Home
ಸುದ್ದಿಜಾಲ

ಹಾನರ್‌ನಿಂದ ಬರಲಿವೆ ಎರಡು ಹೊಸ ಲ್ಯಾಪ್‌ಟಾಪ್‌!..ಮಾರ್ಚ್ 25 ರಿಂದ ಪ್ರಿ-ಆರ್ಡರ್‌ ಶುರು!

ಜನಪ್ರಿಯ ಬ್ರ್ಯಾಂಡ್‌ಗಳಲ್ಲಿ ಒಂದಾದ ಹಾನರ್‌ (HONOR) ತನ್ನ ಇತ್ತೀಚಿನ ಮ್ಯಾಜಿಕ್‌ಬುಕ್ ಮಾದರಿಗಳಾದ ಮ್ಯಾಜಿಕ್‌ಬುಕ್ X14 ಪ್ರೊ ಮತ್ತು ಮ್ಯಾಜಿಕ್‌ಬುಕ್ X16 ಪ್ರೊ ಲ್ಯಾಪ್‌ಟಾಪ್‌ ಡಿವೈಸ್‌ಗಳನ್ನು ಭಾರತದಲ್ಲಿ ಪರಿಚಯಿಸಲು ಸಕಲ ರೀತಿ ಸಜ್ಜಾಗಿದೆ. ಆದರೆ ಬಿಡುಗಡೆಗೆ ಮುನ್ನ ಇದೇ ಮಾರ್ಚ್‌ 25 ರಿಂದ ಪ್ರಿ-ಆರ್ಡರ್‌ ಅನ್ನು ಪ್ರಾರಂಭಿಸಲಿದೆ.

ಹೌದು, ಹಾನರ್‌ ಸಂಸ್ಥೆಯು ಏಪ್ರಿಲ್‌ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಗೆ ಹೊಸದಾಗಿ ಹಾನರ್ ಮ್ಯಾಜಿಕ್‌ಬುಕ್ X14 ಪ್ರೊ ಮತ್ತು ಹಾನರ್ ಮ್ಯಾಜಿಕ್‌ಬುಕ್ X16 ಪ್ರೊ ಲ್ಯಾಪ್‌ಟಾಪ್‌ ಡಿವೈಸ್‌ಗಳನ್ನು ಲಾಂಚ್‌ ಮಾಡಲಿದೆ. ಈ ಎರಡು ಲ್ಯಾಪ್‌ಟಾಪ್‌ಗಳು ತೆಳುವಾದ ರಚನೆ ಹಾಗೂ ಹಗುರವಾದ ಲೋಹದ ವಿನ್ಯಾಸವನ್ನು ಪಡೆದಿರುವುದು ಆಕರ್ಷಣೆಯ ಅಂಶಗಳಲ್ಲಿ ಒಂದಾಗಿವೆ.

ಹಾನರ್‌ನಿಂದ ಬರಲಿವೆ ಎರಡು ಹೊಸ ಲ್ಯಾಪ್‌ಟಾಪ್‌!..ಮಾರ್ಚ್ 25 ರಿಂದ ಪ್ರಿ-ಆರ್ಡರ್‌!

