HONOR: ಹಾನರ್ ಚಾಯ್ಸ್ ವಾಚ್ ಲಾಂಚ್! ಅಮೋಲೆಡ್ ಡಿಸ್‌ಪ್ಲೇ.. ಬೆಲೆ ಎಷ್ಟು?
ಹಾನರ್ (Honor) ಇದೀಗ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಆಗಿರುವ ಹಾನರ್ X9b (Honor X9b) ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಲಾಂಚ್ ಆಗುವ ಮುನ್ನವೇ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಸೌಂಡ್ ಮಾಡುತ್ತಿತ್ತು. ಇದೀಗ ಈ ಫೋನ್ ಜೊತೆಗೆ ಸ್ಮಾರ್ಟ್‌ವಾಚ್ ಅನ್ನೂ ಸಹ ಲಾಂಚ್ ಮಾಡಲಾಗಿದೆ.
ಹೌದು, ಹಾನರ್ X9b ಸ್ಮಾರ್ಟ್‌ಫೋನ್‌ನೊಂದಿಗೆ ಹಾನರ್‌ಟೆಕ್ ಭಾರತದಲ್ಲಿ ಹಾನರ್ ಚಾಯ್ಸ್ ಸ್ಮಾರ್ಟ್‌ವಾಚ್ (Honor Choice Smartwatch) ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ವಾಚ್ 1.95 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಹಗುರವಾದ ವಿನ್ಯಾಸವನ್ನು ಹೊಂದಿದೆ. ಇದರೊಂದಿಗೆ ಅಗತ್ಯ ಆರೋಗ್ಯ ಸಂಬಂಧಿ ಫೀಚರ್ಸ್ ಅನ್ನು ಕಾಣಬಹುದಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್‌ನ ಪ್ರಮುಖ ಫೀಚರ್ಸ್ ಮತ್ತು ಭಾರತದಲ್ಲಿ ಇದರ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಹಾನರ್ ಚಾಯ್ಸ್ ಸ್ಮಾರ್ಟ್‌ವಾಚ್ ಡಿಸ್‌ಪ್ಲೇ ಮಾಹಿತಿ: ಈ ಹಾನರ್ ಚಾಯ್ಸ್ ವಾಚ್ 1.95 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಅಂದರೆ ಇದು 410 x 502 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಕಾಣಿಸಿಕೊಂಡಿದ್ದು, 550 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಮೂಲಕ ಉತ್ತಮ ವೀಕ್ಷಣೆ ಅನುಭವ ನೀಡಲಿದೆ. ಇದರೊಂದಿಗೆ 100+ವಾಚ್ ಫೇಸ್ ಆಯ್ಕೆಯನ್ನು ಇಲ್ಲಿ ಕಾಣಬಹುದಾಗಿದೆ.
ಹಾನರ್ ಚಾಯ್ಸ್ ಸ್ಮಾರ್ಟ್‌ವಾಚ್ ಫೀಚರ್ಸ್: ಇನ್ನು ಈ ಸ್ಮಾರ್ಟ್‌ವಾಚ್ ಇಡೀ ದಿನದ SpO2 ಮಾನಿಟರಿಂಗ್, ಹೃದಯ ಬಡಿತ ಮೇಲ್ವಿಚಾರಣೆ, ಒತ್ತಡದ ಮಾನಿಟರಿಂಗ್, ನಿದ್ರೆಯ ಗುಣಮಟ್ಟ, ಉಸಿರಾಟದ ಗುಣಮಟ್ಟ, ಸ್ತ್ರೀ ಸೈಕಲ್ ಟ್ರ್ಯಾಕರ್, VO2 ಮ್ಯಾಕ್ಸ್ ಸ್ಟೇಟ್ಸ್ ಫೀಚರ್ಸ್ ಪಡೆದಿದ್ದು, ಪೆಡೋಮೀಟರ್ ಆಯ್ಕೆಯೊಂದಿಗೆ ವಿಶೇಷ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ನಿಖರ ಆರೋಗ್ಯ ಸಂಬಂಧಿ ಮಾಹಿತಿಯನ್ನು ಈ ವಾಚ್ ನೀಡಲಿದೆ.

