Home
ಸುದ್ದಿಜಾಲ

12GB RAM ಸೌಲಭ್ಯದ ಈ ಹೊಸ ಫೋನಿನ ಡಿಸ್ಕೌಂಟ್‌ ಬೆಲೆ ಎಷ್ಟು ಗೊತ್ತಾ?

ಹಾನರ್‌ ಸಂಸ್ಥೆಯು ಇತ್ತೀಚಿಗೆ ತನ್ನ ನೂತನ ಹಾನರ್‌ 90 5G ಸ್ಮಾರ್ಟ್‌ಫೋನ್‌ ಮೂಲಕ ಭಾರತೀಯ ಮಾರುಕಟ್ಟೆ ರೀ ಎಂಟ್ರಿ ಕೊಟ್ಟಿದೆ. ಹಾನರ್‌ 90 5G ಫೋನ್‌ ಕೆಲವು ಆಕರ್ಷಕ ಫೀಚರ್ಸ್‌ಗಳ ಮೂಲಕ ಮೊಬೈಲ್‌ ಪ್ರಿಯರ ಗಮನ ಸೆಳೆದಿದೆ. ಆದರೆ ಇದೀಗ ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಸಖತ್‌ ಬೆಲೆ ಇಳಿಕೆ ಪಡೆದಿದ್ದು, ಗ್ರಾಹಕರು ಹುಬ್ಬೇರಿಸುವಂತೆ ಮಾಡಿದೆ.

ಹೌದು, ಜನಪ್ರಿಯ ಇ ಕಾಮರ್ಸ್‌ ಅಮೆಜಾನ್‌ ಪ್ಲಾಟ್‌ಫಾರ್ಮ್ ನಲ್ಲಿ ಹಾನರ್‌ 90 5G ಸ್ಮಾರ್ಟ್‌ಫೋನ್‌ ಶೇ. 32% ರಷ್ಟು ರಿಯಾಯಿತಿ ಪಡೆದುಕೊಂಡಿದೆ. ಗ್ರಾಹಕರು 12GB + 512GB ವೇರಿಯಂಟ್‌ನ ಫೋನ್‌ ಅನ್ನು 33,999ರೂ. ಗಳ ಬೆಲೆಯಲ್ಲಿ ಖರೀದಿಸಬಹುದು. ಅಲ್ಲದೇ ಲಭ್ಯ ಇರುವ ಎಕ್ಸ್‌ಚೆಂಜ್‌ ಆಫರ್‌, ಬ್ಯಾಂಕ್‌ ಕೊಡುಗೆ ಹಾಗೂ ಇತರೆ ಆಫರ್‌ ಪಡೆದುಕೊಂಡರೆ ಇನ್ನಷ್ಟು ಡಿಸ್ಕೌಂಟ್‌ ಸಿಗುವುದು ಖಚಿತ.

12GB RAM ಸೌಲಭ್ಯದ ಈ ಹೊಸ ಫೋನಿನ ಡಿಸ್ಕೌಂಟ್‌ ಬೆಲೆ ಎಷ್ಟು ಗೊತ್ತಾ?

ಹೊಸ ಹಾನರ್‌ 90 5G ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7 ಜೆನ್‌ 1 ಪ್ರೊಸೆಸರ್‌ ಪವರ್‌ನೊಂದಿಗೆ ಕಾರ್ಯ ನಿರ್ವಹಿಸಲಿದ್ದು, ಇದರ ಇದರ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ. ಪ್ರಾಥಮಿಕ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸರ್ ಸೌಲಭ್ಯ ಲಭ್ಯ. ಇನ್ನುಳಿದಂತೆ ಐಟೆಲ್ A60 ಸ್ಮಾರ್ಟ್‌ಫೋನ್‌ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಮತ್ತು ಸ್ಕ್ರೀನ್‌ ರೆಸಲ್ಯೂಶನ್‌

ಹಾನರ್‌ ಸಂಸ್ಥೆಯ ಈ ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದರ ಜೊತೆಗೆ ಈ ಫೋನ್‌ 1,200 x 2,664 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗೆಯೇ ಈ ಫೋನ್‌ 120Hz ನ ರಿಫ್ರೆಶ್ ರೇಟ್‌ ಬೆಂಬಲಿಸಲಿದ್ದು, 1,600 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಪಡೆದುಕೊಂಡಿದೆ.

12GB RAM ಸೌಲಭ್ಯದ ಈ ಹೊಸ ಫೋನಿನ ಡಿಸ್ಕೌಂಟ್‌ ಬೆಲೆ ಎಷ್ಟು ಗೊತ್ತಾ?

ಪ್ರೊಸೆಸರ್ ಹಾಗೂ ಸ್ಟೋರೇಜ್ ಸೌಲಭ್ಯ

ಹಾನರ್‌ 90 5G ಮೊಬೈಲ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7 ಜೆನ್‌ 1 ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಈ ಫೋನ್‌ ಆಂಡ್ರಾಯ್ಡ್‌13 ಆಧಾರಿತ ಮ್ಯಾಜಿಕ್‌ ಒಎಸ್‌ 7.1 ಸಪೋರ್ಟ್ ಪಡೆದಿದೆ. ಇನ್ನು ಇದು 8 + 256 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ.

12GB RAM ಸೌಲಭ್ಯದ ಈ ಹೊಸ ಫೋನಿನ ಡಿಸ್ಕೌಂಟ್‌ ಬೆಲೆ ಎಷ್ಟು ಗೊತ್ತಾ?

ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌

ಹಾನರ್‌ 90 5G ಈ ಸ್ಮಾರ್ಟ್‌ಫೋನ್‌ಗಳ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರಲ್ಲಿ ಮೊದಲ ಕ್ಯಾಮೆರಾ 200 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದುಕೊಂಡಿದೆ. ಹಾಗೆಯೇ 50 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ಅಧಿಕ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ

ಹಾನರ್‌ 90 5G ಈ ಮೊಬೈಲ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಕೂಡಾ ಪಡೆದುಕೊಂಡಿದ್ದು, ಇದಕ್ಕೆ ಸಪೋರ್ಟ್‌ ಆಗಿ 66W ಫಾಸ್ಟ್‌ ಚಾರ್ಜಿಂಗ್‌ ಅನ್ನು ಒಳಗೊಂಡಿದೆ. ಇದರ ಜೊತೆಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್‌ 5G, 4G, Wi-Fi 6, ಬ್ಲೂಟೂತ್ 5.2, ಜಿಪಿಎಸ್‌, NFC, ಮತ್ತು ಯುಎಸ್‌ಬಿ ಟೈಪ್-C ಪೋರ್ಟ್ ಅನ್ನು ಸಪೋರ್ಟ್ ಪಡೆದಿದೆ.

ಮೆಮೊರಿ ಆಯ್ಕೆ ಹಾಗೂ ಬೆಲೆಯ ಮಾಹಿತಿ
ಹಾನರ್‌ 90 5G ಮೊಬೈಲ್‌ 8 + 256 GB ಹಾಗೂ 12GB + 512GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಲಭ್ಯ ಇದೆ. ಈ ಫೋನ್‌ ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಇದು ಆಕರ್ಷಕ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯ ಇದೆ.

Best Mobiles in India

English summary
Honor 90 5G available at biggest discount on amazon. check offer price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+