Home
ಸುದ್ದಿಜಾಲ

ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆಯಾ ಹಾನರ್‌ ಮ್ಯಾಜಿಕ್‌ V ಫ್ಲಿಪ್‌?..ಫೀಚರ್ಸ್‌ ಏನು?

ಜನಪ್ರಿಯ ಮೊಬೈಲ್‌ ಬ್ರ್ಯಾಂಡ್‌ಗಳಲ್ಲಿ ಒಂದಾದ ಹಾನರ್‌ (Honor) ಸದ್ಯದಲ್ಲೇ ದೇಶಿಯ ಮಾರುಕಟ್ಟೆಗೆ ಹಾನರ್‌ 200 ಫೋನ್‌ ಸರಣಿಯು ಪರಿಚಯಿಸಲಿದೆ. ಹಾಗೆಯೇ ಹಾನರ್‌ ಸಂಸ್ಥೆಯು ಹಾನರ್‌ ಮ್ಯಾಜಿಕ್‌ V ಫ್ಲಿಪ್‌ (Honor Magic V Flip) ಫೋನ್‌ ಅನ್ನು ಚೀನಾದಲ್ಲಿ ಲಾಂಚ್‌ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಅಂದಹಾಗೆ ಈ ಫೋನ್‌ ಫ್ಲಿಪ್‌ ಮಾದರಿಯಲ್ಲಿ ಇರಲಿದ್ದು, ಆಕರ್ಷಕ ಕಲರ್‌ ಆಯ್ಕೆಗಳನ್ನು ಪಡೆದಿರಲಿದೆ. ಹಾಗೆಯೇ ಬರಲಿರುವ ಈ ಫೋನ್‌ 1TB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಪಡೆದಿರುವುದು ಬಹುತೇಕ ಖಚಿತ ಆಗಿದೆ.

ಹೌದು, ಹಾನರ್‌ ಮೊಬೈಲ್‌ ಸಂಸ್ಥೆಯು ಹಾನರ್‌ ಮ್ಯಾಜಿಕ್‌ V ಫ್ಲಿಪ್‌ (Honor Magic V Flip) ಫೋನ್‌ ಅನ್ನು ಇದೇ ಜೂನ್‌ 13 ರಂದು ಸಂಜೆ 7:30 ಗಂಟೆಗೆ ಚೀನಾದಲ್ಲಿ ಬಿಡುಗಡೆ ಮಾಡಲಿದೆ ಎಂದು Weibo ದಿಂದ ಮಾಹಿತಿ ತಿಳಿದುಬಂದಿದೆ. ಇನ್ನು ಈ ಫೋನ್ 12GB + 256 GB, 12GB + 512 GB ಮತ್ತು 12GB + 1TB ಸ್ಟೋರೇಜ್‌ ಆಯ್ಕೆಗಳನ್ನು ಇದು ಒಳಗೊಂಡಿರಲಿದೆ ಎಂದು ವರದಿಯಾಗಿದೆ.

ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆಯಾ ಹಾನರ್‌ ಮ್ಯಾಜಿಕ್‌ V ಫ್ಲಿಪ್‌?..ಫೀಚರ್ಸ್‌

ಹಾಗೆಯೇ ಈ ನೂತನ ಫೋನ್ 4,500mAh ಡ್ಯುಯಲ್-ಸೆಲ್ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿರಲಿದ್ದು, ಇದಕ್ಕೆ ಪೂರಕವಾಗಿ 66W ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಕೂಡಾ ಹೊಂದಿರಲಿದೆ. ಅಲ್ಲದೇ ಈ ಫೋನ್‌ 50 ಮೆಗಾ ಪಿಕ್ಸಲ್‌ OIS ಸಕ್ರಿಯಗೊಳಿಸಿದ ಮುಖ್ಯ ಕ್ಯಾಮರಾ ಸೆನ್ಸಾರ್‌ ಅನ್ನು ಪಡೆದಿರಲಿದೆ ಎಂದು ಹೇಳಲಾಗಿದೆ. ಹಾಗಾದರೇ ಹಾನರ್‌ ಮ್ಯಾಜಿಕ್‌ V ಫ್ಲಿಪ್‌ ಫೋನಿನ ನಿರೀಕ್ಷಿತ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಹಾನರ್‌ ಮ್ಯಾಜಿಕ್‌ V ಫ್ಲಿಪ್‌ ನಿರೀಕ್ಷಿತ ಫೀಚರ್ಸ್‌

