ಇಂದು HONOR 200 Lite 5G ಲಾಂಚ್; 108ಎಂಪಿ ಕ್ಯಾಮೆರಾ, ಸೆಲ್ಫಿ ಲೈಟ್ ಸೌಲಭ್ಯ!
ಹಾನರ್ (HONOR) ಮೊಬೈಲ್ ಸಂಸ್ಥೆಯ ಬಹುನಿರೀಕ್ಷಿತ ಹಾನರ್ 200 ಲೈಟ್ 5G (HONOR 200 Lite 5G) ಸ್ಮಾರ್ಟ್‌ಫೋನ್ ದೇಶಿಯ ಮಾರುಕಟ್ಟೆಯಲ್ಲಿ ಇಂದು ಬಿಡುಗಡೆ ಆಗಲಿದೆ. ಅಂದಹಾಗೆ ಈ ಮೊಬೈಲ್ ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರುವುದು ಬಹುತೇಕ ಪಕ್ಕಾ ಆಗಿದೆ. ಹಾಗೆಯೇ ಇದು 50 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಒಳಗೊಂಡಿರಲಿದೆ.
ಹೌದು, ಹಾನರ್ ಕಂಪನಿಯ ಹಾನರ್ 200 ಲೈಟ್ 5G (HONOR 200 Lite 5G) ಮೊಬೈಲ್ ಇಂದು ( ಸೆಪ್ಟೆಂಬರ್ 19 ರಂದು ) ಅಧಿಕೃತವಾಗಿ ಲಾಂಚ್ ಆಗಲಿದೆ. ಈ ಬಗ್ಗೆ ಹಾನರ್ ಇ ಸ್ಟೋರ್ ಮತ್ತು ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಸೈಟ್ ಈಗ ಲೈವ್ ಆಗಿದೆ. ಬಿಡುಗಡೆ ನಂತರ ಈ ಮೊಬೈಲ್ ಅಮೆಜಾನ್ ಇಂಡಿಯಾ ಮೂಲಕ ಖರೀದಿಗೆ ಲಭ್ಯ ಆಗಲಿದೆ. ಹಾಗಾದರೇ ಹಾನರ್ 200 ಲೈಟ್ 5G ಫೋನಿನ ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಹಾನರ್ 200 ಲೈಟ್ 5G ನಿರೀಕ್ಷಿತ ಫೀಚರ್ಸ್
ಹಾನರ್ 200 ಲೈಟ್ 5G ಮೊಬೈಲ್ 3240Hz PWM ಮಬ್ಬಾಗಿಸುವಿಕೆ ಮತ್ತು ಕೇಂದ್ರೀಕೃತ ಮಾತ್ರೆ-ಆಕಾರದ ಕಟೌಟ್‌ನೊಂದಿಗೆ AMOLED ಡಿಸ್ಪ್ಲೇ ಅನ್ನು ಪಡೆದಿದೆ ಎಂದು ದೃಢಪಡಿಸಲಾಗಿದೆ. ಅಲ್ಲದೇ ಈ ಫೋನಿನ ಸ್ಕ್ರೀನ್ 2,000 ನಿಟ್‌ಗಳ ಗರಿಷ್ಠ HDR ಬ್ರೈಟ್‌ನೆಸ್ ಅನ್ನು ಸಪೋರ್ಟ್ ಮಾಡುತ್ತದೆ ಎನ್ನಲಾಗಿದೆ.
ಹಾಗೆಯೇ ಈ ಫೋನ್ ವೇಗದ ಪ್ರೊಸೆಸರ್ ಪವರ್ ಒಳಗೊಂಡಿರುವ ನಿರೀಕ್ಷೆಗಳು ಇದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಆಧಾರಿತ ಮ್ಯಾಜಿಕ್ ಓಎಸ್ 8.0 ಅನ್ನು ಸಹ ರನ್ ಮಾಡಲಿದೆ ಎನ್ನಲಾಗಿದೆ. ಹಾಗೆಯೇ ಹಲವಾರು AI ಫೀಚರ್ಸ್‌ಗಳನ್ನು ಇದು ಒಳಗೊಂಡಿರಲಿದೆ.
ಹಾನರ್ 200 ಲೈಟ್ 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಆಯತಾಕಾರದ ಮಾಡ್ಯೂಲ್‌ನಲ್ಲಿ ಇರಿಸಲಾಗಿದೆ. ಇದು f1/.75 ದ್ಯುತಿರಂಧ್ರದೊಂದಿಗೆ 108 ಮೆಗಾ ಪಿಕ್ಸಲ್ ಪ್ರಾಥಮಿಕ ಕ್ಯಾಮರಾ ಸೌಲಭ್ಯ ಪಡೆದಿದೆ. ಅಲ್ಲದೇ ಡೆಪ್ತ್ ಸಪೋರ್ಟ್ ಮತ್ತು f/2.2 ಅಪರ್ಚರ್ ಹೊಂದಿರುವ ಸೆಕೆಂಡರಿ ಅಲ್ಟ್ರಾವೈಡ್ ಕ್ಯಾಮರಾ ಮತ್ತು f/2.4 ಅಪರ್ಚರ್ ಹೊಂದಿರುವ ಮ್ಯಾಕ್ರೋ ಕ್ಯಾಮರಾವನ್ನು ಒಳಗೊಂಡಿರಲಿದೆ. ಇದು 50 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಒಳಗೊಂಡಿರುವ ಸಾಧ್ಯತೆಗಳು ಅಧಿಕ.
ಇನ್ನು ಹಾನರ್ 200 ಲೈಟ್ 5G (HONOR 200 Lite 5G) ಫೋನ್ 166 ಗ್ರಾಂ ತೂಕದ 6.79 mm ದಪ್ಪದೊಂದಿಗೆ ವಿಭಾಗದಲ್ಲಿ ತೆಳ್ಳಗಿನ ಮತ್ತು ಹಗುರವಾದ ಸ್ಮಾರ್ಟ್‌ಫೋನ್ ಆಗಿದೆ ಎನ್ನಲಾಗಿದೆ. ಇದು ಸ್ಟಾರ್ರಿ ಬ್ಲೂ, ಸಯಾನ್ ಲೇಕ್ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಕಲರ್‌ವೇಸ್‌ಗಳಲ್ಲಿ ಲಭ್ಯವಿದೆ ಎಂದು ದೃಢಪಡಿಸಲಾಗಿದೆ.
ಹಾಗೆಯೇ ಸಂಸ್ಥೆಯ ಹಾನರ್ 200 5G ಮೊಬೈಲ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇಯು ಕ್ವಾಡ್ ಕರ್ವ್ಡ್ ಡಿಸ್‌ಪ್ಲೇ ರಚನೆ ಅನ್ನು ಹೊಂದಿದೆ. ಅಲ್ಲದೇ ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 Gen 3 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತದೆ. ಜೊತೆಗೆ ತ್ರಿವಳಿ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿ ಇದೆ. 5200 mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯವನ್ನು ಪಡೆದಿದೆ.


Click it and Unblock the Notifications








