೋಡಿಗೆ ಶಕ್ತಿ ನೀಡುವ ಚಿಪ್‌ಸೆಟ್‌ಗಳನ್ನು ಬಹಿರಂಗಪಡಿಸಿದೆ.

ಹಾನರ್‌ 200, 200 ಪ್ರೊ ಪ್ರೊಸೆಸರ್‌ ಬಗ್ಗೆ ಮಾಹಿತಿ ಲೀಕ್! ಮೇ 27 ರಂದು ಲಾಂಚ್‌..

ಹಾನರ್‌ 200, 200 ಪ್ರೊ ಪ್ರೊಸೆಸರ್‌: ಈ ಹಿಂದೆ ಪ್ರಕಟವಾದ ವರದಿಗಳಲ್ಲಿ ಹಾನರ್‌ 200 ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಉಲ್ಲೇಖಿಸಲಾಗಿದ್ದು, ಪ್ರೊ ಮಾದರಿಯು ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ ಅನ್ನು ಹೊಂದಿರಲಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಹಾನರ್‌ 200 ಸ್ನಾಪ್‌ಡ್ರಾಗನ್ 7 ಜನ್ 3 ನ ವರ್ಧಿತ ಆವೃತ್ತಿಯೊಂದಿಗೆ ಸಜ್ಜುಗೊಂಡಿದೆ ಎಂದು ಹೇಳುವ ಮೂಲಕ ಹೊಸ ಲೀಕ್‌ ಮಾಹಿತಿ ಇದಕ್ಕೆ ಫುಲ್‌ಸ್ಟಾಪ್‌ ಇಟ್ಟಿದೆ.

ಪ್ರಸ್ತುತ, ಕ್ವಾಲ್ಕಾಮ್ ನ ಮೂರನೇ ತಲೆಮಾರಿನ ಸ್ನಾಪ್‌ಡ್ರಾಗನ್ 7 ಸರಣಿಯು ಎರಡು ಮಾದರಿಗಳಲ್ಲಿ ಇರಲಿದೆ ಎನ್ನಲಾಗಿದೆ. ಅಂದರೆ ಸ್ನಾಪ್‌ಡ್ರಾಗನ್ 7 ಜನ್ 3 ಮತ್ತು ಹೆಚ್ಚು ಶಕ್ತಿಶಾಲಿ ಸ್ನಾಪ್‌ಡ್ರಾಗನ್ 7+ ಜನ್ 3. ಅನ್ನು ಕಾಣಬಹುದಾಗಿದೆ. ಆದಾಗ್ಯೂ ಸ್ನಾಪ್‌ಡ್ರಾಗನ್ 7 ಜನ್ 3 ವರ್ಧಿತ ಆವೃತ್ತಿಯು ಅಸ್ತಿತ್ವದಲ್ಲಿರುವ ಮಾದರಿಗಳಿಂದ ಹೇಗೆ ಭಿನ್ನವಾಗಿರುತ್ತದೆ ಅನ್ನೋ ವಿಷಯ ತಿಳಿದಿಲ್ಲ.

ಹಾನರ್‌ 200, 200 ಪ್ರೊ ಪ್ರೊಸೆಸರ್‌ ಬಗ್ಗೆ ಮಾಹಿತಿ ಲೀಕ್! ಮೇ 27 ರಂದು ಲಾಂಚ್‌..

ಇನ್ನೊಂದು ಕಡೆ ಹಾನರ್‌ 200 ಪ್ರೊ ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್ ಅನ್ನು ಹೊಂದಿರಲಿದೆ ಎನ್ನುವ ಮಾಹಿತಿ ಸಹ ತಿಳಿದುಬಂದಿದೆ. ನವೆಂಬರ್ 2023 ರಲ್ಲಿ ಘೋಷಿಸಲಾದ ಹಾನರ್‌ 100 ಮತ್ತು 100 ಪ್ರೊ ಕ್ರಮವಾಗಿ ಸ್ನಾಪ್‌ಡ್ರಾಗನ್ 7 ಜನ್ 3 ಮತ್ತು ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್‌ ಅನ್ನು ಹೊಂದಿವೆ. ಉಳಿದಂತೆ ಹಾನರ್‌ 200 ಮತ್ತು 200 ಪ್ರೊ 100W ವೇಗದ ಚಾರ್ಜಿಂಗ್‌ನೊಂದಿಗೆ 5,200mAh ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ವರದಿಗಳು ಹೇಳಿವೆ.

