Home
ಸುದ್ದಿಜಾಲ

ಅಮೆಜಾನ್ ಭರ್ಜರಿ ಆಫರ್!..ಬಿಡುವಿನ ವೇಳೆಯಲ್ಲಿ ಗಂಟೆಗೆ 140 ರೂ.ಗಳಿಸಿ!!

ಅಮೆಜಾನ್ ಭರ್ಜರಿ ಆಫರ್!..ಬಿಡುವಿನ ವೇಳೆಯಲ್ಲಿ ಗಂಟೆಗೆ 140 ರೂ.ಗಳಿಸಿ!!

ಬಿಡುವಿನ ವೇಳೆಯಲ್ಲಿ ಗಂಟೆಗೆ ₹ 120 ರಿಂದ ₹ 140ವರೆಗೂ ಹಣ ಗಳಿಸಬೇಕು ಎಂದುಕೊಂಡಿದ್ದರೆ ಈಗಲೇ ಅಮೆಜಾನಿನ ಫ್ಲೆಕ್ಸ್ ಆಪ್‌ಗೆ ಲಾಗಿನ್ ಆಗಿ. ಏಕೆಂದರೆ, ವಿಶ್ವದ ಪ್ರಮುಖ ಇ -ಕಾಮರ್ಸ್ ಸಂಸ್ಥೆ ಅಮೆಜಾನ್‌ ಇಂಡಿಯಾ, ಅಮೆಜಾನ್‌ ಸರಕುಗಳನ್ನು ಗ್ರಾಹಕರಿಗೆ ತಲುಪಿಸಿ ಗಂಟೆಗಳ ಲೆಕ್ಕದಲ್ಲಿ ಆದಾಯ ಗಳಿಸಬಹುದಾದ ಅರೆಕಾಲಿಕ ಉದ್ಯೋಗ ಅವಕಾಶ ನೀಡುತ್ತಿದೆ.

ಹೌದು, ಉತ್ತರ ಅಮೆರಿಕಾ, ಜರ್ಮನಿ, ಸ್ಪೇನ್, ಜಪಾನ್, ಸಿಂಗಪೂರ್ ಮತ್ತು ಯುಕೆಗಳಲ್ಲಿ ಆರು ಮಾರುಕಟ್ಟೆಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅರೆ ಉದ್ಯೋಗಕ್ಕೆ ಭಾರತದಲ್ಲೂ ಇದೀಗ ಚಾಲನೆ ದೊರೆತಿದೆ. ಆಸಕ್ತರು ಬಿಡುವಿನ ವೇಳೆಯಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಸಂಸ್ಥೆಯ ಸರಕು ಪೂರೈಸುವ 'ಅಮೆಜಾನ್‌ ಫ್ಲೆಕ್ಸ್' ಸೇವೆಗೆ ಅಮೆಜಾನ್ ದೇಶದಲ್ಲಿ ಚಾಲನೆ ನೀಡಿದೆ.

ಅಮೆಜಾನ್ ಭರ್ಜರಿ ಆಫರ್!..ಬಿಡುವಿನ ವೇಳೆಯಲ್ಲಿ ಗಂಟೆಗೆ 140 ರೂ.ಗಳಿಸಿ!!

ಗಂಟೆಗಳ ಲೆಕ್ಕದಲ್ಲಿ ಆದಾಯ ಗಳಿಸಬಹುದಾದ ಅಮೆಜಾನಿನ ಈ ಅರೆಕಾಲಿಕ ಉದ್ಯೋಗ ಅವಕಾಶಗಳು ಬೆಂಗಳೂರು, ಮುಂಬೈ ಮತ್ತು ದೆಹಲಿ ನಗರಗಳಲ್ಲಿ ಲಭ್ಯವಿದ್ದು, ಸರಕುಗಳನ್ನು ಗ್ರಾಹಕರಿಗೆ ತಲುಪಿಸಿ ಗಂಟೆಗಳ ಲೆಕ್ಕದಲ್ಲಿ ಹಣಗಳಿಸಬಹುದು. ಹಾಗಾದರೆ, ಅಮೆಜಾನಿನ ಸಂಸ್ಥೆಯ ಅರೆಕಾಲಿಕ ಉದ್ಯೋಗ ಪಡೆಯುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಓದಿರಿ: ಸ್ವಂತ ಮನೆ ಕನಸು ಕಂಡಿದ್ದ ತಾಯಿಗೆ ಬಂಗಲೆಯನ್ನೇ ಕಟ್ಟಿಸಿದ ಈತನ ಸಾಧನೆ ಅಮೋಘ!!

