Subscribe to Gizbot

ಶಿಯೋಮಿಯ ಈ ಫೋನ್‌ ಲಾಂಚ್ ಆದರೆ ಒನ್‌ಪ್ಲಸ್ 5T, ಗ್ಯಾಲೆಕ್ಸಿ S8 ಕೇಳುವವರಿರುವುದಿಲ್ಲ..!

Written By:

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಶಿಯೋಮಿ ಕಂಪನಿಯ ಅಬ್ಬರ ಜೋರಾಗಿದೆ. ಇಂದಿನಿಂದ ರೆಡ್‌ಮಿ 5A ಸ್ಮಾರ್ಟ್‌ಫೋನ್ ಮಾರಾಟ ಆರಂಭವಾಗುತ್ತಿದ್ದು, ರೂ. 4,999ಕ್ಕೆ ಮಾರಾಟವಾಗುವ ಈ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿಲಿದೆ ಎನ್ನುವ ನಿರೀಕ್ಷೆ ಇದೆ. ಇದೇ ಮಾದರಿಯಲ್ಲಿ ಶಿಯೋಮಿ ಮತ್ತೇರಡು ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ತಯಾರಿಯನ್ನು ನಡೆಸಿದೆ.

ಶಿಯೋಮಿಯ ಫೋನ್‌ ಲಾಂಚ್ ಆದರೆ ಒನ್‌ಪ್ಲಸ್ 5T, ಗ್ಯಾಲೆಕ್ಸಿ S8 ಕೇಳುವವರಿರುವುದಿಲ್ಲ

ಶಿಯೋಮಿ ರೆಡ್‌ಮಿ 5 ಮತ್ತು ರೆಡ್‌ಮಿ 5 ಪ್ಲಸ್ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಸಿದ್ಧತೆ ನಡೆಸಿದ್ದು, ಬಿಡುಗಡೆಗೂ ಮುನ್ನವೇ ಈ ಫೋನ್‌ಗಳ ವಿಶೇಷತೆಗಳು ಮತ್ತು ಬೆಲೆ ಬಹಿರಂಗಗೊಂಡಿದೆ. ಇದರಿಂದಾಗಿ ಇತರೇ ಸ್ಮಾರ್ಟ್‌ಫೋನ್ ತಯಾರಕರು ಆತಂಕಗೊಂಡಿದ್ದಾರೆ ಎನ್ನಲಾಗಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಅತೀ ಕಡಿಮೆ ಬೆಲೆಗೆ ಅತೀ ಹೆಚ್ಚು ಆಯ್ಕೆಗಳನ್ನು ಬಳಕೆದಾರರಿಗೆ ನೀಡಲಿವೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಿಯೋಮಿ ರೆಡ್‌ಮಿ 5 ಮತ್ತು ರೆಡ್‌ಮಿ 5 ಪ್ಲಸ್ ಸ್ಮಾರ್ಟ್‌ಫೋನ್ :

ಶಿಯೋಮಿ ರೆಡ್‌ಮಿ 5 ಮತ್ತು ರೆಡ್‌ಮಿ 5 ಪ್ಲಸ್ ಸ್ಮಾರ್ಟ್‌ಫೋನ್ :

ಈ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ 18:9 ಅನುಪಾತದ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದರೊಂದಿಗೆ MIUI 9 ಹಾಗೂ ಅತೀ ದೊಡ್ಡ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಈ ಹಿನ್ನಲೆಯಲ್ಲಿ ಟಾಪ್‌ ಎಂಡ್‌ ಸ್ಮಾರ್ಟ್‌ಫೋನ್‌ಗಳು ಈ ಎರಡು ಪೋನ್‌ಗಳ ಮುಂದೆ ಬೇಡಿಕೆ ಕಳೆದುಕೊಳ್ಳಲಿವೆ.

ದೇಶ್‌ ಕಾ ಸ್ಮಾರ್ಟ್‌ಫೋನ್ ಸೇಲ್ ಶುರು: ಇಲ್ಲಿದೇ ನೋಡಿ ಕಂಪ್ಲೀಟ್ ಡಿಟೈಲ್ಸ್..!
ಶಿಯೋಮಿ ರೆಡ್‌ಮಿ 5 ಮತ್ತು ರೆಡ್‌ಮಿ 5 ಪ್ಲಸ್ ಬೆಲೆ:

ಶಿಯೋಮಿ ರೆಡ್‌ಮಿ 5 ಮತ್ತು ರೆಡ್‌ಮಿ 5 ಪ್ಲಸ್ ಬೆಲೆ:

