ಬಜೆಟ್‌ ಬೆಲೆಯಲ್ಲಿ 'ಹಾನರ್ ಪ್ಲೇ 8' ಬಿಡುಗಡೆ!

|

ಚೀನಾದ ಮೂಲದ ಹುವಾವೆ ಕಂಪನಿಯ ಸಬ್‌ಬ್ರ್ಯಾಂಡ್‌ 'ಹಾನರ್‌' ಈಗಾಗಲೇ ತನ್ನ ಅತ್ಯುತ್ತಮ ಫೀಚರ್ಸ್‌ ಸ್ಮಾರ್ಟ್‌ಫೋನ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಆದ್ರೆ ಇದೀಗ ಕಂಪನಿಯು ಅಲ್ಟ್ರಾ ಬಜೆಟ್‌ ಸ್ಮಾರ್ಟ್‌ಫೋನ್‌ ಒಂದನ್ನು ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ಇತರೆ ಬಜೆಟ್‌ ಪ್ರೈಸ್‌ಟ್ಯಾಗ್‌ ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗ ಟಾಂಗ್ ನೀಡಿದೆ. ಈ ಮೂಲಕ ಮತ್ತೆ ಮೊಬೈಲ್ ಮಾರುಕಟ್ಟೆಯಲ್ಲಿ ಅಬ್ಬರಿಸಲು ಸಿದ್ಧವಾಗಿದೆ.

ಬಜೆಟ್‌ ಬೆಲೆಯಲ್ಲಿ 'ಹಾನರ್ ಪ್ಲೇ 8' ಬಿಡುಗಡೆ!

ಹೌದು, ಹಾನರ್‌ ಸಂಸ್ಥೆಯು ಇದೇ ಜುಲೈ 09ರಂದು (ನೆನ್ನೆ) ಚೀನಾದಲ್ಲಿ 'ಹಾನರ್‌ ಪ್ಲೇ 8' ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದ್ದು, ಈ ಸ್ಮಾರ್ಟ್‌ಫೋನ್‌ ಬಜೆಟ್‌ ಬೆಲೆಯನ್ನು ಹೊಂದಿದೆ. ಹಾಗೆಯೇ ಕ್ವಾಡ್‌ ಕೋರ್‌ 2.0 GHz ಮೀಡಿಯಾ ಟೆಕ್‌ ಹಿಲಿಯೊ A22 ಪ್ರೊಸೆಸರ್‌ ಶಕ್ತಿಯನ್ನು ಒದಗಿಸಲಾಗಿದ್ದು, ಇದರೊಂದಿಗೆ ಆಂಡ್ರಾಯ್ಡ್‌ 9.0 ಪೈ ಓಎಸ್‌ನ ಬೆಂಬಲವನ್ನು ಸಹ ನೀಡಲಾಗಿದೆ.

ಬಜೆಟ್‌ ಬೆಲೆಯಲ್ಲಿ 'ಹಾನರ್ ಪ್ಲೇ 8' ಬಿಡುಗಡೆ!

ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೌಲಭ್ಯವನ್ನು ಹೊಂದಿರುವ ಜೊತೆಗೆ 3020 mAh ಸಾಮರ್ಥ್ಯದ ಬ್ಯಾಟರಿ ಪವರ್‌ ಪಡೆದುಕೊಂಡಿದೆ. 32GB ಸ್ಟೋರೇಜ್‌ ಸೌಲಭ್ಯವನ್ನು ಒಳಗೊಂಡಿದ್ದು, ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯವಾಗಿ 512 GB ವರೆಗೂ ವಿಸ್ತರಿಸಿಕೊಳ್ಳುವ ಅವಕಾಶವನ್ನು ಪಡೆದಿದೆ. ಹಾಗಾದರೇ ಹಾನರ್‌ ಪ್ಲೇ 8 ಸ್ಮಾರ್ಟ್‌ಫೋನ್‌ ಇತರೆ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಓದಿರಿ : ಗೂಗಲ್ ಮತ್ತು ಅಮೆಜಾನ್ ದೋಸ್ತಿ!.ಟೆಕ್‌ ಮೈತ್ರಿಯ ಹೊಸ ಸೇವೆ ಏನು ಗೊತ್ತಾ?ಓದಿರಿ : ಗೂಗಲ್ ಮತ್ತು ಅಮೆಜಾನ್ ದೋಸ್ತಿ!.ಟೆಕ್‌ ಮೈತ್ರಿಯ ಹೊಸ ಸೇವೆ ಏನು ಗೊತ್ತಾ?

