Honor: ಹಾನರ್‌ನ ವಿಶ್ವದ ಅತ್ಯಂತ ಹಗುರವಾದ ಫೋಲ್ಡಬಲ್ ಫೋನ್ ಇನ್ಮುಂದೆ ಇಲ್ಲೂ ಲಭ್ಯ! ಫೀಚರ್ಸ್ ಏನು?
ಹಾನರ್ (Honor) ಇದೀಗ ಟಾಪ್ ಬ್ರ್ಯಾಂಡ್‌ಗಳಿಗೆ ತನ್ನದೇ ಆದ ರೀತಿಯಲ್ಲಿ ತೀವ್ರ ಪೈಪೋಟಿ ನೀಡುವ ಕೆಲಸ ಮಾಡುತ್ತಿದೆ. ಅದರಂತೆ ಈಗ ವಿಶ್ವದ ಅತ್ಯಂತ ಹಗುರವಾದ ಫೋಲ್ಡಬಲ್ ಸ್ಮಾರ್ಟ್‌ಫೋನ್ (foldable smartphone) ಅನ್ನು ಅನಾವರಣ ಮಾಡಲಿದ್ದು, ಈ ಫೋನ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನೆ ಸೃಷ್ಟಿ ಮಾಡಲಿದೆ.
ಹೌದು, ಹಾನರ್ ಇದೀಗ ಹಾನರ್ ಮ್ಯಾಜಿಕ್ V2 (Honor Magic V2) ಅನ್ನು ಯುರೋಪ್‌ನಲ್ಲಿ ಅನಾವರಣ ಮಾಡಲಿದೆ. ಈ ಫೋನ್ ಅನ್ನು ಈ ಮೊದಲೇ ಚೀನಾದಲ್ಲಿ ಕಳೆದ ವರ್ಷ ಅನಾವರಣ ಮಾಡಿತ್ತು. ಈ ಫೋನ್ ಅನ್ನು ಫೋಲ್ಡ್ ಮಾಡಿದಾಗ 9.9mm ದಪ್ಪದ ಗಾತ್ರ ಹೊಂದಲಿದ್ದು, ಓಪನ್ ಮಾಡಿದಾಗ 4.7mm ದಪ್ಪದ ಗಾತ್ರದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕಾರಣಕ್ಕೆ ಇದು ಜಗತ್ತಿನ ಅತ್ಯಂತ ಹಗುರ ಫೋನ್ ಎನಿಸಿಕೊಂಡಿದೆ. ಹಾಗಿದ್ರೆ, ಈ ವಿಶೇಷ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರ ಇಲ್ಲಿದೆ ನೋಡಿ.

ಹಾನರ್ ಮ್ಯಾಜಿಕ್ V2 ಸ್ಮಾರ್ಟ್‌ಫೋನ್: ಮೊದಲೇ ತಿಳಿಸಿದಂತೆ ಈ ಫೋನ್ ಮುಖ್ಯವಾಗಿ ತನ್ನ ಗಾತ್ರದಿಂದಲೇ ಗುರುತಿಸಿಕೊಂಡಿದೆ. ಈ ಫೋನ್ ಅನ್ನು ಓಪನ್ ಮಾಡಿದಾಗ 4.7mm ಗಾತ್ರದಲ್ಲಿ ಕಾಣಿಸಿಕೊಳ್ಳುತ್ತದೆ. ಇದೇ ಫೋನ್ ಅನ್ನು ಇತರೆ ಫೋನ್‌ಗಳಿಗೆ ಹೋಲಿಕೆ ಮಾಡಿ ನೋಡಿದ್ರೆ, ಅಂದರೆ ಗೂಗಲ್ ಪಿಕ್ಸೆಲ್ ಫೋಲ್ಡ್ (Google Pixel Fold) ಅನ್ನು ಫೋಲ್ಡ್ ಮಾಡಿದಾಗ 12.1 mm ದಪ್ಪವಾಗಿರುತ್ತದೆ ಮತ್ತು ಓಪನ್ ಮಾಡಿದಾಗ 5.8 mm ದಪ್ಪವಾಗಿರುತ್ತದೆ.
ಹಾನರ್ ಮ್ಯಾಜಿಕ್ V2 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ: ಈ ಫೋಲ್ಡಬಲ್ ಫೋನ್ 6.43 ಇಂಚಿನ 120Hz ರಿಫ್ರೆಶ್ ರೇಟ್ ಆಯ್ಕೆಯ LTPO ಕವರ್ ಡಿಸ್‌ಪ್ಲೇ ಹೊಂದಿದೆ. ಫೋಲ್ಡಬಲ್ ಡಿಸ್‌ಪ್ಪೇ ಕಾರ್ಡ್‌ಗೆ ಸಂಬಂಧಿಸಿದಂತೆ, 7.92 ಇಂಚಿನ LTPO OLED ಪ್ಯಾನೆಲ್ ಅನ್ನು ಹೊಂದಿದ್ದು, ಇದು 2,344 x 2,156 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 120Hz ರಿಫ್ರೆಶ್ ರೇಟ್ ಮತ್ತು 1,600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದುಕೊಂಡಿದೆ. ಈ ಫೋಲ್ಡಬಲ್ ಡಿಸ್‌ಪ್ಲೇ ನ್ಯಾನೊಕ್ರಿಸ್ಟಲ್ ಗ್ಲಾಸ್ ಎಂದು ಕರೆಯುವ ಗ್ಲಾಸ್ ರಕ್ಷಣೆ ಪಡೆದಿದೆ.

