honor: ಹಾನರ್‌ನಿಂದ ಬರಲಿದೆ ಮ್ಯಾಜಿಕ್ ಫ್ಲಿಪ್ ಫೋನ್! ಯಾವಾಗ ಲಾಂಚ್?
ಹಾನರ್ ಈಗಾಗಲೇ ಸಾಕಷ್ಟು ಭಿನ್ನ ಫೀಚರ್ಸ್ ಆಯ್ಕೆಯ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದೆ. ಅದರಲ್ಲೂ ಭಾರತದಲ್ಲಿ ಇತ್ತೀಚೆಗೆ ಲಾಂಚ್ ಆಗಿರುವ ಹಾನರ್ ಫೋನ್‌ಗಳಿಗೆ ವಿಶೇಷ ಬೇಡಿಕೆ ಇದ್ದು, ಈ ನಡುವೆ ಹಾನರ್ ಫ್ಲಿಪ್ ವಿಭಾಗದಲ್ಲಿ ತನ್ನ ಸಾಮರ್ಥ್ಯ ತೋರಿಸಲು ಸಜ್ಜಾಗಿದೆ.
ಹೌದು, ಹಾನರ್ ಇದೀಗ ಹಾನರ್ ಮ್ಯಾಜಿಕ್ ಫ್ಲಿಪ್ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದೆ ಎಂದು ತಿಳಿದುಬಂದಿದೆ. ಈ ಫೋನ್‌ನ ಬಗ್ಗೆ ಕೆಲವು ಮಾಹಿತಿ ಲೀಕ್ ಆಗಿದ್ದು, ಅದರಂತೆ ಇದರ ಡಿಸ್‌ಪ್ಲೇ ಹೆಚ್ಚಿನ ಗಮನಸೆಳೆದಿದೆ. ಹಾಗಿದ್ರೆ ಈ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಪಡೆದಿರಲಿದೆ?, ಯಾವಾಗ ಲಾಂಚ್ ಆಗಲಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಹಾನರ್ ಮ್ಯಾಜಿಕ್ ಫ್ಲಿಪ್: ಹಾನರ್ ಈ ವರ್ಷ ಫ್ಲಿಪ್ ಶೈಲಿಯ ಫೋಲ್ಡಬಲ್ ಫೋನ್ ಅನ್ನು ಬಿಡುಗಡೆ ಮಾಡಲಿದೆ ಎಂದು ಹಾನರ್ ಸಿಇಒ ಝಾವೋ ಮಿಂಗ್ ಇತ್ತೀಚೆಗೆ ಮಾಹಿತಿ ನೀಡಿದ್ದರು. ಅದರಂತೆ ಈಗ ಈ ಫೋನ್ ಮುನ್ನೆಲೆಗೆ ಬಂದಿದೆ. ಇದಕ್ಕೆ ತಾತ್ಕಾಲಿಕವಾಗಿ ಹಾನರ್ ಮ್ಯಾಜಿಕ್ ಫ್ಲಿಪ್ ಎಂದು ಹೆಸರು ಇಡಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಬೇರೆ ಹೆಸರಿನಲ್ಲೂ ಲಾಂಚ್ ಆಗಬಹುದು. ಈ ಸಂಬಂಧ ಚೀನೀ ಲೀಕರ್ ಈ ಫೋನ್‌ನ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಹಾಗೆಯೇ ಈ ಮ್ಯಾಜಿಕ್ ಫ್ಲಿಪ್ ಎರಡು ವರ್ಷಗಳಿಗೂ ಹೆಚ್ಚು ಕಾಲ ಅಭಿವೃದ್ಧಿಯಲ್ಲಿದ್ದು, ಈ ವರ್ಷದ ಎರಡನೇ ತ್ರೈಮಾಸಿಕದ ಅಂತ್ಯದ ವೇಳೆಗೆ ಅಧಿಕೃತವಾಗಿ ಲಾಂಚ್ ಆಗಬಹುದು ಎಂದು ಲೀಕ್ ಆದ ವರದಿಯಲ್ಲಿ ತಿಳಿಸಲಾಗಿದೆ. ಮ್ಯಾಜಿಕ್ ಫ್ಲಿಪ್ ಕಾಂಪ್ಯಾಕ್ಟ್ ಫೋಲ್ಡಬಲ್ ಫೋನ್ ಮಾರುಕಟ್ಟೆಯಲ್ಲಿ ಕಂಪನಿಯ ಮೊದಲ ಫೋನ್ ಆಗಿರಲಿದ್ದು, ಲೀಕ್ ಆದ ಚಿತ್ರವು ಅಧಿಕೃತ ಚಿತ್ರವೇ ಅಥವ ಪ್ರಾತಿನಿಧ್ಯವೇ ಎಂಬುದು ಇನ್ನೂ ಗೊಂದಲವಾಗಿಯೇ ಉಳಿದಿದೆ.

