ಭಾರತದಲ್ಲಿ Honor 200 5G ಫೋನ್ ಬಿಡುಗಡೆ; ಖರೀದಿಗೆ ಕ್ಯೂ ಖಚಿತ!
ಪ್ರಮುಖ ಮೊಬೈಲ್ ಬ್ರ್ಯಾಂಡ್‌ಗಳಲ್ಲಿ ಒಂದಾದ ಹಾನರ್ (Honor) ಸಂಸ್ಥೆಯು ತನ್ನ ಬಹುನಿರೀಕ್ಷಿತ ಹಾನರ್ 200 ಸ್ಮಾರ್ಟ್‌ಫೋನ್ ಸರಣಿಯ ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಸರಣಿಯು ಹಾನರ್ 200 5G ಹಾಗೂ ಹಾನರ್ 200 ಪ್ರೊ 5G ಮಾಡೆಲ್‌ಗಳನ್ನು ಒಳಗೊಂಡಿದೆ. ಇನ್ನು ಫೋನ್ ಸ್ನಾಪ್‌ಡ್ರಾಗನ್ 7 Gen 3 ಪ್ರೊಸೆಸರ್ ಸೌಲಭ್ಯ ಪಡೆದಿದ್ದು, ಮೊಬೈಲ್ ಪ್ರಿಯರ ಗಮನ ಸೆಳದಿವೆ. ಹಾಗೆಯೇ ಹಾನರ್ 200 5G ಮೀಡ್‌ರೇಂಜ್ ದರದಲ್ಲಿ ಆಕರ್ಷಕ ಎನಿಸಿದೆ.
ಹೌದು, ಹಾನರ್ (Honor) ಸಂಸ್ಥೆಯು ಹೊಸದಾಗಿ ಹಾನರ್ 200 5G (Honor 200 5G) ಸ್ಮಾರ್ಟ್‌ಫೋನ್ ಬಿಡುಗಡೆ ಆಗಿದೆ. ಈ ಮೊಬೈಲ್ ತ್ರಿವಳಿ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸಲ್ ಸೆನ್ಸಾರ್‌ನಲ್ಲಿ ಇದೆ. ಇದರ ಜೊತೆಗೆ 8GB RAM + 256GB ಹಾಗೂ 12GB + 512GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ.

ಹಾಗೆಯೇ ಈ ನೂತನ 5G ಫೋನ್ ಬ್ಲ್ಯಾಕ್ ಹಾಗೂ ಮೂನ್‌ಲೈಟ್ ವೈಟ್ ಕಲರ್ ಆಯ್ಕೆ ಒಳಗೊಂಡಿದ್ದು, 5200mAh ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಸಹ ಪಡೆದಿದೆ. ಅಲ್ಲದೇ ಇದು ಕ್ವಾಡ್ ಕರ್ವ್ಡ್ ಡಿಸ್‌ಪ್ಲೇ ರಚನೆ ಪಡೆದಿರುವುದು ಹೈಲೈಟ್ ಅಂಶಗಳಲ್ಲಿ ಒಂದಾಗಿದೆ. ಹಾಗಾದರೇ ಹಾನರ್ 200 5G (Honor 200 5G) ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಹಾನರ್ 200 5G - ಫೀಚರ್ಸ್
ಹಾನರ್ 200 5G ಮೊಬೈಲ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇಯು ಕ್ವಾಡ್ ಕರ್ವ್ಡ್ ಡಿಸ್‌ಪ್ಲೇ ರಚನೆ ಅನ್ನು ಹೊಂದಿದೆ. ಇನ್ನು ಡಿಸ್‌ಪ್ಲೇಯು 19.9:9 ರಚನೆಯ ಅನುಪಾತವನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್ ಅನ್ನು ಸಪೋರ್ಟ್ ಮಾಡಲಿದೆ.
ಹಾನರ್ 200 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 Gen 3 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತದೆ. ಹಾಗೆಯೇ ಈ ಫೋನ್ MagicOS 8 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ 8GB RAM + 256GB ಹಾಗೂ 12GB + 512GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಇದು ಪಡೆದಿದೆ.
ಹಾನರ್ 200 5G ಮೊಬೈಲ್ ತ್ರಿವಳಿ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿ ಇದೆ. ಎರಡನೇ ಕ್ಯಾಮೆರಾ 12 ಮೆಗಾ ಪಿಕ್ಸಲ್ ಸೆನ್ಸಾರ್ ಹಾಗೂ ಮೂರನೇ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ ಮುಂಭಾಗದಲ್ಲಿ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಹಾನರ್ 200 5G ಮೊಬೈಲ್ 5,200mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 100W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲ ಇದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈಫೈ, ಹಾಟ್‌ಸ್ಪಾಟ್, ಯುಎಸ್‌ಬಿ ಟೈಪ್ ಸಿ ಪೋರ್ಟ್ ಅನ್ನು ಪಡೆದುಕೊಂಡಿದೆ. ಇದಲ್ಲದೆ ಗ್ರಾವಿಟಿ ಸೆನ್ಸರ್, ಗೈರೊಸ್ಕೋಪ್, ಕಂಪಾಸ್, ಆಂಬಿಯೆಂಟ್ ಲೈಟ್ ಸೆನ್ಸರ್ ಆಯ್ಕೆಗಳು ಇವೆ.
ಬೆಲೆ ಹಾಗೂ ಲಭ್ಯತೆ
ಹಾನರ್ 200 5G ಮೊಬೈಲ್ 8GB RAM + 256GB ವೇರಿಯಂಟ್ ಬೆಲೆಯು 34,999ರೂ. ದರದಲ್ಲಿ ಖರೀದಿಗೆ ಲಭ್ಯ ಹಾಗೂ 12GB + 512GB ವೇರಿಯಂಟ್ ಬೆಲೆಯು 39,999ರೂ. ಬೆಲೆಯಲ್ಲಿ ಲಭ್ಯ ಇದೆ. ಇನ್ನು ಈ ಮೊಬೈಲ್ ಬ್ಲ್ಯಾಕ್ ಹಾಗೂ ಮೂನ್‌ಲೈಟ್ ವೈಟ್ ಕಲರ್ ಆಯ್ಕೆಗಳಲ್ಲಿ ಗ್ರಾಹಕರ ಖರೀದಿಗೆ ಲಭ್ಯ. ಜುಲೈ 20 ರಿಂದ ಅಮೆಜಾನ್ ಮೂಲಕ ಖರೀದಿಗೆ ಲಭ್ಯ.


Click it and Unblock the Notifications








