ನಿಮ್ಮ ಸಿಮ್‌ಗೆ ರೀಚಾರ್ಜ್ ಮಾಡಿಸಲಿಲ್ಲ ಅಂದ್ರೆ ಅದು ಯಾವಾಗ ಬೇರೆಯವರ ಪಾಲಾಗುತ್ತೆ?
ಒಂದೇ ಫೋನ್‌ನಲ್ಲಿ ಎರಡು ಸಿಮ್ ಬಳಕೆ ಮಾಡಲು ಅನುವು ಮಾಡಿಕೊಟ್ಟಿರುವುದರಿಂದಾಗಿ ಬಹುಪಾಲು ಮಂದಿ ನಿರಂತರವಾಗಿ ಎರಡು ಸಿಮ್‌ಗಳನ್ನು ಅವರ ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡುತ್ತಾರೆ. ಆದರೆ, ಈ ಎರಡೂ ಸಿಮ್‌ಗಳು ಆಕ್ಟಿವ್ ಆಗಿರಬೇಕು ಎಂದರೆ ರೀಚಾರ್ಜ್ ಮಾಡಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಅದಾಗ್ಯೂ ಕೆಲವರು ಸುಮ್ಮನೆ ಯಾಕೆ ಅನಗತ್ಯವಾಗಿ ರೀಚಾರ್ಜ್ ಮಾಡಬೇಕು ಎಂದು ಹಾಗೆ ಫೋನ್‌ನಲ್ಲಿಯೇ ಇರಿಸಿರುತ್ತಾರೆ.
ಹೌದು, ಬಹುಪಾಲು ಮಂದಿ ಎರಡು ಸಿಮ್ (SIM) ಬಳಕೆ ಮಾಡಿದರೂ ಸಹ ಒಂದು ಸಿಮ್‌ಗೆ ಮಾತ್ರ ರೀಚಾರ್ಜ್ ಮಾಡಿಸುತ್ತಾರೆ. ಆದರೆ, ಎರಡನೇ ಸಿಮ್‌ಗೆ ಆಗಾಗ್ಗೆ ರೀಚಾರ್ಜ್ ಮಾಡಿಸಿ ಅದನ್ನು ಸಕ್ರಿಯವಾಗಿರುವಂತೆ ನೋಡಿಕೊಳ್ಳುತ್ತಾರೆ. ಅದಾಗ್ಯೂ ಸಿಮ್‌ಗೆ ರೀಚಾರ್ಜ್ ಮಾಡುವುದನ್ನು ನಿಲ್ಲಿಸಿದ ನಂತರ ಎಷ್ಟು ದಿನಕ್ಕೆ ಅದು ನಿಷ್ಕ್ರಿಯವಾಗುತ್ತದೆ ಹಾಗೂ ಅದು ಬೇರೆಯವರ ಹೆಸರಿಗೆ ವರ್ಗಾವಣೆ ಆಗುತ್ತದೆ ಎಂಬ ವಿಚಾರ ನಿಮಗೆ ಗೊತ್ತಾ?, ಗೊತ್ತಿಲ್ಲದಿದ್ದರೆ ಅದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಓದಿರಿ.

ಎರಡು ಸಿಮ್ ಬಳಕೆ: ಮೊಬೈಲ್ ಇದೆ ಎಂದರೆ ಅದಕ್ಕೆ ಸಿಮ್ ಅನಿವಾರ್ಯ. ಅದರಲ್ಲೂ ಏರ್‌ಟೆಲ್ ಜಾಗೂ ಜಿಯೋ, ವಿ ಟೆಲಿಕಾಂ ಹಾಗೂ ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಭಿನ್ನ ರೀಚಾರ್ಜ್ ಪ್ಲ್ಯಾನ್‌ಗಳ ಮೂಲಕ ಈ ಸೇವೆ ನೀಡುತ್ತಿದ್ದು, ಕೆಲವರು ಇಂಟರ್ನೆಟ್ ಉದ್ದೇಶಕ್ಕೆ ಸಿಮ್ ಬಳಕೆ ಮಾಡಿದರೆ ಇನ್ನೂ ಕೆಲವರು ವಾಯ್ಸ್ ಕಾಲ್ ಸೌಲಭ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಈ ನಡುವೆ ಎರಡು ಸಿಮ್‌ಗಳ ಬಳಕೆ ಅಗಾದವಾಗಿದ್ದು, ಈ ಸಿಮ್‌ಗಳಲ್ಲಿ ಒಂದು ಸಿಮ್ ನಿಷ್ಕ್ರಿಯ ಆಗುವುದು ಸಹ ಸಾಮಾನ್ಯವಾದ ವಿಷಯವಾಗಿದೆ.