ಡಿಸ್‌ಪ್ಲೇ ಮತ್ತು ಡಿಸೈನ್‌

ಡಿಸ್‌ಪ್ಲೇ ಮತ್ತು ಡಿಸೈನ್‌

ಹಾನರ್‌ ಪ್ಲೇ 8 ಸ್ಮಾರ್ಟ್‌ಫೋನ್‌ 1520 x 720 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 5.71 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 294 ppi ಆಗಿದೆ. ಡಿಸ್‌ಪ್ಲೇಯು ತೆಳುವಾದ ಬೆಜಲ್ ಮತ್ತು ವಾಟರ್‌ಡ್ರಾಪ್‌ ನಾಚ್‌ ಡಿಸೈನ್‌ ಹೊಂದಿದ್ದು, ಹಾಗೆಯೇ ಡಿಸ್‌ಪ್ಲೇಯ ಅನುಪಾತವು 19:9ರಷ್ಟಿದೆ.

ಪ್ರೊಸೆಸರ್‌ ಶಕ್ತಿ

ಪ್ರೊಸೆಸರ್‌ ಶಕ್ತಿ

ಹಾನರ್‌ ಪ್ಲೇ 8 ಸ್ಮಾರ್ಟ್‌ಫೋನ್‌ ಕ್ವಾಡ್‌ ಕೋರ್‌ 2.0 GHz ಮೀಡಿಯಾ ಟೆಕ್‌ ಹಿಲಿಯೊ A22 ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್‌ 9.0 ಪೈ ಓಎಸ್‌ನ ಬೆಂಬಲ ಸಹ ಹೊಂದಿದೆ. 2GB RAM ಸಾಮರ್ಥ್ಯವನ್ನು ಒಳಗೊಂಡಿದ್ದು, 32GB ಆಂತರಿಕ ಸಂಗ್ರಹದ ಸ್ಥಳಾವಕಾಶವನ್ನು ಪಡೆದುಕೊಂಡಿದೆ. ಬಾಹ್ಯ ಮೆಮೊರಿಯನ್ನು 512 GB ವರೆಗೂ ಹೆಚ್ಚಿಸಬಹುದು.

ಓದಿರಿ : ಅಗ್ಗದ ಬೆಲೆಯ 'ಇನ್‌ಫಿನಿಕ್ಸ್‌ ಹಾಟ್‌ 7' ಫೋನ್‌ ಸೇಲ್ ಡೇಟ್‌ ಫಿಕ್ಸ್‌!ಓದಿರಿ : ಅಗ್ಗದ ಬೆಲೆಯ 'ಇನ್‌ಫಿನಿಕ್ಸ್‌ ಹಾಟ್‌ 7' ಫೋನ್‌ ಸೇಲ್ ಡೇಟ್‌ ಫಿಕ್ಸ್‌!

ಡ್ಯುಯಲ್‌ ಕ್ಯಾಮೆರಾ

ಡ್ಯುಯಲ್‌ ಕ್ಯಾಮೆರಾ

ಹಾನರ್‌ ಪ್ಲೇ 8 ಸ್ಮಾರ್ಟ್‌ಫೋನ್‌ ಎರಡು ಕ್ಯಾಮೆರಾ ಆಯ್ಕೆಗಳನ್ನು ಪಡೆದುಕೊಂಡಿದ್ದು, ಹಿಂಬದಿಯ ಪ್ರಾಥಮಿಕ ಕ್ಯಾಮೆರಾವು 13ಎಂಪಿ ಸಾಮರ್ಥ್ಯದಲ್ಲಿದ್ದು, f/1.8 ಅಪರ್ಚರ್ ಹೊಂದಿದೆ. ಇದರೊಂದಿಗೆ ಸೆಲ್ಫಿಗಾಗಿ ಮುಂಬದಿಯಲ್ಲಿ 5ಎಂಪಿ ಕ್ಯಾಮೆರಾ ನೀಡಲಾಗಿದ್ದು, f/2.2 ಅಪರ್ಚರ್ ಸಾಮರ್ಥ್ಯದಲ್ಲಿದೆ. ಎಲ್‌ಇಡಿ ಫ್ಲ್ಯಾಶ್‌ ಮತ್ತು ಕ್ಯಾಮೆರಾದಲ್ಲಿ ಹಲವು ಎಡಿಟಿಂಗ್ ಆಯ್ಕೆಗಳನ್ನು ಒಳಗೊಂಡಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

