Subscribe to Gizbot

ಜಿಯೋದಲ್ಲಿಯೂ ಇಲ್ಲ: ಏರ್‌ಟೆಲ್‌ನಿಂದ ಅಮೆಜಾನ್ ಆಫರ್...!

Written By:

ಭಾರ್ತಿ ಏರ್‌ಟೆಲ್ ಬಳಕೆದಾರರಿಗೆ ಹೊಸ ಮಾದರಿಯ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಈಗಾಗಲೇ ಜಿಯೋ ಹೊಸ ಮಾದರಿಯ ಆಫರ್ ಗಳನ್ನು ನೀಡಿ ಗ್ರಾಹಕರನ್ನು ಸೆಳೆಯುತ್ತಿದೆ ಈ ಹಿನ್ನಲೆಯಲ್ಲಿ ಏರ್‌ಟೆಲ್ ಅಮೆಜಾನ್ ನೊಂದಿಗೆ ಕೈ ಜೋಡಿಸಿದೆ. ಈ ಮೂಲಕ ಹೊಸ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.

ಜಿಯೋದಲ್ಲಿಯೂ ಇಲ್ಲ: ಏರ್‌ಟೆಲ್‌ನಿಂದ ಅಮೆಜಾನ್ ಆಫರ್...!

ಓದಿರಿ: ಇದನ್ನು ಡೌನ್‌ಲೋಡ್ ಮಾಡಿಕೊಂಡರೆ ನಿಮ್ಮ ಆಧಾರ್ ಕಾರ್ಡ್ ಅಗತ್ಯತೆ ಇರುವುದಿಲ್ಲ..!

ಆದರೆ ಏರ್‌ಟೆಲ್ ಹೊಸ ಮಾದರಿಯ ಆಫರ್ ಅನ್ನು ತನ್ನ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಮಾತ್ರವೇ ನೀಡುತ್ತಿದ್ದು, ಪ್ರೀಪೇಯ್ಡ್ ಗ್ರಾಹಕರು ಯಾವ ಸಮಯದಲ್ಲದರೂ ನೆಟ್‌ವರ್ಕ್ ಬದಲಾಯಿಸಬಹುದು. ಆದರೆ ಪೋಸ್ಟ್ ಪೇಯ್ಡ್ ಗ್ರಾಹಕರು ಈ ರೀತಿಯಲ್ಲಿ ಮಾಡಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಏರಟೆಲ್ ತನ್ನ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಅಮೆಜಾನ್ ಆಫರ್ ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಮೆಜಾನ್ ಪ್ರೈಮ್:

ಅಮೆಜಾನ್ ಪ್ರೈಮ್:

ಏರ್‌ಟೆಲ್ ತನ್ನ ಪೋಸ್ಟ್‌ ಪೇಯ್ಡ್ ಗ್ರಾಹಕರು ರೂ.499, ರೂ.799 ಮತ್ತು ರೂ.1999 ಪ್ಲಾನ್‌ಗಳನ್ನು ರೀಚಾರ್ಜ್ ಮಾಡಿಸಿಕೊಂಡರೆ ಒಂದು ವರ್ಷದ ಅಮೆಜಾನ್ ಪ್ರೈಮ್ ಮೆಂಬರ್ ಶಿಪ್ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಹೆಚ್ಚಿನ ಮನರಂಜನೆಯನ್ನು ಪಡೆದುಕೊಳ್ಳಬಹುದಾಗಿದೆ.

ಪಡೆದುಕೊಳ್ಳವುದು ಹೇಗೆ?

ಪಡೆದುಕೊಳ್ಳವುದು ಹೇಗೆ?

ಅಮೆಜಾನ್ ಪ್ರೈಮ್ ಬಳಕೆ ಮಾಡಿಕೊಳ್ಳುವ ಸಲುವಾಗಿ ಏರ್‌ಟೆಲ್ ಟಿವಿ ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ. ನಂತರ ತಮ್ಮ ಪೋಸ್ಟ್ ಪೇಯ್ಡ್ ನಂಬರ್ ಮೂಲಕ ಲಾಗ್ ಆಗಬೇಕಾಗಿದೆ. ನಂತರ ಅಲ್ಲಿಯೇ ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ನೋಡಬಹುದಾಗಿದೆ.

Reliance Jio ಸುನಾಮಿ ಆಫರ್: ಹೆಚ್ಚು ವ್ಯಾಲಿಡಿಟಿ - 50% ಹೆಚ್ಚು ಡೇಟಾ - ರೂ.50 ಕಡಿತ...!
ವರ್ಷದ ಸೇವೆ:

ವರ್ಷದ ಸೇವೆ:

ಅಮೆಜಾನ್ ವರ್ಷದ ಸೇವೆಗೆ ರೂ.999 ಪಾವತಿ ಮಾಡಬೇಕಾಗಿದೆ. ಇದರಲ್ಲಿ ನೀವು ವಿಡಿಯೋಗಳನ್ನು ನೋಡಬಹುದಾಗಿದೆ ಅಲ್ಲದೇ ಅಮೆಜಾನ್ ಪಾರ್ಸಲ್ ಸೇವೆಗಳನ್ನು ವೇಗವಾಗಿ ಪಡೆಯಬಹುದಾಗಿದೆ. ವಿಡಿಯೋ ಸೇವೆಯೇ ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Airtel offers free Amazon Prime subscription. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot