HONOR ನಿಂದ ಮಕ್ಕಳಿಗಾಗಿಯೇ ಹೊಸ ಟ್ಯಾಬ್ ಲಾಂಚ್; ಬೆಲೆ ಎಷ್ಟು ಗೊತ್ತಾ?
ಜನಪ್ರಿಯ ಹಾನರ್ (HONOR) ಬ್ರ್ಯಾಂಡ್ ಈಗಾಗಲೇ ಭಿನ್ನ ಶ್ರೇಣಿಯ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಇದೀಗ ಭಾರತದಲ್ಲಿ ಹಾನರ್ ಸಂಸ್ಥೆಯು ನೂತನವಾಗಿ ಹಾನರ್ ಪ್ಯಾಡ್ X8a (HONOR Pad X8a) ನಡಾಲ್ ಕಿಡ್ಸ್ ಆವೃತ್ತಿಯ ಟ್ಯಾಬ್ ಅನ್ನು ಬಿಡುಗಡೆ ಮಾಡಿದೆ. ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಈ ಟ್ಯಾಬ್ಲೆಟ್ ಆಘಾತ ನಿರೋಧಕ ವಿನ್ಯಾಸವನ್ನು ಹೊಂದಿದ್ದು, ಸಿಲಿಕೋನ್ ಕೇಸ್ ರಚನೆ ಪಡೆದಿದೆ.
ಹೌದು, ಹಾನರ್ ಮೊಬೈಲ್ ಸಂಸ್ಥೆಯು ಹೊಸದಾಗಿ ಹಾನರ್ ಪ್ಯಾಡ್ X8a ನಡಾಲ್ ಕಿಡ್ಸ್ (HONOR Pad X8a) ಆವೃತ್ತಿಯ ಟ್ಯಾಬ್ ಅನ್ನು ಲಾಂಚ್ ಮಾಡಿದೆ. ಈ ಡಿವೈಸ್ ಟ್ಯಾಬ್ಲೆಟ್ ಡೂಡ್ಲಿಂಗ್, ಬರವಣಿಗೆ ಮತ್ತು ಕಲಿಕೆಗಾಗಿ ಮಕ್ಕಳ ಸ್ನೇಹಿ ಪೆನ್‌ನೊಂದಿಗೆ ಬರುತ್ತದೆ. ಅಲ್ಲದೇ ಇದು ಸ್ಲಿಮ್ 7.25mm ಮೆಟಲ್ ಯುನಿಬಾಡಿಯನ್ನು ಹೊಂದಿದೆ.

ಹಾಗೆಯೇ ಈ ಮಕ್ಕಳ ಟ್ಯಾಬ್ ಬ್ಲೂ ಲೈಟ್ ಎಕ್ಸ್‌ಪೋಜರ್ ಕಡಿಮೆ ಮಾಡಲು ಐ ಕಂಫರ್ಟ್ ಮೋಡ್ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಹಾಗೆಯೇ ಇದು ಮಕ್ಕಳಿಗೆ ಪೂರಕವಾಗಿ ಸ್ಕೆಚಿಂಗ್ ಮೋಡ್, ಹ್ಯಾಂಡಲ್ ಮೋಡ್ ಮತ್ತು ವೀಡಿಯೊ ವಾಚಿಂಗ್ ಮೋಡ್ ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗಾದರೇ ಹಾನರ್ ಪ್ಯಾಡ್ X8a ನಡಾಲ್ ಕಿಡ್ಸ್ ಡಿವೈಸ್‌ನ ಇತರೆ ಫೀಚರ್ಸ್ ಹಾಗೂ ಬೆಲೆ ಎಷ್ಟು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ಹಾನರ್ ಪ್ಯಾಡ್ X8a ನಡಾಲ್ ಕಿಡ್ಸ್ - ಫೀಚರ್ಸ್
ಹಾನರ್ ಪ್ಯಾಡ್ X8a ನಡಾಲ್ ಕಿಡ್ಸ್ (HONOR Pad X8a) ಆವೃತ್ತಿಯು ತೆಳ್ಳನೆಯ 7.25mm ಮೆಟಲ್ ಯುನಿಬಾಡಿ ರಚನೆ ಅನ್ನು ಹೊಂದಿದ್ದು, ಇದರ ಜೊತೆಗೆ ಇದು 11 ಇಂಚಿನ 90Hz ಐ ಕಂಫರ್ಟ್ ಡಿಸ್‌ಪ್ಲೇ ಸೌಲಭ್ಯವನ್ನು ಪಡೆದುಕೊಂಡಿದೆ. ಹಾಗೆಯೇ ತಲ್ಲೀನಗೊಳಿಸುವ ಅನುಭವಕ್ಕಾಗಿ ಕ್ವಾಡ್-ಸರೌಂಡ್ ಸ್ಪೀಕರ್‌ಗಳನ್ನು ಸೌಲಭ್ಯವನ್ನು ಸಹ ಪಡೆದಿದೆ. ಈ ಡಿವೈಸ್‌ನ ಇತರೆ ಮಕ್ಕಳ ಸ್ನೇಹಿ ಫೀಚರ್ಸ್‌ಗಳು ಕುಟುಂಬಗಳಿಗೆ ಸೂಕ್ತವಾಗಿದೆ.