3020 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ ಹಾನರ್‌ ಪ್ಲೇ 8 ಸ್ಮಾರ್ಟ್‌ಫೋನ್‌ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿಲ್ಲ. ಆದರೆ 10 W ಸಾಮರ್ಥ್ಯದ ಚಾರ್ಜಿಂಗ್ ಆಯ್ಕೆಯನ್ನು ಹೊಂದಿದೆ. ಹಾಗೆಯೇ ವೈ-ಫೈ, ಬ್ಲೂಟೂತ್ 4.2, 3.5 ಎಂಎಂ ಜ್ಯಾಕ್, ಜಿಪಿಎಸ್, ಡ್ಯುಯಲ್ 4 ಜಿ ಸೇರಿದಂತೆ ಮೈಕ್ರೋ ಯುಎಸ್‌ಬಿ ಪೋರ್ಟ್ ಆಯ್ಕೆಗಳನ್ನು ಪಡೆದುಕೊಂಡಿದೆ.

ಓದಿರಿ : ಗ್ರಾಹಕರ ನಿರೀಕ್ಷೆ ಹೆಚ್ಚಿಸಿದ 'ಅಮೆಜಾನ್ ಪ್ರೈಮ್‌ ಡೇ'!..ಈ ಫೋನ್‌ಗಳಿಗೆ ಆಫರ್!ಓದಿರಿ : ಗ್ರಾಹಕರ ನಿರೀಕ್ಷೆ ಹೆಚ್ಚಿಸಿದ 'ಅಮೆಜಾನ್ ಪ್ರೈಮ್‌ ಡೇ'!..ಈ ಫೋನ್‌ಗಳಿಗೆ ಆಫರ್!

ಲಭ್ಯತೆ ಮತ್ತು ಬೆಲೆ

ಲಭ್ಯತೆ ಮತ್ತು ಬೆಲೆ

ಚೀನಾದಲ್ಲಿ ಲಾಂಚ್‌ ಆಗಿರುವ ಹಾನರ್‌ ಪ್ಲೇ 8 ಸ್ಮಾರ್ಟ್‌ಫೋನ್‌ 2 GB + 32 GB ಸ್ಟೋರೇಜ್‌ನ ಒಂದೇ ವೇರಿಯಂಟ್‌ ಆಯ್ಕೆ ಹೊಂದಿದೆ. ಬ್ಲ್ಯಾಕ್ ಮತ್ತು ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ಫೋನ್‌ ಬೆಲೆಯು ಚೀನಾ ಮಾರುಕಟ್ಟೆಯಲ್ಲಿ CNY 599 (5990ರೂ.) ಆಗಿದೆ. ಶೀಘ್ರದಲ್ಲಿಯೇ ಈ ಫೋನ್‌ ಭಾರತೀಯ ಮಾರುಕಟ್ಟೆಗೂ ಎಂಟ್ರಿ ಕೊಡಲಿದೆ ಎನ್ನಲಾಗಿದೆ.

ಓದಿರಿ : BSNLನಿಂದ ಬಂಪರ್ ಕೊಡುಗೆ : ಪ್ರತಿದಿನ 2.2GB ಡೇಟಾ ಉಚಿತ!ಓದಿರಿ : BSNLನಿಂದ ಬಂಪರ್ ಕೊಡುಗೆ : ಪ್ರತಿದಿನ 2.2GB ಡೇಟಾ ಉಚಿತ!

Best Mobiles in India

English summary
Huawei’s sub-brand, Honor has launched the Honor Play 8 smartphone which is targeted towards the budget segment. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X