ಹಾನರ್‌ ಮ್ಯಾಜಿಕ್ 3 ಫೋನ್ ಸರಣಿ ಲಾಂಚ್!..ಫುಲ್‌ ಹೈ ಎಂಡ್‌ ಕ್ಯಾಮೆರಾ!

|

ಪ್ರಮುಖ ಮೊಬೈಲ್‌ ಸಂಸ್ಥೆ ಹಾನರ್ ಹಲವು ಶ್ರೇಣಿಯಲ್ಲಿ ಸ್ಮಾರ್ಟ್‌ಫೋನ್ ಪರಿಚಯಿಸಿದೆ ಸೈ ಎನಿಸಿಕೊಂಡಿದೆ. ಬಜೆಟ್‌ ದರದ ಫೋನ್‌ಗಳ ಜೊತೆಗೆ ಫ್ಲ್ಯಾಗ್‌ಶಿಪ್ ಮಾದರಿಯ ಫೋನ್‌ಗಳನ್ನು ಬಿಡುಗಡೆ ಮಾಡಿ ಗ್ರಾಹಕರನ್ನು ಆಕರ್ಷಿಸಿದೆ. ಇದೀಗ ಸಂಸ್ಥೆಯು ಹಾನರ್‌ ಮ್ಯಾಜಿಕ್ 3 ಸಿರೀಸ್‌ ಸ್ಮಾರ್ಟ್‌ಫೋನ್‌ ಸರಣಿಯನ್ನು ಲಾಂಚ್ ಮಾಡಿದ್ದು, ಗ್ರಾಹಕರ ಗಮನ ಸೆಳೆದಿದೆ. ಈ ಸರಣಿಯು ಭಿನ್ನ ಪ್ರೈಸ್‌ ಟ್ಯಾಗ್‌ನಲ್ಲಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ.

ಮ್ಯಾಜಿಕ್

ಹೌದು, ಹಾನರ್‌ ಸಂಸ್ಥೆಯು ಹಾನರ್‌ ಮ್ಯಾಜಿಕ್ 3 ಸಿರೀಸ್‌ ಹೆಸರಿನ ಸ್ಮಾರ್ಟ್‌ಫೋನ್‌ ಸರಣಿಯನ್ನು ಚೀನಾದಲ್ಲಿ ಅನಾವರಣ ಮಾಡಿದೆ. ಈ ಸರಣಿಯು ಹಾನರ್‌ ಮ್ಯಾಜಿಕ್ 3, ಹಾನರ್‌ ಮ್ಯಾಜಿಕ್ 3 ಪ್ರೊ ಮತ್ತು ಹಾನರ್‌ ಮ್ಯಾಜಿಕ್ 3 ಪ್ರೊ ಪ್ಲಸ್‌ ಹೆಸರಿನ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ. ಈ ಮೂರು ಫೋನ್‌ಗಳು 4,600mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿವೆ. ಹಾಗೆಯೇ ಸ್ನ್ಯಾಪ್‌ಡ್ರಾಗನ್ 888 ಪ್ರೊಸೆಸರ್‌ ಅನ್ನು ಪಡೆದಿವೆ. ಹಾಗಾದರೇ ಹಾನರ್‌ ಮ್ಯಾಜಿಕ್ 3 ಸಿರೀಸ್‌ ಫೋನ್‌ಗಳ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಹಾನರ್‌ ಮ್ಯಾಜಿಕ್ 3 ಫೀಚರ್ಸ್‌:

ಹಾನರ್‌ ಮ್ಯಾಜಿಕ್ 3 ಫೀಚರ್ಸ್‌:

ಹಾನರ್‌ ಮ್ಯಾಜಿಕ್ 3 ಸ್ಮಾರ್ಟ್‌ಫೋನ್ 1,344x2,772 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡ 6.76 ಇಂಚಿನ ಹೆಚ್‌ಡಿ ಪ್ಲಸ್‌ OLED ಮಾದರಿಯ ಡಿಸ್‌ಪ್ಲೇ ಹೊಂದಿದೆ. ಇನ್ನು ಫೋನ್ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 456ppi ಆಗಿದೆ. ಸ್ಕ್ರೀನ್‌ನಿಂದ ಬಾಹ್ಯಬಾಡಿಯ ನಡುವಿನ ಅಂತರ 89% ಆಗಿದೆ. ಹಾಗೆಯೇ ಈ ಪೋನ್ ಸ್ನ್ಯಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಬಲ ಪಡೆದಿದ್ದು, 8GB RAM ಮತ್ತು 256GB ಸ್ಟೋರೇಜ್‌ ಆಯ್ಕೆ ಪಡೆದಿದೆ. ಜೊತೆಗೆ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಅವು ಕ್ರಮವಾಗಿ 50 ಮೆಗಾ ಪಿಕ್ಸಲ್, 64 ಮೆಗಾ ಪಿಕ್ಸಲ್ ಮತ್ತು 13 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿವೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾ ಸಹ 13 ಮೆಗಾ ಪಿಕ್ಸಲ್ ಸೆನ್ಸಾರ್‌ ಪಡೆದಿದೆ. ಇನ್ನು ಈ ಫೋನ್ 4,600mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದೆ.

ಹಾನರ್‌ ಮ್ಯಾಜಿಕ್ 3 ಪ್ರೊ ಫೀಚರ್ಸ್‌:

ಹಾನರ್‌ ಮ್ಯಾಜಿಕ್ 3 ಪ್ರೊ ಫೀಚರ್ಸ್‌:

ಹಾನರ್‌ ಮ್ಯಾಜಿಕ್ 3 ಪ್ರೊ ಫೋನ್ ಬಹುತೇಕ ಮ್ಯಾಜಿಕ್ 3 ಫೋನಿನ ಫೀಚರ್ಸ್‌ ಹೋಲಿಕೆ ಪಡೆದಿದೆ. ಈ ಫೋನ್ 1,344x2,772 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡ 6.76 ಇಂಚಿನ ಹೆಚ್‌ಡಿ ಪ್ಲಸ್‌ OLED ಮಾದರಿಯ ಡಿಸ್‌ಪ್ಲೇ ಹೊಂದಿದೆ. ಇನ್ನು ಫೋನ್ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 456ppi ಆಗಿದೆ. ಸ್ಕ್ರೀನ್‌ನಿಂದ ಬಾಹ್ಯಬಾಡಿಯ ನಡುವಿನ ಅಂತರ 89% ಆಗಿದೆ. ಹಾಗೆಯೇ ಈ ಪೋನ್ ಸ್ನ್ಯಾಪ್‌ಡ್ರಾಗನ್ 888 ಪ್ಲಸ್ SoC ಪ್ರೊಸೆಸರ್‌ ಬಲ ಪಡೆದಿದ್ದು, 8GB RAM ಮತ್ತು 256GB ಸ್ಟೋರೇಜ್‌ ಆಯ್ಕೆ ಪಡೆದಿದೆ. ಜೊತೆಗೆ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಅವು ಕ್ರಮವಾಗಿ 50 ಮೆಗಾ ಪಿಕ್ಸಲ್, 64 ಮೆಗಾ ಪಿಕ್ಸಲ್, 64 ಮೆಗಾ ಪಿಕ್ಸಲ್ ಮತ್ತು 13 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿವೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾ ಸಹ 13 ಮೆಗಾ ಪಿಕ್ಸಲ್ ಸೆನ್ಸಾರ್‌ ಪಡೆದಿದೆ. ಇನ್ನು ಈ ಫೋನ್ 4,600mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದೆ.

