Home
ಸುದ್ದಿಜಾಲ

ಭಾರತದಲ್ಲಿ ಇಂದಿನಿಂದ ಹಾನರ್‌ 90 ಸೇಲ್‌,5000ರೂ.ಗಳ ತ್ವರಿತ ಡಿಸ್ಕೌಂಟ್‌!

ಭಾರತದಲ್ಲಿ ಹಾನರ್‌ ಸ್ಮಾರ್ಟ್‌ಫೋನ್‌ ಖರೀದಿ ಮಾಡಲು ಹಲವಾರು ಜನರು ಕಾತುರದಿಂದ ಕಾಯುತ್ತಿದ್ದಾರೆ. ಅದರಂತೆ ಇಂದು ಭಾರತದಲ್ಲಿ ಹಾನರ್‌ 90 (Honor 90) ಮೊದಲ ಮಾರಾಟ ಇಂದಿನಿಂದ ಆರಂಭ ಆಗಲಿದ್ದು, ಖರೀದಿದಾರರು 5000 ರೂಪಾಯಿ ತ್ವರಿತ ರಿಯಾಯಿತಿಯನ್ನು ಪಡೆಯುತ್ತಾರೆ.

ಹೌದು, ಹಾನರ್‌ 90 ಸ್ಮಾರ್ಟ್‌ಫೋನ್‌ ಖರೀದಿ ಮೇಲೆ 5000ರೂ.ಗಳ ತ್ವರಿತ ರಿಯಾಯಿತಿ ಸಿಗಲಿದೆ. ಈ ಹೊಸ ಸ್ಮಾರ್ಟ್‌ಫೋನ್ 5G ಸಂಪರ್ಕ, 200 ಮೆಗಾಪಿಕ್ಸೆಲ್ ಅಲ್ಟ್ರಾ-ಕ್ಲಿಯರ್ ಕ್ಯಾಮೆರಾ ಮತ್ತು ಅಡ್ರಿನೋ 644 GPU ಜೊತೆಗೆ ಅತ್ಯುತ್ತಮ ಕಾರ್ಯಕ್ಷಮತೆ ಪಡೆದುಕೊಂಡಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿ ಇಂದಿನಿಂದ ಹಾನರ್‌ 90 ಸೇಲ್‌,5000ರೂ.ಗಳ ತ್ವರಿತ ಡಿಸ್ಕೌಂಟ್‌!

ಹಾನರ್‌ 90 ಸ್ಮಾರ್ಟ್‌ಫೋನ್ ಸೇಲ್‌: ಸೆಪ್ಟೆಂಬರ್ 14 ರಂದು ಭಾರತದಲ್ಲಿ ಲಾಂಚ್‌ ಆದ ಹಾನರ್‌ 90 ಸ್ಮಾರ್ಟ್‌ಫೋನ್ ಇಂದಿನಿಂದ 5,000 ರೂಪಾಯಿಗಳ ಪರಿಚಯಾತ್ಮಕ ರಿಯಾಯಿತಿಯೊಂದಿಗೆ ಖರೀದಿಗೆ ಲಭ್ಯವಿದೆ. ಖರೀದಿದಾರರು ಹೆಚ್ಚುವರಿ ರಿಯಾಯಿತಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ. ಅಂದರೆ ನೀವು ICICI ಅಥವಾ SBI ಬ್ಯಾಂಕ್ ಕಾರ್ಡ್‌ಗಳನ್ನು ಬಳಕೆ ಮಾಡಿಕೊಂಡು ಕ್ರಮವಾಗಿ 3000ರೂ. ಹಾಗೂ 2000ರೂ.ಗಳ ರಿಯಾಯಿತಿ ಪಡೆದುಕೊಳ್ಳಬಹುದು.

ಹಾಗೆಯೇ ಯಾವುದೇ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಅಥವಾ ಬಜಾಜ್ ಫಿನ್‌ಸರ್ವ್ ಕಾರ್ಡ್‌ಗಳನ್ನು ಬಳಸುವ ಖರೀದಿದಾರರಿಗೆ 9 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ ಇಎಮ್‌ಐ ಸೌಲಭ್ಯ ಸಹ ಇದೆ. ಅಂದರೆ ನೀವು ಯಾವುದೇ ಹೆಚ್ಚುವರಿ ಹಣಕಾಸಿನ ಹೊರೆ ಇಲ್ಲದೆ ಸ್ಮಾರ್ಟ್‌ಫೋನ್‌ ಖರೀದಿ ಮಾಡಬಹುದಾಗಿದೆ. ಇದಕ್ಕೆ ಬೋನಸ್ ಎಂಬಂತೆ ಖರೀದಿದಾರರು 30W ಟೈಪ್-ಸಿ ಚಾರ್ಜರ್ ಅನ್ನು ಸಹ ಪಡೆಯಲಿದ್ದಾರೆ.

