Home
ಸುದ್ದಿಜಾಲ

HONOR: ಹಾನರ್ ಪ್ಯಾಡ್‌ 9 ಅನಾವರಣ: 8 ಸ್ಪೀಕರ್‌, ಉತ್ತಮ ಕ್ಯಾಮೆರಾ.. ಬೆಲೆ ಎಷ್ಟು?

ಹಾನರ್‌ (HONOR) ಇದೀಗ ಹೊಸ ಹೊಸ ಸ್ಮಾರ್ಟ್‌ಗ್ಯಾಜೆಟ್‌ಗಳನ್ನು ಲಾಂಚ್‌ ಮಾಡುವ ಮೂಲಕ ಮುನ್ನೆಲೆಗೆ ಬಂದಿದೆ. ಈಗಾಗಲೇ ಭಿನ್ನ ಫೀಚರ್ಸ್‌ ಆಯ್ಕೆಯ ಕೆಲವು ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಸಖತ್‌ ಸೌಂಡ್‌ ಮಾಡಿದ್ದ ಹಾನರ್‌ ಇದೀಗ ವಿಶೇಷ ಫೀಚರ್ಸ್‌ ಇರುವ ಟ್ಯಾಬ್ಲೆಟ್‌ ಅನ್ನು ಅನಾವರಣ ಮಾಡಿ ಸುಂಟರಗಾಳಿಯನ್ನೇ ಎಬ್ಬಿಸಿದೆ.

ಹೌದು, ಹಾನರ್ ಇದೀಗ ಹಾನರ್‌ 90 GT ಸ್ಮಾರ್ಟ್‌ಫೋನ್‌ (Honor 90 GT smartphone) ಜೊತೆಗೆ ಬಜೆಟ್‌ ಬೆಲೆಯ ಹಾನರ್‌ ಪ್ಯಾಡ್‌ 9 (Honor Pad 9) ಅನ್ನು ಸಹ ಅನಾವರಣ ಮಾಡಿದೆ. ಈ ಡಿವೈಸ್‌ 12.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಸ್ನಾಪ್‌ಡ್ರಾಗನ್ 6 ಜನ್‌ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಟ್ಯಾಬ್ಲೆಟ್‌ ನ ಪ್ರಮುಖ ಫೀಚರ್ಸ್‌ ಏನು?, ಇದರ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

HONOR: ಹಾನರ್ ಪ್ಯಾಡ್‌ 9 ಅನಾವರಣ: 8 ಸ್ಪೀಕರ್‌, ಉತ್ತಮ ಕ್ಯಾಮೆರಾ..ಬೆಲೆ ಎಷ್ಟು?

ಹಾನರ್‌ ಪ್ಯಾಡ್‌ 9 ಡಿಸ್‌ಪ್ಲೇ ವಿವರ: ಈ ಹಾನರ್‌ ಪ್ಯಾಡ್‌ 9 12.1 ಇಂಚಿನ, 2.5K (WQXA) ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 88% ಸ್ಕ್ರೀನ್-ಟು-ಬಾಡಿ ಅನುಪಾತ ಮತ್ತು 500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಸೇರಿದಂತೆ ಅನೇಕ ಆಕರ್ಷಕ ಫೀಚರ್ಸ್‌ ಹೊಂದಿದೆ. ಅಂದರೆ ಕಣ್ಣನ್ನು ರಕ್ಷಿಸುವ ಮೃದುವಾದ ಬೆಳಕಿನ ಮ್ಯಾಟ್ ಲೇಯರ್‌ ಆಯ್ಕೆ ಇದೆ. ಇದರೊಂದಿಗೆ ಸಾಮಾನ್ಯ ಬೆಳಕು, ಸೂರ್ಯನ ಬೆಳಕು ಮತ್ತು ಇತರ ಬೆಳಕಿನ ಪ್ರಭಾವವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಜೊತೆಗೆ 2560 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದ್ದು, ಅತ್ಯುತ್ತಮ ವೀಕ್ಷಣೆ ಅನುಭವ ಸಿಗಲಿದೆ.

ಹಾನರ್‌ ಪ್ಯಾಡ್‌ 9 ಪ್ರೊಸೆಸರ್‌ ಮಾಹಿತಿ: ಈ ಟ್ಯಾಬ್‌ ಸ್ನಾಪ್‌ಡ್ರಾಗನ್ 6 ಜನ್‌ 1 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದೆ. ಹಾಗೆಯೇ ಆಂಡ್ರಾಯ್ಡ್ 13 ಆಧಾರಿತ ಮ್ಯಾಜಿಕ್‌ ಓಎಸ್‌ 7.2 ಅನ್ನು ರನ್ ಮಾಡಲಿದ್ದು, ಇದು ಸ್ಮಾರ್ಟ್ ಸಂಪರ್ಕ, ಸ್ಮಾರ್ಟ್ ಸೇವೆಗಳು, ಸುಗಮ ಕಾರ್ಯಕ್ಷಮತೆ, ಗೌಪ್ಯತೆ ಮತ್ತು ಉತ್ತಮ ಸುರಕ್ಷತೆಯನ್ನು ನೀಡುವ ಕೆಲಸ ಮಾಡುತ್ತದೆ. ಹಾಗೆಯೇ 8GB/12GB RAM ಹಾಗೂ 128GB/256GB/512GB ಸ್ಟೋರೇಜ್ ಆಯ್ಕೆಯಲ್ಲಿ ಈ ಡಿವೈಸ್‌ ಲಭ್ಯ ಇದೆ.

