Home
ಸುದ್ದಿಜಾಲ

honor Magic VS2: ಹಾನರ್‌ನಿಂದ ಮೂರನೇ ಫೋಲ್ಡಬಲ್‌ ಫೋನ್ ಲಾಂಚ್... ಫೀಚರ್ಸ್‌ ಹೇಗಿದೆ, ಬೆಲೆ ಎಷ್ಟು?

ಹಾನರ್‌ (honor) ಈಗಾಗಲೇ ಸಾಕಷ್ಟು ಸ್ಮಾರ್ಟ್‌ಫೋನ್‌ಗಳೊಂದಿಗೆ ಫೋಲ್ಡಬಲ್‌ ಫೋನ್‌ಗಳನ್ನೂ ಸಹ ಲಾಂಚ್‌ ಮಾಡಿಕೊಂಡು ಬರುತ್ತಿದೆ. ಜುಲೈನಲ್ಲಿ ಮ್ಯಾಜಿಕ್ V2 (Magic V2) ಮತ್ತು ಕಳೆದ ತಿಂಗಳು ಮ್ಯಾಜಿಕ್ V ಪರ್ಸ್ (Magic V Purse) ಅನ್ನು ಲಾಂಚ್‌ ಮಾಡಿ ಬಹಳ ಸದ್ದು ಮಾಡಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಈಗ ಮೂರನೇ ಫೋಲ್ಡಬಲ್‌ ಫೋನ್ (foldable phone) ಆನ್ನು ಲಾಂಚ್ ಮಾಡಿದೆ.

ಹೌದು, ಹಾನರ್‌ ಇದೀಗ ಹಾನರ್‌ ಮ್ಯಾಜಿಕ್‌ Vs 2 ಫೋಲ್ಡಬಲ್‌ ಫೋನ್‌ (Honor Magic Vs 2 Foldable Phone) ಅನ್ನು ಲಾಂಚ್‌ ಮಾಡಿದೆ. ಈ ಫೋನ್ 7.92-ಇಂಚಿನ OLED ಇನ್ನರ್ ಡಿಸ್‌ಪ್ಲೇ ಆಯ್ಕೆ, 66W ಸೂಪರ್ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ. ಇದರೊಂದಿಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್‌ ಬಲ ಪಡೆದುಕೊಂಡಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ಎಷ್ಟು?, ಲಾಂಚ್‌ ಆಗಿದ್ದು ಎಲ್ಲಿ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಹಾನರ್‌ನಿಂದ ಮೂರನೇ ಫೋಲ್ಡಬಲ್‌ ಫೋನ್ ಲಾಂಚ್... ಫೀಚರ್ಸ್‌ ಹೇಗಿದೆ, ಬೆಲೆ ಎಷ್ಟು?

ಹಾನರ್‌ ಮ್ಯಾಜಿಕ್‌ Vs 2 ಫೋನ್ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್‌ ಒಳಗಿನ ಡಿಸ್‌ಪ್ಲೇ 7.92 ಇಂಚಿನ OLED ಪ್ಯಾನೆಲ್ ಅನ್ನು ಹೊಂದಿದ್ದು, ಇದು 2,344 x 2,156 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 1,600 ನಿಟ್ಸ್‌ ಬ್ರೈಟ್‌ನೆಸ್‌ ಆಯ್ಕೆ 9.78:9 ರ ಆಕಾರ ಅನುಪಾತವನ್ನು ಹೊಂದಿದೆ. ಇನ್ನೊಂದು ಬದಿಯಲ್ಲಿ 6.43-ಇಂಚಿನ OLED ಕವರ್ ಡಿಸ್‌ಪ್ಲೇ ಆಯ್ಕೆಯು 2,376 x 1,060 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ್ ಪಡೆದಿದ್ದು, ಇದು 2,500 ನಿಟ್ಸ್‌ ಬ್ರೈಟ್‌ನೆಸ್‌ ಆಯ್ಕೆ ಪಡೆದಿದೆ.