ಹಾನರ್ ಮ್ಯಾಜಿಕ್ V2 ಸ್ಮಾರ್ಟ್‌ಫೋನ್ ಪ್ರೊಸೆಸರ್ ಮಾಹಿತಿ: ಈ ಫೋನ್ ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್ ಅನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾದಲ್ಲಿ ಇರುವ ಚಿಪ್‌ಸೆಟ್ ಸಹ ಇದೇ ಆಗಿದೆ. ಯುರೋಪ್‌ನಲ್ಲಿ ಪ್ರಾರಂಭವಾಗುವ ಮಾದರಿಯು ಕೇವಲ ಒಂದೇ ಸ್ಟೋರೇಜ್ ಆಯ್ಕೆಯನ್ನು ಪಡೆಯಲಿದೆ. ಅಂದರೆ 512 GB ಇಂಟರ್ ಸ್ಟೋರೇಜ್ ಹಾಗೂ 16GB RAM. ಈ ಫೋನ್ ಮ್ಯಾಜಿಕ್ ಓಎಸ್ ಸ್ಕಿನ್‌ನೊಂದಿಗೆ ಆಂಡ್ರಾಯ್ಡ್ 13 ಅನ್ನು ರನ್ ಮಾಡಲಿದೆ.
ಹಾನರ್ ಮ್ಯಾಜಿಕ್ V2 ಕ್ಯಾಮೆರಾ ರಚನೆ: ಈ ಫೋನ್ ಎರಡು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಒಂದು ಕವರ್ ಡಿಸ್‌ಪ್ಲೇಗಾಗಿ ಮತ್ತು ಇನ್ನೊಂದು ಫೋಲ್ಡಿಂಗ್ ಸ್ಕ್ರೀನ್‌ಗಾಗಿ. ರಿಯರ್‌ನಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದ್ದು, 50 ಮೆಗಾಪಿಕ್ಸೆಲ್ ಮುಖ್ಯ ಶೂಟರ್, 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು 2.5x 20 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಕಾಣಬಹುದಾಗಿದೆ.

ಹಾನರ್ ಮ್ಯಾಜಿಕ್ V2 ಬ್ಯಾಟರಿ ಹಾಗೂ ಇತರೆ: 5,000mAh ಸಾಮರ್ಥ್ಯದ ಡ್ಯುಯಲ್ ಸಿಲಿಕಾನ್-ಕಾರ್ಬನ್ ಬ್ಯಾಟರಿ ಆಯ್ಕೆ ಪಡೆದಿದ್ದು, 66W ವೈರ್ಡ್ ಚಾರ್ಜಿಂಗ್ ಬೆಂಬಲ ಹೊಂದಿದೆ. ಉಳಿದಂತೆ ಈ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, 5G ಬೆಂಬಲ, ಸ್ಟೀರಿಯೋ ಸ್ಪೀಕರ್‌ಗಳು ಮತ್ತು ಇತರೆ ವಿಶೇಷ ಕನೆಕ್ಟಿವಿಟಿ ಫೀಚರ್ಸ್ ಪಡೆದುಕೊಂಡಿದೆ.
ಹಾನರ್ ಮ್ಯಾಜಿಕ್ V2 ಬೆಲೆ ಮತ್ತು ಲಭ್ಯತೆ: ಪೂರ್ವ-ಆರ್ಡರ್‌ಗಳು ಇಂದಿನಿಂದ ಯುರೋಪ್‌ನಲ್ಲಿ ಲೈವ್ ಆಗಿದೆ. ಇದು ಬ್ಲ್ಯಾಕ್ ವೆಗಾನ್ ಲೆದರ್ ಮತ್ತು ಫ್ಯಾಂಟಮ್ ಪರ್ಪಲ್‌ನಲ್ಲಿ ಕಾಣಿಸಿಕೊಳ್ಳಲಿದ್ದು £1,699.99 ಕ್ಕೆ ಲಭ್ಯವಿರುತ್ತದೆ. ಇದನ್ನು ಹಾನರ್, ಅಮೆಜಾನ್ ವೆರಿ, ಅರ್ಗೋಸ್ ಹಾಗೂ ಕರ್ರಿ ಮೂಲಕ ಆರ್ಡ್ ಮಾಡಬಹುದಾಗಿದೆ. ಫೆಬ್ರವರಿ 2 ರಂದು ಮಾರಾಟಕ್ಕೆ ಲಭ್ಯ ಇದೆ.


Click it and Unblock the Notifications








