ಹೊಸ ಹಾನರ್ 90 ಫೋನಿಗೆ ಇರುವ ಡಿಸ್ಕೌಂಟ್ ತಿಳಿದ್ರೆ, ವಾವ್ ಅಂತೀರಾ!
ದಸರಾ ಹಾಗೂ ದೀಪಾವಳಿ ಅಂಗವಾಗಿ ಅಮೆಜಾನ್ ಇ ಕಾಮರ್ಸ್ ತಾಣವು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ವನ್ನು (Amazon Great Indian Festival sale) ಘೋಷಿಸಿದೆ. ಈ ಮಾರಾಟ ಮೇಳದಲ್ಲಿ ಇತ್ತೀಚಿಗೆ ಬಿಡುಗಡೆ ಆಗಿರುವ ಕೆಲವು ಫೋನ್‌ಗಳು ಕೂಡಾ ಬೊಂಬಾಟ್ ಡಿಸ್ಕೌಂಟ್ ಪಡೆದಿವೆ. ಆ ಪೈಕಿ ಹೊಸ ಹಾನರ್ 90 (Honor 90) ಸ್ಮಾರ್ಟ್‌ಫೋನ್ ಈಗ ಭರ್ಜರಿ ಬೆಲೆ ಇಳಿಕೆಯಲ್ಲಿ ಕಾಣಿಸಿಕೊಂಡಿದೆ.
ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್ ಆಯೋಜಿಸಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಇದೇ ಅಕ್ಟೋಬರ್ 8 ರಿಂದ ಪ್ರಾರಂಭವಾಗಲಿದೆ. ಅಮೆಜಾನ ಪ್ರೈಮ್ ಸದಸ್ಯರು ಅಕ್ಟೋಬರ್ 7 ರಿಂದ ಖರೀದಿ ಮಾಡಬಹುದು. ಈ ಸೇಲ್‌ನಲ್ಲಿ ಹಾನರ್ 90 (8 + 256 GB) ವೇರಿಯಂಟ್ ಫೋನ್ 7000 ರೂ. ರಿಯಾಯಿತಿ ಪಡೆದಿದ್ದು, ಹೆಚ್ಚುವರಿಯಾಗಿ ಎಸ್‌ಬಿಐ ಗ್ರಾಹಕರು 4,000ರೂ. ರಿಯಾಯಿತಿ ಪಡೆಯಬಹುದಾಗಿದೆ.

ಈ ಎರಡು ಕೊಡುಗೆ ಸೇರಿದರೆ ಒಟ್ಟಾರೆ ಸುಮಾರು 11,000 ರೂ. ವರೆಗೂ ಡಿಸ್ಕೌಂಟ್ ಲಭ್ಯವಾಗಲಿದೆ. ಹೀಗಾಗಿ 8 + 256 GB ವೇರಿಯಂಟ್ ಫೋನ್ ಅನ್ನು 26,999ರೂ. ಗಳಿಗೆ ಖರೀದಿಸಲು ಅವಕಾಶ ಇದೆ. ಹಾಗಾದರೇ ಹಾನರ್ 90 ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಆಕರ್ಷಕ ಡಿಸ್‌ಪ್ಲೇ ರಚನೆ
ಹಾನರ್ ಸಂಸ್ಥೆಯ ಈ ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದರ ಜೊತೆಗೆ ಈ ಫೋನ್ 1,200 x 2,664 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗೆಯೇ ಈ ಫೋನ್ 120Hz ನ ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, 1,600 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಪಡೆದುಕೊಂಡಿದೆ.
ಪ್ರೊಸೆಸರ್ ಕಾರ್ಯವೈಖರಿ ಹೀಗಿದೆ
ಹಾನರ್ 90 ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 1 ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಈ ಫೋನ್ ಆಂಡ್ರಾಯ್ಡ್13 ಆಧಾರಿತ ಮ್ಯಾಜಿಕ್ ಒಎಸ್ 7.1 ಸಪೋರ್ಟ್ ಪಡೆದಿದೆ. ಇನ್ನು ಇದು 8+256 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ.
ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ
ಹಾನರ್ ಸಂಸ್ಥೆಯ ಈ ಸ್ಮಾರ್ಟ್‌ಫೋನ್‌ಗಳು ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 200 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದುಕೊಂಡಿದೆ. ಹಾಗೆಯೇ 50 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ
ಹಾನರ್ ಕಂಪನಿಯ ಈ ಸ್ಮಾರ್ಟ್‌ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದ್ದು, ಇದಕ್ಕೆ ಸಪೋರ್ಟ್ ಆಗಿ 66W ಫಾಸ್ಟ್ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಇದರ ಜೊತೆಗೆ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ 5G, 4G, Wi-Fi 6, ಬ್ಲೂಟೂತ್ 5.2, ಜಿಪಿಎಸ್, NFC, ಮತ್ತು ಯುಎಸ್‌ಬಿ ಟೈಪ್-C ಪೋರ್ಟ್ ಅನ್ನು ಸಪೋರ್ಟ್ ಮಾಡುತ್ತದೆ.
ಮೆಮೊರಿ ಆಯ್ಕೆ ಹಾಗೂ ಬೆಲೆ ಎಷ್ಟು
ಈ ಸ್ಮಾರ್ಟ್‌ಫೋನ್ 8 + 256 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಅನ್ನು ಪಡೆದುಕೊಂಡಿದೆ. ಈ ಫೋನ್ ಅಮೆಜಾನ್ ಘೋಷಿಸಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಆಕರ್ಷಕ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಅಂದಹಾಗೆ ಅಮೆಜಾನ್ ಮಾರಾಟ ಮೇಳವು ಇದೇ ಅಕ್ಟೋಬರ್ 8 ರಿಂದ ಆರಂಭವಾಗಲಿದೆ.


Click it and Unblock the Notifications