ಅದರಲ್ಲೂ ಈ ಹಾನರ್ ಮ್ಯಾಜಿಕ್ ಫ್ಲಿಪ್ ಮೊಟೊರೊಲಾ ರೇಜರ್ 40 ಅಲ್ಟ್ರಾದಂತೆ ಬೃಹತ್ ಕವರ್ ಡಿಸ್ಪ್ಲೇಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಹಾಗೆಯೇ ಲೀಕ್ ಆದ ಚಿತ್ರವನ್ನು ಗಮನಿಸಿದ್ರೆ ಇದು ಲಂಬವಾಗಿ ಜೋಡಿಸಲಾದ ಡ್ಯುಯಲ್ ಕ್ಯಾಮೆರಾ ಆಯ್ಕೆಯನ್ನು ಪಡೆದಿರಲಿದೆ ಎಂದು ತಿಳಿದುಬಂದಿದೆ. ಅಲ್ಲದೆ ಕೆಳಗಿನ ಅರ್ಧವು ಪ್ಲೇನ್ ಲೆದರ್ ನಿಂದ ಕಾಣಿಸಿಕೊಂಡಿದೆ.
ವರದಿಗಳ ಪ್ರಕಾರ, ಹಾನರ್ ಮ್ಯಾಜಿಕ್ ಫ್ಲಿಪ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಅತ್ಯಂತ ತೆಳುವಾದ ಮತ್ತು ಹಗುರವಾದ ಫೋನ್ ಆಗಿರಲಿದೆ ಎಂದು ತಿಳಿದುಬಂದಿದೆ. ಇದು ಬಳಕೆದಾರರಿಗೆ ನಿಜವಾದ ಕ್ಯಾಂಡಿ ಬಾರ್ ಅನುಭವವನ್ನು ನೀಡಲಿದೆ ಎಂದು ಹೇಳಲಾಗಿದೆ. ಪ್ರಮುಖವಾಗಿ ಈ ಫೋನ್ 4,500mAh ಸಾಮರ್ಥ್ಯದ ಡ್ಯುಯಲ್-ಸೆಲ್ ಬ್ಯಾಟರಿಯೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು,ಚೀನಾದಲ್ಲಿ, ಶಿಯೋಮಿ ಮಿಕ್ಸ್ ಫ್ಲಿಪ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 6 ಡಿವೈಸ್‌ಗಳಿಗೆ ಪ್ರತಿಸ್ಪರ್ಧಿಯಾಗುವ ನಿರೀಕ್ಷೆಯಿದೆ.
ಮ್ಯಾಜಿಕ್ ಫ್ಲಿಪ್ ಜೊತೆಗೆ, ಕಂಪನಿಯು ಈ ವರ್ಷ ಇನ್ನೂ ಎರಡು ಫೋಲ್ಡಬಲ್ ಡಿಸ್‌ಪ್ಲೇ ಆಯ್ಕೆಯ ಫೋನ್‌ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇವುಗಳು ಒಳಮುಖವಾದ ಫೋಲ್ಡ್ ಮಾಡಬಹುದಾದ ವಿನ್ಯಾಸದೊಂದಿಗೆ ಮ್ಯಾಜಿಕ್ V3 ಮತ್ತು ಹೊರಕ್ಕೆ ಮಡಿಸುವ ವಿನ್ಯಾಸದೊಂದಿಗೆ V ಪರ್ಸ್ 2 ಅನ್ನು ಒಳಗೊಂಡಿವೆ ಎನ್ನಲಾಗಿದೆ. ಈ ಮೂಲಕ ಹಾನರ್ ಫೋಲ್ಡಬಲ್ ಫೋನ್‌ಗಳ ವಿಭಾಗದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆಯಲಿದೆ ಎಂದು ತಿಳಿದುಬಂದಿದೆ.

ಉಚಿತ ಬ್ಲೂಟೂತ್ ಕೀಬೋರ್ಡ್ ಜೊತೆಗೆ ಹಾನರ್ ಪ್ಯಾಡ್ 9: ಇನ್ನು ಕೆಲವೇ ದಿನಗಳ ಹಿಂದೆ ಹಾನರ್ ಭಾರತೀಯರಿಗೆ ವಿಶೇಷವಾದ ಆಫರ್ ಅನ್ನು ಘೋಷಣೆ ಮಾಡಿದೆ. ಅದುವೇ 22,499 ರೂಗಳಲ್ಲಿ ಉಚಿತ ಬ್ಲೂಟೂತ್ ಕೀಬೋರ್ಡ್ ಜೊತೆಗೆ ಹಾನರ್ ಪ್ಯಾಡ್ 9 ಖರೀದಿ. ಆದರೆ ಇದನ್ನು ಮುಂಗಡವಾಗಿ ಆರ್ಡರ್ ಮಾಡಿದವರಿಗೆ ಮಾತ್ರ ನೀಡಲಾಗುತ್ತದೆ. ಮಾರ್ಚ್ 22 ರಿಂದ ಮುಂಗಡ ಬುಕಿಂಗ್‌ಗಳು ಆರಂಭ ಆಗಿವೆ.


Click it and Unblock the Notifications