ಅಂದಹಾಗೆ ಬರಲಿರುವ ಈ ಎರಡು ಲ್ಯಾಪ್‌ಟಾಪ್‌ಗಳು 13ನೇ ಜನ್ ಇಂಟೆಲ್ ಕೋರ್ i5 'H ಸರಣಿ' CPU ಅನ್ನು ಒಳಗೊಂಡಿರಲಿದ್ದು, ಇದರ ಜೊತೆಗೆ ಈ ಲ್ಯಾಪ್‌ಟಾಪ್‌ ಸಾಧನಗಳು 16GB RAM ಮತ್ತು 512GB SSD ಸ್ಟೋರೇಜ್‌ ಆಯ್ಕೆಯನ್ನು ಪಡೆದಿರಲಿವೆ ಎಂದು ಹಾನರ್‌ ಸಂಸ್ಥೆಯು ತಿಳಿಸಿದೆ. ಹಾಗಾದರೇ ಹಾನರ್‌ ಸಂಸ್ಥೆಯ ಈ ಎರಡು ಲ್ಯಾಪ್‌ಟಾಪ್‌ಗಳ ಇತರೆ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಹಾನರ್‌ನಿಂದ ಬರಲಿವೆ ಎರಡು ಹೊಸ ಲ್ಯಾಪ್‌ಟಾಪ್‌!..ಮಾರ್ಚ್ 25 ರಿಂದ ಪ್ರಿ-ಆರ್ಡರ್‌!

ಫೀಚರ್ಸ್‌ ಮಾಹಿತಿ

ಹಾನರ್‌ ಮ್ಯಾಜಿಕ್‌ಬುಕ್ X14 ಪ್ರೊ ಮತ್ತು ಹಾನರ್ ಮ್ಯಾಜಿಕ್‌ಬುಕ್ X16 ಪ್ರೊ ಈ ಎರಡೂ ಲ್ಯಾಪ್‌ಟಾಪ್‌ಗಳು ತೆಳುವಾದ ಮತ್ತು ಹಗುರವಾದ ರಚನೆ ಅನ್ನು ಪಡೆದಿವೆ. ಅಲ್ಲದೇ ಮ್ಯಾಜಿಕ್‌ಬುಕ್ X14 ಪ್ರೊ ಲ್ಯಾಪ್‌ಟಾಪ್‌ 14 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇ ಅನ್ನು ಪಡೆದಿರಲಿದ್ದು, ಮ್ಯಾಜಿಕ್‌ಬುಕ್ X16 ಪ್ರೊ ಲ್ಯಾಪ್‌ಟಾಪ್‌ 16 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇ ಅನ್ನು ಪಡೆದಿರಲಿದೆ ಎನ್ನಲಾಗಿದೆ.

ಹಾಗೆಯೇ ಈ ಲ್ಯಾಪ್‌ಟಾಪ್‌ಗಳ ಡಿಸ್‌ಪ್ಲೇಗಳು ಡೈನಾಮಿಕ್ ಡಿಮ್ಮಿಂಗ್ ಸೌಲಭ್ಯ ಪಡೆದಿರಲಿವೆ. ಅಲ್ಲದೇ 16:10 ಆಕಾರ ಅನುಪಾತ, 300 ನಿಟ್ಸ್ ಬ್ರೈಟ್ನೆಸ್ಹಾಗೂ 100% sRGB ಗ್ಯಾಮಟ್ ಒಳಗೊಂಡಿರಲಿವೆ. ಇದರ ಜೊತೆಗೆ ಇ-ಬುಕ್ ಮೋಡ್ ಆಯ್ಕೆ ಅನ್ನು ನೀಡುತ್ತವೆ. ಇದರೊಂದಿಗೆ ಡಿಸ್‌ಪ್ಲೇಗಳು ಆಂಟಿ-ಗ್ಲೇರ್, TUV ರೈನ್‌ಲ್ಯಾಂಡ್ ಪ್ರಮಾಣೀಕೃತವಾಗಿದ್ದು, ಪೂರ್ಣ DC ಫ್ಲಿಕರ್-ಫ್ರೀ ಡಿಮ್ಮಿಂಗ್ ಅನ್ನು ನೀಡುತ್ತವೆ.