ನಿಮಗೆ ಗೊತ್ತಾ?, ನಿಮ್ಮ ಹಳೆಯ ಸಿಮ್‌ಗೆ ನೀವೇ ಎಂದಾದರೂ ಕರೆ ಮಾಡಿ ನೋಡಿ, ಅದು ಇಂದಿಗೂ ಸಕ್ರಿಯ ಆಗಿರುತ್ತದೆ. ಆದರೆ ಅದು ನಿಮ್ಮ ಹೆಸರಿಗೆ ಇರುವುದಿಲ್ಲ. ಈ ಗೊಂದಲ ಸಾಕಷ್ಟು ಜನರಿಗೆ ಆಗಿರಬಹುದು. ಅರೇ ನನ್ನ ಸಿಮ್‌ನಂಬರ್ ಅನ್ನೇ ಯಾರೋ ಬೇರೆಯವರು ಬಳಕೆ ಮಾಡುತ್ತಿದ್ದಾರಲ್ಲ? ಇದು ಹೇಗೆ ಸಾಧ್ಯ? ಇದರಿಂದ ಏನಾದರೂ ಸಮಸ್ಯೆ ಆಗುತ್ತದೆಯೇ ಎಂಬಿತ್ಯಾದಿ ಪ್ರಶ್ನೆಗಳು ಖಂಡಿತಾ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಆದರೆ, ಇದರಿಂದ ಏನೂ ಸಮಸ್ಯೆ ಇಲ್ಲ.
ಯಾಕೆಂದರೆ ಮೊದಲೇ ತಿಳಿಸಿದಂತೆ ಎರಡನೇ ಸಿಮ್ ಸಂಖ್ಯೆಯನ್ನು ರೀಚಾರ್ಜ್ ಮಾಡಲು ಅನೇಕ ಜನರು ಹಿಂದೆ ಮುಂದೆ ನೋಡುತ್ತಾರೆ. ಅದರಲ್ಲೂ ಆ ಸಿಮ್ ನಮ್ಮ ಬಳಿ ಇತ್ತಾ ಎಂಬುದನ್ನೇ ಮರೆತುಬಿಡುತ್ತಾರೆ. ಈ ನಡುವೆ ದೀರ್ಘಕಾಲದವರೆಗೆ ರೀಚಾರ್ಜ್ ಮಾಡದಿದ್ದರೆ ಅದು ಆಟೋಮ್ಯಾಟಿಕ್ ಆಗಿ ಇನ್ನೊಬ್ಬ ವ್ಯಕ್ತಿಗೆ ವರ್ಗಾವಣೆಯಾಗುತ್ತದೆ ಎಂಬುದು ನಿಮಗೆ ಗೊತ್ತಿರಲಿ. ಆದರೆ ಈ ಪ್ರಕ್ರಿಯೆಗೆ ಅಷ್ಟೊಂದು ಸುಲಭವಾಗಿ ನಡೆಯುವುದಿಲ್ಲ.