ಶಿಯೋಮಿ ರೆಡ್‌ಮಿ 5 2GB RAM ಮತ್ತು 16GB ಇಂಟರ್ನಲ್ ಮೊಮೊರಿಯನ್ನು ಹೊಂದಿದ್ದು, ರೂ.12,900ಕ್ಕೆ ಮಾರಾಟವಾಗುವ ಸಾಧ್ಯತೆ ಇದೆ. ಇದೇ ಮಾದರಿಯಲ್ಲಿ ರೆಡ್‌ಮಿ 5 ಪ್ಲಸ್ ಸ್ಮಾರ್ಟ್‌ಫೋನ್ 3GB RAM ಮತ್ತು 32GB ಇಂಟರ್ನಲ್ ಮೊಮೊರಿಯೊಂದಿಗೆ ಕಾಣಿಸಿಕೊಂಡಿದ್ದು, ರೂ.16,120ಕ್ಕೆ ಮಾರಾಟವಾಗಲಿದೆ ಎನ್ನಲಾಗಿದೆ.

ಶಿಯೋಮಿ ರೆಡ್‌ಮಿ 5 ಮತ್ತು ರೆಡ್‌ಮಿ 5 ಪ್ಲಸ್ ವಿಶೇಷತೆ:

ಶಿಯೋಮಿ ರೆಡ್‌ಮಿ 5 ಮತ್ತು ರೆಡ್‌ಮಿ 5 ಪ್ಲಸ್ ವಿಶೇಷತೆ:

ಶಿಯೋಮಿ ರೆಡ್‌ಮಿ 5 ಮತ್ತು ರೆಡ್‌ಮಿ 5 ಪ್ಲಸ್ ಸ್ಮಾರ್ಟ್‌ಫೊನ್ ಬ್ರಜಿಲ್ ಲೈಸ್ ಡಿಸ್‌ಪ್ಲೇ ವಿನ್ಯಾವನ್ನು ಹೊಂದಿದ್ದು, 18:9 ಅನುಪಾತದಿಂದ ಕೂಡಿದೆ. ರೆಡ್‌ಮಿ 5 5.7 ಇಂಚಿನ HD ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದ್ದರೇ, ರೆಡ್‌ಮಿ 5 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 5.9 ಇಂಚಿನ FHD ಪ್ಲಸ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ.

ಸ್ನಾಪ್‌ಡ್ರಾಗನ್ ಪ್ರೋಸೆಸರ್:

ಸ್ನಾಪ್‌ಡ್ರಾಗನ್ ಪ್ರೋಸೆಸರ್:

ಇದಲ್ಲದೇ ಶಿಯೋಮಿ ರೆಡ್‌ಮಿ 5 ಸ್ನಾಪ್‌ಡ್ರಾಗ್ 450 ಪ್ರೋಸೆಸರ್ ಒಳಗೊಂಡಿದ್ದು, ಇದೇ ಮಾದರಿಯಲ್ಲಿ ರೆಡ್‌ಮಿ 5 ಪ್ಲಸ್ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 625 ಪ್ರೋಸೆಸರ್ ಅನ್ನು ಒಳಗೊಂಡಿದೆ. ಇದಲ್ಲದೇ ಎರಡು ಫೋನ್‌ಗಳು 1.8GHz ವೇಗವನ್ನು ಹೊಂದಿದೆ.

ಕ್ಯಾಮೆರಾ:

ಕ್ಯಾಮೆರಾ:

ಶಿಯೋಮಿ ರೆಡ್‌ಮಿ 5 ಮತ್ತು ರೆಡ್‌ಮಿ 5 ಪ್ಲಸ್ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 12MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ ರೆಡ್‌ಮಿ 5ನಲ್ಲಿ 4000mAh ಬ್ಯಾಟರಿ ಮತ್ತು ರೆಡ್‌ಮಿ 5 ಪ್ಲಸ್ ನಲ್ಲಿ 4100mAh ಬ್ಯಾಟರಿಯನ್ನು ನೀಡಲಾಗಿದೆ.

ಬಿಡುಗಡೆ ಎಂದು?

ಬಿಡುಗಡೆ ಎಂದು?

ಶಿಯೋಮಿ ರೆಡ್‌ಮಿ 5 ಮತ್ತು ರೆಡ್‌ಮಿ 5 ಪ್ಲಸ್ ಶೀಘ್ರವೇ ಮಾರುಕಟ್ಟೆಯನ್ನು ಪ್ರವೇಶಿಲಿದ್ದು, ಮುಂದಿನ ವರ್ಷದ ಆರಂಭಕ್ಕೆ ಮಾರಾಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Xiaomi Redmi 5 and Redmi 5 Plus Prices Revealed a Day Before the Official Launch. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot