HONOR: ಹಾನರ್ ಮ್ಯಾಜಿಕ್ 6 ಸರಣಿ ಅನಾವರಣ! 180MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ, ಬೆಲೆ ಎಷ್ಟು?
ಹಾನರ್ (HONOR) ಫೋನ್‌ಗಳಿಗೆ ಬಾರೀ ಬೇಡಿಕೆ ಉಂಟಾಗುತ್ತಿದೆ. ಈ ಕಾರಣಕ್ಕೆ ಕಡಿಮೆ ಸಮಯದ ಅಂತರದಲ್ಲಿ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಹಾನರ್ ಅನಾವರಣ ಮಾಡುತ್ತಿದೆ. ಅದರಂತೆ ಈಗ ಹಾನರ್ ಮ್ಯಾಜಿಕ್ 6 ಸರಣಿ ಫೋನ್‌ಗಳನ್ನು ಲಾಂಚ್ ಮಾಡಲಾಗಿದೆ.
ಹೌದು, ಹಾನರ್ ಇದೀಗ ಹಾನರ್ ಮ್ಯಾಜಿಕ್ 6 ಪ್ರೊ ಹಾಗೂ ಹಾನರ್ ಮ್ಯಾಜಿಕ್ 6 ಅನ್ನು ಅನಾವರಣ ಮಾಡಲಾಗಿದ್ದು, ಈ ಸ್ಮಾರ್ಟ್‌ಫೋನ್‌ಗಳು IP68 ರೇಟಿಂಗ್ ಹಾಗೂ 180 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ಗಳ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರ ಎಷ್ಟು ಅನ್ನೋ ಮಾಹಿತಿಯನ್ನು ಇಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಹಾನರ್ ಮ್ಯಾಜಿಕ್ 6 ಸರಣಿ: ಹಾನರ್ ಫೆಬ್ರವರಿಯಲ್ಲಿ ನಡೆಯುವ MWC 2024 ಕ್ಕೂ ಮುಂಚಿತವಾಗಿ ಕಳೆದ ವರ್ಷದ ಮ್ಯಾಜಿಕ್ 5 ಸರಣಿಯ ಉತ್ತರಾಧಿಕಾರಿಯಾಗಿ ಹಾನರ್ ಮ್ಯಾಜಿಕ್ 6 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಬನ್ನಿ ಈ ಎರಡೂ ಫೋನ್‌ಗಳ ಡಿಸ್‌ಪ್ಲೇ ಮಾಹಿತಿ, ಪ್ರೊಸೆಸರ್ ವಿವರ ಹಾಗೂ ಕ್ಯಾಮೆರಾ ಸಾಮರ್ಥ್ಯ ಏನು ಅನ್ನೋದನ್ನು ನೋಡೋಣ.
ಹಾನರ್ ಮ್ಯಾಜಿಕ್ 6 ಪ್ರೊ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.8 ಇಂಚಿನ FHD+ (1280x2800pixels) TPO ಕ್ವಾಡ್-ಕರ್ವ್ಡ್ OLED ಫ್ಲೋಟಿಂಗ್ ಡಿಸ್‌ಪ್ಲೇ ಇದಾಗಿದೆ. ಜೊತೆಗೆ ಈ ಫೋನ್ 120Hz ರಿಫ್ರೆಶ್ ರೇಟ್ ಆಯ್ಕೆಯೊಂದಿಗೆ 19.69:9 ಆಕಾರ ಅನುಪಾತ HDR10+, 4320Hz ಹೈ-ಫ್ರೀಕ್ವೆನ್ಸಿ PWM ಮಬ್ಬಾಗಿಸುವಿಕೆ, 5,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದಿದ್ದು, ಡಿಸ್‌ಪ್ಲೇ ವಿಭಾಗದಲ್ಲಿ ಪ್ರೀಮಿಯಂ ಅನುಭವ ನೀಡಲಿದೆ.
