ಅಗ್ಗದ ಹಾನರ್ 9S ಸ್ಮಾರ್ಟ್‌ಫೋನ್ ಲಾಂಚ್!..ಬೆಲೆ ಎಷ್ಟು?..ಫೀಚರ್ಸ್‌ ಏನು?

|

ಪ್ರಮುಖ ಮೊಬೈಲ್‌ ಸಂಸ್ಥೆ ಹಾನರ್ ಹಲವು ಶ್ರೇಣಿಯಲ್ಲಿ ಸ್ಮಾರ್ಟ್‌ಫೋನ್ ಪರಿಚಯಿಸಿದೆ ಸೈ ಎನಿಸಿಕೊಂಡಿದೆ. ಬಜೆಟ್‌ ದರದ ಫೋನ್‌ಗಳ ಜೊತೆಗೆ ಫ್ಲ್ಯಾಗ್‌ಶಿಪ್ ಮಾದರಿಯ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದೀಗ ಸಂಸ್ಥೆಯು ಹಾನರ್‌ 9A ಮತ್ತು ಹಾನರ್ 9S ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದ್ದು, ಗ್ರಾಹಕರನ್ನು ಸೆಳೆದಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಬಜೆಟ್‌ ಪ್ರೈಸ್‌ಟ್ಯಾಗ್‌ ಹೊಂದಿರುವುದು ಪ್ಲಸ್‌ ಪಾಯಿಂಟ್ ಆಗಿದೆ.

ಹಾನರ್‌ 9A ಮತ್ತು ಹಾನರ್ 9S

ಹೌದು, ಹಾನರ್‌ ಸಂಸ್ಥೆಯು ಹಾನರ್‌ 9A ಮತ್ತು ಹಾನರ್ 9S ಹೆಸರಿನ ಎರಡು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಹಾನರ್ 9S ಕಡಿಮೆ ಬೆಲೆಯನ್ನು ಹೊಂದಿದ್ದು, ಮೀಡಿಯಾ ಟೆಕ್ MT6762R ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್‌ ಬೆಂಬಲ ಹೊಂದಿದೆ. ಇನ್ನು ಈ ಫೋನ್ ಅಮೆಜಾನ್ ತಾಣದಲ್ಲಿ ಇದೇ ಆಗಸ್ಟ್ 6ರಂದು ಫಸ್ಟ್ ಸೇಲ್ ಆರಂಭಿಸಲಿದೆ. ಇನ್ನೂ ಈ ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡಿರಿ.

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ಹಾನರ್ 9S ಸ್ಮಾರ್ಟ್‌ಫೋನ್ 720x1,440 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡ 5.45 ಇಂಚಿನ ಹೆಚ್‌ಡಿ ಪ್ಲಸ್‌ ಹೊಂದಿದೆ. ಇನ್ನು ಫೋನ್ ಡಿಸ್‌ಪ್ಲೇಯ ಅನುಪಾತವು 18:9 ಆಗಿದೆ. ಅಗ್ಗದ ಫೋನಾದರೂ ಪೂರ್ಣ ನೋಟದ ಡಿಸ್‌ಪ್ಲೇಯು ಆಕರ್ಷಕ ಅನಿಸಲಿದೆ.

ಪ್ರೊಸೆಸರ್‌ ಸಾಮರ್ಥ್ಯ

ಪ್ರೊಸೆಸರ್‌ ಸಾಮರ್ಥ್ಯ

ಹಾನರ್ 9S ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ P22 (MT6762R) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್‌ ಬೆಂಬಲ ಹೊಂದಿದೆ. ಈ ಫೋನ್ 2GB RAM ನ ಸಿಂಗಲ್ ವೇರಿಯಂಟ್ ಆಯ್ಕೆ ಹೊಂದಿದ್ದು, 32GB ಸ್ಟೋರೇಜ್ ಸಾಮರ್ಥ್ಯ ಪಡೆದಿದೆ. ಇನ್ನು ಎಸ್‌ಡಿ ಕಾರ್ಡ್‌ ಮೂಲಕ ಹೆಚ್ಚುವರಿಯಾಗಿ 512GB ವರೆಗೂ ವಿಸ್ತರಿಸಲು ಅವಕಾಶ ನೀಡಿದೆ.

ಕ್ಯಾಮೆರಾ ರಚನೆ

ಕ್ಯಾಮೆರಾ ರಚನೆ

ಹಾನರ್ 9S ಸ್ಮಾರ್ಟ್‌ಫೋನ್ ಸಿಂಗಲ್ ರಿಯರ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಅದು 8ಮೆಗಾಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಸೆಲ್ಫಿಗಾಗಿ 5 ಮೆಗಾಪಿಕ್ಸಲ್ ಸೆನ್ಸಾರ್‌ನ ಕ್ಯಾಮೆರಾ ನೀಡಲಾಗಿದೆ. ಕೆಲವು ಎಡಿಟಿಂಗ್ ಆಯ್ಕೆಗಳಿವೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ಹಾನರ್ 9S ಸ್ಮಾರ್ಟ್‌ಫೋನ್ 3020mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಇದರೊಂದಿಗೆ ವೈ-ಫೈ, ಬ್ಲೂಟೂತ್, ಜಿಪಿಎಸ್ / ಎ-ಜಿಪಿಎಸ್ ಮತ್ತು ಮೈಕ್ರೋ-ಯುಎಸ್ಬಿ ಪೋರ್ಟ್ ಆಯ್ಕೆಗಳು ಸೇರಿವೆ.

ಬೆಲೆ ಮತ್ತು ಮಾರಾಟ

ಬೆಲೆ ಮತ್ತು ಮಾರಾಟ

ಹಾನರ್ 9S ಸ್ಮಾರ್ಟ್‌ಫೋನ್ 2GB RAM ಮತ್ತು 32GB ಸ್ಟೋರೇಜ್‌ ವೇರಿಯಂಟ್ ಬೆಲೆಯು 6,499ರೂ. ಆಗಿದೆ. ಇನ್ನು ಈ ಫೋನ್ ಇದೇ ಆಗಸ್ಟ್ 6ರಂದು ಅಮೆಜಾನ್ ತಾಣದಲ್ಲಿ ಮೊದಲ ಮಾರಾಟ ಶುರು ಮಾಡಲಿದೆ. ಬ್ಲೂ ಮತ್ತು ಬ್ಲ್ಯಾಕ್ ಬಣ್ಣದ ಆಯ್ಕೆಯನ್ನು ಪಡೆದಿದೆ.

Most Read Articles
Best Mobiles in India

English summary
Honor 9S runs on Android 10 with MediaTek MT6762R SoC.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X