HONOR: ಹಾನರ್ ಪ್ಯಾಡ್‌ 9 ಅನಾವರಣ: 8 ಸ್ಪೀಕರ್‌, ಉತ್ತಮ ಕ್ಯಾಮೆರಾ..ಬೆಲೆ ಎಷ್ಟು?

ಹಾನರ್‌ ಪ್ಯಾಡ್‌ 9 ಕ್ಯಾಮೆರಾ ಮಾಹಿತಿ: ಮೀಟಿಂಗ್ ಹಾಗೂ ಕರೆ ಗಳಲ್ಲಿ ಭಾಗಿಯಾಗಲು ಈ ಡಿವೈಸ್‌ ಉತ್ತಮ ಆಯ್ಕೆಯಾಗಿದೆ. ಅದರಂತೆ f/2.0 ದ್ಯುತಿರಂಧ್ರದೊಂದಿಗೆ 13 ಮೆಗಾಪಿಕ್ಸೆಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿದೆ. ಈ ಮೂಲಕ ನೀವು 4K ವರೆಗೆ ವೀಡಿಯೊ ರೆಕಾರ್ಡಿಂಗ್ ಮಾಡಬಹುದಾಗಿದೆ. ಹಾಗೆಯೇ 8 ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮರಾ ಹೊಂದಿದ್ದು, ಇದರಲ್ಲೂ FHD ವಿಡಿಯೋ ರೆಸೆಹಿಡಿಯಬಹುದಾಗಿದೆ.

ಹಾನರ್‌ ಪ್ಯಾಡ್‌ 9 ಬ್ಯಾಟರಿ ಹಾಗೂ ಇತರೆ: ಈ ಪ್ಯಾಡ್ 9 ದೊಡ್ಡದಾದ, 8300mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 35W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದರೊಂದಿಗೆ ಟ್ಯಾಬ್ಲೆಟ್ ಮ್ಯಾಜಿಕ್ ಪೆನ್ಸಿಲ್ 3 ಅನ್ನು ಬೆಂಬಲಿಸಲಿದ್ದು, 8 ಸ್ಪೀಕರ್‌ಗಳು, ಡ್ಯುಯಲ್ ಮೈಕ್ರೊಫೋನ್‌ಗಳು, ವೈ-ಫೈ 802.11 ac (2.4GHz + 5GHz), ಬ್ಲೂಟೂತ್ ಆವೃತ್ತಿ 5.1, ಓಟಿಜಿ ಜೊತೆಗೆ ಯುಎಸ್‌ಬಿ ಟೈಪ್-ಸಿ ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್‌ ಪಡೆದುಕೊಂಡಿದೆ.

ಹಾನರ್‌ ಪ್ಯಾಡ್‌ 9 ಬೆಲೆ ಮತ್ತು ಲಭ್ಯತೆ: ಈ ಡಿವೈಸ್‌ ವಿವಿಧ ವೇರಿಯಂಟ್‌ ಆಯ್ಕೆಯಲ್ಲಿ ಇದೀಗ ಚೀನಾದಲ್ಲಿ ಮಾತ್ರ ಲಭ್ಯ ಇದೆ. ಅಂದರೆ ಹಾನರ್ ಪ್ಯಾಡ್ 9 8GB + 128GB ವೇರಿಯಂಟ್ಗೆ 1,599 ಯುವಾನ್ (ಅಂದಾಜು 18,610 ರೂ.ಗಳು) ಹಾಗೆಯೇ ಹಾನರ್ ಪ್ಯಾಡ್ 9 8GB + 256GB ವೇರಿಯಂಟ್‌ 1,799 ಯುವಾನ್ (ಭಾರತದಲ್ಲಿ ಅಂದಾಜು 20,940ರೂ.ಗಳು), ಹಾನರ್ ಪ್ಯಾಡ್ 9 12GB + 256GB ಗೆ 1,999 ಯುವಾನ್ (ಅಂದಾಜು 23,270ರೂ.ಗಳು) ಬೆಲೆ ಹೊಂದಿದೆ.

HONOR: ಹಾನರ್ ಪ್ಯಾಡ್‌ 9 ಅನಾವರಣ: 8 ಸ್ಪೀಕರ್‌, ಉತ್ತಮ ಕ್ಯಾಮೆರಾ..ಬೆಲೆ ಎಷ್ಟು?

ಹಾನರ್ ಪ್ಯಾಡ್ 9 ಡಿವೈಸ್‌ನ 12GB + 512GB ಗೆ 2,199 ಯುವಾನ್ (ಅಂದಾಜು 26,280 ರೂ.ಗಳು), ಹಾನರ್ ಪ್ಯಾಡ್ 9 ಸಾಫ್ಟ್ ಲೈಟ್ ಆವೃತ್ತಿಗೆ 1,899 ಯುವಾನ್ (ಅಂದಾಜು 22,695 ರೂ.ಗಳು) ಹಾಗೂ ಹಾನರ್ ಪ್ಯಾಡ್ 9 ಸಾಫ್ಟ್ ಲೈಟ್ ಆವೃತ್ತಿಗೆ 2,099 ಯುವಾನ್ (ಅಂದಾಜು 25,080ರೂ.ಗಳು) ಬೆಲೆ ನಿಗದಿ ಮಾಡಲಾಗಿದೆ. ಈ ಪ್ಯಾಡ್‌ ಬಿಳಿ, ನೀಲಿ ಮತ್ತು ಬೂದು ಬಣ್ಣಗಳಲ್ಲಿ ಕಂಡುಬರುತ್ತದೆ.

Best Mobiles in India

English summary
Honor unveiled the budget-priced Honor Pad 9 along with the Honor 90 GT smartphone. The device has a 12.1-inch display and is powered by a Snapdragon 6 Gen 1 processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+