ಮತ್ತೆ ರೀ-ಎಂಟ್ರಿ ಕೊಡಲಿದೆ ಹಾನರ್ ಬ್ರ್ಯಾಂಡ್!..ಫುಲ್ ಅಚ್ಚರಿಯ ಫೀಚರ್ಸ್!
ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿರುವ ಹಾನರ್ ಬ್ರ್ಯಾಂಡ್, ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಮರಳಿ ಎಂಟ್ರಿ ಕೊಡುವ ಸಾಧ್ಯತೆಗಳು ಇವೆ. ಹಾನರ್ 90 ಸ್ಮಾರ್ಟ್‌ಫೋನ್ ಲಾಂಚ್ ಮಾಡುವ ಮೂಲಕ ದೇಶಿಯ ಮಾರುಕಟ್ಟೆಯ ಪ್ರವೇಶಿಸಲಿದೆ ಎನ್ನಲಾಗಿದ್ದು, ಇದು ಹಾನರ್ ಪ್ರಿಯರಿಗೆ ಖುಷಿಯ ಸಂಗತಿ ಆಗಿದೆ.
ಹೌದು, ಹಾನರ್ ಬ್ರ್ಯಾಂಡ್ ಮತ್ತೆ ಭಾರತಕ್ಕೆ ಲಗ್ಗೆ ಇಡಲಿದೆ ಎನ್ನಲಾಗಿದೆ. ಲೀಕ್ ಮಾಹಿತಿ ಪ್ರಕಾರ, ಚೀನಾ ಮೂಲದ ಹಾನರ್ ಸಂಸ್ಥೆಯು ಮುಂಬರುವ ತಿಂಗಳುಗಳಲ್ಲಿ ದೇಶಯ ಮಾರುಕಟ್ಟೆಯಲ್ಲಿ ಹಾನರ್ 90 ಸ್ಮಾರ್ಟ್‌ಫೋನ್ (Honor 90) ಅನ್ನು ಅನಾವರಣಗೊಳಿಸುವ ನಿರೀಕ್ಷೆಗಳಿವೆ ಎನ್ನಲಾಗಿದೆ. ಬಹುತೇಕ ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳು ಇವೆ.

ಹಾನರ್ 90 ಫೋನ್ ಜಾಗತಿಕವಾಗಿ ಕೆಲವು ಮಾರುಕಟ್ಟೆಗಳಲ್ಲಿ ಅನಾವರಣ ಆಗಿದೆ. ಈ ಫೋನಿನ ಮುಖ್ಯ ಕ್ಯಾಮೆರಾ 200 ಮೆಗಾ ಪಿಕ್ಸಲ್ ಆಗಿರುವುದು ಪ್ರಮುಖ ಹೈಲೈಟ್ ಆಗಿದೆ. ಅಲ್ಲದೇ ಈ ಫೋನ್ ವಿಶಾಲವಾದ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಹಾಗಾದರೆ ಹಾನರ್ 90 ಫೋನಿನ ಇತರೆ ಫೀಚರ್ಸ್ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.
ಹಾನರ್ 90 ಡಿಸ್‌ಪ್ಲೇ ರಚನೆ ಹೇಗಿದೆ : ಹಾನರ್ 90 ಮೊಬೈಲ್ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದ್ದು, ಈ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಕೂಡ 1,200x 2,664 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಫೋನ್ 120Hz ನ ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, 1,600 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಒದಗಿಸಲಿದೆ.
ಹಾನರ್ 90 ಪ್ರೊಸೆಸರ್ ಪವರ್ ಏನು : ಹಾನರ್ 90 ಮೊಬೈಲ್ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜೆನ್ 1 ಪ್ರೊಸೆಸರ್ ಅನ್ನು ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ. ಇದಕ್ಕೆ ಪೂರಕವಾಗಿ ಈ ಫೋನ್ ಆಂಡ್ರಾಯ್ಡ್ 13ಓಎಸ್ ಸಪೋರ್ಟ್ ಸಹ ಪಡೆದಿದೆ. ಜೊತೆಗೆ ಈ ಫೊನ್ 12GB + 512GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆಯಲ್ಲಿ ಕಾಣಿಸಿಕೊಂಡೊದೆ.