ಹಾನರ್‌ ಸಂಸ್ಥೆಯ ಈ ಲ್ಯಾಪ್‌ಟಾಪ್‌ಗಳು 13ನೇ ಜನರೇಷನ್‌ ಇಂಟೆಲ್ ಕೋರ್ i5 ಸಿಪಿಯು ಪವರ್‌ ಅನ್ನು ಪಡೆದಿರಲಿದ್ದು, 16GB RAM ಮತ್ತು 512GB SSD ಸ್ಟೋರೇಜ್‌ ಆಯ್ಕೆ ಅನ್ನು ಒಳಗೊಂಡಿರಲಿವೆ. ಅಲ್ಲದೇ ಈ ಲ್ಯಾಪ್‌ಟಾಪ್‌ಗಳು ವಿಂಡೋಸ್ 11 ಹೋಮ್‌ ಅನ್ನು ಮೊದಲೇ ಇನ್‌ಸ್ಟಾಲ್‌ ಆಗಿರಲಿವೆ ಎಂದು ಹೇಳಲಾಗಿದೆ. ಇಷ್ಟಲ್ಲದೇ ಪ್ರೊ ವೇರಿಯಂಟ್‌ಗಳು AI- ಬೆಂಬಲಿತ ನಾಯಿಸ್‌ ಕ್ಯಾನ್ಸಲೇಶನ್‌, ಅಧಿಕ ರೆಸಲ್ಯೂಶನ್ ಸ್ಟಿರಿಯೊ ಸ್ಪೀಕರ್‌ಗಳನ್ನು ಪಡೆದಿರಲಿವೆ.

ಹಾನರ್‌ ಮ್ಯಾಜಿಕ್‌ಬುಕ್ X14 ಪ್ರೊ ಮತ್ತು ಹಾನರ್ ಮ್ಯಾಜಿಕ್‌ಬುಕ್ X16 ಪ್ರೊ ಲ್ಯಾಪ್‌ಟಾಪ್‌ಗಳು 60Wh ಸಾಮರ್ಥ್ಯದ ಬಿಗ್‌ ಬ್ಯಾಟರಿ ಸಪೋರ್ಟ್‌ ಪಡೆದಿದ್ದು, 10 ಗಂಟೆಗಳ ಸಾಮಾನ್ಯ ಆಫೀಸ್‌ ಬಳಕೆಯ ಬ್ಯಾಕ್‌ಅಪ್‌ ನೀಡಲಿವೆ ಹಾಗೂ 11.5 ಗಂಟೆಗಳ ವೀಡಿಯೊ ಪ್ಲೇ ಬ್ಯಾಕ್‌ಗಾಗಿ ಒದಗಿಸಲಿವೆ ಎನ್ನಲಾಗಿದೆ. ಇನ್ನು ಕಬೆಕ್ಟಿವಿಟಿ ಸೌಲಭ್ಯಗಳಲ್ಲಿ ಇವು ಯುಎಸ್‌ಬಿ-C, ಹೆಚ್‌ಡಿಎಮ್‌ಐ ಹಾಗೂ ಯುಎಸ್‌ಬಿ-A 3.2 ಅಲ್ಲದೇ 3.5mm ಹೆಡ್‌ಫೋನ್‌ ಆಯ್ಕೆಗಳನ್ನು ಪಡೆದಿಲಿದೆ.

ಅಂದಹಾಗೆ ಈ ಲ್ಯಾಪ್‌ಟಾಪ್‌ಗಳಿ ಇದೇ ಏಪ್ರಿಲ್‌ ತಿಂಗಳಿನಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದ್ದು, ಆದರೆ ಫ್ರಿ-ಆರ್ಡರ್‌ ಇದೇ ಮಾರ್ಚ್‌ 25 ರಿಂದ ಪ್ರಾರಂಭ ಆಗಲಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳ ಬೆಲೆಯು ಸುಮಾರು 60,000ರೂ. ಗಳ ಆಸುಪಾಸಿನಲ್ಲಿ ಇರಲಿದೆ ಎಂದು ಊಹಿಸಲಾಗಿದೆ.

Best Mobiles in India

English summary
HONOR MagicBook X14 Pro and X16 Pro 2024 pre-orders starts March 25. Price, Specifications and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+