ಹಾನರ್‌ 90 ಡಿಸ್‌ಪ್ಲೇ ವಿವರ: ಹಾನರ್‌ 90 6.7 ಇಂಚಿನ 1.5K ಕ್ವಾಡ್-ಕರ್ವ್ಡ್ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 2664x1200 ಪಿಕ್ಸೆಲ್‌ಗಳ ಸ್ಜ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 120Hz ರಿಫ್ರೆಶ್ ರೇಟ್‌ ಆಯ್ಕೆ ಇದ್ದು, 1,600 ನಿಟ್ಸ್‌ನ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಇದೆ. ಅಂದರೆ ನೀವು ವಿಡಿಯೋಗಳನ್ನು ಸ್ಟ್ರೀಮಿಂಗ್ ಮಾಡುವಾಗ ಅತ್ಯುತ್ತಮ ಅನುಭವ ಸಿಗಲಿದೆ.

ಹಾನರ್‌ 90 ಪ್ರೊಸೆಸರ್ ಮಾಹಿತಿ: ಹಾನರ್‌ 90 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 7 ಜನ್‌1 ಪ್ರೊಸೆಸರ್ ಬಲ ಪಡೆದಿದ್ದು, ಈ ಪ್ರೊಸೆಸರ್ ಕಾರ್ಟೆಕ್ಸ್-A710 ಮತ್ತು ಕಾರ್ಟೆಕ್ಸ್A510 ಕೋರ್‌ಗಳ ಮಿಶ್ರಣವನ್ನು ಹೊಂದಿರುವ ಆಕ್ಟಾ-ಕೋರ್ CPU ನಿಂದ ರನ್‌ ಆಗಲಿದೆ. ಈ ಮೂಲಕ ಬಳಕೆದಾರರು ಗೇಮಿಂಗ್‌ ಹಾಗೂ ವಿಡಿಯೋ ಸ್ಟ್ರೀಮಿಂಗ್‌ನಲ್ಲಿ ಅತ್ಯುತ್ತಮ ಅನುಭವ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಅಡ್ರಿನೋ 644 GPU ನೊಂದಿಗೆ ಈ ಫೋನ್‌ ಪ್ಯಾಕ್‌ ಆಗಿದೆ.

ಹಾನರ್‌ 90 ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಅದರಲ್ಲಿ 200 ಮೆಗಾಪಿಕ್ಸೆಲ್‌ ಅಲ್ಟ್ರಾ-ಕ್ಲಿಯರ್ ಕ್ಯಾಮೆರಾ, 12 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಮತ್ತು ಮ್ಯಾಕ್ರೋ ಕ್ಯಾಮರಾ ಮತ್ತು 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸರ್‌ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 4K ವೀಡಿಯೊ ರೆಕಾರ್ಡಿಂಗ್ ಅನ್ನು ಸಹ ಬೆಂಬಲಿಸುತ್ತದೆ ಮತ್ತು ಸೂಪರ್ ಮ್ಯಾಕ್ರೋ ಮತ್ತು ನೈಟ್ ಶಾಟ್‌ನಂತಹ ಫೀಚರ್ಸ್‌ ಆಯ್ಕೆ ಇದರಲ್ಲಿದ್ದು, ಕ್ಯಾಮೆರಾ ಪ್ರಿಯರಿಗೆ ಈ ಫೋನ್‌ ಅಚ್ಚುಮೆಚ್ಚಾಗಲಿದೆ.

ಭಾರತದಲ್ಲಿ ಇಂದಿನಿಂದ ಹಾನರ್‌ 90 ಸೇಲ್‌,5000ರೂ.ಗಳ ತ್ವರಿತ ಡಿಸ್ಕೌಂಟ್‌!

ಹಾನರ್‌ 90 ಬ್ಯಾಟರಿ ಹಾಗೂ ಇತರೆ: ಈ ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 65W ಸೂಪರ್‌ಚಾರ್ಜ್‌ನೊಂದಿಗೆ ಬೆಂಬಲ ಪಡೆದಿದೆ.ಇದರೊಂದಿಗೆ 4G LTE, ಬ್ಲೂಟೂತ್ ಆವೃತ್ತಿ 5.2, ಡ್ಯುಯಲ್-ಬ್ಯಾಂಡ್ ವೈ-ಫೈ, ಜಿಪಿಎಸ್‌, ಎನ್‌ಎಫ್‌ಸಿ ಮತ್ತು ಇನ್ನೂ ಹೆಚ್ಚಿನ ಕನೆಕ್ಟಿವಿಟಿ ಸೌಲಭ್ಯಗಳನ್ನು ಈ ಸ್ಮಾರ್ಟ್‌ಫೋನ್‌ ಪಡೆದುಕೊಂಡಿದೆ.

Best Mobiles in India

English summary
An instant discount of Rs 5000 will be available on the purchase of the Honor 90 smartphone. This new smartphone gets excellent performance with 5G connectivity, 200 megapixel ultra-clear camera and Adreno 644 GPU.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+