Home
ಸುದ್ದಿಜಾಲ

ಜನರು ತಮ್ಮ ಫೋನ್‌ಗಳಲ್ಲಿ ಎಷ್ಟು ಹಾಗೂ ಯಾವ ಆಪ್‌ಗಳನ್ನು ಬಳಕೆ ಮಾಡುತ್ತಾರೆ ಗೊತ್ತಾ?

ಸ್ಮಾರ್ಟ್‌ಫೋನ್‌ಗಳು ಇಂದು ಎಲ್ಲರಿಗೂ ಅಗತ್ಯ ಇರುವ ಡಿವೈಸ್‌ ಆಗಿದ್ದು, ಈ ಮೂಲಕ ಬಳಕೆದಾರರು ಕರೆ, ಬ್ಯಾಂಕಿಂಗ್‌ ಹಾಗೂ ಇನ್ನಿತರೆ ಸೇವೆ ಪಡೆದುಕೊಳ್ಳುತ್ತಾರೆ. ಆದರೆ, ಫೋನ್‌ನಲ್ಲಿ ಯಾವುದೇ ಸೇವೆ ಪಡೆದುಕೊಳ್ಳಬೇಕು ಎಂದರೂ ಅದಕ್ಕೆ ಆಪ್‌ಗಳು ಅತ್ಯಾವಶ್ಯಕ. ಈ ನಡುವೆ ಸಮೀಕ್ಷೆಯೊಂದನ್ನು ನಡೆಸಲಾಗಿದ್ದು, ಎಷ್ಟು ಆಪ್‌ಗಳನ್ನು ಬಳಕೆ ಮಾಡುತ್ತಾರೆ ಎನ್ನುವುದನ್ನು ಕಂಡುಕೊಳ್ಳಲಾಗಿದೆ.

ಹೌದು, ಮೊಬೈಲ್‌ ಎಷ್ಟು ಅಗತ್ಯವೋ ಅಷ್ಟೇ ಆಪ್‌ಗಳು ಸಹ ನಮ್ಮ ಜೀವನಕ್ಕೆ ತುಂಬಾ ಅಗತ್ಯವಾಗಿವೆ. ಇತ್ತೀಚಿನ ದಿನಗಳಲ್ಲಿ ಬಿಟ್‌ಕಾಮ್ ಸಮೀಕ್ಷೆಯೊಂದನ್ನು ನಡೆಸಿದ್ದು, ಇತ್ತೀಚಿನ ದಿನಗಳಲ್ಲಿ ಜನರು ಸಕ್ರಿಯವಾಗಿ ಬಳಕೆ ಮಾಡುತ್ತಿರುವ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳ ಸಂಖ್ಯೆಗಳ ಬಗ್ಗೆ ಕೇಂದ್ರೀಕರಿಸಿದೆ. ಹಾಗಿದ್ರೆ, ಮತ್ಯಾಕೆ ತಡ ಯಾರ್ಯಾರು, ಯಾವೆಲ್ಲಾ ಆಪ್‌ಗಳನ್ನ ಹೆಚ್ಚಾಗಿ ಬಳಕೆ ಮಾಡುತ್ತಾರೆ?, ಎಷ್ಟು ಆಪ್‌ಗಳನ್ನು ಬಳಕೆ ಮಾಡುತ್ತಾರೆ ಎಂದು ತಿಳಿಯೋಣ ಬನ್ನಿ.

ಜನರು ತಮ್ಮ ಫೋನ್‌ಗಳಲ್ಲಿ ಎಷ್ಟು ,ಯಾವ ಆಪ್‌ಗಳನ್ನು ಬಳಕೆ ಮಾಡುತ್ತಾರೆ ಗೊತ್ತಾ?

