ಭಾರೀ ಕುತೂಹಲ ಮೂಡಿಸಿದ್ದ HONOR Magic6 Pro 5G ಫೋನ್ ಈಗ ಖರೀದಿಗೆ ಲಭ್ಯ!
ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಭಿನ್ನವಾಗಿ ಗುರುತಿಸಿಕೊಂಡಿರುವ ಹಾನರ್ (HONOR) ಮೊಬೈಲ್ ಬ್ರ್ಯಾಂಡ್ ಈಗಾಗಲೇ ತನ್ನ ಕೆಲವು ಫೋನ್‌ಗಳ ಮೂಲಕ ಮೊಬೈಲ್ ಪ್ರಿಯರ ದಿಲ್ ಗೆದ್ದಿದೆ. ಇನ್ನು ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಹಾನರ್ ಮ್ಯಾಜಿಕ್ 6 ಪ್ರೊ (HONOR Magic6 Pro 5G) ಸಹ ಆಕರ್ಷಕ ಎನಿಸಿದೆ. ಅಂದಹಾಗೆ ಈ ಫೋನಿನ ಮಾರಾಟ ಇಂದು ಮಧ್ಯಾಹ್ನ 12 ಗಂಟೆಗೆ ಅಮೆಜಾನ್ ಹಾಗೂ ಅಧಿಕೃತ ಹಾನರ್ ವೆಬ್‌ಸೈಟ್ ಮೂಲಕ ಪ್ರಾರಂಭವಾಗಿದೆ.
ಹೌದು, ಹಾನರ್ ಮೊಬೈಲ್ ಬ್ರ್ಯಾಂಡ್‌ನ ಹಾನರ್ ಮ್ಯಾಜಿಕ್ 6 ಪ್ರೊ (HONOR Magic6 Pro 5G) ಸೇಲ್ ಶುರುವಾಗಿದ್ದು, ಖರೀದಿಗೆ ಲಭ್ಯ ಇದೆ. ಈ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಪವರ್ ಪಡೆದಿದ್ದು, ಜೊತೆಗೆ ಫಾಲ್ಕನ್ ಕ್ಯಾಮೆರಾ ಸಿಸ್ಟಮ್ ರಚನೆ ಸಹ ಒಳಗೊಂಡಿದೆ. ಅಲ್ಲದೇ ಇದು 66W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.

ಇನ್ನು ಹಾನರ್ ಮ್ಯಾಜಿಕ್ 6 ಪ್ರೊ ಫೋನ್ 12GB + 512GB ಸಾಮರ್ಥ್ಯದ ಒಂದೇ ವೇರಿಯಂಟ್ ಆಯ್ಕೆ ಪಡೆದಿದ್ದು ಇದರ ಬೆಲೆ 89,999ರೂ. ಗಳು ಆಗಿದೆ. 12 ತಿಂಗಳವರೆಗೆ ತಿಂಗಳಿಗೆ 7500ರೂ. ಗಳಂತೆ ಯಾವುದೇ ವೆಚ್ಚವಿಲ್ಲದ EMI ಆಯ್ಕೆಗಳನ್ನು ಪಡೆಯಬಹುದು. ಇದಲ್ಲದೇ ಹೆಚ್ಚುವರಿಯಾಗಿ, ಮುಂದಿನ 180 ದಿನಗಳವರೆಗೆ Magic6 Pro 5G ನಲ್ಲಿ ಯಾವುದೇ ಬೆಲೆ ಇಳಿಕೆ ಆಗುವುದಿಲ್ಲ ಎಂದು ಹಾನರ್ ಸಂಸ್ಥೆಯು ದೃಢಪಡಿಸಿದೆ.
ಹಾನರ್ ಮ್ಯಾಜಿಕ್ 6 ಪ್ರೊ - ಫೀಚರ್ಸ್
ಹಾನರ್ ಮ್ಯಾಜಿಕ್ 6 ಪ್ರೊ ಮೊಬೈಲ್ 6.8 ಇಂಚಿನ 1.5K ಕ್ವಾಡ್-ಕರ್ವ್ಡ್ ಫ್ಲೋಟಿಂಗ್ LTPO OLED ಡಿಸ್‌ಪ್ಲೇ ಅನ್ನು 5,000 ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿದೆ. ಈ ಸ್ಕ್ರೀನ್ ಅಡಾಪ್ಟಿವ್ 120Hz (1Hz - 120Hz) ರಿಫ್ರೆಶ್ ರೇಟ್ ಮತ್ತು 4320Hz ಹೈ-ಫ್ರೀಕ್ವೆನ್ಸಿ PWM ಡಿಮ್ಮಿಂಗ್ ಅನ್ನು ಬೆಂಬಲಿಸುತ್ತದೆ.
ಹಾನರ್ ಮ್ಯಾಜಿಕ್ 6 ಪ್ರೊ ಮೊಬೈಲ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 8 ಜೆನ್ 3 ಚಿಪ್‌ಸೆಟ್ ಪ್ರೊಸೆಸರ್ ಜೊತೆಗೆ Adreno 750 GPU ಸಪೋರ್ಟ್ ಸಹ ಪಡೆದುಕೊಂಡಿದೆ. ಅಲ್ಲದೇ ಇದು CPU ನಲ್ಲಿ 30% ಮತ್ತು GPU ಕಾರ್ಯಕ್ಷಮತೆಯಲ್ಲಿ 25% ವರ್ಧಕವನ್ನು ನೀಡುತ್ತದೆ. ಹಾಗೆಯೇ ಇದು ಅಲ್ಟ್ರಾ-ವೈಡ್ ಲಿಕ್ವಿಡ್ ಕೂಲಿಂಗ್ ಸಿಸ್ಟಮ್ ಮತ್ತು ಹೆಚ್ಚುವರಿ-ದೊಡ್ಡ ಆವಿ ಚೇಂಬರ್ ಅನ್ನು ಸಹ ಒಳಗೊಂಡಿದೆ. ಈ ಫೋನ್ Android 14 ನಲ್ಲಿ ನಿರ್ಮಿಸಲಾದ MagicOS 8.0 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಹಾನರ್ ಮ್ಯಾಜಿಕ್ 6 ಪ್ರೊ ಮೊಬೈಲ್ ತ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 180 ಮೆಗಾ ಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಸೆನ್ಸಾರ್‌ನಲ್ಲಿ ಇದೆ. ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹಾಗೂ ತೃತೀಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ರಚನೆ ಅನ್ನು ಪಡೆದುಕೊಂಡಿದೆ. ಇದರೊಂದಿಗೆ ಮುಂಭಾಗದಲ್ಲಿ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಹಾನರ್ ಮ್ಯಾಜಿಕ್ 6 ಪ್ರೊ ಮೊಬೈಲ್ 5600 mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 80W ವೈರ್ಡ್ ಮತ್ತು 66W ವೈರ್‌ಲೆಸ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈಫೈ, ಹಾಟ್‌ಸ್ಪಾಟ್, ಯುಎಸ್‌ಬಿ ಟೈಪ್ ಸಿ ಪೋರ್ಟ್ ಅನ್ನು ಪಡೆದುಕೊಂಡಿದೆ.


Click it and Unblock the Notifications








