ಮೊಬೈಲ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಗೊತ್ತಾ?: ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ಸ್ಮಾರ್ಟ್‌ಫೋನ್‌ಗಳು ಎಂದಾಕ್ಷಣ ನಮ್ಮ ಕಣ್ಣ ಮುಂದೆ ನೆನಪಾಗುವುದು ದೊಡ್ಡ ಡಿಸ್‌ಪ್ಲೇ, ಟಚ್ ಸ್ಕ್ರೀನ್, ವಿಡಿಯೋ ಪ್ಲೇ ಮಾಡುವ ಆಯ್ಕೆ ಹಾಗೂ ಗೇಮ್ ಆಡಲು ಅನುಕೂಲ ಅಂತ. ಆದರೆ, ಈ ಎಲ್ಲಾ ಪ್ರಕ್ರಿಯೆಗಳು ಒಂದು ಚಿಕ್ಕ ಗಾತ್ರದ ಡಿವೈಸ್‌ನಲ್ಲಿ ಅದೇಗೆ ಕೆಲಸ ಮಾಡುತ್ತವೆ ಎಂಬ ಬಗ್ಗೆ ನಿಮಗೆ ತಿಳಿದಿದೆಯಾ?. ತಿಳಿದಿಲ್ಲ ಎಂದರೆ ಈಗ ತಿಳಿದುಕೊಳ್ಳಿ.
ಹೌದು, ಸ್ಮಾರ್ಟ್‌ಫೋನ್‌ಗಳು ಇಂದು ಪ್ರಪಂಚದಾದ್ಯಂತ ಇತರ ಡಿವೈಸ್‌ಗಳೊಂದಿಗೆ ಸಂವಹನ ನಡೆಸಲು ರೇಡಿಯೊ ತರಂಗಗಳನ್ನು ಬಳಸುತ್ತವೆ. ಇದರಿಂದಾಗಿ ಜನರು ಪರಸ್ಪರ ಸಂಪರ್ಕದಲ್ಲಿರಲು ಮತ್ತು ಎಲ್ಲಿಂದಲಾದರೂ ಮಾಹಿತಿಯನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಹಾಗೆಯೇ ಧ್ವನಿ ಮತ್ತು ಪಠ್ಯದ ಹೊರತಾಗಿ ಸೆಲ್ಯುಲಾರ್ ಡೇಟಾ ಪ್ಲ್ಯಾನ್ ಮೂಲಕ ಇಂಟರ್ನೆಟ್‌ಗೆ ಸಂಪರ್ಕವನ್ನೂ ಸಹ ಹೊಂದಬಹುದು. ಹಾಗೆಯೇ ಹಲವು ಆಪ್‌ಗಳ ಮೂಲಕ ವಿವಿಧ ಸೇವೆ ಸಹ ಪಡೆದುಕೊಳ್ಳಬಹುದು. ಹಾಗಿದ್ರೆ, ಬನ್ನಿ ಫೋನ್‌ಗಳ ಕಾರ್ಯಾಚರಣೆ ಬಗ್ಗೆ ತಿಳಿಯೋಣ.