ಇನ್ನು ಈ ಟ್ಯಾಬ್ ಡಿವೈಸ್ RAM Turbo X ನೊಂದಿಗೆ ಸ್ನ್ಯಾಪ್‌ಡ್ರಾಗನ್ 680 (Snapdragon 680) ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಮಲ್ಟಿಟಾಸ್ಕ್ ಕೆಲಸಗಳಿಗೆ ಹಾಗೂ ಮಲ್ಟಿ ವಿಂಡೋ ಬಳಕೆಯನ್ನು ಇದು ಸಪೋರ್ಟ್ ಮಾಡುತ್ತದೆ. ಇನ್ನು ಈ ಸಾಧನವು 64GB/128GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ.
ಹಾಗೆಯೇ ಹಾನರ್ ಪ್ಯಾಡ್ X8a ನಡಾಲ್ ಕಿಡ್ಸ್ ಟ್ಯಾಬ್ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಹಿಂಭಾಗದಲ್ಲಿ 5 ಮೆಗಾ ಪಿಕ್ಸಲ್ ಸೆನ್ಸಾರ್‌ನ (f/2.2 AF) ಕ್ಯಾಮೆರಾ ಪಡೆದಿದೆ. ಇನ್ನು ಮುಂಭಾಗದಲ್ಲಿ 5 ಮೆಗಾ ಪಿಕ್ಸಲ್ ಸೆನ್ಸಾರ್‌ನ (f/2.2 FF) ಕ್ಯಾಮೆರಾ ರಚನೆ ಅನ್ನು ಇದು ಒಳಗೊಂಡಿದೆ.
ಹಾನರ್ ಪ್ಯಾಡ್ X8a ನಡಾಲ್ ಕಿಡ್ಸ್ 8300mAh ಸಾಮರ್ಥ್ಯದ ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ. ಇದು 56 ದಿನಗಳ ಸ್ಟ್ಯಾಂಡ್‌ಬೈ ಟೈಮ್ ಅನ್ನು ಒದಗಿಸಲಿದ್ದು, ಹಾಗೆಯೇ 14 ಗಂಟೆಗಳ ಕಾರ್ಟೂನ್ ಪ್ಲೇಬ್ಯಾಕ್ ವೀಕ್ಷೆಣೆಗೆ ಸಪೋರ್ಟ್ ಮಾಡಲಿದೆ. ಇನ್ನು ಇದು MagicOS 8.0 ಜೊತೆಗೆ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಕೂಡಾ ಪಡೆದಿದೆ. ಇದು Wi-Fi 802.11 a/b/g/n/ac ಬ್ಲೂಟೂತ್ v5.1 ಆಯ್ಕೆಗಳನ್ನು ಪಡೆದಿದೆ.
ಬೆಲೆ ಹಾಗೂ ಲಭ್ಯತೆ
ಹಾನರ್ ಪ್ಯಾಡ್ X8a ನಡಾಲ್ ಕಿಡ್ಸ್ ಆವೃತ್ತಿಯು 13,999ರೂ. ಗಳ ಪ್ರೈಟ್‌ಟ್ಯಾಗ್ ಅನ್ನು ಪಡೆದಿದೆ. ಆದರೆ ಸಿಮೀತ ಅವಧಿಗೆ 10,999ರೂ. ಗಳಿಗೆ ಲಭ್ಯ ಇರುತ್ತದೆ.


Click it and Unblock the Notifications








