ಹಾನರ್‌ ಮ್ಯಾಜಿಕ್ 4 ಫೋನ್ ಸರಣಿ ಲಾಂಚ್!..ಜಬರ್ದಸ್ತ್ ಕ್ಯಾಮೆರಾ!

|

ಪ್ರಮುಖ ಮೊಬೈಲ್‌ ಸಂಸ್ಥೆಗಳಲ್ಲಿ ಒಂದಾದ ಹಾನರ್ ಈಗಾಗಲೇ ಹಲವು ಶ್ರೇಣಿಯಲ್ಲಿ ಸ್ಮಾರ್ಟ್‌ಫೋನ್ ಪರಿಚಯಿಸಿದೆ ಸೈ ಎನಿಸಿಕೊಂಡಿದೆ. ಬಜೆಟ್‌ ದರದ ಫೋನ್‌ಗಳ ಜೊತೆಗೆ ಫ್ಲ್ಯಾಗ್‌ಶಿಪ್ ಮಾದರಿಯ ಫೋನ್‌ಗಳನ್ನು ಬಿಡುಗಡೆ ಮಾಡಿ ಗ್ರಾಹಕರ ಗಮನ ಸೆಳೆದಿದೆ. ಇದೀಗ ಸಂಸ್ಥೆಯು ಹಾನರ್‌ ಮ್ಯಾಜಿಕ್ 4 ಸ್ಮಾರ್ಟ್‌ಫೋನ್‌ ಸರಣಿಯನ್ನು ಲಾಂಚ್ ಮಾಡಿದ್ದು, ಈ ಸರಣಿಯು ಹಾನರ್‌ ಮ್ಯಾಜಿಕ್ 4 ಮತ್ತು ಹಾನರ್‌ ಮ್ಯಾಜಿಕ್ 4 ಪ್ರೊ ಮಾಡೆಲ್‌ಗಳನ್ನು ಒಳಗೊಂಡಿದೆ.

ಹಾನರ್‌ ಮ್ಯಾಜಿಕ್ 4 ಫೋನ್ ಸರಣಿ ಲಾಂಚ್!..ಜಬರ್ದಸ್ತ್ ಕ್ಯಾಮೆರಾ!

ಹೌದು, ಹಾನರ್‌ ಸಂಸ್ಥೆಯು ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2022 ಕಾರ್ಯಕ್ರಮದಲ್ಲಿ ಹಾನರ್‌ ಮ್ಯಾಜಿಕ್ 4 ಸರಣಿಯು ಹಾನರ್‌ ಮ್ಯಾಜಿಕ್ 4 ಮತ್ತು ಹಾನರ್‌ ಮ್ಯಾಜಿಕ್ 4 ಪ್ರೊ ಮಾದರಿಗಳನ್ನು ಹೊಂದಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್ 8 ಜೆನ್ 1 ಪ್ರೊಸೆಸರ್‌ ಪಡೆದಿದ್ದು, ಇದರೊಂದಿಗೆ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಆಂಡ್ರಾಯ್ಡ್‌ 12 ಓಎಸ್‌ ಸಪೋರ್ಟ್‌ ಸಹ ಪಡೆದಿವೆ. ಹಾಗಾದರೆ ಹಾನರ್‌ ಮ್ಯಾಜಿಕ್ 4 ಮತ್ತು ಹಾನರ್‌ ಮ್ಯಾಜಿಕ್ 4 ಪ್ರೊ ಫೋನ್‌ಗಳ ಇತರೆ ಫೀಚರ್ಸ್‌ ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಹಾನರ್‌ ಮ್ಯಾಜಿಕ್ 4 ಫೋನ್ ಸರಣಿ ಲಾಂಚ್!..ಜಬರ್ದಸ್ತ್ ಕ್ಯಾಮೆರಾ!

