Just In
- 12 hrs ago
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- 14 hrs ago
ಜಿಯೋದ ಈ ಪ್ಲ್ಯಾನ್ ಸಖತ್ ಆಗಿದೆ!..ರೀಚಾರ್ಜ್ ಮಾಡಬೇಕಾ?.ಬೇಡವೇ?
- 15 hrs ago
ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್ವಾಚ್; ಇದು ಹೇಗೆಲ್ಲಾ ಕೆಲಸ ಮಾಡಲಿದೆ!?
- 17 hrs ago
Vivo X90 Pro : ಲಾಂಚ್ ಆಗಿಯೇ ಬಿಡ್ತು 'ವಿವೋ X90 ಪ್ರೊ' ಫೋನ್; ಖರೀದಿಗೆ ಕ್ಯೂ ಖಚಿತ!
Don't Miss
- Sports
Ind Vs Aus Test: ಟೆಸ್ಟ್ ಸರಣಿಗೆ ಈ ರೀತಿ ಪಿಚ್ ಬೇಕು ಎಂದು ಕ್ಯುರೇಟರ್ಗಳಿಗೆ ಮನವಿ ಮಾಡಿದ ದ್ರಾವಿಡ್ ಮತ್ತು ರೋಹಿತ್ ಶರ್ಮಾ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Movies
Ramachari Serial: ವಿಹಾನ್ ಬಳಿ ಸತ್ಯ ಹೇಳಿಬಿಟ್ಟ ಚಾರು!
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹಾನರ್‌ನ 'ಮ್ಯಾಜಿಕ್‌ಬುಕ್ ಪ್ರೊ' ಮತ್ತು 'ಬ್ಯಾಂಡ್ 5' ಡಿವೈಸ್ ಬಿಡುಗಡೆ!
ಜನಪ್ರಿಯ ಹಾನರ್ ಕಂಪನಿಯು ತನ್ನ ಅತ್ಯುತ್ತಮ ಸ್ಮಾರ್ಟ್‌ಫೋನ್ ಸೇರಿದಂತೆ ಹಲವು ಗ್ಯಾಜೆಟ್ ಉತ್ಪನ್ನಗಳಿಂದ ವಿಶ್ವ ಟೆಕ್ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಇದೀಗ ಕಂಪನಿಯು ಹೊಸದಾಗಿ ಮ್ಯಾಜಿಕ್‌ಬುಕ್ ಪ್ರೊ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ್ದು, ಮೆಟಲ್ ರಚಿತವಾಗಿದೆ. 8ನೇ ತಲೆಮಾರಿನ ಇಂಟೆಲ್ i5 ಮತ್ತು i7 ಪ್ರೊಸೆಸರ್ ಸಾಮರ್ಥ್ಯದ ಆಯ್ಕೆಗಳನ್ನು ಒಳಗೊಂಡಿರುವುದು ಪ್ರಮುಖ ಹೈಲೈಟ್ ಎನಿಸಿದೆ.

ಹೌದು, ಹಾನರ್ ಕಂಪನಿಯು ಹೊಸದಾಗಿ 'ಮ್ಯಾಜಿಕ್‌ಬುಕ್ ಪ್ರೊ' ಲ್ಯಾಪ್‌ಟಾಪ್ ಮತ್ತು 'ಹಾನರ್ ಬ್ಯಾಂಡ್ 5' ಫಿಟ್ನೆಸ್ ಡಿವೈಸ್ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಮ್ಯಾಜಿಕ್‌ಬುಕ್ ಪ್ರೊ 16GB RAM ಸಾಮರ್ಥ್ಯದೊಂದಿಗೆ 1TB ಸ್ಟೋರೇಜ್ ಸ್ಥಳಾವಕಾಶವನ್ನು ಒಳಗೊಂಡಿದ್ದು, ಜೊತೆಗೆ MX250 GPU ಗ್ರಾಫಿಕ್ಸ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗೆಯೇ 56Wh ಬ್ಯಾಟರಿ ಶಕ್ತಿಯನ್ನು ಹೊಂದಿ ಪವರ್‌ಫುಲ್ ಲುಕ್‌ನಲ್ಲಿದೆ.

