Honor: ಭಾರತದಲ್ಲಿ ಹಾನರ್ X9b ನೊಂದಿಗೆ ಲಾಂಚ್ ಆಗಲಿದೆ ಹಾನರ್ ಚಾಯ್ಸ್ ವಾಚ್? ಹೇಗಿದೆ ಗೊತ್ತಾ ಇದು?
ಹಾನರ್ (Honor) ಇದೀಗ ವಿಶೇಷ ಸ್ಮಾರ್ಟ್‌ವಾಚ್‌ಗಳ ಮೂಲಕ ಜಾಗತಿಕವಾಗಿ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಯಾವುದೇ ಹೊಸ ಹಾನರ್ ಫೋನ್ ಲಾಂಚ್ ಆದರೂ ಸಹ ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಅಂತಹ ವಿಶೇಷ ಫೀಚರ್ಸ್ ಆಯ್ಕೆಯನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಅದರಂತೆ ಈಗ ಹಾನರ್ ಮತ್ತೊಂದು ಹೊಸ ಫೋನ್ ಅನ್ನು ಲಾಂಚ್ ಮಾಡಲಿದ್ದು, ಈ ಫೋನ್ ಜೊತೆಗೆ ವಾಚ್ ಸಹ ಲಾಂಚ್ ಆಗಲಿದೆ ಎನ್ನಲಾಗಿದೆ.
ಹೌದು, ಹಾನರ್ ಚಾಯ್ಸ್ ವಾಚ್ (Honor Choice Watch) ಎಂಬ ಹೆಸರಿನ ಸ್ಮಾರ್ಟ್‌ವಾಚ್ ಲಾಂಚ್ ಆಗಲಿದೆ ಎಂದು ತಿಳಿದುಬಂದಿದೆ. ಈ ವಿಶೇಷ ಸ್ಮಾರ್ಟ್‌ವಾಚ್ ಕ್ರಿಯಾತ್ಮಕ ಕ್ರೌನ್ ಬಟನ್ ಆಯ್ಕೆ ಪಡೆದಿಲಿದೆ ಎಂದು ತಿಳಿದುಬಂದಿದ್ದು, ಇದು ಇತ್ತೀಚೆಗೆ ಚೀನಾದಲ್ಲಿ ಲಾಂಚ್ ಆಗಿರುವ ಚಾಯ್ಸ್ ಹೇಲೌ ವಾಚ್‌ನ ಮರುಬ್ರಾಂಡ್ ಆಗಿರಬಹುದು ಎಂದೂ ಸಹ ಹೇಳಲಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್ ಏನೆಲ್ಲಾ ಫೀಚರ್ಸ್ ಹೊಂದಿರಲಿದೆ?, ಯಾವಾಗ ಲಾಂಚ್ ಆಗಲಿದೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಹಾನರ್ ಚಾಯ್ಸ್ ವಾಚ್ : ಹಾನರ್ X9b ಮತ್ತು ಚಾಯ್ಸ್ ಇಯರ್‌ಬಡ್ಸ್ X5 (Honor X9b and Choice Earbuds X5) ಅನ್ನು ಕೀಟಲೆ ಮಾಡಿದ ಬಳಿಕ ಈಗ HTECH ಸಿಇಒ ಮಾಧವ್ ಶೇಠ್ ಮುಂಬರುವ ಚಾಯ್ಸ್ ವಾಚ್ ಬಗ್ಗೆಯೂ ಕೀಟಲೆ ಮಾಡಿದ್ದಾರೆ. ದೇಶದಲ್ಲಿ ಮುಂಬರುವ ಹಾನರ್ X9b ಮತ್ತು ಚಾಯ್ಸ್ ಇಯರ್‌ಬಡ್ಸ್ X5 ಜೊತೆಗೆ ಸ್ಮಾರ್ಟ್‌ವಾಚ್ ಸಹ ಅನಾವರಣ ಆಗಲಿದೆ ಎನ್ನಲಾಗಿದೆ. ಈ ಮೂರು ಡಿವೈಸ್‌ಗಳನ್ನು ಹಾನರ್ ಫೆಬ್ರವರಿಯಲ್ಲಿ ಅನಾವರಣಗೊಳಿಸಬಹುದು ಎಂದು ತಿಳಿದುಬಂದಿದೆ.
ಈ ವಾಚ್ ಸಂಬಂಧ ಎಕ್ಸ್‌ನಲ್ಲಿ ಅನ್‌ಬಾಕ್ಸಿಂಗ್ ವಿಡಿಯೋ ಸಹ ವೈರಲ್ ಆಗಿದೆ. ಅದರ ಪ್ರಕಾರ ಈ ವಾಚ್ ಇತರ ಸ್ಮಾರ್ಟ್‌ವಾಚ್‌ಗಳಂತೆಯೇ, ಬಕಲ್ ಸ್ಟ್ರಾಪ್ ವಿನ್ಯಾಸದೊಂದಿಗೆ ಸಿಲಿಕೋನ್ ಪಟ್ಟಿಯನ್ನು ಹೊಂದಿಲಿದೆ ಎಂದು ತಿಳಿದುಬಂದಿದೆ. ಅಲ್ಲದೆ ಈ ಸ್ಮಾರ್ಟ್‌ವಾಚ್ ಇನ್ ಬಿಲ್ಟ್ ಕ್ಯಾಲ್ಕುಲೇಟರ್ ಮತ್ತು ಹವಾಮಾನ ಸಂಬಂಧಿ ಮಾಹಿತಿ ನೀಡಲು ವಿಶೇಷ ಸೌಲಭ್ಯ ಹೊಂದಿರಲಿದೆ ಎನ್ನಲಾಗಿದೆ. ಇನ್ನು ಯುಎಸ್‌ಬಿ ಟೈಪ್-ಎ ಆಯ್ಕೆಯ ಮ್ಯಾಗ್ನೆಟಿಕ್ ಪಿನ್ ಕೇಬಲ್ ಅನ್ನು ಇದು ಹೊಂದಿರಲಿದೆ ಎಂದು ಈ ವಿಡಿಯೋ ಮೂಲಕ ತಿಳಿಯಬಹುದು.