ಹಾನರ್ ಮ್ಯಾಜಿಕ್ 6 ಪ್ರೊ ಪ್ರೊಸೆಸರ್: ಇನ್ನು ಈ ಫೋನ್ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 ಜನ್ 3 4nm ಪ್ರೊಸೆಸರ್ ಬಲ ಪಡೆದಿದ್ದು, ಅಡ್ರಿನೋ 750 GPU ಗ್ರಾಫಿಕ್ಸ್ ಕಾರ್ಡ್ ಬಲದೊಂದಿಗೆ ಕಾಣಿಸಿಕೊಂಡಿದೆ. ಹಾಗೆಯೇ ಮ್ಯಾಜಿಕ್ UI 8.0 ಓಎಸ್ ಅನ್ನು ಈ ಫೋನ್ ರನ್ ಮಾಡಲಿದೆ. ಉಳಿದಂತೆ ಈ ಫೋನ್ 12GB / 16GB RAM ಜೊತೆಗೆ 256GB / 512GB / 1TB UFS 4.0 ಸ್ಟೋರೇಜ್ ಆಯ್ಕೆಯಲ್ಲಿ ಈ ಫೋನ್ ಲಭ್ಯ ಇದೆ.

ಹಾನರ್ ಮ್ಯಾಜಿಕ್ 6 ಪ್ರೊ ಕ್ಯಾಮೆರಾ ರಚನೆ: ಈ ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ,50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 180 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಆಯ್ಕೆ ಪಡೆದಿದೆ. ಈ ಮೂಲಕ ಬಳಕೆದಾರರು 4K ವೀಡಿಯೊ ರೆಕಾರ್ಡಿಂಗ್ ಮಾಡಬಹುದಾಗಿದೆ. ಜೊತೆಗೆ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದ್ದು, ಈ ಸೆನ್ಸರ್ 3D ಡೆಪ್ತ್ ಕ್ಯಾಮರಾ ಆಗಿದೆ.
ಹಾನರ್ ಮ್ಯಾಜಿಕ್ 6 ಪ್ರೊ ಬ್ಯಾಟರಿ ಹಾಗೂ ಇತರೆ: ಈ ಫೋನ್ 80W ವೈರ್ಡ್ ಮತ್ತು 66W ವೈರ್‌ಲೆಸ್ ಸೂಪರ್‌ಚಾರ್ಜ್ ಬೆಂಬಲದೊಂದಿಗೆ 5600mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಧೂಳು ಮತ್ತು ನೀರು ನಿರೋಧಕ (IP68), ಡಿಟಿಎಸ್: ಎಕ್ಸ್ ಅಲ್ಟ್ರಾ ಸೌಂಡ್ ಎಫೆಕ್ಟ್‌ಗಳೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, 5G SA/NSA, ಡ್ಯುಯಲ್ 4G VoLTE, ವೈ-ಫೈ 7 802.11be (2.4GHz/5GHz) 2×2 MIMO, ಬ್ಲೂಟೂತ್ ಆವೃತ್ತಿ ಸೇರಿದಂತೆ ಅನೇಕ ಅಗತ್ಯ ಸೌಲಭ್ಯಗಳನ್ನು ಈ ಫೋನ್‌ನಲ್ಲಿ ಕಾಣಬಹುದು.
ಹಾನರ್ ಮ್ಯಾಜಿಕ್ 6 ಡಿಸ್‌ಪ್ಲೇ ವಿವರ: ಈ 6.78 ಇಂಚಿನ FHD+ (1264×2800) ಕರ್ವ್ಡ್ OLED ಡಿಸ್‌ಪ್ಲೇ ಹೊಂದಿದ್ದು, ಇದು 120Hz ರಿಫ್ರೆಶ್ ರೇಟ್, 19.93:9 ಆಕಾರ ಅನುಪಾತ; HDR10+, 4320Hz ಹೈ-ಫ್ರೀಕ್ವೆನ್ಸಿ PWM ಮಬ್ಬಾಗಿಸುವಿಕೆ ಸೌಲಭ್ಯ ಪಡೆಯುವ ಮೂಲಕ ಉತ್ತಮ ವೀಕ್ಷಣೆ ಅನುಭವ ಪಡೆಯಬಹುದಾಗಿದೆ.
ಹಾನರ್ ಮ್ಯಾಜಿಕ್ 6 ಪ್ರೊಸೆಸರ್ ಮಾಹಿತಿ: ಈ ಫೋನ್ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 ಜನ್ 3 4nm ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಅಡ್ರಿನೋ 750 GPU ಗ್ರಾಪಿಕ್ಸ್ ಕಾರ್ಡ್ ಆಯ್ಕೆ ಹಾಗೂ ಮ್ಯಾಜಿಕ್ UI 8.0 ಆಂಡ್ರಾಯ್ಡ್ 14 ಓಎಸ್ ಅನ್ನು ರನ್ ಮಾಡಲಿದೆ. ಇದರೊಂದಿಗೆ 12GB / 16GB RAM ಜೊತೆಗೆ 256GB / 512GB UFS 4.0 ಸ್ಟೋರೇಜ್ ವೇರಿಯಂಟ್ ಅನ್ನು ಈ ಫೋನ್ ಹೊಂದಿದೆ.

