ಆಧಾರ್ ಕಾರ್ಡ್‌ನಲ್ಲಿ ಎಷ್ಟು ವಿಧಗಳು?..ಬ್ಲೂ ಆಧಾರ್ ಕಾರ್ಡ್‌ ಯಾರಿಗೆ?

|

ದೇಶದಲ್ಲಿ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಆಧಾರ್ ಕಾರ್ಡ್ ಅನ್ನು ಸಹ ಬಳಸಲಾಗುತ್ತದೆ. ಆಧಾರ್ ಕಾರ್ಡ್‌ ಜನರ ಪ್ರಮುಖ ಮಾಹಿತಿಗಳನ್ನು ಒಳಗೊಂಡಿದ್ದು, ಹಾಗೆಯೇ ಫಿಂಗರ್‌ಪ್ರಿಂಟ್‌ಗಳು ಮತ್ತು ಕಣ್ಣುಗಳ ರೆಟಿನಾದ ಸ್ಕ್ಯಾನ್‌ಗಳಂತಹ ಬಯೋಮೆಟ್ರಿಕ್ ಡೇಟಾವನ್ನು ಹೊಂದಿದೆ. ಆಧಾರ್ ಕಾರ್ಡ್‌ ಭಿನ್ನ ಮಾದರಿಗಳನ್ನು ಹೊಂದಿದೆ. ಹಾಗಾದರೆ ಅವು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಆಧಾರ್ ಕಾರ್ಡ್‌ನಲ್ಲಿ ಎಷ್ಟು ವಿಧಗಳು?..ಬ್ಲೂ ಆಧಾರ್ ಕಾರ್ಡ್‌ ಯಾರಿಗೆ?

ಏನಿದು ಆಧಾರ್ PVC ಕಾರ್ಡ್
ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ) ಕಾರ್ಡ್ ರೂಪದಲ್ಲಿ UIDAI ಆಧಾರ್ ಕಾರ್ಡುದಾರರಿಗೆ ಹೊಸ ಸೇವೆಯನ್ನು ಪ್ರಾರಂಭಿಸಿದೆ. ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್‌ನಂತೆಯೇ, ನಿಮ್ಮ ಪರ್ಸ್‌ನಲ್ಲಿ ಪಿವಿಸಿ ಆಧಾರ್ ಕಾರ್ಡ್ ಅನ್ನು ಇಟ್ಟುಕೊಳ್ಳಲು ಸಹಾಯವಾಗುತ್ತದೆ. ಈ ಆಧಾರ್ ಕಾರ್ಡ್ ಡಿಜಿಟಲ್ ಸಹಿ ಮಾಡಿದ ಸುರಕ್ಷಿತ ಕ್ಯೂಆರ್ ಕೋಡ್, ಹೊಲೊಗ್ರಾಮ್, ಘೋಸ್ಟ್ ಇಮೇಜ್, ಗಿಲ್ಲೋಚೆ ಪ್ಯಾಟರ್ನ್ ಇತ್ಯಾದಿ ಭದ್ರತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಆಧಾರ್ ಪಿವಿಸಿ ಕಾರ್ಡ್ ಪಡೆಯಲು ಈ ಕ್ರಮಗಳನ್ನು ಅನುಸರಿಸಿ:
ಹಂತ 1: UIDAI ಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ - uidai.gov.in
ಹಂತ 2: ಆರ್ಡರ್ ಪಿವಿಸಿ ಕಾರ್ಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಹಂತ 3: ಆಧಾರ್ ಕಾರ್ಡ್ ಆದೇಶಿಸಲು ನಿಮ್ಮ ಆಧಾರ್ ಸಂಖ್ಯೆ ಅಥವಾ ವರ್ಚುವಲ್ ಗುರುತಿನ ಸಂಖ್ಯೆ ಅಥವಾ ಇಐಡಿ ನಮೂದಿಸಿ
ಹಂತ 4: ಸೆಂಡ್ ಒಟಿಪಿ ಆಯ್ಕೆ ಮೇಲೆ ಕ್ಲಿಕ್ ಮಾಡಿ
ಹಂತ 5: ನೋಂದಾಯಿತ ಮೊಬೈಲ್ ಬಳಕೆಯಲ್ಲಿ ಮಾತ್ರ ಆಧಾರ್ ಪೂರ್ವವೀಕ್ಷಣೆ ಲಭ್ಯವಿದೆ. ನೋಂದಾಯಿಸದ ಮೊಬೈಲ್ ಆಧಾರಿತ ಆದೇಶಕ್ಕಾಗಿ ಆಧಾರ್ ಕಾರ್ಡ್ ವಿವರಗಳ ಪೂರ್ವವೀಕ್ಷಣೆ ಲಭ್ಯವಿಲ್ಲ.
ಹಂತ 6: ಟೈಮ್ ಬೇಸ್ಡ್ ಒನ್ ಟೈಮ್ ಪಾಸ್‌ವರ್ಡ್‌ (ಟಿಒಟಿಪಿ) ಅನ್ನು M-ಆಧಾರ್ ಅಪ್ಲಿಕೇಶನ್ ಮೂಲಕವೂ ಬಳಸಬಹುದು.

