Home
ಸುದ್ದಿಜಾಲ

ಹಾನರ್‌ X9b ಫೋನಿನಲ್ಲಿವೆ ಅಚ್ಚರಿಯ ಫೀಚರ್ಸ್‌!..ಬಿದ್ದರೂ ಡಿಸ್‌ಪ್ಲೇ ಒಡೆಯುವ ಚಾನ್ಸ್‌ ಕಡಿಮೆ!

ಹಾನರ್‌ ಮೊಬೈಲ್‌ ಬ್ರ್ಯಾಂಡ್‌ ಈಗಾಗಲೇ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಪಡೆದಿದೆ. ಸಂಸ್ಥೆಯು ನೂತನವಾಗಿ ಹಾನರ್‌ X9b (HONOR X9b) ಸ್ಮಾರ್ಟ್‌ಫೋನ್‌ ಪರಿಚಯಿಸಲು ಸಜ್ಜಾಗಿದೆ. ಈ ಫೋನ್ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು, ಇದು ಅಲ್ಟ್ರಾ-ಬೌನ್ಸ್ 360 ಡಿಗ್ರೀ ಆಂಟಿ-ಡ್ರಾಪ್ ಪ್ರತಿರೋಧ ಹಾಗೂ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವುದು ಬಹುತೇಕ ಖಚಿತ ಆಗಿದೆ.

ಹೌದು, ಹಾನರ್‌ ಸಂಸ್ಥೆಯ ಹಾನರ್‌ X9b ಫೋನ್‌ ಹಲವು ಅತ್ಯುತ್ತಮ ನೂತನ ಫೀಚರ್ಸ್‌ಗಳೊಂದಿಗೆ ಬಿಡುಗಡೆ ಅಣಿ ಆಗುತ್ತಿದೆ. ಇದು ಸ್ವಿಟ್ಜರ್ಲೆಂಡ್‌ನ SGS ನಿಂದ ಫೈವ್-ಸ್ಟಾರ್ ಒಟ್ಟಾರೆ ಡ್ರಾಪ್ ರೆಸಿಸ್ಟೆನ್ಸ್ ಪ್ರಮಾಣೀಕರಣ ಪಡೆದಿದ್ದು, ಇದು ಉದ್ಯಮದಲ್ಲಿ ಮೊದಲನೆಯದಾಗಿದೆ. ಹಾಗೆಯೇ ಸ್ಕ್ರೀನ್‌ನಿಂದ ಕಣ್ಣಿಗೆ ಹಾನಿ ತಪ್ಪಿಸಬಹುದಾದ ಕೆಲವು ಅನುಕೂಲಕರ ಆಯ್ಕೆಗಳನ್ನು ಈ ಫೋನ್‌ ಒಳಗೊಂಡಿರಲಿದೆ. ಹಾಗಾದರೇ ಹಾನರ್‌ X9b ಫೋನಿನ ಹೈಲೈಟ್‌ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಹಾನರ್‌ X9b ಫೋನಿನಲ್ಲಿವೆ ಅಚ್ಚರಿ ಫೀಚರ್ಸ್‌!.ಡಿಸ್‌ಪ್ಲೇ ಒಡೆಯುವ ಚಾನ್ಸ್‌ ಕಡಿಮೆ

ಬಲಿಷ್ಠ ಡಿಸ್‌ಪ್ಲೇ ರಚನೆ; ಡ್ರಾಪ್ ರೆಸಿಸ್ಟೆನ್ಸ್ ಸೌಲಭ್ಯ

ಹಾನರ್‌ X9b ಫೋನ್‌ ಅಲ್ಟ್ರಾ-ಬೌನ್ಸ್ ಆಂಟಿ-ಡ್ರಾಪ್ ಮಾದರಿಯ ಡಿಸ್‌ಪ್ಲೇ ರಚನೆ ಒಳಗೊಂಡಿರಲಿದ್ದು, ಉತ್ತಮ ಬಾಳಿಕೆ ಮತ್ತು ಸ್ಥಿರತೆಯನ್ನು ನೀಡಲಿದೆ. ಫೋನ್‌ನ ಎಲ್ಲಾ ಆರು ಮುಖಗಳು ಮತ್ತು ನಾಲ್ಕು ಕಾರ್ನರ್‌ 360 ಡಿಗ್ರಿ ರಕ್ಷಣೆಯನ್ನು ನೀಡುತ್ತದೆ. ಫೋನ್‌ ಆಕಸ್ಮಿಕವಾಗಿ ಸುಮಾರು 1.5 ಮೀಟರ್‌ಗಳ ಎತ್ತರದಿಂದ ಬಿದ್ದರೂ, ಫೋನಿಗೆ ರಕ್ಷಣೆ ನೀಡುವ ರಚನೆ ಈ ಫೋನ್ ಹೊಂದಿರಲಿದೆ.