ಸಮೀಕ್ಷೆಯಲ್ಲಿ ಕಂಡುಬಂದಿದ್ದೇನು?: ಸಮೀಕ್ಷೆಯ ಪ್ರಕಾರ ಕಿರಿಯ ಬಳಕೆದಾರರು ಹೆಚ್ಚಿನ ಸಂಖ್ಯೆಯ ಆಪ್‌ಗಳನ್ನು ಬಳಕೆ ಮಾಡುತ್ತಾರೆ ಎಂದು ತಿಳಿದುಬಂದಿದೆ. ಅದರಲ್ಲೂ ಜನರು ಬಳಸುವ ಅಪ್ಲಿಕೇಶನ್‌ಗಳ ಸರಾಸರಿ ಸಂಖ್ಯೆ 31 ಆಗಿದೆ ಎಂದು ತಿಳಿದುಬಂದಿದೆ. ಅದರಲ್ಲಿ 25% ಬಳಕೆದಾರರು 20 ಕ್ಕಿಂತ ಹೆಚ್ಚು ಮೊಬೈಲ್ ಆಪ್‌ಗಳನ್ನು ಹೊಂದಿಲ್ಲ. ಜೊತೆಗೆ 8% ಬಳಕೆದಾರರು 10 ಕ್ಕಿಂತ ಕಡಿಮೆ ಆಪ್‌ಗಳನ್ನು ಬಳಕೆ ಮಾಡುತ್ತಾರೆ ಎಂದು ತಿಳಿದುಬಂದಿದೆ.

ಇದರೊಂದಿಗೆ 16 ರಿಂದ 29 ವರ್ಷ ವಯಸ್ಸಿನ ಬಳಕೆದಾರರು ಸರಾಸರಿ 42 ಆಪ್‌ಗಳನ್ನು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬಳಕೆ ಮಾಡುತ್ತಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಈ ಮೂಲಕ ಯುವಜನರು ತಂತ್ರಜ್ಞಾನವನ್ನು ಉತ್ತಮವಾಗಿ ಬಳಕೆ ಮಾಡುತ್ತಾರೆ ಹಾಗೂ ಹೊಸ ತಂತ್ರಜ್ಞಾನಗಳನ್ನು ಹೆಚ್ಚು ಗ್ರಹಿಸುತ್ತಾರೆ ಎಂದು ತಿಳಿದುಬಂದಿದೆ. ಜೊತೆಗೆ ಹೆಚ್ಚುತ್ತಿರುವ ಅಪ್ಲಿಕೇಶನ್‌ಗಳ ಸಂಖ್ಯೆಯು ಬಳಕೆದಾರರು ಬಳಕೆ ಮೇಲೆ ಪರಿಣಾಮ ಬೀರುತ್ತಿವೆ ಎಂದು ಹೇಳಲಾಗಿದೆ.

ಜನರು ತಮ್ಮ ಫೋನ್‌ಗಳಲ್ಲಿ ಎಷ್ಟು ,ಯಾವ ಆಪ್‌ಗಳನ್ನು ಬಳಕೆ ಮಾಡುತ್ತಾರೆ ಗೊತ್ತಾ?

ಇನ್ನು ಆಹಾರವನ್ನು ಆರ್ಡರ್ ಮಾಡುವುದರಿಂದ ಹಿಡಿದು ಕ್ಯಾಬ್ ಬುಕ್ ಮಾಡುವವರೆಗೆ, ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವುದರಿಂದ ಹಿಡಿದು ಬಿಲ್‌ಗಳನ್ನು ಪಾವತಿಸುವವರೆಗೆ ಬಹುತೇಕ ಎಲ್ಲದಕ್ಕೂ ಆಪ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಕಾರಣಕ್ಕಾಗಿಯೇ ಅಗತ್ಯ ಇರುವ ಆಪ್‌ಗಳನ್ನು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಅಗತ್ಯ ಸೇವೆ ಪಡೆದುಕೊಳ್ಳುತ್ತಿದ್ದಾರೆ.

ಯಾವೆಲ್ಲಾ ಆಪ್‌ಗಳು ಹೆಚ್ಚು ಬಳಕೆ ಆಗುತ್ತಿವೆ?: ಸಮೀಕ್ಷೆಯಲ್ಲಿ ತಿಳಿದುಬಂದ ಪ್ರಮುಖ ಮಾಹಿತಿ ಏನೆಂದರೆ ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮ ಆಪ್‌ಗಳನ್ನು ಜನರು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಇದರೊಂದಿಗೆ ಇಮೇಲ್ ಅಪ್ಲಿಕೇಶನ್‌ಗಳು ಮತ್ತು ನ್ಯಾವಿಗೇಷನ್ ಅಪ್ಲಿಕೇಶನ್‌ಗಳನ್ನು ಸಹ ಬಳಕೆ ಮಾಡುತ್ತಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ.

ಜನರು ತಮ್ಮ ಫೋನ್‌ಗಳಲ್ಲಿ ಎಷ್ಟು ,ಯಾವ ಆಪ್‌ಗಳನ್ನು ಬಳಕೆ ಮಾಡುತ್ತಾರೆ ಗೊತ್ತಾ?

