ನೀವು ಬಳಕೆ ಮಾಡುವ ಫೋನ್‌ಗಳ ಡಿಸ್‌ಪ್ಲೇ ಬಗ್ಗೆ ನಿಮಗೆಷ್ಟು ಗೊತ್ತು?; ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
ಸ್ಮಾರ್ಟ್‌ಫೋನ್ ಖರೀದಿಯ ವೇಳೆ ನಾವು ನೀವೆಲ್ಲರೂ ಅದರ ಬೆಲೆ, ಫೀಚರ್ಸ್ ಹಾಗೂ ಕ್ಯಾಮೆರಾ ಕಡೆ ಕೇಂದ್ರೀಕರಿಸುತ್ತೇವೆ. ಆದರೆ ಆ ಫೋನ್ ಯಾವ ಡಿಸ್‌ಪ್ಲೇ ಹೊಂದಿದೆ ಅದರಿಂದ ಪ್ರಯೋಜನ ಏನು ಎಂಬ ಬಗ್ಗೆ ತಿಳಿಯಲು ಮುಂದಾಗುವುದಿಲ್ಲ. ಯಾಕೆಂದರೆ ಅದರ ಬಗ್ಗೆ ಸಾಮಾನ್ಯವಾಗಿ ಕೆಲವರೂ ತಲೆ ಕೆಡೆಸಿಕೊಳ್ಳುವುದೇ ಇಲ್ಲ.
ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿ ಡಿಸ್‌ಪ್ಲೇ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಆಧಾರದ ಮೇಲೆಯೂ ಫೋನ್‌ನ ಬೆಲೆಗಳು ಸಹ ನಿರ್ಧಾರ ಆಗುತ್ತವೆ ಎಂಬುದು ನಿಮಗೆ ಗೊತ್ತಿರಲಿ. ಹಾಗೆಯೇ ಇತ್ತೀಚೆಗೆ ಫೋಲ್ಡಬಲ್ ಡಿಸ್‌ಪ್ಲೇಗಳು ಸಹ ಭಾರೀ ಸದ್ದು ಮಾಡುತ್ತಿದ್ದು, ಬಳಕೆದಾರರನ್ನು ಇನ್ನಷ್ಟು ಆಕರ್ಷಿಸುತ್ತಿವೆ. ಜೊತೆಗೆ ಉತ್ತಮ ರೀತಿಯ ಬಳಕೆಯ ಅನುಭವವನ್ನು ಇವು ನೀಡುತ್ತವೆ. ಹಾಗಿದ್ರೆ, ಯಾವೆಲ್ಲಾ ರೀತಿಯ ಡಿಸ್‌ಪ್ಲೇಗಳಿಂದ ಏನೆಲ್ಲಾ ಪ್ರಯೋಜನ ಎಂಬುದನ್ನು ತಿಳಿದುಕೊಳ್ಳಿ. ಈ ಮೂಲಕ ನೀವು ಉತ್ತಮ ಫೋನ್ ಖರೀದಿ ಮಾಡಲು ಸಹಾಯ ಆಗಬಹುದು.

ಎಲ್‌ಸಿಡಿ ಡಿಸ್‌ಪ್ಲೇಗಳು
ಸಾಮಾನ್ಯವಾಗಿ ಬಹುಪಾಲು ಫೋನ್‌ಗಳಲ್ಲಿ ಈ ಎಲ್‌ಸಿಡಿ ಡಿಸ್‌ಪ್ಲೇಗಳನ್ನು ಬಳಕೆ ಮಾಡಲಾಗುತ್ತದೆ. ಎಲ್‌ಸಿಡಿ ಎಂದರೆ ಲಿಕ್ವಿಡ್ ಕ್ರಿಸ್ಟಲ್ ಡಿಸ್‌ಪ್ಲೇ ಎಂದರ್ಥ. ಈ ಡಿಸ್‌ಪ್ಲೇಗಳು ಕಡಿಮೆ ಬೆಲೆಯನ್ನು ಹೊಂದಿರುವುದರಿಂದ ಮಧ್ಯಮ ಶ್ರೇಣಿಯ ಫೋನ್‌ಗಳಲ್ಲಿ ಇವುಗಳನ್ನು ಬಳಕೆ ಮಾಡಲಾಗುತ್ತದೆ. ಇದರಲ್ಲಿ ಥಿನ್ ಫಿಲ್ಮ್ ಟ್ರಾನ್ಸಿಸ್ಟರ್ (TFT) ಹಾಗೂ ಇನ್-ಪ್ಲೇಸ್ ಸ್ವಿಚಿಂಗ್ (IPS) ಎಂಬ ಎರಡು ರೀತಿಯ ವರ್ಗಗಳಿವೆ.
