ನಾಳೆ ಹಾನರ್ X9b 5G ಖರೀದಿಗೆ ಲಭ್ಯ!..ಬೆಲೆ ಎಷ್ಟು?..ಆಫರ್ ಏನಿದೆ?
ಜನಪ್ರಿಯ ಹಾನರ್ ಸಂಸ್ಥೆಯು ಭಾರತದಲ್ಲಿ ಹೊಸದಾಗಿ ಬಿಡುಗಡೆ ಮಾಡಿರುವ ಹಾನರ್ X9b 5G (Honor X9b 5G) ಸ್ಮಾರ್ಟ್‌ಫೋನ್ ಅದರ ಅಲ್ಟ್ರಾ-ಬೌನ್ಸ್, ಆಂಟಿ-ಡ್ರಾಪ್ 360-ಡಿಗ್ರಿ ಫೀಚರ್‌ನಿಂದ ಗಮನ ಸೆಳೆದಿದೆ. ಅಂದಹಾಗೆ ಈ ಫೋನ್ ನಾಳೆ (ಫೆ. 16) ಭಾರತದಲ್ಲಿ ಮಾರಾಟ ಪ್ರಾರಮಭ ಮಾಡಲಿದೆ.
ಹೌದು, ಹಾನರ್ X9b 5G ಸ್ಮಾರ್ಟ್‌ಫೋನ್ ಅಮೆಜಾನ್ ಇ ಕಾಮರ್ಸ್ ತಾಣದ ಮೂಲಕ ಭಾರತದಲ್ಲಿ ನಾಳೆ (ಫೆ. 16) ಸೇಲ್ ಶುರು ಮಾಡಲಿದೆ. ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 6 ಜೆನ್ 1 ಪ್ರೊಸೆಸರ್ ಸೌಲಭ್ಯ ಪಡೆದಿದ್ದು, ಇದರೊಂದಿಗೆ 108 ಮೆಗಾ ಪಿಕ್ಸಲ್ ಪ್ರಾಥಮಿಕ ಕ್ಯಾಮೆರಾ ರಚನೆ ಸಹ ಪಡೆದಿದೆ. ಇನ್ನು ಈ ಫೋನಿನ ಆರಂಭಿಕ ಬೆಲೆಯು 25,999ರೂ. ಗಳು ಆಗಿದ್ದು, ಆಯ್ದ ಬ್ಯಾಂಕ್‌ಗಳಿಂದ ಕೊಡುಗೆ ಸಹ ಲಭ್ಯ.

ಇನ್ನು ಈ ಫೋನ್ 5800mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಇದು 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಹಾಗಾದ್ರೆ ಹಾನರ್ X9b 5G ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.
ಹಾನರ್ X9b 5G ಫೋನಿನ ಫೀಚರ್ಸ್
ಹಾನರ್ X9b 5G ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 1200 x 2652 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇಯು 19.9:9 ರಚನೆಯ ಅನುಪಾತವನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್ ಅನ್ನು ಸಪೋರ್ಟ್ ಮಾಡುತ್ತದೆ.

ಹಾನರ್ X9b 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 Gen 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 13-ಆಧಾರಿತ MagicOS 7.2 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದು ಮೆಮೊರಿ ಕಾರ್ಡ್ ಬೆಂಬಲಿಸುವುದರ ಬಗ್ಗೆ ಮಾಹಿತಿಯಿಲ್ಲ.
ಹಾನರ್ X9b 5G ಮೊಬೈಲ್ ಮೂರು ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿ ಇದೆ. ದ್ವಿತೀಯ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಮತ್ತು ಡೆಪ್ತ್ ಸೆನ್ಸಾರ್ ಹಾಗೂ ತೃತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಮ್ಯಾಕ್ರೋ ಲೆನ್ಸ್ ಅನ್ನು ಪಡೆದುಕೊಂಡಿದೆ. ಅಲ್ಲದೇ 8x ವರೆಗೆ ಡಿಜಿಟಲ್ ಜೂಮ್ ಸೌಲಭ್ಯ ಪಡೆದಿದೆ. ಹಾಗೆಯೇ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಹಾನರ್ X9b 5G ಮೊಬೈಲ್ 5,800mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು 35W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಬ್ಲೂಟೂತ್, ವೈಫೈ, ಹಾಟ್‌ಸ್ಪಾಟ್, ಯುಎಸ್‌ಬಿ ಟೈಪ್ ಸಿ ಪೋರ್ಟ್ ಅನ್ನು ಪಡೆದುಕೊಂಡಿದೆ. ಇದಲ್ಲದೆ ಗ್ರಾವಿಟಿ ಸೆನ್ಸರ್, ಫಿಂಗರ್‌ಪ್ರಿಂಟ್ ಸೆನ್ಸರ್, ಗೈರೊಸ್ಕೋಪ್, ಕಂಪಾಸ್, ಆಂಬಿಯೆಂಟ್ ಲೈಟ್ ಸೆನ್ಸರ್ ಅನ್ನು ಪಡೆದಿದೆ.
ಹಾನರ್ X9b 5G ಮೊಬೈಲ್ 8GB + 256GB ಸ್ಟೋರೇಜ್ ಆಯ್ಕೆಯನ್ನು ಪಡೆದಿದ್ದು, ಇದರ ಬೆಲೆಯು 25,999ರೂ ಆಗಿದೆ. ಖರೀದಿದಾರರು ಈ ಫೋನ್ ಅನ್ನು ICICI ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸಿದರೆ 3,000ರೂ ರಿಯಾಯಿತಿ ಲಭ್ಯವಾಗಲಿದೆ. ಇನ್ನು ಇದು ಮಿಡ್‌ನೈಟ್ ಬ್ಲಾಕ್ ಮತ್ತು ಸನ್‌ರೈಸ್ ಆರೆಂಜ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ. ಈ ಸ್ಮಾರ್ಟ್‌ಫೋನ್ ಫೆಬ್ರವರಿ 16 ರಂದು ಮಧ್ಯಾಹ್ನ 12 ಗಂಟೆಗೆ (ಮಧ್ಯಾಹ್ನ) ಅಮೆಜಾನ್ ಮೂಲಕ ಮಾರಾಟ ಆರಂಭಿಸಲಿದೆ.


Click it and Unblock the Notifications