ಹಾನರ್‌ ಮ್ಯಾಜಿಕ್‌ Vs 2 ಪ್ರೊಸೆಸರ್‌ ಮಾಹಿತಿ: ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್‌ (Qualcomm Snapdragon 8+ Gen 1 Soc) ಅನ್ನು ಹೊಂದಿದ್ದು, ಅಡ್ರಿನೋ 730 GPU ಬಲದೊಂದಿಗೆ ಕಾಣಿಸಿಕೊಂಡಿದೆ. ಇದರ ಜೊತೆಗೆ 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಆಯ್ಕೆ ಇದರಲ್ಲಿದ್ದು, ಆಂಡ್ರಾಯ್ಡ್ 13 ಆಧಾರಿತ ಮ್ಯಾಜಿಕ್ ಓಎಸ್ 7.2 ಇದನ್ನು ರನ್‌ ಮಾಡಲಿದೆ.

ಹಾನರ್‌ ಮ್ಯಾಜಿಕ್‌ Vs 2 ಕ್ಯಾಮೆರಾ ರಚನೆ: ಈ ಫೋನ್ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ವೈಡ್ ಆಂಗಲ್ ಲೆನ್ಸ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಸೆನ್ಸರ್‌, ಟೆಲಿಫೋಟೋ ಲೆನ್ಸ್‌ನೊಂದಿಗೆ 20 ಮೆಗಾಪಿಕ್ಸೆಲ್ ಸೆನ್ಸರ್‌ ಮತ್ತು ಅಲ್ಟ್ರಾ ವೈಡ್-ಆಂಗಲ್ ಲೆನ್ಸ್‌ನೊಂದಿಗೆ 12 ಮೆಗಾಪಿಕ್ಸೆಲ್ ಸೆನ್ಸರ್‌ ಆಯ್ಕೆ ಇದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ ಬೆಂಬಲದೊಂದಿಗೆ ಕಾಣಿಸಿಕೊಂಡಿದೆ. ಇದರೊಂದಿಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಹಾನರ್‌ ಮ್ಯಾಜಿಕ್‌ Vs 2 ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಇದು 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 66W ವೈರ್ಡ್ ಸೂಪರ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಉಳಿದಂತೆ ಈ ಫೋನ್ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌, 5G, ವೈ-ಫೈ, ಜಿಪಿಎಸ್, ಎನ್‌ಎಫ್‌ಸಿ, ಬ್ಲೂಟೂತ್ ಆವೃತ್ತಿ 5.2 ಮತ್ತು ಯುಎಸ್‌ಬಿ ಟೈಪ್-ಸಿ ಕನೆಕ್ಟಿವಿಟಿ ಬೆಂಬಲ ಹೊಂದಿದೆ.

ಹಾನರ್‌ನಿಂದ ಮೂರನೇ ಫೋಲ್ಡಬಲ್‌ ಫೋನ್ ಲಾಂಚ್... ಫೀಚರ್ಸ್‌ ಹೇಗಿದೆ, ಬೆಲೆ ಎಷ್ಟು?

ಹಾನರ್ ಮ್ಯಾಜಿಕ್ Vs 2 ಬೆಲೆ ಹಾಗೂ ಲಭ್ಯತೆ: ಈ ಫೋನ್‌ನ 12GB + 256GB ವೇರಿಯಂಟ್‌ಗೆ CNY 6,999 (ಭಾರತದಲ್ಲಿ 79,721.97ರೂ.ಗಳು) ಅನ್ನು ನಿಗದಿ ಮಾಡಲಾಗಿದೆ. ಇದರೊಂದಿಗೆ 16GB + 512GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿಯೂ ಈ ಫೋನ್‌ ಲಭ್ಯ ಇದೆ. ಇನ್ನು ಈ ಸ್ಮಾರ್ಟ್‌ಫೋನ್‌ ಅನ್ನು ಸದ್ಯಕ್ಕೆ ಚೀನಾದಲ್ಲಿ ಮಾತ್ರ ಲಾಂಚ್ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಜಾಗತಿಕವಾಗಿ ಲಾಂಚ್‌ ಮಾಡಲಾಗುತ್ತದೆ ಎನ್ನಲಾಗಿದೆ. ಈ ಫೋನ್‌ ನಿಮಗೆ ಗ್ಲೇಸಿಯರ್ ಬ್ಲೂ, ಮಿಡ್‌ನೈಟ್ ಬ್ಲ್ಯಾಕ್ ಮತ್ತು ವೈಲೆಟ್ ಕೋರಲ್ ಕಲರ್ ಆಯ್ಕೆಗಳಲ್ಲಿ ಲಭ್ಯವಿದೆ.

Best Mobiles in India

English summary
Honor Magic Vs 2 foldable phone has been launched in China. The phone has a 7.92-inch OLED inner display option, 66W super charging facility.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+