Home
ಸುದ್ದಿಜಾಲ

Honor : ಭಾರತದಲ್ಲಿ ಇಂದಿನಿಂದ ಹಾನರ್ ಚಾಯ್ಸ್ ವಾಚ್ ಖರೀದಿಗೆ ಲಭ್ಯ: ಬೆಲೆ, ಫೀಚರ್ಸ್‌ ತಿಳಿಯಿರಿ

ಹಾನರ್ (Honor) ಸ್ಮಾರ್ಟ್‌ಡಿವೈಸ್‌ಗಳು ಭಾರತದಲ್ಲಿ ಇತ್ತೀಚೆಗೆ ಹೆಚ್ಚಿನ ಬೇಡಿಕೆ ಪಡೆಯುತ್ತಿವೆ. ಇದರ ಭಾಗವಾಗಿಯೇ ಹಾನರ್ ಚಾಯ್ಸ್ ವಾಚ್ (Honor Choice watch) ಅನ್ನು ಇಲ್ಲಿ ಅನಾವರಣ ಮಾಡಲಾಗಿದ್ದು, ಈ ಸ್ಮಾರ್ಟ್‌ವಾಚ್‌ ಭಿನ್ನ ಫೀಚರ್ಸ್ ಮೂಲಕ ಗಮನ ಸೆಳೆದಿದೆ. ಹಾಗೆಯೇ ಇಂದಿನಿಂದ ಈ ಸ್ಮಾರ್ಟ್‌ವಾಚ್ ಖರೀದಿಗೆ ಲಭ್ಯ ಇದೆ.

ಹೌದು, ಹಾನರ್‌ನ ಹಾನರ್ ಚಾಯ್ಸ್ ವಾಚ್ ಅನ್ನು ಭಾರತದಲ್ಲಿ ಇಂದಿನಿಂದ ಖರೀದಿ ಮಾಡಬಹುದಾಗಿದೆ. ಈ ವಾಚ್‌ ಡಜನ್‌ಗಟ್ಟಲೆ ಆರೋಗ್ಯ ಫೀಚರ್ಸ್‌ ಆಯ್ಕೆ ಪಡೆದಿದ್ದು, ಕೈಗೆಟುಕುವ ಬೆಲೆ ವಿಭಾಗದ ಸ್ಮಾರ್ಟ್‌ವಾಚ್‌ಗಳಲ್ಲಿ ಉತ್ತಮ ಸ್ಮಾರ್ಟ್‌ವಾಚ್‌ ಎನಿಸಿಕೊಳ್ಳಲಿದೆ. ಹಾಗಿದ್ರೆ, ಈ ವಾಚ್‌ನ ಬೆಲೆ ವಿವರ ಹಾಗೂ ಇದರ ಫೀಚರ್ಸ್‌ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಭಾರತದಲ್ಲಿ ಇಂದಿನಿಂದ ಹಾನರ್ ಚಾಯ್ಸ್ ವಾಚ್ ಖರೀದಿಗೆ ಲಭ್ಯ...

ಹಾನರ್ ಚಾಯ್ಸ್ ವಾಚ್: ಈ ಸ್ಮಾರ್ಟ್‌ವಾಚ್‌ ಅನ್ನು ಇಂದಿನಿಂದ ಭಾರತದಲ್ಲಿ ಖರೀದಿ ಮಾಡಬಹುದಾಗಿದೆ. ಈ ವಾಚ್‌ಗೆ ಭಾರತದಲ್ಲಿ 6,499 ರೂ.ಗಳ ಸಾಮಾನ್ಯ ಬೆಲೆ ನಿಗದಿ ಮಾಡಲಾಗಿದೆ. ಆದರೆ, ನೀವು ಅದನ್ನು ಮುಂಚಿತವಾಗಿ ಖರೀದಿಸಿದರೆ 500 ರೂ.ಗಳ ರಿಯಾಯಿತಿ ಸಿಗಲಿದ್ದು, ಈ ಮೂಲಕ 5,999ರೂ.ಗಳಿಗೆ ಈ ವಾಚ್‌ ಅನ್ನು ಖರೀದಿ ಮಾಡಬಹುದಾಗಿದೆ. ಈ ವಾಚ್‌ ಅನ್ನು ನೀವು ಹಾನರ್‌ನ ಅಧಿಕೃತ ವೆಬ್‌ಸೈಟ್‌ ಹಾಗೂ ಅಮೆಜಾನ್‌ ಮೂಲಕ ಖರೀದಿ ಮಾಡಬಹುದಾಗಿದೆ. ಇದು ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಕಾಣಿಸಿಕೊಂಡಿದೆ.

