Home
ಸುದ್ದಿಜಾಲ

Honor: ಹಾನರ್‌ X7b 5G ಸ್ಮಾರ್ಟ್‌ಫೋನ್‌ ಲಾಂಚ್‌! 6,000mAh ಬ್ಯಾಟರಿ... ಬೆಲೆ ಎಷ್ಟು?

ಹಾನರ್‌ ಫೋನ್‌ಗಳು (Honor phones) ಇತ್ತೀಚಿನ ದಿನಗಳಲ್ಲಿ ಉತ್ತಮ ಸ್ಥಾನ ಪಡೆಯುತ್ತಿವೆ. ಅದರಲ್ಲೂ ಈ ಫೋನ್‌ಗಳಲ್ಲಿನ ವಿಶೇಷ ಫೀಚರ್ಸ್‌ ಆಯ್ಕೆ ಗ್ರಾಹಕರನ್ನು ಸೆಳೆಯದೇ ಇರದು. ಅದರಂತೆ ಈಗ ಹಾನರ್‌ X7b 5G ಸ್ಮಾರ್ಟ್‌ಫೋನ್‌ (Honor X7b 5G smartphone) ಅನ್ನು ಅನಾವರಣ ಮಾಡಲಾಗಿದೆ.

ಹೌದು, ಡಿಸೆಂಬರ್‌ನಲ್ಲಿ ಹಾನರ್‌ ಜಾಗತಿಕ ಮಾರುಕಟ್ಟೆಗೆ ಹಾನರ್‌ X7b 4G (Honor X7b 4G) ಅನ್ನು ಲಾಂಚ್ ಮಾಡಿತ್ತು. ಆದರೆ ಈಗ ಸೈಲೆಂಟ್‌ ಆಗಿ ಜಾಗತಿಕವಾಗಿ 5G ಆವೃತ್ತಿಯನ್ನು ಲಾಂಚ್‌ ಮಾಡಿದೆ. ಇನ್ನು 4G ಆವೃತ್ತಿಯು ಸ್ನಾಪ್‌ಡ್ರಾಗನ್ 680 ಪ್ರೊಸೆಸರ್‌ ಬಲ ಹೊಂದಿದ್ದರೆ ಹಾನರ್‌ X7b 5G ಸ್ಮಾರ್ಟ್‌ಫೋನ್ ಡೈಮೆನ್ಸಿಟಿ 6020 ಪ್ರೊಸೆಸರ್‌ ಬಲ ಪಡೆದುಕೊಂಡಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ಇಲ್ಲಿದೆ ನೋಡಿ.

ಹಾನರ್‌ X7b 5G ಸ್ಮಾರ್ಟ್‌ಫೋನ್‌ ಲಾಂಚ್‌! 6,000mAh ಬ್ಯಾಟರಿ... ಬೆಲೆ ಎಷ್ಟು?

ಹಾನರ್‌ X7b 5G ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 2412 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.8 ಇಂಚಿನ FHD+ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಅಲ್ಲದೆ ಈ ಫೋನ್ 90Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದಿದ್ದು, ಉತ್ತಮ ವೀಕ್ಷಣೆ ಅನುಭವ ನೀಡಲಿದೆ.

ಹಾನರ್‌ X7b 5G ಸ್ಮಾರ್ಟ್‌ಫೋನ್‌ ಪ್ರೊಸೆಸರ್ ವಿವರ: ಈ ಫೋನ್ ಮ್ಯಾಜಿಕ್‌ ಓಎಸ್‌ 7.2 ಆಧಾರಿತ ಆಂಡ್ರಾಯ್ಡ್‌ 13 ಅನ್ನು ರನ್‌ ಮಾಡಲಿದೆ. ಇದರ ಜೊತೆಗೆ ಡೈಮೆನ್ಸಿಟಿ 6020 ಪ್ರೊಸೆಸರ್‌ ಬಲದೊಂದಿಗೆ 8 GB RAM, 256 GB ಇಂಟರ್‌ಸ್ಟೋರೇಜ್‌ ಆಯ್ಕೆಯನ್ನು ಪಡೆದುಕೊಂಡಿದೆ. ಹಾಗೆಯೇ ಸ್ಟೋರೇಜ್‌ ಅನ್ನು ಎಸ್‌ಡಿ ಕಾರ್ಡ್‌ ಬಳಕೆ ಮಾಡಿಕೊಂಡು ಹೆಚ್ಚಿಗೆ ಮಾಡಿಕೊಳ್ಳಬಹುದು.