ಹಾನರ್ ಚಾಯ್ಸ್ ವಾಚ್ ಫೀಚರ್ಸ್: ಈ ಸ್ಮಾರ್ಟ್‌ವಾಚ್ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದರೂ ಸಹ ಮುಂಬರುವ ಹಾನರ್ ಚಾಯ್ಸ್ ವಾಚ್ ಚೀನಾದಲ್ಲಿ ಪ್ರಾರಂಭವಾದ ಹಾನರ್ ಚಾಯ್ಸ್ ಹೇಲೌ (Haylou) ವಾಚ್‌ನ ಮರುಬ್ರಾಂಡ್ ಆಗಿರಬಹುದು ಎನ್ನಲಾಗಿದ್ದು, ಈ ವಾಚ್ ಈ ಹೇಲೌ ವಾಚ್ 60Hz ರಿಫ್ರೆಶ್ ರೇಟ್ ಆಯ್ಕೆಯೊಂದಿಗೆ 1.95 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಜೊತೆಗೆ ಇದರಲ್ಲಿ 550 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಕಾಣಬಹುದಾಗಿದೆ.
ಇನ್ನು 100 ಗ್ರಾಹಕೀಯಗೊಳಿಸಬಹುದಾದ ವಾಚ್ ಫೇಸ್‌ಗಳ ಆಯ್ಕೆಯನ್ನು ಮತ್ತು ಪಿನ್ ಶೈಲಿಯ ಬಕಲ್ ಮತ್ತು ಡಿಟ್ಯಾಚೇಬಲ್ ವಿನ್ಯಾಸದೊಂದಿಗೆ ಬಹು ಪಟ್ಟಿಯ ಬಣ್ಣದ ಆಯ್ಕೆಗಳನ್ನು ಈ ವಾಚ್ ಹೊಂದಿದ್ದು, ಬ್ಲೂಟೂತ್ ಕರೆ ತಂತ್ರಜ್ಞಾನವನ್ನು ಪಡೆದಿದೆ. ಈ ಮೂಲಕ ಕರೆಯಲ್ಲಿ ಉತ್ತಮವಾಗಿ ತೊಡಗಿಕೊಳ್ಳಬಹುದಾಗಿದೆ. ಇದರೊಂದಿಗೆ 120 ಕ್ಕೂ ಹೆಚ್ಚು ವರ್ಕೌಟ್ ಮೋಡ್‌ಗಳನ್ನು ಈ ವಾಚ್ ಬೆಂಬಲಿಸದ್ದು, ಹೃದಯ ಬಡಿತ, ರಕ್ತದ ಆಮ್ಲಜನಕದ ಮಟ್ಟ, ನಿದ್ರೆ, ಒತ್ತಡ ಮತ್ತು ಸ್ತ್ರೀ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲಿದೆ.

ಈ ಸ್ಮಾರ್ಟ್‌ವಾಚ್ ಸಾಮಾನ್ಯ ಬಳಕೆಯಲ್ಲಿ 12 ದಿನಗಳವರೆಗೆ ಮತ್ತು ಹೆಚ್ಚಿನ ಬಳಕೆಯ ಮೋಡ್‌ನಲ್ಲಿ 9 ದಿನಗಳ ಬ್ಯಾಟರಿ ಬ್ಯಾಕ್‌ಅಪ್ ಅನ್ನು ನೀಡಲಿದೆ. ಇದರೊಂದಿಗೆ AoD ಫೀಚರ್ಸ್ ಆಯ್ಕೆ ಇದ್ದು, ಬ್ಯಾಟರಿ ಬ್ಯಾಕಪ್ ಅನ್ನು 5 ದಿನಗಳವರೆಗೆ ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಉಳಿದಂತೆ ಈ ಸ್ಮಾರ್ಟ್‌ವಾಚ್ 5ATM ರೇಟಿಂಗ್ ಹೊಂದಿದ್ದು, ನೀರಿನ ಪ್ರತಿರೋಧವನ್ನು ಹೊಂದಿದೆ.


Click it and Unblock the Notifications








