ಹಾನರ್ ಪ್ಯಾಡ್ V8 ಪ್ರೊ ಅನಾವರಣ; 144 Hz ರಿಫ್ರೆಶ್ ರೇಟ್ ಆಯ್ಕೆ
ಸ್ಮಾರ್ಟ್‌ಗ್ಯಾಜೆಟ್ ವಿಭಾಗದಲ್ಲಿ ಟ್ಯಾಬ್ಲೆಟ್‌ಗಳು ಬಳಕೆದಾರರಿಗೆ ತಮ್ಮದೇ ಆದ ಸೇವೆ ನೀಡುತ್ತಿವೆ. ಇದಕ್ಕೆಂದೇ ಹಲವಾರು ಪ್ರಮುಖ ಬ್ರ್ಯಾಂಡ್‌ನ ಕಂಪೆನಿಗಳು ವಿವಿಧ ಫೀಚರ್ಸ್ ಇರುವ ಟ್ಯಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಇದರ ಸಾಲಿನಲ್ಲಿ ಹಾನರ್ ಕಂಪೆನಿಯೂ ಇದ್ದು, ಇದೀಗ ಹೊಸ ಹಾನರ್ ಪ್ಯಾಡ್ V8 ಪ್ರೊ ಟ್ಯಾಬ್ಲೆಟ್ ಅನ್ನು ಅನಾವರಣ ಮಾಡಿದ್ದು, ಇದರ ಡಿಸ್‌ಪ್ಲೇ 144Hz ರಿಪ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದೆ.

ಹೌದು, ಹಾನರ್ ಕಂಪೆನಿಯು ಹಾನರ್ ಪ್ಯಾಡ್ V8 ಪ್ರೊ (Honor Pad V8 Pro) ಟ್ಯಾಬ್ಲೆಟ್ ಅನ್ನು ಅನಾವರಣಗೊಳಿಸಿದ್ದು, ಹಲವಾರು ಫೀಚರ್ಸ್ ಅನ್ನು ಹೊಂದಿದೆ. ಅದರಲ್ಲಿ ಪ್ರಮುಖವಾಗಿ ಮೀಡಿಯಾಟೆಕ್ ಡೈಮೆನ್ಸಿಟಿ 8100 ನಿಂದ ಕಾರ್ಯನಿರ್ವಹಿಸಲಿದೆ. ಇದರಲ್ಲಿನ ಸೆಲ್ಫಿ ಕ್ಯಾಮೆರಾ ಮೂಲಕ ಹೆಚ್‌ಡಿ ಕ್ವಾಲಿಟಿಯ ವಿಡಿಯೋಗಳನ್ನು ಸೆರೆಹಿಡಿಯಬಹುದಾಗಿದ್ದು, ರಿಯರ್ ಕ್ಯಾಮೆರಾದಲ್ಲಿ 4K ವಿಡಿಯೋ ಸೆರೆಹಿಡಿಯಬಹುದಾಗಿದೆ. ಹಾಗಿದ್ದರೆ ಈ ಡಿವೈಸ್‌ನ ಇನ್ನಿತರ ಪ್ರಮುಖ ಫೀಚರ್ಸ್ ಹಾಗೂ ಬೆಲೆ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಡಿಸ್‌ಪ್ಲೇ ವಿವರ
ಹಾನರ್ ಪ್ಯಾಡ್ V8 ಪ್ರೊ ಡಿವೈಸ್ 12.1 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಇದು 1,600×2,560 ಪಿಕ್ಸೆಲ್‌ಗಳ ರೆಸಲ್ಯೂಶನ್ ನೀಡಲಿದೆ. ಹಾಗೆಯೇ ಈ ಡಿಸ್‌ಪ್ಲೇ 600nits ಬ್ರೈಟ್‌ನೆಸ್ ನೀಡಲಿದ್ದು, 144 Hz ರಿಫ್ರೆಶ್ ರೇಟ್ ಹೊಂದಿದೆ.

ಪ್ರೊಸೆಸರ್ ಯಾವುದು?
ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100 SoC ನಲ್ಲಿ ಕಾರ್ಯನಿರ್ವಹಿಸುವ ಈ ಟ್ಯಾಬ್ಲೆಟ್, ಆಂಡ್ರಾಯ್ಡ್ 12 ಅನ್ನು ಆಧರಿಸಿದ ಮ್ಯಾಜಿಕ್ ಓಎಸ್ 7.0 ಮೂಲಕ ತನ್ನ ಕಾರ್ಯಕ್ಷಮತೆ ತೋರಿಸಲಿದೆ. ಇನ್ನು 12GB RAM ಹಾಗೂ 256GB ಯ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದೊಂದಿಗೆ ವಿವಿಧ ವೇರಿಯಂಟ್‌ಗಳನ್ನೂ ಹೊಂದಿದೆ.