ಏನಿದು ಅಮೆಜಾನ್ ಫ್ಲೆಕ್ಸ್ ಸೇವೆ!

ಏನಿದು ಅಮೆಜಾನ್ ಫ್ಲೆಕ್ಸ್ ಸೇವೆ!

ಆಸಕ್ತರು ತಾವು ನೆಲೆಸಿರುವ ಪ್ರದೇಶದ ವ್ಯಾಪ್ತಿಯಲ್ಲಿ ತಮಗೆ ಅನುಕೂಲವಾದ ಸಮಯ ಮತ್ತು ದಿನದಲ್ಲಿ 4 ಗಂಟೆಯವರೆಗೆ ಸರಕುಗಳನ್ನು ಮನೆ, ಕಚೇರಿಗಳಿಗೆ ತಲುಪಿಸುವ ಉದ್ಯೋಗ ನೀಡುವ ಆಪ್ ಇದಾಗಿದೆ. ಈ ಆಪ್‌ನಲ್ಲಿ ಲಾಗಿನ್ ಆಗಿ, ಆಸಕ್ತರು ತಮ್ಮ ಆಯ್ಕೆಯ ಸಮಯ ಮತ್ತು ದಿನಗಳಲ್ಲಿ ಕೆಲಸ ಮಾಡಬಹುದು. ಇದಕ್ಕೆ ನಿಖರ ಸಮಯದಲ್ಲಿ ಹಣ ನೀಡಲಾಗುತ್ತದೆ.

ಹೇಗಿರುತ್ತದೆ ಅರೆಕಾಲಿಕ ಉದ್ಯೋಗ?

ಹೇಗಿರುತ್ತದೆ ಅರೆಕಾಲಿಕ ಉದ್ಯೋಗ?

ಆಸಕ್ತ ಸ್ತ್ರೀ ಪುರುಷರು ಈ ಕೆಲಸವನ್ನು ನಿರ್ವಹಿಸಬಹುದಾಗಿದೆ. ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಮನೆಗೆಲಸದ ಬಿಡುವಿನ ಸಮಯದಲ್ಲಿ ಅಮೆಜಾನ್‌ ಸರಕುಗಳನ್ನು ಗ್ರಾಹಕರಿಗೆ ತಲುಪಿಸಿ ಗಂಟೆಗಳ ಲೆಕ್ಕದಲ್ಲಿ ಆದಾಯ ಗಳಿಸಬಹುದು. ಅರೆಕಾಲಿಕ ಉದ್ಯೋಗ ಅವಕಾಶ ಇದಾಗಿರುವುದರಿಂದ ಬಿಡುವಿನ ಸಮಯವನ್ನು ಆದಾಯ ಗಳಿಕೆಗೆ ಸದ್ಬಳಕೆ ಮಾಡಿಕೊಳ್ಳಬಹುದು.

ಉದ್ಯೋಗ ಪಡೆಯುವುದು ಹೇಗೆ?

ಉದ್ಯೋಗ ಪಡೆಯುವುದು ಹೇಗೆ?