ಹಾನರ್‌ ಮ್ಯಾಜಿಕ್ 4 ಫೋನ್ ಫೀಚರ್ಸ್‌:
ಹಾನರ್‌ ಮ್ಯಾಜಿಕ್ 3 ಸ್ಮಾರ್ಟ್‌ಫೋನ್ 1,224 x 2,664 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡ 6.81 ಇಂಚಿನ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಈ ಪೋನ್ 8 ಜೆನ್ 1 ಪ್ರೊಸೆಸರ್‌ ಪಡೆದಿದ್ದು, ಈ ಫೋನ್ ತ್ರಿವಳಿ ಕ್ಯಾಮೆರಾ ರಚನೆ ಪಡೆದಿದೆ. ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಬಲವನ್ನು ಒಳಗೊಂಡಿದೆ. ಸೆಲ್ಫಿ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇನ್ನು ಈ ಫೋನ್ 4,800mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದೆ. ಈ ಫೋನ್ ಆಂಡ್ರಾಯ್ಡ್‌ 12 ಓಎಸ್ ಸಪೋರ್ಟ್‌ ಸಹ ಪಡೆದಿದೆ.

ಹಾನರ್‌ ಮ್ಯಾಜಿಕ್ 4 ಫೋನ್ ಸರಣಿ ಲಾಂಚ್!..ಜಬರ್ದಸ್ತ್ ಕ್ಯಾಮೆರಾ!

ಹಾನರ್‌ ಮ್ಯಾಜಿಕ್ 4 ಪ್ರೊ ಫೋನ್ ಫೀಚರ್ಸ್‌:
ಹಾನರ್‌ ಮ್ಯಾಜಿಕ್ 4 ಪ್ರೊ ಫೋನ್ 1213 x 2848 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡ 6.81 ಇಂಚಿನ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಈ ಪೋನ್ ಸಹ 8 ಜೆನ್ 1 ಪ್ರೊಸೆಸರ್‌ ಪಡೆದಿದ್ದು, ಆಂಡ್ರಾಯ್ಡ್‌ 12 ಓಎಸ್‌ ಸಪೋರ್ಟ್‌ ಪಡೆದಿದೆ. ಇನ್ನು ಈ ಫೋನ್‌ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಅವು ಕ್ರಮವಾಗಿ 50 ಮೆಗಾ ಪಿಕ್ಸಲ್, 50 ಮೆಗಾ ಪಿಕ್ಸಲ್ ಮತ್ತು 64 ಮೆಗಾ ಪಿಕ್ಸಲ್ ಸೆನ್ಸಾರ್ ಬಲ ವನ್ನು ಒಳಗೊಂಡಿವೆ. ಇನ್ನು ಸೆಲ್ಫಿ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇದರೊಂದಿಗೆ ಈ ಫೋನ್ 4,600mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಹಾನರ್‌ ಮ್ಯಾಜಿಕ್ 4 ಸ್ಮಾರ್ಟ್‌ಫೋನ್ 8GB + 128GB ವೇರಿಯಂಟ್ ಬೆಲೆಯು EUR 899 (ಭಾರತದಲ್ಲಿ ಅಂದಾಜು 76,000 ರೂ.) ಆಗಿದೆ. ಅದೇ ರೀತಿ ಹಾನರ್‌ ಮ್ಯಾಜಿಕ್ 4 ಪ್ರೊ ಫೋನ್ 8GB + 256GB ವೇರಿಯಂಟ್ ದರವು EUR 1,099 (ಭಾರತದಲ್ಲಿ ಅಂದಾಜು 93,000 ರೂ) ಆಗಿದೆ. ಇನ್ನು ಈ ಫೋನ್‌ಗಳು ಕಪ್ಪು, ಸಯಾನ್, ಗೋಲ್ಡ್, ವೈಟ್ ಮತ್ತು ವಿಶೇಷ ಆರೆಂಜ್ (ವೆಗಾನ್ ಲೆದರ್) ಬಣ್ಣಗಳಲ್ಲಿ ಲಭ್ಯ ಆಗಲಿವೆ.

Best Mobiles in India

English summary
Honor Magic 4 Series With Qualcomm Snapdragon 8 Gen 1 SoC Launched at MWC 2022.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X