ಕ್ಯಾಮೆರಾ ಆಯ್ಕೆ
ಕ್ಯಾಮೆರಾ ವಿಷಯದಲ್ಲಿ ಈ ಟ್ಯಾಬ್ಲೆಟ್ ಹೆಚ್ಚಿನ ಫೀಚರ್ಸ್‌ಗಳನ್ನ ಪಡೆದುಕೊಂಡಿದೆ. ಅದರಲ್ಲಿ 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಎಲ್‌ಇಡಿ ಫ್ಲಾಶ್ ಆಯ್ಕೆ ಸಹ ನೀಡಲಾಗಿದೆ. ಹಾಗೆಯೇ ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದ್ದು, ಇದು ಫುಲ್ ಹೆಚ್‌ಡಿ ವಿಡಿಯೋಗಳನ್ನು ಸೆರೆಹಿಡಿಯಲು ಸಹಾಯಕವಾಗಿದೆ. ಅದರಂತೆ ರಿಯರ್ ಕ್ಯಾಮೆರಾದಲ್ಲಿ 4K ಸಾಮರ್ಥ್ಯದ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಳ್ಳಬಹುದು.

ಬ್ಯಾಟರಿ ಹಾಗೂ ಇತರೆ
ಹಾನರ್ ಪ್ಯಾಡ್ V8 ಪ್ರೊ ಟ್ಯಾಬ್ಲೆಟ್ 10,050mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, ಇದು 35W ನ ಸೂಪರ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಇದರೊಂದಿಗೆ ವೈ ಫೈ 6, 802.11a/b/g/n/ac/ax, ಬ್ಲೂಟೂತ್ ಆವೃತ್ತಿ 5.2, ಹಾಗೂ ಯುಎಸ್‌ಬಿ ಟೈಪ್ ಸಿ ನ ಕನೆಕ್ಟಿವಿಟಿ ಆಯ್ಕೆ ಪಡೆದುಕೊಂಡಿದೆ. ಸ್ಮಾರ್ಟ್ ಟಚ್ ಕೀಬೋರ್ಡ್ ಮತ್ತು ಮ್ಯಾಜಿಕ್ ಪೆನ್ಸಿಲ್ 3 ರಲ್ಲೂ ಕಾರ್ಯನಿರ್ವಹಿಸುವುದು ಇದರ ವಿಶೇಷ.

ಬೆಲೆ ಹಾಗೂ ಲಭ್ಯತೆ
ಈ ಹೊಸ ಟ್ಯಾಬ್ಲೆಟ್ ಹಲವು ಸ್ಟೋರೇಜ್ ವೇರಿಯಂಟ್ ಆಯ್ಕೆ ಹೊಂದಿದ್ದು, ಅದರಲ್ಲಿ 8GB RAM ಹಾಗೂ 128GB ಇಂಟರ್ನಲ್ ಸ್ಟೋರೇಜ್ ಆಯ್ಕೆಗೆ CNY 2,599 ( ಸುಮಾರು 31,000 ರೂ.) ನಿಗದಿ ಮಾಡಲಾಗಿದೆ. ಹಾಗೆಯೇ 8GB RAM ಹಾಗೂ 256GB ಇಂಟರ್ನಲ್ ಸ್ಟೋರೇಜ್ ಆಯ್ಕೆಗೆ CNY 2,899 (34,500 ರೂ.) ಬೆಲೆ ನಿಗದಿ ಮಾಡಲಾಗಿದೆ ಮತ್ತು 12GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಆಯ್ಕೆಗೆ CNY 3,299 (39,300 ರೂ.) ರೂ, ಗಳನ್ನು ನಿಗದಿ ಮಾಡಲಾಗಿದ್ದು, ಇದು ಬರ್ನಿಂಗ್ ಆರೆಂಜ್, ಕ್ಲಿಯರ್ ಸ್ಕೈ ಬ್ಲೂ ಮತ್ತು ಸ್ಟಾರ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ಸದ್ಯಕ್ಕೆ ಇದನ್ನು ಚೀನಾದಲ್ಲಿ ಲಾಂಚ್ ಮಾಡಲಾಗಿದ್ದು, ಹಾನರ್ ವೆಬ್‌ಸೈಟ್ ಮೂಲಕ ಖರೀದಿ ಮಾಡಬಹುದಾಗಿದೆ. ಇಂದಿನಿಂದ ಖರೀದಿಗೆ ಅವಕಾಶ ಮಾಡಿಕೊಡಲಾಗಿದ್ದು, ಈ ಮೂಲಕ 1,200 ರೂ. ಗಳ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








