Home
ಸುದ್ದಿಜಾಲ

Honor: ಭಾರತದಲ್ಲಿ ಹಾನರ್‌ X9b ಅನಾವರಣಕ್ಕೆ ದಿನಾಂಕ ನಿಗದಿ! ಈ ಫೋನ್‌ ವಿಶೇಷತೆ ಏನು?

ಹಾನರ್‌ ಭಾರತದಲ್ಲಿ ತನ್ನ ಹಾನರ್‌ X9b (HONOR X9b) ಸ್ಮಾರ್ಟ್‌ಫೋನ್‌ ಅನಾವರಣಕ್ಕೆ ದಿನಾಂಕ ದೃಢೀಕರಿಸಿದೆ. ಈ ಮೊದಲು ಈ ಫೋನ್‌ ಬಗ್ಗೆ ಸ್ಮಾರ್ಟ್‌ಫೋನ್‌ ವಲಯದಲ್ಲಿ ದೊಡ್ಡ ವದಂತಿಗಳು ಹರಿದಾಡುತ್ತಿದ್ದವು, ಅದರಲ್ಲೂ ಈ ಫೋನ್‌ನ ನಿರೀಕ್ಷಿತ ಫೀಚರ್ಸ್‌ ಇತರೆ ಸ್ಮಾರ್ಟ್‌ಫೋನ್‌ ಕಂಪೆನಿಗಳಿಗೆ ನಡುಕ ಹುಟ್ಟಿಸಿತ್ತು.

ಹೌದು, ಲಾಂಚ್‌ ಆಗುವ ಮುನ್ನವೇ ಭಾರೀ ಸದ್ದು ಮಾಡುತ್ತಿರುವ ಹಾನರ್‌ X9b ಅನಾವರಣಕ್ಕೆ ದಿನಾಂಕ ನಿಗದಿಯಾಗಿದೆ. ಈ ಸ್ಮಾರ್ಟ್‌ಫೋನ್ ಭಾರತದ ಮೊದಲ ಅಲ್ಟ್ರಾ ಬೌನ್ಸ್ ಡಿಸ್‌ಪ್ಲೇ (Ultra Bounce Display) ಹೊಂದಿರಲಿದ್ದು, ಇದರ ಜೊತೆಗೆ ಉತ್ತಮ ಕ್ಯಾಮೆರಾ ಫೀಚರ್ಸ್‌ ಹಾಗೂ ಪ್ರೊಸೆಸರ್‌ ಬಲ ಪಡೆಯಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಯಾವಾಗ ಲಾಂಚ್‌ ಆಗಲಿದೆ?, ಇದರ ನಿರೀಕ್ಷಿತ ಫೀಚರ್ಸ್‌ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿ ಹಾನರ್‌ X9b ಅನಾವರಣಕ್ಕೆ ದಿನಾಂಕ ನಿಗದಿ! ಈ ಫೋನ್‌ ವಿಶೇಷತೆ ಏನು?

ಹಾನರ್‌ X9b ಸ್ಮಾರ್ಟ್‌ಫೋನ್‌: ಹಲವಾರು ಟೀಸರ್‌ಗಳು ಮತ್ತು ವದಂತಿಗಳ ಬಳಿಕ ಹಾನರ್‌ ಫೆಬ್ರವರಿ 15 ರಂದು ಭಾರತದಲ್ಲಿ ಹಾನರ್‌ X9b ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದನ್ನು ಖಚಿತಪಡಿಸಿದೆ. ಈ ಸ್ಮಾರ್ಟ್‌ಫೋನ್‌ ಕರ್ವ್ಡ್ ಡಿಸ್‌ಪ್ಲೇ ಮಾತ್ರವಲ್ಲದೆ ಭಾರತದ ಮೊದಲ ಅಲ್ಟ್ರಾ ಬೌನ್ಸ್ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಈ ಫೋನ್‌ ಏರ್‌ಬ್ಯಾಗ್‌ ತಂತ್ರಜ್ಞಾನದೊಂದಿಗೆ (Airbag technology) ಬರಲಿದೆ ಎಂದು ಕಂಪೆನಿ ಮಾಹಿತಿ ನೀಡಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಈಗಾಗಲೇ ವಿವಿಧ ದೇಶಗಳಲ್ಲಿ ಸೇಲ್‌ನಲ್ಲಿದೆ. ಹಾಗೆಯೇ ಈ ಫೋನ್‌ ಸ್ವಿಟ್ಜರ್ಲೆಂಡ್‌ನ SGS ನಿಂದ ಪ್ರಮಾಣೀಕರಿಸಲ್ಪಟ್ಟ ಆಲ್-ಆಂಗಲ್ ಡ್ರಾಪ್ ರೆಸಿಸ್ಟೆನ್ಸ್ ಅನ್ನು ಹೊಂದಿದ್ದು, 6.78 ಇಂಚಿನ 1.5K ಕರ್ವ್ಡ್ ಅಮೋಲೆಡ್‌ ಡಿಸ್‌ಪ್ಲೇ ಮೂಲಕ ಬಳಕೆದಾರರಿಗೆ ಪ್ರೀಮಿಯಂ ಅನುಭವ ನೀಡಲಿದೆ. ಜೊತೆಗೆ ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್‌ ಹಾಗೂ 12GB RAM ಈ ಫೋನ್‌ನಲ್ಲಿ ದೊಡ್ಡ ಶಕ್ತಿಯುವ ಕೇಂದ್ರವಾಗಿರಲಿದೆ.