ಆಧಾರ್ ಕಾರ್ಡ್‌ನಲ್ಲಿ ಎಷ್ಟು ವಿಧಗಳು?..ಬ್ಲೂ ಆಧಾರ್ ಕಾರ್ಡ್‌ ಯಾರಿಗೆ?

ಇ-ಆಧಾರ್‌ ಕಾರ್ಡ್‌
ಆಧಾರ್ ಕಾರ್ಡ್‌ನ ಆವೃತ್ತಿಯನ್ನು ಇ-ಆಧಾರ್ ಎಂದು ಕರೆಯಲಾಗುತ್ತದೆ. ಈ ಆಧಾರ್ ಕಾರ್ಡ್ ಪಾಸ್‌ವರ್ಡ್ ಸುರಕ್ಷಿತವಾಗಿದೆ. ಅದರ ಮೇಲೆ ಸುರಕ್ಷಿತ ಕ್ಯೂಆರ್ ಕೋಡ್ ಕೂಡ ಇದೆ. ಈ ಕಾರ್ಡ್‌ನಲ್ಲಿ ಕೊನೆಯ ನಾಲ್ಕು ಸಂಖ್ಯೆಗಳನ್ನು ಮಾತ್ರ ನಮೂದಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಆಧಾರ್ ಕಾರ್ಡ್ ಡೇಟಾದ ಕಳ್ಳತನದ ಅಪಾಯವು ಬಹಳವಾಗಿದೆ.

ಎಂ-ಆಧಾರ್ ಕಾರ್ಡ್ (mAadhaar):
ಎಂ-ಆಧಾರ್ ಮೊಬೈಲ್‌ ಅಪ್ಲಿಕೇಶನ್ ಆಗಿದೆ. ಈ ಆಪ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್‌ನ ಸಾಫ್ಟ್ ಕಾಪಿಯನ್ನು ಸಂಗ್ರಹಿಸಿ ಇಡಬಹುದು. ಗೂಗಲ್‌ ಪ್ಲೇ ಸ್ಟೋರ್‌ ಗೆ ಭೇಟಿ ನೀಡುವ ಮೂಲಕ ನೀವು ಎಂ-ಆಧಾರ್ ಕಾರ್ಡ್ ಅಪ್ಲಿಕೇಶನ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು.

ಬ್ಲೂ ಕಲರ್ ಆಧಾರ್ ಕಾರ್ಡ್‌ ಅಥವಾ ಬಾಲ್ ಆಧಾರ್ ಕಾರ್ಡ್
ಮಕ್ಕಳಿಗಾಗಿ ನೀಡುವ ಆಧಾರ್ ಕಾರ್ಡ್‌ ಅನ್ನು ಬ್ಲೂ ಕಲರ್ ಆಧಾರ್ ಕಾರ್ಡ್‌ ಅಥವಾ ಬಾಲ್ ಆಧಾರ್ ಕಾರ್ಡ್ ಎಂದು ಕರೆಯಲಾಗುತ್ತದೆ. ನವಜಾತ ಶಿಶುಗಳ ಪೋಷಕರು ಭಾರತದಲ್ಲಿ ಬಾಲ್ ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು. ಬಾಲ ಆಧಾರ್ ಕಾರ್ಡ್ ಅನ್ನು UIDAI 2018 ರಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಪರಿಚಯಿಸಿತು. ಮಗುವು 5 ವರ್ಷ ದಾಟಿದ ನಂತರ, ಬಾಲ ಆಧಾರ್ ಕಾರ್ಡ್ ಅಮಾನ್ಯವಾಗುತ್ತದೆ. ಆದ್ದರಿಂದ ಮಗುವಿನ ಬಯೋಮೆಟ್ರಿಕ್ ಡೇಟಾವನ್ನು ನವೀಕರಿಸಬೇಕಾಗುತ್ತದೆ. ಹಾಗೆ ಮಾಡಿದಾಗ, ಮಗುವಿಗೆ ವಯಸ್ಕರಂತೆ ಸಾಮಾನ್ಯ ಆಧಾರ್ ಕಾರ್ಡ್ ನೀಡಲಾಗುತ್ತದೆ.

Best Mobiles in India

English summary
How Many Types Of Aadhar Card Are There? What is Blue Aadhaar card.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X