ಹಾನರ್ ಮ್ಯಾಜಿಕ್ 6 ಕ್ಯಾಮೆರಾ ರಚನೆ: ಈ ಫೋನ್ ಸಹ 50 ಮೆಗಾಪಿಕ್ಸೆಲ್ ವೈಡ್ ಮುಖ್ಯ ಕ್ಯಾಮರಾ 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಹಾಗೂ 32 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಆಯ್ಕೆ ಇದ್ದು, ಈ ಮೂಲಕ ಬಳಕೆದಾರರು 4K ವಿಡುಯೋ ರೆಕಾರ್ಡಿಂಗ್ ಮಾಡಬಹುದಾಗಿದೆ.
ಹಾನರ್ ಮ್ಯಾಜಿಕ್ 6 ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 6W ವೈರ್ಡ್ ಸೂಪರ್‌ಚಾರ್ಜ್ ಬೆಂಬಲದೊಂದಿಗೆ 5450mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಉಳಿದಂತೆ ಈ ಪೋನ್ ಸಹ IP68 ರೇಟಿಂಗ್ ಪಡೆದಿದೆ. ಅಲ್ಲದೆ ಡಿಟಿಎಸ್: ಎಕ್ಸ್ ಅಲ್ಟ್ರಾ ಸೌಂಡ್ ಎಫೆಕ್ಟ್‌ಗಳೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, 5G SA/NSA, ಡ್ಯುಯಲ್ 4G VoLTE, ವೈ-ಫೈ 7 802.11be (2.4GHz/5GHz) 2×2 MIMO, ಬ್ಲೂಟೂತ್ ಆವೃತ್ತಿ 5.3 ಸೇರಿದಂತೆ ಅಗತ್ಯ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ.
ಹಾನರ್ ಮ್ಯಾಜಿಕ್ 6 ಸರಣಿ ಬೆಲೆ ಹಾಗೂ ಲಭ್ಯತೆ: ಈ ಫೋನ್‌ಗಳನ್ನು ಚೀನಾದಲ್ಲಿ ಲಾಂಚ್ ಮಾಡಲಾಗಿದೆ. ಅದರಂತೆ ಚೀನಾದಲ್ಲಿ ಈ ಫೋನ್‌ಗಳ ಬೆಲೆ ಹಾನರ್ ಮ್ಯಾಜಿಕ್ 6 ನ 12GB+256GB ವೇರಿಯಂಟ್‌ಗೆ 4,399 ಯುವಾನ್ (Rs. 51,430) ಹಾಗೂ 16GB+256GB ವೇರಿಯಂಟ್‌ಗೆ 4,699 ಯುವಾನ್ (Rs. 54,935), 16GB+512GB ಗೆ 4,999 ಯುವಾನ್ (Rs. 59,380) ಬೆಲೆ ನಿಗದಿ ಮಾಡಲಾಗಿದೆ.
ಹಾನರ್ ಮ್ಯಾಜಿಕ್ 6 ಪ್ರೊ ಫೋನ್‌ನ 12GB+256GB ವೇರಿಯಂಟ್‌ಗೆ 5,699 ಯುವಾನ್ (Rs. 67,695), 16GB +512GB ವೇರಿಯಂಟ್‌ಗೆ 6,199 ಯುವಾನ್ ( Rs. 73,630) ಮತ್ತು 16GB + 1TB ವೇರಿಯಂಟ್‌ಗೆ 6,699 ಯುವಾನ್ (Rs.78,320) ಬೆಲೆ ಹೊಂದಿದೆ. ಈ ಫೋನ್‌ಗಳನ್ನು ಜನವರಿ 18 ರಿಂದ ಚೀನಾದಲ್ಲಿ ಖರೀದಿ ಮಾಡಬಹುದಾಗಿದೆ. ಈ ಫೋನ್‌ಗಳು ಭಾರತಕ್ಕೆ ಶೀಘ್ರವೇ ಬರಲಿದೆ ಎಂದು ತಿಳಿದುಬಂದಿದೆ.


Click it and Unblock the Notifications