ಹಾನರ್‌ X7b 5G ಸ್ಮಾರ್ಟ್‌ಫೋನ್‌ ಲಾಂಚ್‌! 6,000mAh ಬ್ಯಾಟರಿ... ಬೆಲೆ ಎಷ್ಟು?

ಹಾನರ್‌ X7b 5G ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಇದು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದ್ದು, ಡ್ಯುಯಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಮೂಲಕ ಉತ್ತಮ ಫೋಟೋಗ್ರಫಿಗೆ ಸಹಕಾರಿಯಾಗಿದೆ. ಅಂದರೆ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ ಮ್ಯಾಕ್ರೋ ಶಾಟ್‌ಗಳಿಗಾಗಿ 2 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆಯನ್ನು ನೀಡಲಾಗಿದೆ.

ಹಾನರ್‌ X7b 5G ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 35W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಲಭ್ಯ ಇದೆ. ಉಳಿದಂತೆ ಈ ಫೋನ್ ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಯುಎಸ್‌ಬಿ ಟೈಪ್‌-ಸಿ ಪೋರ್ಟ್, 3.5mm ಆಡಿಯೋ ಜ್ಯಾಕ್, ಡ್ಯುಯಲ್ ಸ್ಪೀಕರ್‌, ವೈ-ಫೈ 802.11ac, ಮತ್ತು ಬ್ಲೂಟೂತ್ ಆವೃತ್ತಿ 5.1 ನಂತಹ ಇತರ ಫೀಚರ್ಸ್‌ ಅನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

ಹಾನರ್‌ X7b 5G ಸ್ಮಾರ್ಟ್‌ಫೋನ್‌ ಬೆಲೆ ಹಾಗೂ ಲಭ್ಯತೆ: ಈ ಫೋನ್ ಯಾವಾಗ ಲಭ್ಯವಾಗಲಿದೆ ಅನ್ನೋ ಮಾಹಿತಿಯನ್ನು ಹಾನರ್‌ ಈವರೆಗೂ ಖಚಿತಪಡಿಸಿಲ್ಲ. ಅದಾಗ್ಯೂ ಇದು ಮಿಡ್‌ನೈಟ್ ಬ್ಲ್ಯಾಕ್, ಕ್ರಿಸ್ಟಲ್ ಸಿಲ್ವರ್ ಮತ್ತು ಎಮರಾಲ್ಡ್ ಗ್ರೀನ್‌ನಂತಹ ಮೂರು ಬಣ್ಣದ ಆಯ್ಕೆಯಲ್ಲಿ ಲಭ್ಯ ಇರಲಿದೆ ಎಂದು ದೃಢಪಡಿಸಲಾಗಿದೆ. ಬೆಲೆ ಹಾಗೂ ಯಾವಾಗ ಈ ಫೋನ್ ಲಭ್ಯ ಇರಲಿದೆ ಎನ್ನೋ ಮಾಹಿತಿಯಾಗಿ ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.

ಹಾನರ್‌ X7b 5G ಸ್ಮಾರ್ಟ್‌ಫೋನ್‌ ಲಾಂಚ್‌! 6,000mAh ಬ್ಯಾಟರಿ... ಬೆಲೆ ಎಷ್ಟು?

ಇನ್ನು ಈ ಹಾನರ್‌ X7b 5G ಸ್ಮಾರ್ಟ್‌ಫೋನ್‌ ಹಾನರ್ 90 ಸ್ಮಾರ್ಟ್‌ಫೋನ್‌ನಂತೆಯೇ (Honor 90 smartphone) ಇದೆ. ಈ ಫೋನ್‌ ಕೆಲವು ದಿನಗಳ ಹಿಂದೆ ಫ್ರಾನ್ಸ್‌ನಲ್ಲಿ €249 ಬೆಲೆಯೊಂದಿಗೆ ಅಧಿಕೃತವಾಗಿದೆ. ಲಾಂಚ್‌ ಆಗಿದೆ. ಈ ಫೋನ್‌ 5,330mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 4GB RAM, 128 GB ಇಂಟರ್‌ ಸ್ಟೋರೇಜ್‌ ನಲ್ಲಿ ಕಾಣಿಸಿಕೊಂಡಿದೆ. ಅಲ್ಲದೆ ಈ ಫೋನ್ ಮತ್ತು ಕಪ್ಪು ಮತ್ತು ಹಸಿರು ಬಣ್ಣದ ಆಯ್ಕೆಯಲ್ಲಿ ಲಭ್ಯ ಇದೆ.

Best Mobiles in India

English summary
Honor launched the Honor X7b 4G in the global market in december . But now it has silently launched Honor X7b 5G version globally.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+