ಇದರೊಂದಿಗೆ ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಮೂಲಕ ಕರೆ ಸೌಲಭ್ಯ ನೀಡಲು ಮೈಕ್ರೊಫೋನ್ ಮತ್ತು ಸ್ಪೀಕರ್ ಆಯ್ಕೆ ಪಡೆದಿದೆ. ಅಲ್ಲದೆ ನೀರು ಮತ್ತು ಧೂಳು ನಿರೋಧಕ (5ATM) ವಾಗಿದ್ದು, ಈ ಮೂಲಕ ಇದನ್ನು ಎಲ್ಲಿ ಬೇಕಾದರೂ ಧರಿಸಬಹುದಾಗಿದೆ. ಇನ್ನು ಬ್ಲೂಟೂತ್ ಆವೃತ್ತಿ 5.3, ಬಿಡಿಎಸ್/ಜಿಪಿಎಸ್/ಗ್ಲೋನಾಸ್/ ಗೆಲಿಲಿಯೊ ಹಾಗೂ QZSS ನ್ಯಾವಿಗೇಷನ್ ಸೆಟಲೈಟ್ ವ್ಯವಸ್ಥೆಯೊಂದಿಗೆ ಕೆಲಸ ಮಾಡಲಿದೆ.
ಇತರೆ ಫೀಚರ್ಸ್ ಕಡೆ ಕಣ್ಣಾಯಿಸುವುದಾರೆ ಈ ಸ್ಮಾರ್ಟ್‌ವಾಚ್ ದಿಕ್ಸೂಚಿ, ಕ್ಯಾಲ್ಕುಲೇಟರ್, ಮ್ಯೂಸಿಕ್ ಕಂಟ್ರೋಲ್, ರಿಮೋಟ್ ಶಟರ್, ಫೋನ್ ಫೈಂಡ್, ಟಾರ್ಚ್, ಹವಾಮಾನ, ಡಿಎನ್‌ಡಿ, ಸ್ಟಾಪ್‌ವಾಚ್ ಹಾಗೂ ಅಲಾರ್ಮ್ ಸೇರಿದಂತೆ ಅನೇಕ ಫೀಚರ್ಸ್ ಅನ್ನು ಪಡೆದಿದೆ.
ಅಲ್ಲದೆ ಈ ಸ್ಮಾರ್ಟ್‌ವಾಚ್ ಕೆಪ್ಯಾಸಿಟಿವ್ ಸೆನ್ಸರ್ ಆಯ್ಕೆ ಪಡೆದಿದ್ದು, ಇದು ಸ್ಮಾರ್ಟ್‌ವಾಚ್ ಕಟ್ಟುಕೊಂಡಿರುವವರ ಚರ್ಮದ ಮೇಲ್ಮೈಯನ್ನು ಪತ್ತೆ ಮಾಡುತ್ತದೆ, ಮಾನವ ಚರ್ಮ ಮತ್ತು ನಿರ್ಜೀವ ವಸ್ತುಗಳನ್ನು ಈ ಮೂಲಕ ಪ್ರತ್ಯೇಕಿಸುತ್ತದೆ. ಇನ್ನು ಈ ಸ್ಮಾರ್ಟ್‌ವಾಚ್ 300mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಭರ್ತಿ 12 ದಿನಗಳ ಅಥವಾ ಎರಡು ವಾರಗಳ ಬ್ಯಾಟರಿ ಬ್ಯಾಕಪ್ ನೀಡಲಿದೆ.

ಹಾನರ್ ಚಾಯ್ಸ್ ಸ್ಮಾರ್ಟ್‌ವಾಚ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ವಾಚ್ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಕಂಡುಬಂದಿದ್ದು, 6,499 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಆದರೆ 500 ಬಿಡುಗಡೆ ರಿಯಾಯಿತಿ ಸಿಕ್ಕುತ್ತಿದ್ದು, 5,999 ರೂ.ಗಳಿಗೆ ಇದನ್ನು ನೀವು ಖರೀದಿ ಮಾಡಬಹುದಾಗಿದೆ. ಇದನ್ನು ಅಮೆಜಾನ್ ಸೇರಿದಂತೆ ಆಫ್‌ಲೈನ್ ಸ್ಟೋರ್‌ಗಳಲ್ಲಿಯೂ ಖರೀದಿ ಮಾಡಬಹುದಾಗಿದೆ. ಆದರೆ ಈಗಲ್ಲ ಫೆಬ್ರವರಿ 24 ಮಧ್ಯಾಹ್ನ 12 ರಿಂದ ಈ ಸೇಲ್ ಸ್ಟಾರ್ಟ್ ಆಗಲಿದೆ.


Click it and Unblock the Notifications








