Just In
Don't Miss
- News
ಅತ್ಯಾಚಾರ ಆರೋಪಿಗಳ ಕೊಂದ ಪೊಲೀಸರ ಮೇಲೆ ಹೂಮಳೆ
- Finance
ಆರ್ಬಿಐನಿಂದ ಡಿಜಿಟಲ್ ಪಾವತಿಗೆ ಉತ್ತೇಜನ: ಬರಲಿದೆ ಪಿಪಿಐ ಕಾರ್ಡ್
- Movies
50 ದಿನ ಪೂರೈಸಿದ ಶ್ರೀಮುರಳಿ 'ಭರಾಟೆ' ಸಿನಿಮಾ
- Automobiles
ಇನ್ಮುಂದೆ ಬಂಕ್ಗಳಲ್ಲಿ ಬಾಟಲ್ಗಳಿಗೆ ಪೆಟ್ರೋಲ್ ಹಾಕಲ್ಲ..!
- Sports
'ರಣಹದ್ದು'ಗಳಿಂದ ಯುವ ಕ್ರಿಕೆಟಿಗರ ರಕ್ಷಿಸಬೇಕಿದೆ: ಪೊಲಾರ್ಡ್ ಹೇಳಿದ್ಯಾರಿಗೆ?!
- Lifestyle
ಉಗುರು ಕತ್ತರಿಸುವಾಗ ಈ ತಪ್ಪು ಮಾಡಿದರೆ ಸೋಂಕು ತಗುಲಬಹುದು
- Travel
ಲಕ್ಷದ್ವೀಪಕ್ಕೆ ಪ್ರವಾಸ ಹೋಗುವವರಿದ್ದೀರಾ? ಈ ಸಂಗತಿಗಳ ಬಗ್ಗೆ ಎಚ್ಚರಿಕೆ ಇರಲಿ
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
ಎಷ್ಟು ವೇಗವಾಗಿದೆ ಸ್ಯಾಮ್‌ಸಂಗ್ 'ಸೂಪರ್ ಫಾಸ್ಟ್' ಚಾರ್ಜಿಂಗ್ ತಂತ್ರಜ್ಞಾನ?
ಸ್ಯಾಮ್‌ಸಂಗ್ ಅಂದ ತಕ್ಷಣ ಬಹುತೇಕರಿಗೆ ಮೊದಲು ನೆನೆಪಿಗೆ ಬರುವುದು ಗ್ಯಾಲ್ಯಾಕ್ಸಿ ಸರಣಿಯ ಸ್ಮಾರ್ಟ್‌ಫೋನ್‌ಗಳು ಚಿತ್ರಣ. ಗ್ಯಾಲ್ಯಾಕ್ಸಿ ಕಂಪನಿಯ ಜನಪ್ರಿಯ ಸ್ಮಾರ್ಟ್‌ಫೋನ್ ಸರಣಿ ಆಗಿದ್ದು, ಈ ಸ್ಮಾರ್ಟ್‌ಪೋನ್‌ಗಳಲ್ಲಿ ಗ್ರಾಹಕರು ಹೆಚ್ಚಿನ ಬ್ಯಾಟರಿ ಬ್ಯಾಕ್‌ಅಪ್ ಅನ್ನು ನಿರೀಕ್ಷಿಸುತ್ತಿದ್ದರು. ಗ್ರಾಹಕರ ನಿರೀಕ್ಷೆಯಂತೆ ಇತ್ತೀಚಿನ ಫೋನ್‌ಗಳಲ್ಲಿ ಬ್ಯಾಟರಿ ಸಾಮರ್ಥ್ಯವನ್ನು ವೃದ್ಧಿಸುವ ಜೊತೆಗೆ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಪರಿಚಯಿಸಿದೆ.
ಹೌದು, ಸ್ಯಾಮ್‌ಸಂಗ್ ಕಂಪನಿಯು ಈ ವರ್ಷ 'ಗ್ಯಾಲ್ಯಾಕ್ಸಿ ಎಸ್10' ಸ್ಮಾರ್ಟ್‌ಫೋನ್‌ನಲ್ಲಿ 'ಸೂಪರ್ ಫಾಸ್ಟ್ ಚಾರ್ಜಿಂಗ್' ಟೆಕ್ನಾಲಜಿಯನ್ನು ಪರಿಚಯಿಸಿದ್ದು, ಬ್ಯಾಟರಿ ಮತ್ತು ವೇಗದ ಚಾರ್ಜಿಂಗ್‌ನತ್ತ ಗಮನ ನೀಡಿರುವುದಾಗಿ ಸೂಚನೆ ನೀಡಿದಂತಾಗಿದೆ. ಕಂಪನಿಯ ರೆಗ್ಯುಲರ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವು 15watts ಸಾಮರ್ಥ್ಯದಲ್ಲಿದ್ದರೇ, ಸೂಪರ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ 25watts ಶಕ್ತಿಯನ್ನು ಹೊಂದಿರುತ್ತದೆ.
ಮಾರುಕಟ್ಟೆಯಲ್ಲಿ ಚೀನಾ ಮೂಲದ ಶಿಯೋಮಿ, ಒಪ್ಪೊ, ವಿವೋ ಮತ್ತು ರಿಯಲ್ ಮಿ ಕಂಪನಿಗಳು ವೇಗದ ಚಾರ್ಜಿಂಗ್ ಸೌಲಭ್ಯಗಳನ್ನು ನೀಡುತ್ತಿದ್ದು, ಸದ್ಯ ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿರುವ ಸ್ಮಾರ್ಟ್‌ಫೋನಗಳನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗುತ್ತಾರೆ. ಸ್ಯಾಮ್‌ಸಂಗ್ ಸಹ ಚಾರ್ಜಿಂಗ್ ತಂತ್ರಜ್ಞಾನದಲ್ಲಿ ಹೊಸತನವನ್ನು ಅಳವಡಿಸಿಕೊಂಡಿದೆ. ಹಾಗಾದರೇ ಸ್ಯಾಮ್‌ಸಂಗ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಕುರಿತ ಮಾಹಿತಿಗಾಗಿ ಮುಂದೆ ಓದಿರಿ.