ಹಾನರ್ ಚಾಯ್ಸ್ ವಾಚ್ ಫೀಚರ್ಸ್‌: ಈ ಸ್ಮಾರ್ಟ್‌ವಾಚ್ 1.95 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ತ್ವರಿತ ಮತ್ತು ನಿಖರವಾದ ಮಾಹಿತಿ ನೀಡಲು ಇನ್‌ಬಿಲ್ಟ್‌ ಬಹು-ವ್ಯವಸ್ಥೆಯ GNSS ತಂತ್ರಜ್ಞಾನ ಪಡೆದಿದೆ. ಹಾಗೆಯೇ ನ್ಯಾವಿಗೇಶನ್ ಮತ್ತು ಟ್ರ್ಯಾಕಿಂಗ್ ಚಟುವಟಿಕೆಗಳಿಗೆ ಈ ಸ್ಮಾರ್ಟ್‌ವಾಚ್‌ ಸೂಕ್ತವಾಗಿದೆ.

ಭಾರತದಲ್ಲಿ ಇಂದಿನಿಂದ ಹಾನರ್ ಚಾಯ್ಸ್ ವಾಚ್ ಖರೀದಿಗೆ ಲಭ್ಯ...

ಜೊತೆಗೆ ಒನ್‌ಕ್ಲಿಕ್ SOS (OneClick SOS) ಬ್ಲೂಟೂತ್ ಕರೆಗಳ ಫೀಚರ್ಸ್‌ ತುರ್ತು ಸಂದರ್ಭಗಳಲ್ಲಿ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ. ಇದರೊಂದಿಗೆ ಈ ವಾಚ್‌ ಅನ್ನು ಪೂರ್ಣವಾಗಿ ಚಾರ್ಜ ಮಾಡಿದ್ರೆ 12 ದಿನಗಳವರೆಗೆ ಬ್ಯಾಕಪ್‌ ನೀಡಲಿದೆ. ಉಳಿದಂತೆ ಈ ಸ್ಮಾರ್ಟ್‌ವಾಚ್‌ ರಾತ್ರಿ 7 ಗಂಟೆಗಳ ಕಾಲ ನಿರಂತರ ನಿದ್ರೆಯ ಮೇಲ್ವಿಚಾರಣೆ ಮಾಡಲಿದೆ.

ಈ ವಾಚ್‌ 5 ATM ನೀರಿನ ಪ್ರತಿರೋಧವು ಈಜು ಮತ್ತು ಸರ್ಫಿಂಗ್‌ನಂತಹ ನೀರಿನ ಚಟುವಟಿಕೆಗಳಿಗೆ ಸೂಕ್ತವಾಗಿದೆ. ಅಂದರೆ ಎಲ್ಲಿ ಬೇಕಾದರೂ ಸಹ ಈ ವಾಚ್‌ ಅನ್ನು ಧರಿಸಬಹುದಾಗಿದೆ. ಇನ್ನು ಹಾನರ್‌ ಹೆಲ್ತ್‌ ಆಪ್‌ ಮೂಲಕ ಸ್ಮಾರ್ಟ್‌ಫೋನ್‌ಗಳೊಂದಿಗೆ ಕನೆಕ್ಟ್‌ ಆಗಲಿದ್ದು, ಸಮಗ್ರ ಆರೋಗ್ಯ ಮೇಲ್ವಿಚಾರಣೆಯನ್ನು ಮಾಡುತ್ತದೆ.

