ತೆಳ್ಳನೆಯ ಮಡಚುವ ಫೋನ್ ಲಾಂಚ್ ಮಾಡಿದ ಹಾನರ್‌!..ಒಟ್ಟು ಐದು ಕ್ಯಾಮೆರಾ!

|

ಪ್ರಮುಖ ಮೊಬೈಲ್‌ ಸಂಸ್ಥೆಗಳಲ್ಲಿ ಒಂದಾದ ಹಾನರ್ ಈಗಾಗಲೇ ಹಲವು ಶ್ರೇಣಿಯಲ್ಲಿ ಸ್ಮಾರ್ಟ್‌ಫೋನ್ ಪರಿಚಯಿಸಿದೆ ಸೈ ಎನಿಸಿಕೊಂಡಿದೆ. ಬಜೆಟ್‌ ದರದ ಫೋನ್‌ಗಳ ಜೊತೆಗೆ ಫ್ಲ್ಯಾಗ್‌ಶಿಪ್ ಮಾದರಿಯ ಫೋನ್‌ಗಳನ್ನು ಬಿಡುಗಡೆ ಮಾಡಿ ಗ್ರಾಹಕರನ್ನು ಆಕರ್ಷಿಸಿದೆ. ಇದೀಗ ಕಂಪನಿಯು ನೂತನವಾಗಿ 'ಹಾನರ್ ಮ್ಯಾಜಿಕ್ V ಫೋಲ್ಡ್‌ಬಲ್‌' ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿದ್ದು, ಫೋನ್ ಪ್ರಿಯರ ಗಮನ ಸೆಳೆದಿದೆ. ಹಾನರ್‌ ಸಂಸ್ಥೆಯ ಮೊದಲ ಫೋಲ್ಡ್‌ಬಲ್‌ (ಮಡಚುವ) ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್‌ ಫೋನಿನ ಲುಕ್ ನಂತೆ ಕಂಡುಬರುತ್ತದೆ, ಆದರೆ ತೆಳುವಾದ ರಚನೆ ಪಡೆದಿದೆ.

ಮ್ಯಾಜಿಕ್

ಹೌದು, ಹಾನರ್‌ ಸಂಸ್ಥೆಯು 'ಹಾನರ್ ಮ್ಯಾಜಿಕ್ V ಫೋಲ್ಡ್‌ಬಲ್‌' ಸ್ಮಾರ್ಟ್‌ಫೋನ್‌ ಸರಣಿಯನ್ನು ಚೀನಾದಲ್ಲಿ ಅನಾವರಣ ಮಾಡಿದೆ. ವಿಶ್ವದ ಅತ್ಯಂತ ತೆಳ್ಳಗಿನ ಮಡಚಬಹುದಾದ ಫೋನ್ ಎಂದು ಹೆಸರಿಸಲಾದ ಹಾನರ್‌ V ಫೋಲ್ಡ್‌ಬಲ್‌, ಮಡಿಸಿದಾಗ ಕೇವಲ 14.3mm ದಪ್ಪವಾಗಿರುತ್ತದೆ. ಹಾಗೆಯೇ ಫೋನ್ ತೆರೆದಾಗ 6.7mm ದಪ್ಪವಾಗಿರುತ್ತದೆ. ಅದು ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್‌ ಫೋನ್‌ಗಿಂತ ಸ್ವಲ್ಪ ತೆಳುವಾಗಿದೆ. ಇನ್ನು ಈ ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8 ಜೆನ್ 1 ಪ್ರೊಸೆಸರ್ ಜೊತೆಗೆ 12GB RAM ಮತ್ತು 512GB ವರೆಗಿನ ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಹಾಗಾದರೇ ಹಾನರ್ ಮ್ಯಾಜಿಕ್ V ಫೋಲ್ಡ್‌ಬಲ್‌ ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಹಾನರ್ ಮ್ಯಾಜಿಕ್ V ಫೋಲ್ಡ್‌ಬಲ್‌ ಸ್ಮಾರ್ಟ್‌ಫೋನ್‌ ಮಡಚುವ ಫೋನ್‌ ಆಗಿದ್ದು, ಎರಡು ಡಿಸ್‌ಪ್ಲೇ ರಚನೆಯನ್ನು ಹೊಂದಿದೆ. ಈ ಫೋನಿನ ಆಂತರಿಕ ಡಿಸ್‌ಪ್ಲೇಯು 7.9 ಇಂಚಿನ ಅಳತೆಯನ್ನು ಹೊಂದಿದೆ ಮತ್ತು 2272 x 1984 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ಈ ಫೋನಿನ ಸ್ಕ್ರೀನ್‌ 90Hz ನ ರಿಫ್ರೆಶ್ ದರ ಮತ್ತು 10:9 ಆಕಾರ ಅನುಪಾತವನ್ನು ಹೊಂದಿದೆ. ಇನ್ನು ಬಾಹ್ಯ ಡಿಸ್‌ಪ್ಲೇಯು 6.45 ಇಂಚುಗಳಾಗಿದ್ದು, 2560 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ಇದು 120Hz ರಿಫ್ರೆಶ್ ದರ ಮತ್ತು 21:9 ರ ಆಕಾರ ಅನುಪಾತವನ್ನು ಹೊಂದಿದೆ.