ಆಸಕ್ತರು ಅಮೆಜಾನ್‌ ಫ್ಲೆಕ್ಸ್ ಮೊಬೈಲ್‌ ಆ‍ಪ್ ಮೂಲಕ ಹೆಸರು ನೋಂದಾಯಿಸಿ ಕೊಂಡು ಈ ಅರೆಕಾಲಿಕ ಉದ್ಯೋಗ ಮಾಡಬಹುದು. 18 ವರ್ಷಕ್ಕಿಂತ ಹೆಚ್ಚಿನ ವಯೋಮಾನದ, ವಾಹನ ಚಾಲನಾ ಪತ್ರ, ಪ್ಯಾನ್‌ ಕಾರ್ಡ್‌ ಮತ್ತು ಸ್ವಂತ ದ್ವಿಚಕ್ರ ವಾಹನ ಹೊಂದಿರುವವರು ಈ ಕೆಲಸಕ್ಕೆ ಅರ್ಹರಾಗಿರುತ್ತಾರೆ. ಈ ಕೆಲಸಕ್ಕೆ ಗೃಹಿಣಿಯರೂ ಸಹ ಸೇರಬಹುದು ಎಂದು ಸಂಸ್ಥೆ ಹೇಳಿದೆ.

ಹಣ ಹೇಗೆ ಪಾವತಿಯಾಗುತ್ತದೆ?

ಹಣ ಹೇಗೆ ಪಾವತಿಯಾಗುತ್ತದೆ?

ಅರೆಕಾಲಿಕ ಉದ್ಯೋಗ ನಿರ್ವಹಿಸುವವರಿಗೆ ಪ್ರತಿ ಬುಧವಾರದಲ್ಲೂ ಆನ್ಲೈನ್ ​​ಬ್ಯಾಂಕ್ ವರ್ಗಾವಣೆಯ ಮೂಲಕ ಪಾವತಿಸಲಾಗುತ್ತದೆ. ಇದಕ್ಕಾಗಿ ಪಾನ್ ಸಂಖ್ಯೆ ಹೊಂದಿರುವುದು ಕಡ್ಡಾಯ ಮತ್ತು ಅರಕಾಲಿಕ ಉದ್ಯೋಗಿಗಳಾಗೂ ಸಹ 5 ಲಕ್ಷ ರೂ. ವರೆಗೆ ವಿಮೆಯನ್ನು ನೀಡಲಾಗುತ್ತದೆ ಎಂದು ಅಮೆಜಾನಿನ ಏಷ್ಯಾ ವಲಯದ ಉಪಾಧ್ಯಕ್ಷ ಅಖಿಲ್ ಸಕ್ಸೇನಾ ಅವರು ತಿಳಿಸಿದ್ದಾರೆ.

ತರಬೇತಿ ನೀಡಲಾಗುವುದು.

ತರಬೇತಿ ನೀಡಲಾಗುವುದು.

ಅರೆಕಾಲಿಕ ಉದ್ಯೋಗ ಆಸಕ್ತರ ಪೂರ್ವಾಪರಗಳನ್ನು ಸಮಗ್ರವಾಗಿ ಪರಿಶೀಲಿಸಿದ ನಂತರವೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಸರಕು ವಿತರಣೆ ಆರಂಭಿಸುವ ಮೊದಲು ಅವರಿಗೆ ಸಮಗ್ರ ತರಬೇತಿ ನೀಡಲಾಗುವುದು. ಉದ್ಯೋಗಿಗಳಿಗೆ ಗುಂಪು ವಿಮೆ ಮತ್ತು ಪ್ರತಿ ಗಂಟೆಗೆ 120ರಿಂದ 140ವರೆಗಿನ ಲೆಕ್ಕದಲ್ಲಿ ಆದಾಯ ಗಳಿಸಬಹುದು ಎಂದು ಅಖಿಲ್ ಸಕ್ಸೇನಾ ಅವರು ಹೇಳಿದ್ದಾರೆ.

ಓದಿರಿ: ಭಾರತದ ಬಾಹ್ಯಾಕಾಶ ನಿಲ್ದಾಣದ ಸುದ್ದಿ ಕೇಳಿ ಇಡೀ ವಿಶ್ವಕ್ಕೇ ಅಚ್ಚರಿ!..ಏಕೆ ಗೊತ್ತಾ?

Best Mobiles in India

English summary
Amazon Flex was being tested in the country over the past few weeks and is now available across Bengaluru, Mumbai, and Delhi.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+