ಭಾರತದಲ್ಲಿ ಹಾನರ್‌ X9b ಅನಾವರಣಕ್ಕೆ ದಿನಾಂಕ ನಿಗದಿ! ಈ ಫೋನ್‌ ವಿಶೇಷತೆ ಏನು?

ಇದೆಲ್ಲಕ್ಕಿಂತ ಮಿಗಿಲಾಗಿ ಇದು 108 ಮೆಗಾಪಿಕ್ಸೆಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದಿರಲಿದ್ದು, 5800mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ ಎನ್ನಲಾಗಿದೆ. ಉಳಿದಂತೆ ಈ ಫೋನ್‌ ಆಂಡ್ರಾಯ್ಡ್ 13 ಆಧಾರಿತ ಮ್ಯಾಜಿಕ್ ಓಎಸ್ 7.2 ಅನ್ನು ರನ್ ಮಾಡುತ್ತದೆ. ಈ ನಡುವೆ ಹಾನರ್ ಇಂಡಿಯಾ ಸಿಇಒ ಮಾಧವ್ ಶೇತ್ ಇತ್ತೀಚೆಗೆ ಹಾನರ್ ಚಾಯ್ಸ್ ಇಯರ್‌ಬಡ್ಸ್ ಎಕ್ಸ್ 5 ಮತ್ತು ಹಾನರ್ ಚಾಯ್ಸ್ ವಾಚ್‌ನ ಅನ್‌ಬಾಕ್ಸಿಂಗ್ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದು, ಈ ಫೋನ್‌ನೊಂದಿಗೆ ಇವೂ ಸಹ ಶೀಘ್ರದಲ್ಲೇ ಭಾರತದಲ್ಲಿ ಲಾಂಚ್‌ ಆಗಲಿದೆ ಎಂಬ ಸುಳಿವು ನೀಡಿದ್ದಾರೆ.

ಕೆಲವು ವದಂತಿಗಳ ಆಧಾರದ ಮೇಲೆ, ಹಾನರ್‌ X9b ಸ್ಮಾರ್ಟ್‌ಫೋನ್‌ ಹಾನರ್ ಚಾಯ್ಸ್ ಬಡ್ಸ್ ಬಂಡಲ್‌ನೊಂದಿಗೆ ಬರಲಿದ್ದು, 35,000 ರೂ.ಗಳ ಬೆಲೆ ಹೊಂದಿರಬಹುದು ಎಂದು ತಿಳಿದುಬಂದಿದೆ. ಅದಾಗ್ಯೂ ಕೊಡುಗೆ ಬೆಲೆ 30,000 ರೂ.ಗಳಲ್ಲಿ ಇದನ್ನು ಖರೀದಿ ಮಾಡಬಹುದಾಗಿದ್ದು, ವಿವಿಧ ಬ್ಯಾಂಕ್ ಕೊಡುಗೆಗಳೊಂದಿಗೆ ನೀವು ಇದನ್ನು 23,999 ರೂ.ಗಳಿಗೆ ಖರೀದಿ ಮಾಡಬಹುದು ಎಂದು ವರದಿಗಳಿಂದ ತಿಳಿದುಬಂದಿದೆ.

ಭಾರತದಲ್ಲಿ ಹಾನರ್‌ X9b ಅನಾವರಣಕ್ಕೆ ದಿನಾಂಕ ನಿಗದಿ! ಈ ಫೋನ್‌ ವಿಶೇಷತೆ ಏನು?

ಇನ್ನು ಈ ಫೋನ್‌ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಇದು ಹಾನರ್‌ ಚಾಯ್ಸ್‌ ಇಯರ್‌ಬಡ್ಸ್‌ X5E ಕಾಂಬೊ ಆಫರ್‌ನಲ್ಲಿ ಲಭ್ಯ ಇರಲಿದೆ. ಅದರಲ್ಲೂ 12 ತಿಂಗಳ ಸ್ಕ್ರೀನ್ ಮತ್ತು ಬ್ಯಾಕ್ ಕವರ್ ವಾರಂಟಿ ಮತ್ತು ವಿಸ್ತೃತ 24 ತಿಂಗಳ ಬ್ಯಾಟರಿ ಹೆಲ್ತ್‌ ಗ್ಯಾರಂಟಿ ಸೌಲಭ್ಯವನ್ನೂ ಸಹ ಹಾನರ್‌ ನೀಡುತ್ತದೆಯಂತೆ. ಹಾಗಿದ್ರೆ, ಉತ್ತಮವಾದ ಫೋನ್‌ ಅನ್ನು ಖರೀದಿ ಮಾಡಲು ಮುಂದಾಗಿದ್ದರೆ ನೀವು ಫೆಬ್ರವರಿ 15 ರ ವರೆಗೆ ಕಾದಿರಿ.

Best Mobiles in India

English summary
Honor X9b unveiling date set. It is known that this smartphone will have India's first Ultra Bounce Display, along with better camera features and processor power.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+