ಇದು ವಿವಿಧ ಹೊರಾಂಗಣ ಮತ್ತು ಫಿಟ್‌ನೆಸ್ ಚಟುವಟಿಕೆಗಳಿಗೆ ಅನುಗುಣವಾಗಿ ಫ್ರೀ ತಾಲೀಮ ಮಾಡ್ಯೂಲ್‌ಗಳ ಶ್ರೇಣಿಯನ್ನೇ ನೀಡುತ್ತದೆ. ಇದರೊಂದಿಗೆ ದಿನದ ಒತ್ತಡದ ಮಾನಿಟರಿಂಗ್ ಫೀಚರ್ಸ್‌ ಆಯ್ಕೆ ಇದ್ದು, ಇದರಿಂದ ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಅನುಕೂಲ ಆಗಲಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ ಹೃದಯ ಬಡಿತದ ಸಂಕೇತಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ಒತ್ತಡದ ಮಟ್ಟವನ್ನು ಮೌಲ್ಯಮಾಪನ ಮಾಡುತ್ತದೆ.

ಭಾರತದಲ್ಲಿ ಇಂದಿನಿಂದ ಹಾನರ್ ಚಾಯ್ಸ್ ವಾಚ್ ಖರೀದಿಗೆ ಲಭ್ಯ...

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಮೀಸಲಾದ ಒಡನಾಡಿಯಾಗಿ ಯಾವಾಗಲು ಕಾರ್ಯನಿರ್ವಹಿಸುತ್ತದೆ. ಈ ವಾಚ್‌ ಹೃದಯ ಬಡಿತ, SpO2 ಮತ್ತು ಒತ್ತಡದ ಮಟ್ಟಗಳ ಒನ್‌-ಕ್ಲಿಕ್ ಮಾಪನಗಳನ್ನು ಸಕ್ರಿಯಗೊಳಿಸುತ್ತದೆ. ಇದು 60 ಸೆಕೆಂಡುಗಳಲ್ಲಿ ಪೂರ್ಣಗೊಳ್ಳುತ್ತದೆ. ನವೀಕರಿಸಿದ ಹೃದಯ ಬಡಿತ ಅಲ್ಗಾರಿದಮ್‌ಗಳು ಮತ್ತು ಸುಧಾರಿತ ಸೆನ್ಸರ್‌ನೊಂದಿಗೆ ಇದು ನಿರಂತರ ಮತ್ತು ನಿಖರವಾದ ಹೃದಯ ಬಡಿತದ ಮೇಲ್ವಿಚಾರಣೆಯನ್ನು ಖಾತ್ರಿಗೊಳಿಸುತ್ತದೆ.

SpO2 ಮೇಲ್ವಿಚಾರಣೆಗಾಗಿ ಈ ವಾಚ್‌ ಕೆಂಪು ಮತ್ತು ಅತಿಗೆಂಪು ಬೆಳಕು, ಸುಧಾರಿತ ಅಲ್ಗಾರಿದಮ್‌ಗಳು ಮತ್ತು ರಕ್ತದ ಆಮ್ಲಜನಕದ ಮಟ್ಟವನ್ನು ಅಂದಾಜು ಮಾಡಲು ಮತ್ತು ಮೇಲ್ವಿಚಾರಣೆ ಮಾಡಲು ವೈಯಕ್ತಿಕಗೊಳಿಸಿದ ಜ್ಞಾಪನೆಗಳನ್ನು ಬಳಸಿಕೊಳ್ಳುತ್ತದೆ. ಈ ಮೂಲಕ ಸ್ಮಾರ್ಟ್‌ವಾಚ್‌ಗಳ ವಿಭಾಗದಲ್ಲಿ ವಿಶೇಷ ಸ್ಥಾನ ಪಡೆಯುವುದರಲ್ಲಿ ಎರಡು ಮಾತಿಲ್ಲ.

Best Mobiles in India

English summary
Honor Choice watch is available for purchase in India from today. This watch has dozens of health features to choose from, making it one of the best smartwatches in the affordable price segment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+