ಸಾಮಾನ್ಯವಾಗಿ ಯಾವುದೋ ಒಂದು ಉದ್ದೇಶದಿಂದ ಸ್ಮಾರ್ಟ್‌ಫೋನ್‌ನಲ್ಲಿ ಆಪ್‌ ಇನ್‌ಸ್ಟಾಲ್ ಮಾಡಿಕೊಳ್ಳುವ ಬಳಕೆದಾರರು ಆ ಆಪ್‌ ಕೆಲಸ ಮುಗಿದ ನಂತರ ಅದನ್ನು ಫೋನ್‌ನಿಂದ ಅನ್‌ಇನ್‌ಸ್ಟಾಲ್‌ ಮಾಡಲು ಮುಂದಾಗುವುದೇ ಇಲ್ಲ. ಇದು ನಿಮ್ಮ ಫೋನ್‌ನ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ನಿಮ್ಮ ಗಮನಕ್ಕೆ ಇರಲಿ. ಹಾಗೆಯೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಅಪ್ಲಿಕೇಶನ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲು ಈ ಸಲಹೆ ಪಾಲಿಸಿ.

ಯಾವಾಗಲು ನೀವು ಆ ಆಪ್‌ ಬಳಕೆ ಮಾಡುತ್ತೀರಿ ಎದರೆ ಮಾತ್ರ ಆಪ್‌ ಅನ್ನು ಇನ್‌ಸ್ಟಾಲ್‌ ಮಾಡಿ. ಅದಾಗ್ಯೂ ಕೆಲವು ಸಮಯದವರೆಗೆ ಮಾತ್ರ ಬಳಕೆ ಮಾಡುವ ಆಪ್‌ ನಿಮ್ಮ ಫೋನ್‌ನಲ್ಲಿ ಇದ್ದರೆ ಅದನ್ನು ಅನ್‌ಇನ್‌ಸ್ಟಾಲ್‌ ಮಾಡಿ. ಜೊತೆಗೆ ಆಪ್‌ಗಳನ್ನು ವರ್ಗವಾರು ವಿಂಗಡಿಸಿಕೊಳ್ಳಿ. ಅಂದರೆ ಆಟ, ಮ್ಯೂಸಿಕ್‌, ಎಡಿಟಿಂಗ್‌, ಬ್ಯಾಂಕಿಂಗ್ ಸೇರಿದಂತೆ ವಿವಿಧ ಆಪ್‌ಗಳನ್ನು ಫೋಲ್ಡರ್‌ ಮಾಡಿ ಒಂದೇ ಕಡೆ ಇರಿಸಿಕೊಳ್ಳಿ.ಇದು ನಿಮಗೆ ಅಗತ್ಯವಿರುವ ಆಪ್‌ಗಳನ್ನು ಹುಡುಕಲು ಸುಲಭವಾಗುತ್ತದೆ.

ಇನ್ನು ಆಪ್‌ ಸ್ಟೋರ್‌ಗಳಲ್ಲಿ ಸುಲಭವಾಗುವ ಹಾಗೂ ಉಚಿತವಾಗಿ ಆಪ್‌ಗಳು ಲಭ್ಯ ಎಂದು ಸಿಕ್ಕ ಸಿಕ್ಕ ಆಪ್‌ಗಳನ್ನು ಇನ್‌ಸ್ಟಾಲ್ ಮಾಡದಿರಿ. ಯಾಕೆಂದರೆ ಇತ್ತೀಚೆಗೆ ಸ್ಕ್ಯಾಮರ್‌ಗಳು ಆಪ್‌ಗಳ ಮೂಲಕ ಮಾಲ್‌ವೇರ್‌ ಅನ್ನು ಪಸರಿಸುತ್ತಿದ್ದು, ಈ ಮೂಲಕ ನಿಮ್ಮ ಖಾಸಗಿ ಡೇಟಾವನ್ನು ಅವರು ಪಡೆದುಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಫೋಟೋ ಎಡಿಟಿಂಗ್‌ ಹಾಗೂ ಇನ್ನಿತರೆ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡುವ ಮುನ್ನ ಎಚ್ಚರ.

Best Mobiles in India

English summary
apps are very necessary in our life. Bitcom recently conducted a survey that focused on the number of smartphone apps that people are actively using these days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+