ಸಿಮ್ ಬೇರೆಯರಿಗೆ ವರ್ಗಾವಣೆ ಆಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?: ನಿಮ್ಮ ಹೆಸರಿಗೆ ಇರುವ ಸಿಮ್ ಅನ್ನು ದೀರ್ಘಕಾಲದಿಂದ ಬಳಕೆ ಮಾಡದೆ ಇದ್ದರೆ ಅದು ಇಂತಿಷ್ಟು ದಿನಗಳ ನಂತರ ಬೇರೆಯವರ ಪಾಲಾಗುತ್ತದೆ. ಈ ಮೂಲಕ ನಿಮ್ಮ ಮೊಬೈಲ್‌ನಲ್ಲಿ ಇರುವ ಸಿಮ್ ನಿಷ್ಕ್ರಿಯ ಆಗುತ್ತದೆ. ಆದರೂ ಸಹ ಸಿಮ್ ಕಂಪೆನಿಗಳು ಈ ಕೆಲಸವನ್ನು ದಿಢೀರನೆ ಮಾಡುವುದಿಲ್ಲ. ಬದಲಾಗಿ ಸಾಕಷ್ಟು ಬಾರಿ ನಿಮಗೆ ಎಸ್‌ಎಮ್‌ಎಸ್‌ಗಳು ಹಾಗೂ ಕರೆಗಳ ಮೂಲಕ ಮಾಹಿತಿ ನೀಡುತ್ತಲೇ ಇರುತ್ತವೆ.
ಇಷ್ಟಾದರೂ ನೀವು ಆ ಸಿಮ್‌ಗೆ ರೀಚಾರ್ಜ್ ಮಾಡಿಸಲಿಲ್ಲ ಎಂದಾದರೆ ಅಂದರೆ 60 ದಿನಗಳವರೆಗೆ ರೀಚಾರ್ಜ್ ಮಾಡಿಸಲಿಲ್ಲ ಎಂದಾದರೆ ಆಟೋಮ್ಯಾಟಿಕ್ ಆಗಿ ಸಿಮ್ ನಿಷ್ಕ್ರಿಯಗೊಳ್ಳುತ್ತದೆ. ನಿಷ್ಕ್ರಿಯಗೊಂಡ ನಂತರ ಅದು ತಕ್ಷಣವೇ ಬೇರೆಯವರ ಹೆಸರಿಗೆ ಹೋಗುವುದಿಲ್ಲ. ಬದಲಾಗಿ 6 ರಿಂದ 9 ತಿಂಗಳ ಕಾಲಾವಕಾಶವನ್ನೂ ಸಹ ನೀಡಲಾಗುತ್ತದೆ. ಆ ವೇಳೆ ನೀವು ಅದೇ ಸಿಮ್ ಅನ್ನು ಅಗತ್ಯ ಎಂದಾದರೆ ಮರುಪಡೆದುಕೊಳ್ಳಬಹುದು.

ಇದಾದ ನಂತರದಲ್ಲಿ ನೀವು ನಿಮ್ಮ ಸಿಮ್ ಅನ್ನು ಮರು ಸಕ್ರಿಯಗೊಳಿಸಲು ಇಚ್ಚೆ ಪಡಲಿಲ್ಲ ಎಂದಾದರೆ ಸಂಬಂಧಿತ ಕಂಪನಿಯು ಅಂತಿಮವಾಗಿ ಸಿಮ್ ಮುಕ್ತಾಯ ಪ್ರಕ್ರಿಯೆಯನ್ನು ನಡೆಸಲು ಆರಂಭಿಸುತ್ತದೆ. ಕೆಲವು ತಿಂಗಳ ನಂತರ ಈ ಸಿಮ್ ಸಂಖ್ಯೆಯನ್ನು ಇನ್ನೊಬ್ಬ ಬಳಕೆದಾರರಿಗೆ ವರ್ಗಾಯಿಸಲಾಗುತ್ತದೆ. ಈ ಪ್ರಕ್ರಿಯೆಗಳು ಒಂದು ವರ್ಷದವರೆಗೆ ನಡೆಯುತ್ತವೆ. ಅಂದರೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಸಿಮ್ ಅನ್ನು ವರ್ಗಾಯಿಸಲು ಒಟ್ಟಾರೆ ಒಂದು ವರ್ಷ ತೆಗೆದುಕೊಳ್ಳುತ್ತದೆ ಎಂಬುದು ನಿಮಗೆ ಗೊತ್ತಿರಲಿ.


Click it and Unblock the Notifications