ಇನ್ನು 'ಹಾನರ್ ಬ್ಯಾಂಡ್ 5' ಕಂಪ್ಲಿಟ್ ಫಿಟ್ನೆಸ್ ಡಿವೈಸ್ ಆಗಿದ್ದು, 'ಆಕ್ಸಿಜನ್ ಲೆವೆಲ್ ಸೆನ್ಸಾರ್' ಪಡೆದುಕೊಂಡಿದೆ. ಇದು ಬಳಕೆದಾರರ SpO2 ಬ್ಲಡ್ ಲೆವೆಲ್ ಹಾಗೂ ಬ್ಲಡ್‌ನಲ್ಲಿರುವ ಆಕ್ಸಿಜನ್ ಪ್ರಮಾಣದ ಮಾಹಿತಿಯನ್ನು ತಿಳಿಸುವ ಸಾಮರ್ಥ್ಯ ಹೊಂದಿದೆ. ಹಾಗಾದರೇ ಹಾನರ್‌ನ ಹೊಸ ಮ್ಯಾಜಿಕ್‌ಬುಕ್ ಪ್ರೊ ಮತ್ತು ಹಾನರ್ ಬ್ಯಾಂಡ್ 5' ಡಿವೈಸ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಮ್ಯಾಜಿಕ್‌ಬುಕ್ ಪ್ರೊ ಡಿಸ್‌ಪ್ಲೇ ಮತ್ತು ರಚನೆ
ಹಗುರವಾದ ರಚನೆಯನ್ನು ಪಡೆದಿರುವ 'ಮ್ಯಾಜಿಕ್‌ಬುಕ್ ಪ್ರೊ' ಲ್ಯಾಪ್‌ಟಾಪ್ 1.7ಕೆ.ಜಿ ತೂಕವನ್ನು ಪಡೆದುಕೊಂಡಿದ್ದು, ಬಾಹ್ಯ ಬಾಡಿಯು ಅಲ್ಯೂಮಿನಿಯಂ ಮೆಟಲ್‌ನಿಂದ ರಚನೆಗೊಂಡಿದೆ. ಹಾಗೆಯೇ 1920x1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 16.1 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಹೆಚ್ಚು ಪ್ರಖರವಾದ ರೆಸಲ್ಯೂಶನ್‌ನಲ್ಲಿ ಡಿಸ್‌ಪ್ಲೇ ಕಾಣಿಸಿಕೊಳ್ಳಲಿದೆ.

'ಮ್ಯಾಜಿಕ್‌ಬುಕ್ ಪ್ರೊ' ಪ್ರೊಸೆಸರ್
ಮ್ಯಾಜಿಕ್‌ಬುಕ್ ಪ್ರೊ ಲ್ಯಾಪ್‌ಟಾಪ್ 8ನೇ ತಲೆಮಾರಿನ ಇಂಟೆಲ್ i5 ಮತ್ತು i7 ಪ್ರೊಸೆಸರ್ ಇದ್ದು, ಇದು ಮಲ್ಟಿಟಾಸ್ಕ್ ಕೆಲಸಗಳ ಕಾರ್ಯನಿರ್ವಹಣೆಗೆ ಬೆಂಬಲಿಸಲಿದೆ. ಹಾಗೆಯೇ 16GB RAM ಸಾಮರ್ಥ್ಯದೊಂದಿಗೆ 1TB ಸ್ಟೋರೇಜ್ ಸ್ಥಳಾವಕಾಶವನ್ನು ಒಳಗೊಂಡಿದ್ದು, ಇದರೊಂದಿಗೆ GeForce MX250 GPU ಗ್ರಾಫಿಕ್ಸ್ ಸಾಮರ್ಥ್ಯವನ್ನು ಸಹ ಪಡೆದುಕೊಂಡಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ಮ್ಯಾಜಿಕ್‌ಬುಕ್ ಪ್ರೊ ಲ್ಯಾಪ್‌ಟಾಪ್ 56Wh ಸಾಮರ್ಥ್ಯದ ಬ್ಯಾಟರಿ ಪವರ್ ಪಡೆದಿದ್ದು, ಇಮ್ಮೆ ಚಾರ್ಜ್ ಮಾಡಿದರೇ ಸುಮಾರು 14 ಗಂಟೆಗಳ ವರೆಗೂ ಬ್ಯಾಟರಿ ಬ್ಯಾಕ್‌ಅಪ್ ಒದಗಿಸಲಿದೆ. ಯುಎಸ್‌ಬಿ ಟೈಪ್-ಸಿ ಪೋರ್ಟ್, ಮೂರು ಯುಎಸ್‌ಬಿ ಟೈಪ್-ಎ ಫೋರ್ಟ್ ಮತ್ತು ಎಚ್‌ಡಿಎಮ್ಐ ಪೋರ್ಟ್ ಹಾಗೂ ಎರಡು ಕಸ್ಟಮ್‌ಮೆಡ್ ಪ್ಯಾನ್ ಸೌಲಭ್ಯಗಳನ್ನು ಒಳಗೊಂಡಿದೆ.