ಹಾನರ್ 90 ಕ್ಯಾಮೆರಾ ಕಮಾಲ್ : ಹಾನರ್ 90 ಮೊಬೈಲ್ ಫೋನ್ ಹಾನರ್ 90 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರ ಪ್ರಾಥಮಿಕ ಕ್ಯಾಮೆರಾ 200 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದಿದೆ. ಜೊತೆಗೆ ಸೆಲ್ಫಿ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ.
ಹಾನರ್ 90 ಬ್ಯಾಟರಿ ಬ್ಯಾಕ್‌ಅಪ್ ಎಷ್ಟು : ಹಾನರ್ 90 ಫೋನ್ 5000mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 66W ಸೂಪರ್‌ಚಾರ್ಜ್ ತಂತ್ರಜ್ಞಾನ ಚಾರ್ಜಿಂಗ್ ವ್ಯವಸ್ಥೆ ಒದಗಿಸಲಾಗಿದೆ. ಹಾಗೆಯೇ ಈ ಫೋನ್ ಬ್ಲೂಟೂತ್ 5.2, ಫಿಂಗರ್‌ಪ್ರಿಂಟ್ ಸೆನ್ಸರ್, NFC, USB ಟೈಪ್-C ನಂತಹ ಕನೆಕ್ಟಿವಿಟಿ ಸೌಲಭ್ಯಗಳನ್ನು ಪಡೆದಿದೆ.
ಅಂದಹಾಗೆ ಹಾನರ್ 90 ಒಟ್ಟು ನಾಲ್ಕು ಕಲರ್ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ ಪಿಕಾಕ್ ಬ್ಲೂ, ಡೈಮಂಡ್ ಸಿಲ್ವರ್, ಮಿಡ್‌ನೈಟ್ ಬ್ಲ್ಯಾಕ್ ಮತ್ತು ಎಮರಾಲ್ಡ್ ಗ್ರೀನ್ ಕಲರ್ ಆಗಿವೆ. ಹಾಗೆಯೇ ಈ ಫೋನಿನ ಇಮೇಜ್ ರೆಸಲ್ಯೂಶನ್ 15500 x 13000 ಪಿಕ್ಸಲ್ ಆಗಿದೆ. ಇನ್ನು ಈ ಫೋನಿನ ಬೆಲೆಯ ಬಗ್ಗೆ ಮಾಹಿತಿ ಇಲ್ಲ.
ಹಾನರ್ ಪ್ಯಾಡ್ X9 ಡಿವೈಸ್ ಫೀಚರ್ಸ್ ಹೀಗಿವೆ :
ಹಾನರ್ ಸಂಸ್ಥೆಯು ನೂತನವಾಗಿ ಹಾನರ್ ಪ್ಯಾಡ್ X9 ಟ್ಯಾಬ್ಲೆಟ್ ಡಿವೈಸ್ ಅನ್ನು ಲಾಂಚ್ ಮಾಡಿದೆ. 120Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ಅನ್ನು ಒಳಗೊಂಡಿರುವ ಈ ಟ್ಯಾಬ್ 11.5 ಇಂಚು ಆಗಿದೆ. ಡಿಸ್‌ಪ್ಲೇಯು 2K ರೆಸಲ್ಯೂಶನ್ ಸಾಮರ್ಥ್ಯ ಅನ್ನು ಸಪೋರ್ಟ್ ಮಾಡಲಿದ್ದು, 400 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಪಡೆದುಕೊಂಡಿದೆ.
ಹಾಗೆಯೇ ಈ ನೂತನ ಟ್ಯಾಬ್ಲೆಟ್‌ನಲ್ಲಿ ಹೈ-ರೆಸ್ ಆಡಿಯೊ ಪ್ರಮಾಣೀಕರಣ ಸಪೋರ್ಟ್‌ನೊಂದಿಗೆ ಆರು ಸ್ಪೀಕರ್‌ಗಳನ್ನು ಸೌಲಭ್ಯ ಪಡೆದುಕೊಂಡಿದೆ. ಇನ್ನು ಹಾನರ್ ಪ್ಯಾಡ್ X9 ಟ್ಯಾಬ್ ಡಿವೈಸ್ ಸ್ನ್ಯಾಪ್‌ಡ್ರಾಗನ್ 695 ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಇನ್ನು ಈ ಟ್ಯಾಬ್ 4GB RAM ಮತ್ತು 128GB ಆಂತರೀಕ ಸ್ಟೋರೇಜ್ ಸಾಮರ್ಥ್ಯ ಪಡೆದುಕೊಂಡಿದೆ.


Click it and Unblock the Notifications








