Home
ಸುದ್ದಿಜಾಲ

ಗೂಗಲ್ ಪೇ, ಫೋನ್ ಪೇ ಆಪ್‌ಗಳಲ್ಲಿ ನಡೆಯುತ್ತಿದೆ 'ರಿಕ್ಷೆಸ್ಟ್ ಮನಿ' ವಂಚನೆ!!

ಯುಪಿಐ ಆಧಾರಿತ ಮೂಲಕ ಹಣ ವಹಿವಾಟು ನಡೆಸುವ ವ್ಯವಸ್ಥೆಯಲ್ಲಿ ಅಷ್ಟೇನೂ ಜನಪ್ರಿಯವಲ್ಲದ ಒಂದು ಫೀಚರ್ ಮೂಲಕ ಹಣ ದೋಚುತ್ತಿರುವ ಘಟನೆಗಳು ವರದಿಯಾಗಿವೆ. ಯುಪಿಐ ಪೇಮೆಂಟ್ ಆಪ್‌ಗಳಲ್ಲಿ ಹಣ ಕೇಳುವುದಕ್ಕಾಗಿ ಅಥವಾ ನಮಗೆ ಯಾರಿಂದಲಾದರೂ ಹಣ ಬರಬೇಕಿದೆ ಎಂದಾದರೆ ನಾವು ಅವರಿಗೆ ಮೊಬೈಲ್ ಆಪ್‌ನಲ್ಲಿ ವಿನಂತಿ ಕಳುಹಿಸಬಹುದು. ಇದನ್ನೇ ಬಳಸಿಕೊಂಡು ವಂಚಕರು ಗ್ರಾಹಕರ ಹಣಕ್ಕೆ ಕನ್ನಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ಗೂಗಲ್ ಪೇ, ಫೋನ್ ಪೇ ಆಪ್‌ಗಳು ಸೇರಿದಂತೆ ಯುಪಿಐ ಆಧಾರಿತವಾಗಿ ಹಣ ವಹಿವಾಟು ನಡೆಸುವ ಎಲ್ಲಾ ಮೊಬೈಲ್‌ ಆಪ್‌ಗಳಲ್ಲಿ 'ರಿಕ್ಷೆಸ್ಟ್ ಮನಿ' ಎಂಬ ಆಯ್ಕೆ ಇರುತ್ತದೆ. ಈ 'ರಿಕ್ಷೆಸ್ಟ್ ಮನಿ' ಆಯ್ಕೆಯಲ್ಲಿ ಓರ್ವ ತನ್ನ ಭೀಮ್ ಅಪ್ಲಿಕೇಶನ್‌ ಅಥವಾ ತನ್ನ ಬ್ಯಾಂಕ್‌ ಯುಪಿಐ ಅಪ್ಲಿಕೇಶನ್‌ ಮೂಲಕ ಇತರರಿಗೆ ಹಣ ಕಳುಹಿಸಲು ವಿನಂತಿ ಕಳುಹಿಸಬಹುದು. ಆ ರಿಕ್ವೆಸ್ಟ್ ಗೆ ಆತ ಓಕೆ ಕೊಟ್ಟರೆ ಅವನ ಖಾತೆಯಿಂದ ಹಣ ರಿಕ್ಷೆಸ್ಟ್ ಕಳುಹಿಸಿದ ವ್ಯಕ್ತಿಯ ಖಾತೆಗೆ ಹೋಗುತ್ತದೆ.

ಗೂಗಲ್ ಪೇ, ಫೋನ್ ಪೇ ಆಪ್‌ಗಳಲ್ಲಿ ನಡೆಯುತ್ತಿದೆ 'ರಿಕ್ಷೆಸ್ಟ್ ಮನಿ' ವಂಚನೆ!!