ಪ್ರೊಸೆಸರ್ ಪವರ್ ಯಾವುದು

ಪ್ರೊಸೆಸರ್ ಪವರ್ ಯಾವುದು

ಹಾನರ್ ಮ್ಯಾಜಿಕ್ V ಫೋಲ್ಡ್‌ಬಲ್‌ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8 ಜೆನ್ 1 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ 12GB RAM ಮತ್ತು 512GB ವರೆಗಿನ ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಹಾಗೆಯೇ ಈ ಫೋನ್ ಆಂಡ್ರಾಯ್ಡ್ 12 ಆಧಾರಿತ ಮ್ಯಾಜಿಕ್ UI 6.0 ಸಾಫ್ಟ್‌ವೇರ್ ಸಪೋರ್ಟ್ ಪಡೆದಿದೆ. ಇದು ಬಾಹ್ಯ ಮೆಮೊರಿಗಾಗಿ ಮೈಕ್ರೊ ಎಸ್‌ಡಿ ಕಾರ್ಡ್ ಅನ್ನು ಬೆಂಬಲಿಸುವುದಿಲ್ಲ.

ಐದು ಕ್ಯಾಮೆರಾ ಸೆನ್ಸಾರ್

ಐದು ಕ್ಯಾಮೆರಾ ಸೆನ್ಸಾರ್

ಹಾನರ್ ಮ್ಯಾಜಿಕ್ V ಫೋಲ್ಡ್‌ಬಲ್‌ ಸ್ಮಾರ್ಟ್‌ಫೋನ್‌ ಒಟ್ಟು ಐದು ಕ್ಯಾಮೆರಾ ರಚನೆಯನ್ನು ಪಡೆದಿದೆ. ಆ ಪೈಕಿ ಮೂರು ಕ್ಯಾಮೆರಾಗಳು ಫೋನ್ ಹಿಂಭಾಗದಲ್ಲಿವೆ. ಇನ್ನುವಳಿದಂತೆ ಒಂದು ಕ್ಯಾಮೆರಾ ಆಂತರಿಕ ಡಿಸ್‌ಪ್ಲೇ ನಲ್ಲಿದೆ ಹಾಗೂ ಮತ್ತೊಂದು ಕ್ಯಾಮೆರಾ ಫೋನ್ ಹೊರಭಾಗದಲ್ಲಿದೆ. ಇನ್ನು ಹಿಂಭಾಗದಲ್ಲಿನ ಕ್ಯಾಮೆರಾ ರಚನೆಯು, 50 ಮೆಗಾ ಪಿಕ್ಸೆಲ್ ಸೆನ್ಸಾರ್‌ನ ಟ್ರಿಪಲ್ ಸೆಟ್‌ಅಪ್ ಅನ್ನು ಹೊಂದಿದೆ. ಹಾಗೆಯೇ ಹೊರಗಿನ ಡಿಸ್‌ಪ್ಲೇ ಕ್ಯಾಮೆರಾ ಮತ್ತು ಒಳಗಿನ ಡಿಸ್‌ಪ್ಲೇಯ ಸೆಲ್ಫಿ ಕ್ಯಾಮೆರಾ ಕ್ರಮವಾಗಿ 42 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿವೆ

ಬ್ಯಾಟರಿ ಬಲ ಎಷ್ಟು?

ಬ್ಯಾಟರಿ ಬಲ ಎಷ್ಟು?

ಹಾನರ್‌ V ಫೋಲ್ಡ್‌ಬಲ್‌ ಸ್ಮಾರ್ಟ್‌ಫೋನ್‌ 4750 mAh ಬ್ಯಾಟರಿ ಬ್ಯಾಕ್‌ಅಪ್‌ ಪವರ್‌ ಅನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ ಈ ಫೋಲ್ಡಬಲ್ ಫೋನ್ 66W ವೇಗದ ಚಾರ್ಜಿಂಗ್‌ ಸಪೋರ್ಟ್‌ ಅನ್ನು ಹೊಂದಿದೆ. ಇದು 15 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಚಾರ್ಜ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಆಂಡ್ರಾಯ್ಡ್ 12 ಆಧಾರಿತ ಓಎಸ್ ಹೊಂದಿದೆ.

ಬೆಲೆ ಮತ್ತು ಲಭ್ಯತೆ?

ಬೆಲೆ ಮತ್ತು ಲಭ್ಯತೆ?

ಹಾನರ್‌ V ಫೋಲ್ಡ್‌ಬಲ್‌ ಸ್ಮಾರ್ಟ್‌ಫೋನ್‌ ಬೆಲೆಯು ಚೀನಾದಲ್ಲಿ CNY 9,999 ರಿಂದ ಪ್ರಾರಂಭವಾಗುತ್ತದೆ. (ಭಾರತದಲ್ಲಿ ಅಂದಾಜು 1,16,000 ರೂ. ಎನ್ನಲಾಗಿದೆ). ಇನ್ನು ಈ ಫೋನ್ ಸ್ಪೇಸ್ ಸಿಲ್ವರ್, ಬ್ಲ್ಯಾಕ್ ಮತ್ತು ಆರೆಂಜ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಈ ಫೋನ್‌ನ ಅಂತರರಾಷ್ಟ್ರೀಯ ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ.

Best Mobiles in India

English summary
HONOR Magic V Launched as the World’s Slimmest Foldable Phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X