ಹಾಗೆಯೇ ಈ ಫೋನ್‌ IP53 ನೀರು ಮತ್ತು ಧೂಳು ನಿರೋಧಕ ಪ್ರಮಾಣೀಕರಣದಿಂದ ಮೌಲ್ಯೀಕರಿಸಲಾಗಿದೆ. ಮೈಕ್ರೋ-ಲೆವೆಲ್ ಗ್ಯಾಪ್ ವಿನ್ಯಾಸವು ಗಾಳಿಚೀಲಗಳಾಗಿ ಕಾರ್ಯ ನಿರ್ವಹಿಸುತ್ತದೆ.

ಹಾನರ್‌ X9b ಫೋನಿನಲ್ಲಿವೆ ಅಚ್ಚರಿ ಫೀಚರ್ಸ್‌!.ಡಿಸ್‌ಪ್ಲೇ ಒಡೆಯುವ ಚಾನ್ಸ್‌ ಕಡಿಮೆ

ಕಣ್ಣಿನ ರಕ್ಷಣೆಗೂ ಅಧಿಕ ಆದ್ಯತೆ

ಹಾನರ್‌ ಸಂಸ್ಥೆಯ ಹಾನರ್‌ X9b 5G ಫೋನ್‌ ಬಳಕೆದಾರರ ಕಣ್ಣಿನ ಹಿತ ದೃಷ್ಠಿಯಿಂದಲೂ ಕೆಲವು ಪೂರಕ ಆಯ್ಕೆಗಳನ್ನು ಒಳಗೊಂಡಿದೆ. ಹಾನರ್‌ ಸಂಸ್ಥೆಯು ಹೊಸತನಕ್ಕೆ ಬದ್ಧತೆಯನ್ನು ನೀಡುತ್ತಿದ್ದು, ಮುಖ್ಯವಾಗಿ ಫೋನ್‌ ಸ್ಕ್ರೀನ್‌ನಿಂದ ಕಣ್ಣಿನ ಹಾನಿ ತಡೆಗೆ ತಂತ್ರಜ್ಞಾನಗಳ ಕ್ಷೇತ್ರದಲ್ಲಿ, ಸಾಕಷ್ಟು ಅಪ್‌ಡೇಟ್‌ ಫೀಚರ್ಸ್‌ ಅಳವಡಿಸಿಕೊಂಡಿದೆ. ಹಾನರ್‌ X9b 5G ಫೋನ್‌ ಅದಕ್ಕೆ ಸಾಕ್ಷಿ ಎಂಬಂತೆ ಆಗಿದೆ.

ಅತ್ಯುತ್ತಮ ಡಿಮ್ಮಿಂಗ್ ತಂತ್ರಜ್ಞಾನ ಸೌಲಭ್ಯ

ಹಾನರ್‌ X9b 5G ಫೋನ್‌ ಅತ್ಯುತ್ತಮ ಡಿಮ್ಮಿಂಗ್‌ ಸೌಲಭ್ಯದ ಆಯ್ಕೆ ಪಡೆದಿದ್ದು, ಇದು ಸ್ಕ್ರೀನ್‌ ಅನ್ನು 1920Hz PWM ಮಬ್ಬಾಗಿಸುವಿಕೆ ತಂತ್ರಜ್ಞಾನ ಹೊಂದಿದೆ. ಈ ವಿಧಾನದಿಂದ ಕಣ್ಣಿನ ಅಸ್ವಸ್ಥತೆಯ ಅಪಾಯವನ್ನು ಕಡಿಮೆ ಮಾಡಲು ಪೂರಕ ಆಗಿದೆ.