ಈ 'ರಿಕ್ಷೆಸ್ಟ್ ಮನಿ' ಎಂಬುದುದು ಒಂದು ಒಳ್ಳೆಯ ಸೌಲಭ್ಯವಾದರೂ ಕೂಡ, ಇದನ್ನೇ ದುರ್ಬಳಕೆ ಮಾಡಿಕೊಳ್ಳುವ ಹೊಸ ವಿಧಾನವೊಂದು ಚಾಲ್ತಿಗೆ ಬಂದಿದೆ. ಯಾರೋ ಅನಾಮಿಕರು ಕರೆ ಮಾಡಿ, ನಿಮಗೆ 50 ಸಾವಿರ ರೂ. ಬಹುಮಾನ ಬಂದಿದೆ. ಈಗಲೇ ನಾವು ವರ್ಗಾವಣೆ ಮಾಡುತ್ತೇವೆ. ಅದಕ್ಕೆ ನೀವು ಮಾಡಬೇಕಾದ್ದಿಷ್ಟೇ. ನಿಮ್ಮ ಪೇಮೆಂಡ್ ಅಪ್ಲಿಕೇಶನ್‌ ಓಪನ್‌ ಮಾಡಿ ಅದರಲ್ಲಿ ರಿಕ್ವೆಸ್ಟ್ ಬಂದ ತಕ್ಷಣ ಅಕ್ಸೆಪ್ಟ್ ಅಂತ ಕೊಟ್ಟುಬಿಡಿ ಎಂದು ಹೇಳುತ್ತಾರೆ.

ನಾನು ಫೋನ್‌ನಲ್ಲೇ ಇರುತ್ತೇನೆ. ನೀವು ಈಗಲೇ ಆ ರಿಕ್ವೆಸ್ಟ್ ಅನ್ನು ಅಕ್ಸೆಪ್ಟ್ ಮಾಡಿ ಎಂದು ಹೇಳುತ್ತಾರೆ. ಆದರೆ. ವಾಸ್ತವವಾಗಿ ನಾವು ಅಕ್ಸೆಪ್ಟ್ ಮಾಡುವುದು ತನ್ನ ಖಾತೆಯಿಂದ ಆ ಅನಾಮಿಕನ ಖಾತೆಗೆ ಹಣ ವರ್ಗಾವಣೆಯನ್ನು ಕೇಳಿರುತ್ತದೆ.! ನಂತರ ಪಿನ್ ನಮೂದಿಸಿದರೆ ಹಣ ಕೂಡ ಖಾಲಿಯಾಗುತ್ತದೆ. ಫೋನ್‌ನಲ್ಲಿದ್ದಾಗ ನಮ್ಮ ಗಮನ ನೋಟಿಸ್ ಓದುವುದರ ಮೇಲೆ ಇರುವುದಿಲ್ಲವಾದ್ದರಿಂದ ಹೀಗೆ ಯಾಮಾರಿಸುವುದು ಬಹಳ ಸುಲಭವಾಗಿದೆ.

ಗೂಗಲ್ ಪೇ, ಫೋನ್ ಪೇ ಆಪ್‌ಗಳಲ್ಲಿ ನಡೆಯುತ್ತಿದೆ 'ರಿಕ್ಷೆಸ್ಟ್ ಮನಿ' ವಂಚನೆ!!

ಟೆಕ್ನಾಲಜಿಯಲ್ಲಿರುವ ಅನುಕೂಲವನ್ನೇ ಅನಾನುಕೂಲವನ್ನಾಗಿ ಮಾಡುವ ಒಂದು ಕುತಂತ್ರ ಕೂಡ ಇದಾಗಿದ್ದು, ಎಂಥ ವ್ಯಕ್ತಿಯೇ ಆದರೂ ಇಂಥ ಸನ್ನಿವೇಶದಲ್ಲಿ ಯಾಮಾರಬಹುದು. ಆದರೆ, ಎಂಥಧ್ದೋ ಹಣ ಬರುವುದಿದೆ ಎಂದೋ ಅಥವಾ ಮತ್ತೆಲ್ಲಿಂದಲೋ ಹಣ ಬರುತ್ತದೆ ಎಂದಾಗ ಖುಷಿಪಡಬಾರದು. ಈ ವೇಳೆಯಲ್ಲಿ ನಾವು ಸ್ವಲ್ಪ ಎಚ್ಚರ ವಹಿಸಿದರೆ ಇಲ್ಲೇ ಇದು ಸುಳ್ಳು ಎಂದು ಗೊತ್ತು ಮಾಡಿಬಿಡಬಹುದು.ಇದಕ್ಕೆ ಬೇಕಿರುವುದು ಸಾಮಾನ್ಯ ಜ್ಞಾನವಷ್ಟೇ.!

ಓದಿರಿ: ಅಮೆಜಾನ್ ಭರ್ಜರಿ ಆಫರ್!..ಬಿಡುವಿನ ವೇಳೆಯಲ್ಲಿ ಗಂಟೆಗೆ 140 ರೂ.ಗಳಿಸಿ!!

Best Mobiles in India

English summary
How Not To Be a Victim of UPI Frauds . What kind of fraud can happen with BHIM app?. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+