OLED ಡಿಸ್‌ಪ್ಲೇ
ಆರ್ಗ್ಯಾನಿಕ್ ಲೈಟ್ ಎಮಿಟಿಂಗ್ ಡಯೋಡ್ (OLED) ಎಂದು ಕರೆಯಲ್ಪಡುವ ಈ ಡಿಸ್‌ಪ್ಲೇಗಳನ್ನು ತೆಳುವಾದ ಎಲೆಕ್ಟ್ರೋಲ್ಯುಮಿನೆಸೆಂಟ್ ಶೀಟ್‌ಗಳಿಂದ ನಿರ್ಮಾಣ ಮಾಡಲಾಗಿದೆ. ಇದರ ವಿಶೇಷತೆ ಎಂದರೆ ಈ ಡಿಸ್‌ಪ್ಲೇ ಇರುವ ಫೋನ್‌ಗಳಲ್ಲಿ ಬ್ಯಾಕ್ಲೈಟ್ ಅಗತ್ಯವಿಲ್ಲ. ಇವು ತಮ್ಮದೇ ಆದ ಬ್ರೈಟ್‌ನೆಸ್ ಉತ್ಪಾದಿಸುವ ಕಾರಣ ಕಡಿಮೆ ಬ್ಯಾಟರಿ ಶಕ್ತಿಯನ್ನು ಬಳಸುತ್ತವೆ.

ಅಮೋಲೆಡ್ ಡಿಸ್‌ಪ್ಲೇ
ಅಮೋಲೆಡ್ ಆಕ್ಟಿವ್ ಮ್ಯಾಟ್ರಿಕ್ಸ್ ಆರ್ಗ್ಯಾನಿಕ್ ಲೈಟ್-ಎಮಿಟಿಂಗ್ ಡಯೋಡ್ (AMOLED ) ಎಂದು ಕರೆಯಲಾಗುತ್ತದೆ. ಹಾಗೆಯೇ ಈ ಡಿಸ್‌ಪ್ಲೇ ಯನ್ನು ಇತ್ತೀಚೆಗೆ ಪ್ರಮುಖ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆ ಮಾಡಲಾಗುತ್ತಿದ್ದು, ಇದಕ್ಕೆ ಥಿನ್-ಫಿಲ್ಮ್ ಡಿಸ್‌ಪ್ಲೇ ತಂತ್ರಜ್ಞಾನ ಎಂದೂ ಸಹ ಕರೆಯಲಾಗುತ್ತದೆ. AMOLED ಡಿಸ್‌ಪ್ಲೇ ಗುಣಮಟ್ಟವು OLED ಗಳಿಗಿಂತ ಉತ್ತಮವಾಗಿದ್ದು, ಇದು TFT ಗಳ ಹೆಚ್ಚುವರಿ ಲೇಯರ್ ಅನ್ನು ಹೊಂದಿದೆ.
ಸೂಪರ್ ಅಮೋಲೆಡ್ ಡಿಸ್‌ಪ್ಲೇ
ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೆಚ್ಚು ಸುಧಾರಿತ ಆವೃತ್ತಿಯಾಗಿದ್ದು, ಇದು ಟಚ್-ಸೆನ್ಸರ್‌ಗಳು ಮತ್ತು ಡಿಸ್‌ಪ್ಲೇಯನ್ನು ಒಂದೇ ಲೇಯರ್‌ನಲ್ಲಿ ಸಂಯೋಜಿಸಲಾಗಿದ್ದು, ಸಾಮಾನ್ಯ ಎಲ್‌ಸಿಡಿಗೆ ಹೋಲಿಸಿದಾಗ ಈ ಡಿಸ್‌ಪ್ಲೇಯು ಫೋನ್‌ನ ಕಡಿಮೆ ಶಕ್ತಿಯನ್ನು ಬಳಕೆ ಮಾಡುತ್ತದೆ. ಜೊತೆಗೆ ಎದ್ದುಕಾಣುವ ಚಿತ್ರದ ಗುಣಮಟ್ಟವನ್ನು ಇದು ನೀಡುತ್ತದೆ. ಹಾಗೆಯೇ ವೇಗವಾದ ಚಲನೆಯ ಪ್ರತಿಕ್ರಿಯೆ ಸಾಮರ್ಥ್ಯವನ್ನು ಇದು ಪಡೆದುಕೊಂಡಿದೆ.