ಬರಲಿರುವ ಹಾನರ್‌ ಮ್ಯಾಜಿಕ್‌ V ಫ್ಲಿಪ್‌ ಮೊಬೈಲ್‌ 4,500mAh ಸಾಮರ್ಥ್ಯದ ಡ್ಯುಯಲ್ ಸೆಲ್ ಬ್ಯಾಟರಿ ಸೌಲಭ್ಯ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 66W ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆಯನ್ನು ಪಡೆದಿರಲಿದೆ ಎಂದು ಹೇಳಲಾಗುತ್ತದೆ. ಈ ಫೋನಿನ ಬ್ಯಾಟರಿಯು ಇತರೆ ಸ್ಪರ್ಧಾತ್ಮಕ ಬ್ರ್ಯಾಂಡ್‌ಗಳ ಫ್ಲಿಪ್‌ ಮಾದರಿಯ ಫೋನ್‌ಗಳಿಗಿಂತ ಅಧಿಕ ಆಗಿರಲಿದೆ. ಒಪ್ಪೋ ಫೈಂಡ್‌ N3 ಫ್ಲಿಪ್‌ ಫೋನ್‌ 4,300mAh ಬ್ಯಾಟರಿ ಹೊಂದಿದ್ದು, ಟೆಕ್ನೋ ಫ್ಯಾಂಟಮ್‌ V ಫ್ಲಿಪ್‌ 4,000mAh ಬ್ಯಾಟರಿ ಪಡೆದಿದೆ.

ಇನ್ನು ಹಾನರ್‌ ಮ್ಯಾಜಿಕ್‌ V ಫ್ಲಿಪ್‌ ಫೋನ್‌ ಸ್ಲಿಮ್‌ ಡಿಸೈನ್‌ ರಚನೆ ಪಡೆದಿರಲಿದ್ದು, ದೊಡ್ಡ ಕವರ್‌ ಡಿಸ್‌ಪ್ಲೇ ಅನ್ನು ಪಡೆದಿರಲಿದೆ. ಹಾಗೆಯೇ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ OIS ಸಪೋರ್ಟ್‌ ಆಗಿರಲಿದೆ.

ಅಲ್ಲದೇ ಈ ಹಾನರ್ ಮ್ಯಾಜಿಕ್ V ಫ್ಲಿಪ್‌ ಫೋನಿನನ ಬಲ ತುದಿಯು ವಾಲ್ಯೂಮ್ ಮತ್ತು ಪವರ್ ಕೀಗಳ ರಚನೆ ನೀಡಲಾಗಿದೆ. ಹಾಗೆಯೇ ಈ ಫೋನ್‌ ಪವರ್ ಕೀ ನಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೌಲಭ್ಯ ಒದಗಿಸಲಾಗಿದೆ ಎನ್ನಲಾಗಿದೆ. ಇನ್ನು ಎಂಟ್ರಿ ಕೊಡಲಿರುವ ಈ ಫ್ಲಿಪ್ ಮೊಬೈಲ್‌ನಲ್ಲಿ ಸ್ಪೀಕರ್ ಗ್ರಿಲ್, ಸಿಮ್ ಸ್ಲಾಟ್ ಮತ್ತು ಯುಎಸ್‌ಬಿ - C ಪೋರ್ಟ್ ನೀಡಲಾಗಿರುತ್ತದೆ ಎನ್ನಲಾಗಿದೆ.

ಲಭ್ಯ ಇರುವ ಮಾಹಿತಿ ಪ್ರಕಾರ ಇದೇ ಜೂನ್‌ 13 ರಂದು ಲಗ್ಗೆ ಇಡಲಿರುವ ಹಾನರ್ ಮ್ಯಾಜಿಕ್ V ಫ್ಲಿಪ್‌ ಫೋನ್‌ ಅನ್ನು ಚೀನಾದಲ್ಲಿ ಸಂಸ್ಥೆಯ ಆನ್‌ಲೈನ್ ಚಾನೆಲ್ ಹಾನರ್ ಮಾಲ್‌ನಲ್ಲಿ ಲಿಸ್ಟ್‌ ಮಾಡಲಾಗಿದೆ ಎಂದು 91ಮೊಬೈಲ್ಸ್‌ ವರದಿ ಮಾಡಿದೆ. ಹಾನರ್ ಮ್ಯಾಜಿಕ್ V ಫ್ಲಿಪ್‌ ಮೊಬೈಲ್‌ 12GB + 256GB, 12GB + 512GB, ಮತ್ತು 12GB + 1TB ಸ್ಟೋರೇಜ್ ಆಯ್ಕೆಗಳಲ್ಲಿ ಕಾಣಿಸಿಕೊಳ್ಳಲಿದೆ.

Best Mobiles in India

English summary
Honor Magic V Flip launch date announced. Expected Color, Storage other features and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+