108ಎಂಪಿ ಕ್ಯಾಮೆರಾ ಜೊತೆಗೆ ಕರ್ವ್ಡ್ ಡಿಸ್‌ಪ್ಲೇ ಇರುವ ಈ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!
ಅಮೆಜಾನ್ ತಾಣವು ಗ್ರಾಹಕರನ್ನು ಸೆಳೆಯಲು ಏನಾದರೊಂದು ಆಫರ್ ಲಭ್ಯ ಮಾಡುತ್ತಲೆ ಮುನ್ನಡೆದಿದೆ. ಮುಖ್ಯವಾಗಿ ಕೆಲವು ಆಯ್ದ ಮೊಬೈಲ್‌ಗಳಿಗೆ ಹೆಚ್ಚಿನ ರಿಯಾಯಿತಿ ಆಫರ್ ಲಭ್ಯ ಮಾಡಿ ಗಮನ ಸೆಳೆಯುತ್ತದೆ. ಇದೀಗ ಅಮೆಜಾನ್ ತಾಣವು ಇತ್ತೀಚಿನ ಹಾನರ್ X9b 5G ಸ್ಮಾರ್ಟ್‌ಫೋನಿಗೆ ಸಖತ್ ರಿಯಾಯಿತಿ ಪಡೆದಿದ್ದು, ಗ್ರಾಹಕರು ಸಂತಸ ಪಡುವಂತೆ ಮಾಡಿದೆ.
ಹೌದು, ಅಮೆಜಾನ್ ತಾಣದಲ್ಲಿ ಹಾನರ್ X9b 5G ಮೊಬೈಲ್ ಶೇ. 19% ರಷ್ಟು ನೇರ ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಈ ಫೋನ್ 8GB + 256GB ವೇರಿಯಂಟ್ 24,999ರೂ. ಗಳ ಕೊಡುಗೆಯ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಗ್ರಾಹಕರಿಗೆ ನೋ ಕಾಸ್ಟ್ ಇಎಮ್‌ಐ ಸೌಲಭ್ಯದ ಆಯ್ಕೆ ಮತ್ತು ಕೆಲವು ಆಯ್ದ ಬ್ಯಾಂಕ್‌ಗಳಿಂದ ರಿಯಾಯಿತಿ ಕೂಡಾ ಸಿಗಲಿವೆ.

ಈ ಮೊಬೈಲ್ 5,800mAh ಸಾಮರ್ಥ್ಯದ ಬ್ಯಾಟರಿ ಸಪೋರ್ಟ್ ಪಡೆದಿದ್ದು, 108 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಸಹ ಪಡೆದುಕೊಂಡಿದೆ. ಹಾಗೆಯೇ ಸ್ನಾಪ್‌ಡ್ರಾಗನ್ 6 ಜೆನ್ 1 SoC ಪ್ರೊಸೆಸರ್ ಪವರ್ ಸೌಲಭ್ಯ ಪಡೆದಿದೆ. ಹಾಗಾದರೇ ಹಾನರ್ X9b 5G ಮೊಬೈಲ್‌ನ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ಹಾನರ್ X9b 5G - ಫೀಚರ್ಸ್
ಹಾನರ್ ಸಂಸ್ಥೆಯ ಈ ಮೊಬೈಲ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇಯು 1200 x 2652 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇಯು 19.9:9 ರಚನೆಯ ಅನುಪಾತವನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್ ಅನ್ನು ಸಪೋರ್ಟ್ ಮಾಡಲಿದೆ.
ಹಾನರ್‌ನ ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 1 SoC ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸುತ್ತೆ. ಇದರ ಜೊತೆಗೆ ಈ ಫೋನ್ ಆಂಡ್ರಾಯ್ಡ್ 13 ಆಧಾರಿತ MagicOS 7.2 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಇದು 8GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ.
ಹಾನರ್ X9b 5G ಮೊಬೈಲ್ ತ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್‌ನಲ್ಲಿ ಇದೆ. ದ್ವಿತೀಯ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಮತ್ತು ಡೆಪ್ತ್ ಸೆನ್ಸಾರ್ ಹಾಗೂ ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಪಡೆದುಕೊಂಡಿದೆ. ಇದರೊಂದಿಗೆ ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.
ಹಾನರ್ X9b 5G ಮೊಬೈಲ್ 5,800mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 35W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲ ಇದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈಫೈ, ಹಾಟ್‌ಸ್ಪಾಟ್, ಯುಎಸ್‌ಬಿ ಟೈಪ್ ಸಿ ಪೋರ್ಟ್ ಅನ್ನು ಪಡೆದುಕೊಂಡಿದೆ. ಇದಲ್ಲದೆ ಗ್ರಾವಿಟಿ ಸೆನ್ಸರ್, ಫಿಂಗರ್‌ಪ್ರಿಂಟ್ ಸೆನ್ಸರ್, ಗೈರೊಸ್ಕೋಪ್, ಕಂಪಾಸ್, ಆಂಬಿಯೆಂಟ್ ಲೈಟ್ ಸೆನ್ಸರ್ ಆಯ್ಕೆಗಳು ಇವೆ.
ಸ್ಟೋರೇಜ್ ಹಾಗೂ ಕಲರ್ ಆಯ್ಕೆ
ಹಾನರ್ X9b 5G ಫೋನ್ 8 GB + 256 GB ಸ್ಟೋರೇಜ್ ಆಯ್ಕೆ ಅನ್ನು ಪಡೆದಿದ್ದು, ಈ ಫೋನ್ ಅನ್ನು ಮಿಡ್‌ನೈಟ್ ಬ್ಲಾಕ್ ಮತ್ತು ಸನ್‌ರೈಸ್ ಆರೆಂಜ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಆಸಕ್ತ ಖರೀದಿದಾರರು ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಮೂಲಕ ಖರೀದಿಸಬಹುದಾಗಿದೆ.


Click it and Unblock the Notifications








