Home
ಸುದ್ದಿಜಾಲ

Honor: ಕಣ್ ಕಣ್ಣ ಸಲಿಗೆ... ಈ ಹಾನರ್‌ ಫೋನ್‌ನಲ್ಲಿ ಕಣ್ಣಿಂದಲೇ ಸಂವಹನ ಮಾಡಬಹುದು!

ಕೆಲವು ದಿನಗಳ ಹಿಂದಷ್ಟೇ ಸ್ನಾಪ್‌ಡ್ರಾಗನ್ 8 ಜನ್ 3 SoC (Snapdragon 8 Gen 3 SoC) ಪ್ರೊಸೆಸರ್‌ ಅನ್ನು ಪರಿಚಯಿಸಲಾಗಿದೆ. ಈ ಮೂಲಕ ಇನ್ಮುಂದೆ ಲಾಂಚ್ ಆಗುವ ಸ್ಮಾರ್ಟ್‌ಫೋನ್‌ಗಳು ಈ ಹೊಸ ಪ್ರೊಸೆಸರ್ ಹೊಂದಲಿವೆ ಎಂದು ತಿಳಿದುಬಂದಿದೆ. ಆದರೆ, ಕೆಲವು ಮಾಹಿತಿ ಪ್ರಕಾರ ಸದ್ಯಕ್ಕೆ ಬೆರಳೆಣಿಕೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಇದು ಕಂಡುಬರಲಿದ್ದು, ಈ ವಿಭಾಗದಲ್ಲಿ ಹಾನರ್ (Honor)‌ ಫೋನ್‌ ಸಹ ಇದೆ.

ಹೌದು, ಹೊಸ ಪ್ರೊಸೆಸರ್‌ನೊಂದಿಗೆ ಯಾವ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಲಿವೆ ಎಂಬ ಕುತೂಹಲ ಸಾಕಷ್ಟು ಗ್ರಾಹಕರಲ್ಲಿ ಮನೆ ಮಾಡಿದೆ. ಈ ನಡುವೆ ಶಿಯೋಮಿ 14 ಸರಣಿಯ ಫೋನ್‌ಗಳಲ್ಲಿ ಈ ಹೊಸ ಪ್ರೊಸೆಸರ್‌ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ನಡುವೆ ಹಾನರ್‌ ಫೋನ್‌ನಲ್ಲೂ ಈ ಪ್ರೊಸೆಸರ್‌ ಇರಲಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ರೆ ಈ ಪ್ರೊಸೆಸರ್‌ ಹೊಂದಿರುವ ಫೋನ್‌ನ ವಿಶೇಷತೆ ಏನು? ಯಾವಾಗ ಈ ಫೋನ್‌ ಅನ್ನು ಲಾಂಚ್ ಮಾಡಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಕಣ್ ಕಣ್ಣ ಸಲಿಗೆ... ಈ ಹಾನರ್‌ ಫೋನ್‌ನಲ್ಲಿ ಕಣ್ಣಿಂದಲೇ ಸಂವಹನ ಮಾಡಬಹುದು!

ಹಾನರ್‌ ಫೋನ್‌ನಲ್ಲಿ ಹೊಸ ಪ್ರೊಸೆಸರ್‌: ಹಾನರ್‌ ಇದೀಗ ತನ್ನ ಹಾನರ್ ಮ್ಯಾಜಿಕ್ 6 ಸ್ಮಾರ್ಟ್‌ಫೋನ್‌ನಲ್ಲಿ (Honor Magic 6 Smartphone) ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್‌ ಅನ್ನು ಪರಿಚಯಿಸಲಿದೆ. ಈ ಬಗ್ಗೆ ಹಾನರ್‌ ಸ್ವತಃ ಮಾಹಿತಿ ದೃಢಪಡಿಸಿದೆ. ಈ ಸ್ಮಾರ್ಟ್‌ಫೋನ್ ಮ್ಯಾಜಿಕ್ ಕ್ಯಾಪ್ಸುಲ್ (magic capsule) ಎಂಬ ಐ ಟ್ರ್ಯಾಕಿಂಗ್‌ಗೆ (Eye tracking) ಸಂಬಂಧಿಸಿದ ಪ್ರಮುಖ ಫೀಚರ್ಸ್ ಹೊಂದಿರುವುದು ವಿಶೇಷವಾದ ಸಂಗತಿಯಾಗಿದೆ.

ಈ ಮ್ಯಾಜಿಕ್ ಕ್ಯಾಪ್ಸುಲ್ ಎನ್ನುವುದು ಬಳಕೆದಾರರಿಗೆ ತಮ್ಮ ಕಣ್ಣುಗಳನ್ನು ಬಳಕೆ ಮಾಡಿಕೊಂಡು ಈ ಸ್ಮಾರ್ಟ್‌ಫೋನ್‌ನೊಂದಿಗೆ ಸಂವಹನ ನಡೆಸಬಹುದಾಗಿದೆ. ಈ ಫೀಚರ್ಸ್‌ ಆಪಲ್‌ನ ಡೈನಾಮಿಕ್ ಐಲ್ಯಾಂಡ್‌ನಂತೆಯೇ ಕಾಣುತ್ತಿದ್ದು, ಆಂಡ್ರಾಯ್ಡ್‌ ಬಳಕೆದಾರರಿಗೆ ಭಿನ್ನ ಅನುಭವ ನೀಡಲಿದೆ. ಇನ್ನು ಡಿಸ್ಪ್ಲೇನಲ್ಲಿ ಯಾವುದೇ ಕಂಟೆಂಟ್‌ನೊಂದಿಗೆ ತೊಡಗಿಸಿಕೊಳ್ಳಲು ಇದು ನಿಮ್ಮನ್ನು ಅನುಮತಿಸುತ್ತದೆ.