ರೇಡಿಯೋ ತರಂಗಗಳ ಬಳಕೆ: ಈ ಹಿಂದೆ ಊರಲ್ಲಿ ಒಂದು ಅಥವಾ ಎರಡು ರೇಡಿಯೋಗಳಿದ್ದವು. ಅದರಲ್ಲಿ ಪ್ರಸಾರವಾಗುವುದನ್ನು ಕೇಳುತ್ತಿದ್ದ ನಮಗೆಲ್ಲಾ ರೇಡಿಯೋ ಒಳಗೆ ಯಾರಾದರೂ ಇದ್ದಾರೆಯೇ ಎನ್ನುವಂತೆ ಭಾಸವಾಗುತ್ತಿತ್ತು.ಆದರೆ, ವಿಷಯ ಅದಲ್ಲ. ಈಗ ಎಲ್ಲಾ ಫೋನ್‌ಗಳಲ್ಲೂ ನೀವು ರೇಡಿಯೋ ಆಲಿಸುವ ಆಯ್ಕೆ ನೀಡಲಾಗಿದೆ. ಅದರಂತೆ ಫೋನ್‌ಗಳು ಸಂಕೇತಗಳನ್ನು ರವಾನಿಸಲು ಮತ್ತು ಸ್ವೀಕರಿಸಲು ರೇಡಿಯೊ ತರಂಗಗಳನ್ನು ಬಳಕೆ ಮಾಡಿಕೊಳ್ಳುತ್ತವೆ
ಈ ಅಲೆಗಳು ಬೆಳಕಿನ ತರಂಗಗಳು ಅಥವಾ X ಕಿರಣಗಳಂತೆಯೇ ವಿದ್ಯುತ್ಕಾಂತೀಯ ವಿಕಿರಣದ ಒಂದು ವಿಧವಾಗಿದ್ದು, ನೀವು ಫೋನ್ ಕರೆ ಮಾಡಿದಾಗ ಅಥವಾ ಸಂದೇಶವನ್ನು ಬೇರೆಯವರಿಗೆ ಕಳುಹಿಸಿದಾಗ ಆ ಮಾಹಿತಿ ನಿಮ್ಮ ಫೋನ್‌ಗೆ ಹತ್ತಿರ ಇರುವ ಸೆಲ್ ಟವರ್‌ಗೆ ತರಂಗಗಳನ್ನು ಕಳುಹಿಸುತ್ತದೆ. ಇದಾದ ನಂತರ ಆ ಟವರ್ ಉದ್ದೇಶಿತ ಸ್ವೀಕರಿಸುವವರಿಗೆ ಸಂಕೇತವನ್ನು ರವಾನೆ ಮಾಡುತ್ತದೆ.
ಸೆಲ್ ಟವರ್ಸ್: ಈಗಂತೂ ಈ ಸೆಲ್ ಟವರ್ಸ್‌ಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಈ ಸೆಲ್ ಟವರ್‌ಗಳು ರೇಡಿಯೋ ಸಂಕೇತಗಳನ್ನು ಸ್ವೀಕರಿಸಲು ಮತ್ತು ರವಾನಿಸಲು ವಿನ್ಯಾಸಗೊಳಿಸಲಾದ ಎತ್ತರದ ಟವರ್ ಆಗಿವೆ. ಇವುಗಳನ್ನು ನಗರ ಅಥವಾ ನಿರ್ದಿಷ್ಟ ಪ್ರದೇಶದ ವ್ಯಾಪ್ತಿಗೆ ಸೇವೆ ನೀಡಲು ನಿರ್ಮಾಣ ಮಾಡಲಾಗುತ್ತದೆ. ನೀವು ಕರೆ ಮಾಡಿದಾಗ, ಪಠ್ಯ ಸಂದೇಶವನ್ನು ಕಳುಹಿಸಿದಾಗ ನಿಮ್ಮ ಫೋನ್ ಹತ್ತಿರದ ಸೆಲ್ ಟವರ್‌ಗೆ ಸಂಪರ್ಕಗೊಳ್ಳುತ್ತದೆ ನಂತರ ಅದು ಸ್ವೀಕರಿಸುವವರ ಫೋನ್‌ಗೆ ಸಂಕೇತವನ್ನು ಕಳುಹಿಸುತ್ತದೆ.

