Home
ಸುದ್ದಿಜಾಲ

ಬಿಡುಗಡೆಗೂ ಮುನ್ನವೇ ಗ್ರಾಹಕರ ಕುತೂಹಲ ಹೆಚ್ಚಿಸಿದ ಹಾನರ್‌ 200 ಪ್ರೊ ಫೋನ್‌!

ಹಾನರ್‌ ಮೊಬೈಲ್‌ ಸಂಸ್ಥೆಯು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಹಾನರ್ 100 ಸ್ಮಾರ್ಟ್‌ಫೋನ್‌ ಮೂಲಕ ಗಮನ ಸೆಳೆದಿದೆ. ಇದರ ಮುಂದುವರಿದ ಭಾಗವಾಗಿ ಸಂಸ್ಥೆಯು ಹೊಸದಾಗಿ ಹಾನರ್‌ 200 ಸರಣಿಯನ್ನು ಪರಿಚಯಿಸಲು ತಯಾರಾಗಿದೆ. ಬರಲಿರುವ ಹಾನರ್‌ 200 ಫೋನಿನ ಡಿಸೈನ್‌ ಲೀಕ್‌ ಆಗಿದ್ದು, ಗ್ರಾಹಕರು ಹುಬ್ಬೇರಿಸುವಂತೆ ಇದೆ.

ಹೌದು, ಹಾನರ್‌ ಕಂಪನಿಯು ಹಾನರ್‌ 200 ಸರಣಿಯನ್ನು ದೇಶಿಯ ಮಾರುಕಟ್ಟೆಗೆ ಲಾಂಚ್ ಮಾಡಲು ಸಜ್ಜಾಗಿದ್ದು, ಈ ಫೋನಿನ ಡಿಸೈನ್‌ ಹಾಗೂ ಕಲರ್‌ ಆಯ್ಕೆ ಕುರಿತಾಗಿ ಮಾಹಿತಿ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ ಎಂದು 91ಮೊಬೈಲ್ಸ್‌ ವೆಬ್‌ಸೈಟ್‌ ವರದಿ ಮಾಡಿದೆ. ಈ ಸರಣಿಯು ಹಾನರ್‌ 200 ಪ್ರೊ ಹಾಗೂ ಹಾನರ್‌ 200 ಲೈಟ್‌ ಮಾಡೆಲ್‌ಗಳಲ್ಲಿ ಲಗ್ಗೆ ಇಡಲಿದೆ ಎನ್ನಲಾಗಿದೆ.

ಬಿಡುಗಡೆಗೂ ಮುನ್ನವೇ ಗ್ರಾಹಕರ ಕುತೂಹಲ ಹೆಚ್ಚಿಸಿದ ಹಾನರ್‌ 200 ಪ್ರೊ ಫೋನ್‌!

ಹಾನರ್‌ 200 ಪ್ರೊ ನಿರೀಕ್ಷಿತ ಫೀಚರ್ಸ್

ಹಾನರ್‌ ಸಂಸ್ಥೆಯು ಫೋನಿನ ಅಧಿಕೃತ ಫೀಚರ್ಸ್‌ ಬಗ್ಗೆ ಇನ್ನೂ ಯಾವುದೇ ಮಾಹಿತಿ ಶೇರ್ ಮಾಡದಿದ್ದರೂ, ಡಿಜಿಟಲ್ ಚಾಟ್ ಸ್ಟೇಷನ್ ಟಿಪ್‌ಸ್ಟಾರ್‌ ಬರಲಿರುವ ಹಾನರ್‌ 200 ಪ್ರೊ ಫೋನಿನ ಕೆಲವು ಮಾಹಿತಿ ಹಂಚಿಕೊಂಡಿದೆ. ಟಿಪ್‌ಸ್ಟರ್ ಮಾಹಿತಿ ಪ್ರಕಾರ, ಲಗ್ಗೆ ಇಡಲಿರುವ ಹಾನರ್‌ 200 ಪ್ರೊ ಫೋನ್‌ 1.5K ಪಿಕ್ಸೆಲ್‌ಗಳ ರೆಸಲ್ಯೂಶನ್‌ ಇರುವ ಡಿಸ್‌ಪ್ಲೇ ಹೊಂದಿರಲಿದೆ ಹಾಗೂ ಪಂಚ್-ಹೋಲ್ ಕಟೌಟ್ ಇರಲಿದೆ ಎನ್ನಲಾಗಿದೆ.