ಹಾನರ್‌ ಮ್ಯಾಜಿಕ್ 3 ಪ್ರೊ ಪ್ಲಸ್‌ ಫೀಚರ್ಸ್‌:

ಹಾನರ್‌ ಮ್ಯಾಜಿಕ್ 3 ಪ್ರೊ ಪ್ಲಸ್‌ ಫೀಚರ್ಸ್‌:

ಹಾನರ್‌ ಮ್ಯಾಜಿಕ್ 3 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್ ಸಹ ಮ್ಯಾಜಿಕ್ 3 ಫೋನಿನ ಫೀಚರ್ಸ್‌ಗಳ ಹೋಲಿಕೆ ಪಡೆದಿದೆ. ಆದರೆ ಕ್ಯಾಮೆರಾ ವಿಭಾಗದಲ್ಲಿ ಬದಲಾವಣೆ ಹೊಂದಿದೆ. ಈ ಫೋನ್ 1,344x2,772 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡ 6.76 ಇಂಚಿನ ಹೆಚ್‌ಡಿ ಪ್ಲಸ್‌ OLED ಮಾದರಿಯ ಡಿಸ್‌ಪ್ಲೇ ಹೊಂದಿದೆ. ಇನ್ನು ಫೋನ್ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 456ppi ಆಗಿದೆ. ಸ್ಕ್ರೀನ್‌ನಿಂದ ಬಾಹ್ಯಬಾಡಿಯ ನಡುವಿನ ಅಂತರ 89% ಆಗಿದೆ. ಹಾಗೆಯೇ ಈ ಪೋನ್ ಸ್ನ್ಯಾಪ್‌ಡ್ರಾಗನ್ 888 ಪ್ಲಸ್ SoC ಪ್ರೊಸೆಸರ್‌ ಬಲ ಪಡೆದಿದ್ದು, 8GB RAM ಮತ್ತು 256GB ಸ್ಟೋರೇಜ್‌ ಆಯ್ಕೆ ಪಡೆದಿದೆ. ಜೊತೆಗೆ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಅವು ಕ್ರಮವಾಗಿ 50 ಮೆಗಾ ಪಿಕ್ಸಲ್, 64 ಮೆಗಾ ಪಿಕ್ಸಲ್, 64 ಮೆಗಾ ಪಿಕ್ಸಲ್ ಮತ್ತು 13 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿವೆ. 10X ಹೈಬ್ರಿಡ್ ಜೂಮ್ ಪಡೆದಿದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾ ಸಹ 13 ಮೆಗಾ ಪಿಕ್ಸಲ್ ಸೆನ್ಸಾರ್‌ ಪಡೆದಿದೆ. ಇನ್ನು ಈ ಫೋನ್ 4,600mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹಾನರ್‌ ಮ್ಯಾಜಿಕ್ 3 ಸ್ಮಾರ್ಟ್‌ಫೋನ್ 8GB + 128GB ವೇರಿಯಂಟ್ ಬೆಲೆಯು ಚೀನಾದಲ್ಲಿ CNY 4,599 (ಭಾರತದಲ್ಲಿ ಅಂದಾಜು. 52,800ರೂ). ಅದೇ ರೀತಿ ಹಾನರ್‌ ಮ್ಯಾಜಿಕ್ 3 ಪ್ರೊ ಫೋನ್ 8GB + 256GB ವೇರಿಯಂಟ್ ದರದವು ಚೀನಾದಲ್ಲಿ CNY 5,999 (ಭಾರತದಲ್ಲಿ ಅಂದಾಜು 68,800ರೂ) ಹಾಗೂ ಹಾನರ್‌ ಮ್ಯಾಜಿಕ್ 3 ಪ್ರೊ ಪ್ಲಸ್‌ ಫೋನ್ 12GB + 512GB ವೇರಿಯಂಟ್‌ ಬೆಲೆಯು ಚೀನಾದಲ್ಲಿ CNY 7,999 (ಭಾರತದಲ್ಲಿ ಅಂದಾಜು 91,800ರೂ) ಎನ್ನಲಾಗಿದೆ.

Best Mobiles in India

English summary
Honor Magic 3 Series With Qualcomm SoCs Launched: Price, Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X