Honor: ಲಾಂಚ್ ಆಗುವ ಮುನ್ನವೇ ಅಧಿಕೃತವಾಯ್ತು ಹಾನರ್ X9b ನ ಈ ಫೀಚರ್ಸ್!
ಹಾನರ್ ಫೋನ್‌ಗಳು (Honor phone) ಭಾರತದಲ್ಲಿ ಸುನಾಮಿಯನ್ನೇ ಎಬ್ಬಿಸುತ್ತಿವೆ. ಈವರೆಗೂ ಇತರೆ ಸ್ಮಾರ್ಟ್‌ಫೋನ್‌ಗಳಲ್ಲಿ ಇಲ್ಲದ ವಿಶೇಷ ಫೀಚರ್ಸ್ ಅನ್ನು ಈ ಫೋನ್‌ಗಳಿಗೆ ನೀಡುತ್ತಿದ್ದು, ಈ ಮೂಲಕ ಹೆಚ್ಚಿನ ಜನರು ಈ ಫೋನ್ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಅದರಂತೆ ಈಗ ಮತ್ತೊಂದು ಹೊಸ ಫೋನ್‌ಗೆ ಕ್ಷಣಗಣನೆ ಆರಂಭ ಆಗಿದೆ.
ಹೌದು, ನಾಳೆ ಅಂದರೆ ಫೆ. 15 ರಂದು ಹಾನರ್ X9b ಸ್ಮಾರ್ಟ್‌ಫೋನ್ (Honor X9b smartphone) ಭಾರತದಲ್ಲಿ ಅನಾವರಣ ಆಗಲಿದೆ. ಈ ವಿಶೇಷ ಫೋನ್ ಬಗ್ಗೆ ಈಗಾಗಲೇ ಸಾಕಷ್ಟು ಲೀಕ್ ಮಾಹಿತಿ ದೊಡ್ಡ ಅಲೆಯನ್ನೇ ಸೃಷ್ಟಿ ಮಾಡಿವೆ. ಆದರೆ, ಈಗ ಈ ಫೋನ್‌ನ ಕೆಲವು ಫೀಚರ್ಸ್ ಅನ್ನು ಅಧಿಕೃತವಾಗಿ ತಿಳಿಸಲಾಗಿದ್ದು, ಈ ಮೂಲಕ ಈ ಫೋನ್ ಮೇಲೆ ಗ್ರಾಹಕರಿಗೆ ಇನ್ನಷ್ಟು ಕ್ರೇಜ್ ಉಂಟಾಗಿದೆ. ಹಾಗಿದ್ರೆ, ಬಹಿರಂಗಪಡಿಸಲಾದ ಫೀಚರ್ಸ್ ಏನು? ಅನ್ನೋ ಮಾಹಿತಿ ಇಲ್ಲಿದೆ ಓದಿರಿ.

ಹಾನರ್ X9b ಸ್ಮಾರ್ಟ್‌ಫೋನ್: ಹೆಚ್‌ಟೆಕ್ ತನ್ನ ಅಧಿಕೃತ ಘೋಷಣೆಯ ಮೊದಲು ಹಾನರ್ X9b ಸ್ಮಾರ್ಟ್‌ಫೋನ್‌ನ ಕೆಲವು ಪ್ರಮುಖ ಫೀಚರ್ಸ್ ಅನ್ನು ಬಹಿರಂಗಪಡಿವ ಕೆಲಸ ಮಾಡಿದೆ. ಈ ಫೋನ್ ನಾಳೆ (ಫೆ. 15) ಭಾರತದಲ್ಲಿ ಅನಾವರಣ ಆಗಲಿದ್ದು, ಸಿಇಓ ಮಾಧವ್ ಶೇಠ್ ಶೇರ್ ಮಾಡಿದ ಇತ್ತೀಚಿನ ಎಕ್ಸ್ ಪೋಸ್ಟ್ ಪ್ರಕಾರ ಈ X9b ಸ್ಮಾರ್ಟ್‌ಫೋನ್ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರುವುದು ತಿಳಿದುಬಂದಿದೆ.
ಕ್ಯಾಮೆರಾ ಮಾತ್ರವಲ್ಲದೆ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಅಧಿಕೃತವಾಗಿದೆ. ಅಂದರೆ ಈ ಫೋನ್ ಮ್ಯಾಜಿಕ್ ಓಎಸ್ 7.2 ನ ಲೇಯರ್ ಅನ್ನು ಹೊಂದಿರುತ್ತದೆ. ಆದಾಗ್ಯೂ, ಸಾಫ್ಟ್‌ವೇರ್ ಬೆಂಬಲವನ್ನು ಬ್ರ್ಯಾಂಡ್ ಇನ್ನೂ ಖಚಿತಪಡಿಸಿಲ್ಲ. ತಾತ್ತ್ವಿಕವಾಗಿ, ಬ್ರ್ಯಾಂಡ್ ಕನಿಷ್ಠ ಎರಡು ವರ್ಷಗಳ ಆಂಡ್ರಾಯ್ಡ್ ನವೀಕರಣಗಳನ್ನು ಮತ್ತು ಮೂರು ವರ್ಷಗಳ ಭದ್ರತಾ ನವೀಕರಣಗಳನ್ನು ನೀಡಬಹುದು ಎನ್ನುವ ಮಾತುಗಳು ಸಹ ಟೆಕ್ ವಲಯದಲ್ಲಿ ಕೇಳಿಬರುತ್ತಿದೆ.