ರೆಟಿನಾ ಡಿಸ್‌ಪ್ಲೇ
ರೆಟಿನಾ ಡಿಸ್‌ಪ್ಲೇ ಯನ್ನು ಬ್ರ್ಯಾಂಡೆಂಡ್ ಫೋನ್‌ಗಳಲ್ಲಿ ಬಳಕೆ ಮಾಡಲಾಗುತ್ತದೆ. ಹಾಗೆಯೇ ಆಪಲ್ ತನ್ನ ಐಪಿಎಸ್ ಎಲ್‌ಸಿಡಿ ಮತ್ತು ಒಎಲ್‌ಇಡಿ ಡಿಸ್‌ಪ್ಲೇಗಳ ಸರಣಿಗಳಿಗೆ ರೆಟಿನಾ ಎಂಬ ಬ್ರ್ಯಾಂಡ್ ಹೆಸರನ್ನು ಸೂಚಿಸಿದ್ದು, ಇದು ಸಾಂಪ್ರದಾಯಿಕ ಡಿಸ್‌ಪ್ಲೇಗಳಿಗಿಂತ ಹೆಚ್ಚಿನ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿರಲಿದೆ. ಈ ರೀತಿಯ ಡಿಸ್‌ಪ್ಲೇಯನ್ನು ಆಪಲ್ ಐಫೋನ್ 4 ನಲ್ಲಿ ಪರಿಚಯಿಸಲಾಗಿದೆ.
ಇನ್ಫಿನಿಟಿ-ಒ ಮತ್ತು ವಿ-ಡಿಸ್‌ಪ್ಲೇ
ಇನ್ಫಿನಿಟಿ-ಒ ಮತ್ತು ವಿ-ಡಿಸ್‌ಪ್ಲೇ ಗಳನ್ನು ಹೆಚ್ಚಾಗಿ ಸ್ಯಾಮ್‌ಸಂಗ್ ಫೋನ್‌ಗಳಲ್ಲಿ ಬಳಕೆ ಮಾಡಲಾಗುತ್ತಿದ್ದು, ಇನ್ಫಿನಿಟಿ-ಒ ಡಿಸ್‌ಪ್ಲೇಗಳು ಡಿಸ್‌ಪ್ಲೇ ಮೇಲಿನ ಮೂಲೆಯಲ್ಲಿ ಸೆಲ್ಫಿ ಕ್ಯಾಮೆರಾಕ್ಕೆ 'O 'ಆಕಾರದ ಕಟೌಟ್ ಅನ್ನು ನೀಡಲು ಅನುಕೂಲ ಮಾಡಿಕೊಡುತ್ತದೆ. ಈ ಮೂಲಕ ಡಿಸ್‌ಪ್ಲೇ ಅಂಚನ್ನು ಕಡಿಮೆ ಮಾಡುತ್ತದೆ. ಸೆಲ್ಫಿ ಕ್ಯಾಮೆರಾದೊಳಗೆ ಈ ಡಿಸ್‌ಪ್ಲೇ ಸುಲಭವಾಗಿ ಹೊಂದಿಕೊಳ್ಳಲಿದ್ದು, ಜಾಗವನ್ನು ಮೇಲಿನ ಅಂಚಿನವರೆಗೆ ವಿಸ್ತರಿಸುತ್ತದೆ.
ಫೋಲ್ಡಬಲ್ ಡಿಸ್‌ಪ್ಲೇ
OLED ಡಿಸ್‌ಪ್ಲೇಗಳ ವಿಭಾಗದಲ್ಲಿ ಈ ಫೋಲ್ಡಬಲ್ ಡಿಸ್‌ಪ್ಲೇ ಗಳು ಕಂಡುಬರುತ್ತಿದ್ದು, ಇದು ಹೆಚ್ಚು ತೆಳುವಾದ ಶೈಲಿಯನ್ನು ಹೊಂದಿರುವುದರಿಂದ ಇದನ್ನು ಫೋಲ್ಡ ಮಾಡಲು ಅನುಕೂಲ ಆಗುತ್ತದೆ. ಹಾಗೆಯೇ ರೋಲ್ ಸಹ ಮಾಡಬಹುದಾಗಿದೆ. ಇತ್ತೀಚಿನ ಹೊಸ ಫೋನ್‌ಗಳಲ್ಲಿ ಹಾಗೂ ಫೋಲ್ಡಬಲ್ ಫೋನ್‌ಗಳಲ್ಲಿ ಈ ಡಿಸ್‌ಪ್ಲೇ ಕಾಣಿಸಿಕೊಳ್ಳುತ್ತಿದ್ದು, ಬೆಲೆ ದುಬಾರಿಯಾಗಿದೆ. ಈ ಮೂಲಕ ಬಳಕೆದಾರರಿಗೆ ವಿಶೇಷವಾದ ಅನುಭವವನ್ನು ನೀಡುತ್ತದೆ.


Click it and Unblock the Notifications