ಡೈನಾಮಿಕ್ ಡಿಮ್ಮಿಂಗ್ ಫೀಚರ್‌

ನೈಸರ್ಗಿಕ ಬೆಳಕಿನಲ್ಲಿ ಕಣ್ಣುಗಳು ಸಾಮಾನ್ಯವಾಗಿ ಆರಾಮದಾಯಕವೆಂದು ಹೇಳಲಾಗುತ್ತದೆ. ಈ ನಿಟ್ಟಿನಲ್ಲಿ ನೈಸರ್ಗಿಕ ಬೆಳಕಿನ ಲಯವನ್ನು ಹೋಲುವ ಡೈನಾಮಿಕ್ ಲೈಟ್ ಅನ್ನು ಹಾನರ್‌ X9b 5G ಫೋನ್‌ ಬಳಕೆ ಮಾಡುತ್ತದೆ. ಈ ನೂತನ ಫೀಚರ್‌ ಸಿಲಿಯರಿ ಸ್ನಾಯುಗಳಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ಕಣ್ಣಿನ ಆಯಾಸವನ್ನು 18% ರಷ್ಟು ಕಡಿಮೆ ಮಾಡಲು ಸಹಾಯ ಮಾಡಲಿದೆ ಎನ್ನಲಾಗಿದೆ.

ಸಿರ್ಕಾಡಿಯನ್ ನೈಟ್ ಡಿಸ್‌ಪ್ಲೇ ಫೀಚರ್‌

ಹಾನರ್‌ X9b 5G ಫೋನ್‌ ನೂತನ ಸಿರ್ಕಾಡಿಯನ್ ನೈಟ್ ಡಿಸ್‌ಪ್ಲೇ ತಂತ್ರಜ್ಞಾನ ಫೀಚರ್‌ ಸೌಲಭ್ಯ ಹೊಂದಿದೆ. ಈ ಆಯ್ಕೆಯು ರಾತ್ರಿಯ ಬಳಕೆಯ ಸಮಯದಲ್ಲಿ ಬಳಕೆದಾರರ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಫೀಚರ್‌ ಆಗಿದೆ. ಈ ಫೀಚರ್‌ ನೀಲಿ ಬೆಳಕನ್ನು (blue light) ಫಿಲ್ಟರ್ ಮಾಡಲಿದ್ದು, ಸ್ಕ್ರೀನ್‌ ಬಣ್ಣ ತಾಪಮಾನವನ್ನು ನೈಸರ್ಗಿಕವಾಗಿ ಪರಿವರ್ತಿಸಲಿದೆ.

ಅಲ್ಟ್ರಾ ಕ್ಲಿಯರ್ ಡಿಸ್‌ಪ್ಲೇ ಸೌಲಭ್ಯ

ಈ ಫೋನ್‌ 6.78 ಇಂಚಿನ ಡಿಸ್‌ಪ್ಲೇಯನ್ನು ಪಡೆದಿದ್ದು, ಇದು 120Hz ರಿಫ್ರೆಶ್ ರೇಟ್‌ ಒಳಗೊಂಡಿದೆ. ಅಲ್ಲದೇ ಡಿಸ್‌ಪ್ಲೇಯು 1.5K ರೆಸಲ್ಯೂಶನ್ (429PPI), 1.07 ಬಿಲಿಯನ್‌ ಕಲರ್ಸ್‌ ಮತ್ತು 100% DCI-P3 ಅನ್ನು ಸಪೋರ್ಟ್‌ ಸೌಲಭ್ಯ ಪಡೆದಿದೆ. ಡಿಸ್‌ಪ್ಲೇಯು ಹೆಚ್ಚು ಪ್ರಖರವಾಗಿದ್ದು, ಮೊಬೈಲ್ ಗೇಮಿಂಗ್‌ಗೆ ಸೂಕ್ತವಾಗಿದೆ. ಅಲ್ಲದೇ ಓದುವಿಕೆ, ಬ್ಯಾಟರಿ ಬಾಳಿಕೆಯನ್ನು ವೃದ್ಧಿಸುವಂತೆ ಕೂಡಾ ಸೆಟ್‌ ಮಾಡಬಹುದು.

Best Mobiles in India

English summary
HONOR X9b 5G A New Era for Smartphone Durability with Drop Resistance feature. other features details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+