ಕಣ್ ಕಣ್ಣ ಸಲಿಗೆ... ಈ ಹಾನರ್‌ ಫೋನ್‌ನಲ್ಲಿ ಕಣ್ಣಿಂದಲೇ ಸಂವಹನ ಮಾಡಬಹುದು!

ಈಗಾಗಲೇ ಹಾನರ್ ಈ ತಂತ್ರಜ್ಞಾನ ಹೇಗಿದೆ ಎಂಬುದರ ಡೆಮೊ ವಿಡಿಯೋವನ್ನೂ ಸಹ ಶೇರ್ ಮಾಡಿಕೊಂಡಿದೆ. ಇದರಲ್ಲಿ ಹಾನರ್ ಮ್ಯಾಜಿಕ್ 6 ಸ್ಮಾರ್ಟ್‌ಫೋನ್ ಅನ್ನು ಕೈಯಲ್ಲಿ ಹಿಡಿದುಕೊಂಡು ಮ್ಯಾಜಿಕ್ ಕ್ಯಾಪ್ಸುಲ್ ಅನ್ನು ನೋಡುತ್ತಿರುವ ಮಹಿಳೆಯನ್ನು ಕಾಣಬಹುದು. ಅವರು ದೃಷ್ಟಿಗೋಚರವಾಗಿ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇಯನ್ನು ಬಳಕೆ ಮಾಡುತ್ತಿದ್ದಾರೆ. ಆದರೆ ಹಾನರ್‌ ತನ್ನ ಮ್ಯಾಜಿಕ್ 6s ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕವನ್ನು ಇನ್ನೂ ಸಹ ಬಹಿರಂಗಪಡಿಸಿಲ್ಲ. ಹಾನರ್ ಮ್ಯಾಜಿಕ್ 5 ಸರಣಿಯಂತೆಯೇ ಇದು 2024 ರ ಮೊದಲ ತ್ರೈಮಾಸಿಕದಲ್ಲಿ ಲಾಂಚ್‌ ಆಗುವ ನಿರೀಕ್ಷೆ ಇದೆ.

ಇದರೊಂದಿಗೆ ಈ ವಿಶೇಷ ಸ್ಮಾರ್ಟ್‌ಫೋನ್‌ ದೊಡ್ಡ ಭಾಷಾ ಮಾದರಿಯಿಂದ (LLM) ಚಾಲಿತವಾಗಿರುವ ಆನ್‌ಬೋರ್ಡ್ ಕೃತಕ ಬುದ್ಧಿಮತ್ತೆಯೊಂದಿಗೆ ಕಾಣಿಸಿಕೊಳ್ಳಲಿದೆಯಂತೆ. ಇದನ್ನು ಹೊರತುಪಡಿಸಿ ಈ ಸ್ಮಾರ್ಟ್‌ಫೋನ್ ಕುರಿತು ಯಾವುದೇ ಇತರೆ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದಷ್ಟೇ ನಿರೀಕ್ಷೆ ಮಾಡಬಹುದಾಗಿದೆ.

ಇನ್ನು ಹಾನರ್ ಮ್ಯಾಜಿಕ್ 5 ಸ್ಮಾರ್ಟ್‌ಫೋನ್‌ ಮತ್ತು ಹಾನರ್ ಮ್ಯಾಜಿಕ್ 5 ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಕಳೆದ ಫೆಬ್ರವರಿಯಲ್ಲಿ ಲಾಂಚ್‌ ಮಾಡಲಾಗಿತ್ತು. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಸ್ನಾಪ್‌ಡ್ರಾಗನ್ 8 ಜನ್ 2 SoC ಪ್ರೊಸೆಸರ್‌ ಬಲ ಪಡೆದುಕೊಂಡಿದೆ. ಈ ಮೂಲಕ ಬಳಕೆದಾರರು ಈ ಫೋನ್‌ ನಲ್ಲಿ ಉತ್ತಮ ಅನುಭವವನ್ನು ಪಡೆದುಕೊಳ್ಳುವಂತಾಗಿದೆ. ಅಷ್ಟೇ ಅಲ್ಲದೆ ಹೊಸ ರೀತಿಯ ಫೀಚರ್ಸ್‌ ಸಹ ಈ ಫೋನ್‌ನಲ್ಲಿದೆ.

ಉಳಿದಂತೆ ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್‌ನೊಂದಿಗೆ ಮೊದಲ ಶಿಯೋಮಿ 14 ಸರಣಿಯ ಬೆಲೆಗೆ ಸಂಬಂಧಿಸಿದಂತೆ, ಶಿಯೋಮಿ 14 ಪ್ರೊ ನ ಮೂಲ ರೂಪಾಂತರವನ್ನು ಭಾರತೀಯ ರೂಪಾಯಿಗಳಲ್ಲಿ ಸುಮಾರು 56,500 ಕ್ಕೆ ಲಾಂಚ್‌ ಮಾಡಲಾಗಿದೆ. ಜೊತೆಗೆ ಶಿಯೋಮಿ 14 ಸ್ಮಾರ್ಟ್‌ಫೋನ್‌ನ ಮೂಲ ರೂಪಾಂತರಕ್ಕೆ 50,000 ರೂ.ಗಳನ್ನು ನಿಗದಿ ಮಾಡಲಾಗಿದೆ. ಇದರೊಂದಿಗೆ ಹೊಸ ಚಿಪ್‌ಸೆಟ್‌ ಭಾರತಕ್ಕೆ ಕಾಲಿಡಲಿದೆ.

Best Mobiles in India

English summary
Honor Magic 6 smartphone will be powered by Snapdragon 8 Gen 3 chipset. It is a special thing that this smartphone has important features related to eye tracking called magic capsule.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+