Just In
- 43 min ago
ಆಪಲ್ ಗ್ರಾಹಕರಿಗೆ ಬಿಗ್ ಶಾಕ್; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!
- 19 hrs ago
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- 21 hrs ago
ಇಂಥಾ ಸ್ಮಾರ್ಟ್ಫೋನ್ ಖರೀದಿಸಿದ್ರೆ, ಫೋನ್ ಹ್ಯಾಂಗ್ ಆಗುವ ಸಮಸ್ಯೆ ಇರಲ್ಲ!
- 1 day ago
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
Don't Miss
- Automobiles
ಭಾರತದಲ್ಲಿ ಹೆಚ್ಚು ಪವರ್ಫುಲ್ ಆಗಿರುವ ಕಮ್ಮಿ ಬೆಲೆಯ ಕಾರುಗಳು: ಟಾಟಾದಿಂದ ಮಹೀಂದ್ರಾವರೆಗೆ...
- News
7th Pay Commission; ಮುಂಬಡ್ತಿ, ಬಡ್ತಿ, ಭತ್ಯೆಯ ನಿಗದಿ ಮಾನದಂಡಗಳು
- Movies
'ಘೋಷ್ಟ್' ಶಿವಣ್ಣನ ಜೊತೆ ವಿಜಯ್ ಸೇತುಪತಿ? ಆ ಭೇಟಿಯ ಸೀಕ್ರೆಟ್ ರಿವೀಲ್ ಆಯ್ತು!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಮಾಹಿತಿ ಸರಿ ಇದ್ಯಾ ನೋಡಿಕೊಳ್ಳಿ: ಇಲ್ಲವೇ ಬದಲಾಯಿಸಿಕೊಳ್ಳಿ..!
ಆಧಾರ್ ಕಡ್ಡಾಯ ಮಾಡಿರುವ ಕೇಂದ್ರ ಸರಕಾರ, ಎಲ್ಲಾ ಸೇವೆಗಳಿಗೆ ಆಧಾರ್ ಬೇಕೆ ಬೇಕು ಎನ್ನುವ ಸ್ಥಿತಿಯನ್ನು ನಿರ್ಮಾಣ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಆಧಾರ್ ಕಾರ್ಡ್ ಮಾಡಿಸಲೇಬೇಕು. ಹುಟ್ಟಿದ ಮಕ್ಕಳಿಗೂ ಇಂದಿನ ದಿನದಲ್ಲಿ ಆಧಾರ್ ಕಾರ್ಡ್ ಬೇಕಾಗಿದೆ ಎನ್ನಲಾಗಿದೆ.
ಓದಿರಿ: ಶಿಯೋಮಿಯ ಈ ಫೋನ್ ಲಾಂಚ್ ಆದರೆ ಒನ್‌ಪ್ಲಸ್ 5T, ಗ್ಯಾಲೆಕ್ಸಿ S8 ಕೇಳುವವರಿರುವುದಿಲ್ಲ..!
ನಾವು ಇಂದಿನ ಲೇಖನದಲ್ಲಿ ಈಗಾಗಲೇ ಆಧಾರ್ ಕಾರ್ಡ್ ಮಾಡಿಸಿದ್ದು, ಆದರಲ್ಲಿ ಎದುರಾಗಿರುವ ತಪ್ಪುಗಳನ್ನು ಬದಲಾಯಿಸುವುದು ಹೇಗೆ ಮತ್ತು ಹೆಚ್ಚಿನ ವಿವರಗಳನ್ನು ಅಪ್ಡೇಟ್ ಮಾಡುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ. ಇವುಗಳನ್ನು ಆನ್‌ಲೈನಿನಲ್ಲಿಯೇ ಮಾಡಬಹುದಾಗಿದೆ.

ಆಧಾರ್ ವೆಬ್ ಸೈಟ್:
ಆಧಾರ್ ತಪ್ಪುಗಳನ್ನು ಸರಿಪಡಿಸುವುದಕ್ಕಾಗಿಯೇ ಭಾರತ ಸರ್ಕಾರದ ವಿಶಿಷ್ಟ ಗುರುತು ಪ್ರಾಧಿಕಾರದ ವೆಬ್‌ಸೈಟ್ ತೆರೆದಿದ್ದು (https://uidai.gov.in/), ಅಲ್ಲಿ ನೀವು ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಅಥವಾ ಅಪ್ಡೇಟ್ ಮಾಡಲು ಅವಕಾಶವನ್ನು ಮಾಡಿಕೊಡಲಾಗಿದೆ.