ಇನ್ನು ಇತರೆ ಫೀಚರ್ಸ್ ವಿಚಾರಕ್ಕೆ ಬಂದರೆ ಹಾನರ್ X9b ಸ್ಮಾರ್ಟ್‌ಫೋನ್ ಬರೋಬ್ಬರಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ ಎಂದು ಖಚಿತಪಡಿಸಲಾಗಿದೆ. ಇದರೊಂದಿಗೆ ಭಾರತದಲ್ಲಿ ಲಭ್ಯ ಆಗುತ್ತಿರುವ ವೇರಿಯಂಟ್ 5 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಅನ್ನು ಹೊಂದಿರಬಹುದು ಎಂದು ತಿಳಿದುಬಂದಿದೆ.
ಇದರೊಂದಿಗೆ ಈ ಸ್ಮಾರ್ಟ್‌ಫೋನ್ ಕರ್ಡ್ವ್ ಅಂಚುಗಳೊಂದಿಗೆ 6.78 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದ್ದು, ಇದು 1.5K ರೆಸಲ್ಯೂಶನ್ ಸಾಮರ್ಥ್ಯ, 120Hz ರಿಫ್ರೆಶ್ ರೇಟ್ ಮತ್ತು ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸರ್ ಆಯ್ಕೆ ಪಡೆದಿರಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ಫೋನ್ ಸ್ನಾಪ್‌ಡ್ರಾಗನ್ 6 ಜನ್ 1 ಚಿಪ್‌ಸೆಟ್, 8 GB RAM, 8 GB ವರ್ಚುವಲ್ RAM, 256 GB ಇಂಟರ್ ಸ್ಟೋರೇಜ್‌ನೊಂದಿಗೆ 5,800mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಪಡೆದಿರಬಹುದು ಎಂದು ತಿಳಿದುಬಂದಿದೆ.

ಜೊತೆಗೆ ಈ ಹಾನರ್ X9b ಸನ್‌ಶೈನ್ ಆರೆಂಜ್ ಮತ್ತು ಮಿಡ್‌ನೈಟ್ ಬ್ಲ್ಯಾಕ್‌ನಂತಹ ಬಣ್ಣಗಳಲ್ಲಿ ಕಂಡುಬರಲಿದೆ ಎನ್ನಲಾಗಿದ್ದು, X9b ಸ್ಮಾರ್ಟ್‌ಫೋನ್‌ನ ಬೆಲೆ ಬಗ್ಗೆ ಯಾವುದೇ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಅದಾಗ್ಯೂ ಈ ಹೊಸ ಫೋನ್‌ನ ನ ಖರೀದಿದಾರರು 2,999ರೂ ಮೌಲ್ಯದ ಒಂದು ಕಾಂಪ್ಲಿಮೆಂಟರಿ ಮೊಬೈಲ್ ಪ್ರೊಟೆಕ್ಷನ್ ಪ್ಲಾನ್ ಅನ್ನು ಪಡೆಯುತ್ತಾರೆ ಅನ್ನೋ ವಿಷಯವನ್ನು ಕಂಪನಿಯು ದೃಢಪಡಿಸಿದೆ. ಜೊತೆಗೆ ಖರೀದಿಸಿದ ಆರು ತಿಂಗಳೊಳಗೆ ಒಂದು-ಬಾರಿ ಸ್ಕ್ರೀನ್ ರಿಪ್ಲೇಸ್ಮೆಂಟ್ ಅನ್ನು ನೀಡುತ್ತದೆ ಅಲ್ಲದೆ 18 ತಿಂಗಳ ವಾರಂಟಿ ಸಿಗಲಿದೆ.


Click it and Unblock the Notifications