ಮೊಬೈಲ್ ನೆಟ್‌ವರ್ಕ್‌ಗಳು: ಈ ಮೊದಲು ತಿಳಿಸಲಾದ ಸೆಲ್ ಟವರ್‌ಗಳನ್ನು ಮೊಬೈಲ್ ನೆಟ್‌ವರ್ಕ್‌ಗಳಿಗೆ ಸಂಪರ್ಕಿಸಲಾಗುತ್ತದೆ. ಇವು ಪರಸ್ಪರ ಸಂಪರ್ಕ ಹೊಂದಿದ ಟವರ್‌ಗಳು ಮತ್ತು ಸ್ವಿಚ್‌ಗಳ ಸರಣಿಯಾಗಿದ್ದು, ಮೊಬೈಲ್ ಫೋನ್‌ಗಳು ಪರಸ್ಪರ ಸಂವಹನ ನಡೆಸಲು ಇವುಗಳು ಅನುಕೂಲ ಮಾಡಿಕೊಡುತ್ತವೆ. ಹಾಗೆಯೇ ಈ ನೆಟ್‌ವರ್ಕ್‌ಗಳನ್ನು AT&T, ವೆರಿಝೋನ್ ಅಥವಾ ಟಿ-ಮೊಬೈಲ್ ನಂತಹ ಮೊಬೈಲ್ ಫೋನ್ ಕಂಪೆನಿಗಳು ನಿರ್ವಹಿಸುತ್ತವೆ.
ಇಂಟರ್ನೆಟ್ ಸಂಪರ್ಕ: ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಪ್ರಮುಖವಾದ ವಿಷಯ ಎಂದರೆ ಅದು ಇಂಟರ್ನೆಟ್ ಸಂಪರ್ಕ. ವೆಬ್‌ಸೈಟ್‌ಗಳು, ಸಾಮಾಜಿಕ ಮಾಧ್ಯಮ, ಇಮೇಲ್ ಮತ್ತು ಇತರ ಆನ್‌ಲೈನ್ ಸೇವೆಗಳನ್ನು ಪಡೆದುಕೊಳ್ಳಲು ಇದು ಸಹಕಾರಿ. ಅಂದರೆ ನಿಮ್ಮ ಮೊಬೈಲ್ ಫೋನ್‌ನಲ್ಲಿ ನೀವು ಇಂಟರ್ನೆಟ್ ಅನ್ನು ಪ್ರವೇಶಿಸಿದಾಗ ನಿಮ್ಮ ಫೋನ್ ಮೊಬೈಲ್ ನೆಟ್‌ವರ್ಕ್‌ಗೆ ಸಂಪರ್ಕಗೊಳ್ಳುತ್ತದೆ. ಅದು ನಿಮ್ಮ ಡೇಟಾವನ್ನು ಇಂಟರ್ನೆಟ್‌ಗೆ ರವಾನಿಸುತ್ತದೆ. ಈ ಮೂಲಕ ನೀವು ನಿಮ್ಮ ಫೋನ್‌ನಲ್ಲಿ ಆನ್‌ಲೈನ್ ಸೇವೆಗಳನ್ನು ಪಡೆದುಕೊಳ್ಳಬಹುದು.

ಆಪ್‌ಗಳು: ಫೋನ್‌ಗಳ ಮೂಲಕ ನಿಮ್ಮ ವ್ಯಾಪ್ತಿಯನ್ನು ವಿಸ್ತರಣೆ ಮಾಡಿಕೊಳ್ಳಲು ಆಪ್‌ಗಳು ಸಹಕಾರಿ. ಈ ಆಪ್‌ಗಳ ಮೂಲಕ ನೀವು ಇಂದು ವಿಡಿಯೋ ಕರೆ ಮಾಡಬಹುದು, ಮೆಸೆಜ್ ಕಳುಹಿಸಬಹುದು, ಗೇಮ್ ಆಡಬಹುದು, ಮೀಟಿಂಗ್ ಮಾಡಬಹುದು, ಆಹಾರವನ್ನು ಆರ್ಡರ್ ಮಾಡಬಹುದು. ಇದರಿಂದಾಗಿ ನಿಮ್ಮ ಫೋನ್ ಇಂದು ಎಲ್ಲವನ್ನೂ ಸಾಧ್ಯವಾಗಿಸುವ ಡಿವೈಸ್ ಆಗಿ ಗುರುತಿಸಿಕೊಂಡಿದೆ.


Click it and Unblock the Notifications