ಯಾವುದನ್ನು ಬದಲಾಯಿಸಬಹುದು:
ಈಗಾಗಲೇ ಮಾಡಿರುವ ಆಧಾರ್ ಕಾರ್ಡಿನಲ್ಲಿ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಅಪ್ಡೇಟ್ ಮಾಡಬಹುದು. ಇಲ್ಲವೇ ಬದಲಾವಣೆ ಮಾಡಬಹುದು ಎನ್ನಲಾಗಿದೆ. ಇದಕ್ಕಾಗಿ ನೀವು https://ssup.uidai. gov.in/web/guest/update ಜಾಲತಾಣಕ್ಕೆ ಭೇಟಿ ನೀಡಬೇಕಾಗಿದೆ.

ಮೊಬೈಲ್ ನಂಬರ್ ನೋಂದಣಿಯಾಗಿರಬೇಕು..!
ನಿಮ್ಮ ಮೊಬೈಲ್ ನಂಬರ್ ನೋಂದಣಿ ಆಗಿದ್ದರೆ ಮಾತ್ರ ಯುಐಡಿಎಐ ವೆಬ್‌ಸೈಟ್ ಮೂಲಕ ಆಧಾರ್ ಆನ್ಲೈನ್ ನಲ್ಲಿ ಹೆಸರು ಬದಲಾಯಿಸಬಹುದು. ಇಲ್ಲವಾದರೆ ನೀವು ಆಧಾರ್ ಮಾಹಿತಿಗಳನ್ನು ಆಪ್‌ಡೇಟ್ ಮಾಡುವುದು ಕಷ್ಟ ಸಾಧ್ಯವಾಗಿದೆ.

ಮಾಡುವುದು ಹೇಗೆ?
ಯುಐಡಿಎಐ ವೆಬ್‌ಸೆಟ್‌ಗೆ ಭೇಟಿ ನೀಡಿ. ನಂತರದಲ್ಲಿ ನೀವು ಅಲ್ಲಿ ಆಧಾರ್ ಅಪ್ಡೇಟ್ ಡಿಟೆಲ್ಸ್ ಆನ್ಲೈನ್ ಮೇಲೆ ಕ್ಲಿಕ್ ಮಾಡಿರಿ. ಇದಾದ ನಂತರದಲ್ಲಿ ನಿಮ್ಮ ಆಧಾರ್ ಡೇಟಾ ಅಪ್ಡೇಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದಾದ ನಂತರದಲ್ಲಿ ಆಧಾರ್ ಸೆಲ್ಪ್ ಸರ್ವಿಸ್ ಅಪ್ಡೇಟ್ ಪೋರ್ಟಲ್ ಪುಟ ತೆರೆದುಕೊಳ್ಳುತ್ತದೆ. ನಂತರ submit your update online please ಮೇಲೆ ಕ್ಲಿಕ್ ಮಾಡಿ. ಅಲ್ಲಿ ಹೊಸ ಪುಟ ತೆರೆದುಕೊಳ್ಳುತ್ತದೆ. ನಿಮ್ಮ ಆಧಾರ್ ನಂಬರ್ ಟೈಪ್ ಮಾಡಿ.

OTP ಬರಲಿದೆ:
ಆಧಾರ್ ನಂಬರ್ ಟೈಪ್ ಮಾಡಿದ ನಂತರದಲ್ಲಿ ನೋಂದಾಯಿತ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ. ನಂತರ ಒಟಿಪಿ, ಸೆಕ್ಯೂರಿಟಿ ಕೋಡ್ ಎಂಟರ್ ಮಾಡಿರಿ. ಆಮೇಲೆ Submit ಮಾಡಿರಿ. ಅಪ್ಡೇಟ್ ಮಾಡಬೇಕಾದ ಆಧಾರ್ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಅಪ್ಡೇಟ್ ಕೋರಿಕೆ ಪುಟದಲ್ಲಿ ನೀವು ಬದಲಾಯಿಸಲು ಇಚ್ಛಿಸುವ ವಿವರಗಳನ್ನು ಅಪ್ಡೇಟ್ ಮಾಡಬಹುದು. ಸಬ್ಮಿಟ್ ಬಟನ್ ಕ್ಲಿಕ್ ಮಾಡಿ. ಯಶಸ್ವಿ ಸಲ್ಲಿಕೆ ನಂತರ ಅಪ್ಡೇಟ್ ರಿಕ್ವೆಸ್ಟ್ ನಂಬರ್(URN) ಜನರೇಟ್ ಆಗುತ್ತದೆ. ತದನಂತರ ನಿಮಗೆ ಸಂದೇಶ ಬರುತ್ತದೆ.

ನಿಮ್ಮ ಮಾಹಿತಿ ಆಪ್‌ಡೇಟ್ ಆಗುತ್ತದೆ:
ಹೀಗೆ ಮಾಡಿದ ನಂತರದಲ್ಲಿ ನಿಮ್ಮ ಮಾಹಿತಿಗಳು ಆಪ್‌ಡೇಟ್ ಆಗಲಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ನಿಮ್ಮ ಆಧಾರ್ ಬಳಕೆ ಮಾಡಿಕೊಳ್ಳಲು ಸುಲಭವಾಗಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470