ಹಾನರ್‌ 200 ಪ್ರೊ ವೇರಿಯಂಟ್‌ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ OIS ಸಕ್ರಿಯಗೊಳಿಸಿದ ಸೆನ್ಸಾರ್‌ ಪಡೆದಿರಲಿದೆ. ಅಲ್ಲದೇ ಇದು 50x ಡಿಜಿಟಲ್ ಜೂಮ್ ಮತ್ತು 2.5x ಆಪ್ಟಿಕಲ್ ಜೂಮ್‌ ಸಪೋರ್ಟ್‌ ಜೊತೆಗೆ 32 ಮೆಗಾ ಪಿಕ್ಸಲ್‌ ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡರಲಿದೆ.

ಇದಲ್ಲದೇ ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 3 SoC ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯ ಪಡೆದಿರಲಿದ್ದು, ಇದಕ್ಕೆ ಅನುಗುಣವಾಗಿ 100W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿರಬಹುದು ಎಂದು ವರದಿಗಳಿಂದ ತಿಳಿದುಬಂದಿದೆ.

ಹಾನರ್‌ 200 ಲೈಟ್‌ ನಿರೀಕ್ಷಿತ ಫೀಚರ್ಸ್‌

ಹಾಗೆಯೇ ಹಾನರ್‌ 200 ಲೈಟ್‌ ಮಾಡೆಲ್‌ ಸಹ ಎಂಟ್ರಿ ಕೊಡಲಿದ್ದು, ಈ ಫೋನ್‌ 1.5K ಪಿಕ್ಸೆಲ್‌ಗಳ ರೆಸಲ್ಯೂಶನ್‌ ಸಪೋರ್ಟ್‌ ಪಡೆದಿರಲಿದೆ ಎನ್ನಲಾಗಿದೆ. 6.7 ಇಂಚಿನ AMOLED ಮಾದರಿಯ ಡಿಸ್‌ಪ್ಲೇ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC ಚಿಪ್‌ಸೆಟ್‌ ಪ್ರೊಸೆಸರ್‌ ಅನ್ನು ಹೊಂದಿರಲಿದೆ.

ಇನ್ನು ಈ ಫೋನ್‌ 8GB RAM ಮತ್ತು 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯಲ್ಲಿ ಮಾರುಕಟ್ಟೆಗೆ ಪ್ರವೇಶ ಮಾಡಲಿದೆ ಎನ್ನಲಾಗಿದೆ. ಹಾಗೆಯೇ ಈ ಫೋನ್‌ ಆಂಡ್ರಾಯ್ಡ್‌ 14 ಓಎಸ್‌ ಮತ್ತು MagicOS 8 ಸ್ಕಿನ್‌ನಲ್ಲಿ ಕೆಲಸ ನಿರ್ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ರಚನೆ ಹೊಂದಿರಲಿದ್ದು, ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸಲ್‌ ಸೆನ್ಸಾರ್‌ ಪಡೆದಿರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ದ್ವಿತೀಯ ಹಾಗೂ ತೃತೀಯ ಫೋನ್‌ಗಳು 5 ಮೆಗಾ ಪಿಕ್ಸಲ್‌ ಹಾಗೂ 2 ಮೆಗಾ ಪಿಕ್ಸಲ್‌ ಲೆನ್ಸ್‌ ಪಡೆದಿರುವ ಸಾಧ್ಯತೆಗಳು ಇವೆ. ಇನ್ನು ಮುಂಭಾಗದಲ್ಲಿ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಕ್ಯಾಮೆರಾವನ್ನು ಪಡೆದಿರಲಿದೆ.

ಹೊಸದಾಗಿ ಬರಲಿರುವ ಹಾನರ್‌ 200 ಲೈಟ್‌ ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯವನ್ನು ಪಡೆದಿರಲಿದೆ ಎಂದು ವರದಿಯಿಂದ ತಿಳಿದಿದೆ. ಇನ್ನು ಇದಕ್ಕೆ ಪೂರಕವಾಗಿ ಈ ಫೋನ್‌ 33W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಹೊಂದಿರಲಿದೆ.

Best Mobiles in India

English summary
Honor 200 Pro Color options, Design Features surface online. check out other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+