ಹಾನರ್ ಬ್ಯಾಂಡ್ 5
ಹಾನರ್ ಬ್ಯಾಂಡ್ 5 ಡಿವೈಸ್ 0.95 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, 2.5D ಕರ್ವ್ ಗ್ಲಾಸ್ ರಕ್ಷಣೆ ಪಡೆದಿದೆ. ಸೈಕ್ಲಿಂಗ್, ಸ್ವಿಮ್ಮಿಂಗ್, ಸೇರಿದಂತೆ ಸುಮಾರು 10 ಆಕ್ಟಿವಿಟಿಗಳ ಟ್ರಾಕಿಂಗ್ ಮಾಡಲಿದೆ. ನಿರಂತರ ಹಾರ್ಟ್‌ಬೀಟ್ ಮಾನಿಟರ್ ಮಾಡಲಿದ್ದು, ಹಾಗೆಯೇ ರಕ್ತದಲ್ಲಿನ SpO2 ಮತ್ತು ಆಕ್ಸಿಜನ್ ಪ್ರಮಾಣದ ಮಾಹಿತಿ ಒದಗಿಸುತ್ತದೆ.

ಬೆಲೆ ಮತ್ತು ಲಭ್ಯತೆ
ಹಾನರ್ ಕಂಪನಿಯು 'ಹಾನರ್ ಮ್ಯಾಜಿಕ್‌ಬುಕ್ ಪ್ರೊ' ಲ್ಯಾಪ್‌ಟಾಪ್ ಮತ್ತು 'ಹಾನರ್ ಬ್ಯಾಂಡ್ 5' ಫಿಟ್ನೆಸ್ ಡಿವೈಸ್‌ಗಳು ಉತ್ಪನ್ನಗಳನ್ನು ಸದ್ಯ ಚೀನಾದಲ್ಲಿ ಬಿಡುಗಡೆ ಮಾಡಿದೆ. ಅವುಗಳಲ್ಲಿ ಮ್ಯಾಜಿಕ್‌ಬುಕ್ ಪ್ರೊ ಲ್ಯಾಪ್‌ಟಾಪ್‌ನ ಆರಂಭಿಕ ಬೆಲೆಯು CNY 5,499 (ಅಂದಾಜು 55,000ರೂ) ಆಗಿದೆ. ಹಾಗೆಯೇ ಬ್ಯಾಂಡ್ 5 ಆರಂಭಿಕ ಬೆಲೆ CNY 189(ಅಂದಾಜು 1,900ರೂ) ಆಗಿದೆ. ಇದೇ ಜುಲೈ 29ರಂದು ಸೇಲ್ ಆರಂಭವಾಗಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470