ಎರಡೂ ಫೋನ್‌ಗಳು RAM ಮತ್ತು ಸ್ಟೋರೇಜ್‌ ವಿಭಾಗಗಳಲ್ಲಿ ಭಿನ್ನವಾಗಿರುತ್ತವೆ ಎಂದು ತಿಳಿದುಬಂದಿದೆ. ಎರಡೂ ಫೋನ್‌ಗಳು ಓಐಎಸ್‌ ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಯಿದ್ದು, ಎರಡೂ ಫೋನ್‌ಗಳು ಕ್ವಾಡ್-ಕರ್ವ್ಡ್ OLED ಪ್ಯಾನೆಲ್ ಅನ್ನು ಪಡೆದಿರಬಹುದು ಎಂದು ನಂಬಲಾಗಿದೆ. ಅಲ್ಲದೆ ಸ್ಟ್ಯಾಂಡರ್ಡ್ ಮಾದರಿಯು ಒಂದೇ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದರೆ, ಪ್ರೊ ಆವೃತ್ತಿಯು ಡ್ಯುಯಲ್ ಫ್ರಂಟ್-ಫೇಸಿಂಗ್ ಕ್ಯಾಮೆರಾ ಹೊಂದಿರಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಇನ್ನು ಹಾನರ್‌ ಈ ಫೋನ್‌ ಗಳು ಮಾತ್ರವಲ್ಲದೆ ಫೋಲ್ಡಬಲ್‌ ಫೋನ್‌ ವಿಭಾಗದಲ್ಲೂ ಕೆಲಸ ಮಾಡುತ್ತಿದೆ. ಹಾನರ್ ಮ್ಯಾಜಿಕ್ V ಫ್ಲಿಪ್ ಮತ್ತು ಮ್ಯಾಜಿಕ್ V3 ನಂತಹ ಎರಡು ಫೋಕ್‌ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರಬಹುದು ಎಂದು ವರದಿಗಳಿಂದ ತಿಳಿದುಬಂದಿಎ. ಹಾನರ್‌ನ ಮೊದಲ ಫ್ಲಿಪ್-ಸ್ಟೈಲ್ ಫೋಲ್ಡಬಲ್ ಡಿಸ್‌ಪ್ಲೇ ಫೋನ್ ಆಗಿರುವ V ಫ್ಲಿಪ್, ಚೀನಾದಲ್ಲಿ ಜೂನ್‌ನಲ್ಲಿ ಅಧಿಕೃತವಾಗಿ ಲಾಂಚ್‌ ಆಗುವ ನಿರೀಕ್ಷೆಯಿದೆ. ಹಾಗೆಯೇ ಜುಲೈನಲ್ಲಿ V3 ಕವರ್ ಅನ್ನು ಲಾಂಚ್ ಮಾಡಬಹುದು ಎಂದು ಲೀಕ್‌ ಮಾಹಿತಿಗಳಲ್ಲಿ ಉಲ್ಲೇಖ ಮಾಡಲಾಗಿದೆ. ಆದರೆ ಈ ಫೋನ್‌ಗಳ ಜಾಗತಿಕ ಲಾಂಚ್‌ ಬಗ್ಗೆ ಯಾವುದೇ ಮಾಹಿತಿ ಇಲ್ಲ.

Best Mobiles in India

English summary
On May 27, Honor will launch the Honor 200 and 200 Pro smartphones in China. The brand has already revealed the design of both the smartphones ahead of the launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+