ಸೂಪರ್ ಫಾಸ್ಟ್ ಚಾರ್ಜರ್
ಸ್ಯಾಮ್‌ಸಂಗ್ ಕಂಪನಿಯು ಗ್ಯಾಲ್ಯಾಕ್ಸಿ ಸರಣಿಯ ನೂತನ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಸೂಪರ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದು, 25watts ಶಕ್ತಿಯನ್ನು ಸೌಲಭ್ಯವನ್ನು ಹೊಂದಿರುತ್ತದೆ. ಸ್ಮಾರ್ಟ್‌ಫೋನ್ ವೇಗವಾಗಿ ಚಾರ್ಜ್ ಪಡೆದುಕೊಳ್ಳಲು ಈ ತಂತ್ರಜ್ಞಾನ ನೆರವಾಗಲಿದೆ. 'ಗ್ಯಾಲ್ಯಾಕ್ಸಿ ಎಸ್10' ಫೋನಿನಲ್ಲಿ ಇ ಸೌಲಭ್ಯವನ್ನು ಒದಗಿಸಲಾಗಿದೆ.

ಕ್ವಿಕ್ ಚಾರ್ಜರ್ 2.0
ಗ್ರಾಹಕರ ಮೆಚ್ಚುಗೆ ಪಡೆದ ಗ್ಯಾಲ್ಯಾಕ್ಸಿ ಸರಣಿಯ 2014ರ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಪನಿಯು 'ಕ್ವಿಕ್ ಚಾರ್ಜರ್ 2.0' ತಂತ್ರಜ್ಞಾನವನ್ನು ಬಳಸಿದ್ದು, ಅದೇ ತಂತ್ರಜ್ಞಾನವನ್ನು ಗ್ಯಾಲ್ಯಾಕ್ಸಿ ಸರಣಿಯ ಇತರೆ ಫೋನ್‌ಗಳಲ್ಲಿಯು ಮುಂದುವರೆಸಿಕೊಂಡು ಬಂದಿತ್ತು. ಆದರೆ ನಂತರದಲ್ಲಿ ತಂತ್ರಜ್ಞಾನ ಅಪ್‌ಗ್ರೇಡ್ ಮಾಡಿಕೊಂಡ ಕಂಪನಿಯು 15w ಸಾಮರ್ಥ್ಯ ಚಾರ್ಜಿಂಗ್ ಸೌಲಭ್ಯವನ್ನು ಅಳವಡಿಸಿಕೊಂಡಿತು.

ಸೂಪರ್ ವೇಗ
ಪ್ರಸ್ತುತ ಸ್ಯಾಮ್‌ಸಂಗ್ ಕಂಪನಿಯ ಸೂಪರ್ ಫಾಸ್ಟ್ ಚಾರ್ಜರ್ ಸ್ಮಾರ್ಟ್‌ಫೋನ್‌ಗಳಿಗೆ ಸ್ಪೀಡ್‌ಆಗಿ ಚಾರ್ಜ್ ಒದಗಿಸುವ ಶಕ್ತಿಯನ್ನು ಒಳಗೊಂಡಿದೆ. ಸೂಪರ್ ಫಾಸ್ಟ್ ಚಾರ್ಜರ್ ಸುಮಾರು 30 ನಿಮಿಷ ಚಾರ್ಜ್ ಮಾಡಿದಾಗ ಸ್ಮಾರ್ಟ್‌ಫೋನ್‌ಗಳಿಗೆ ಶೇ.33% ನಷ್ಟು ಚಾರ್ಜ್ ಒದಗಿಸಲಿದೆ. ಸ್ಮಾರ್ಟ್‌ಫೋನ್‌ಗೆ 100watts ಶಕ್ತಿಯನ್ನು ಒದಗಿಸವ ಸಾಮರ್ಥ್ಯವನ್ನು ಹೊಂದಿದೆ.

15w ಚಾರ್ಜರ್
ಸ್ಯಾಮ್‌ಸಂಗ್ ತನ್ನ ಗ್ಯಾಲ್ಯಾಕ್ಸಿ ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಈಗ 15wನ ವೇಗದ ಚಾರ್ಜರ್ ಪರಿಚಯಿಸುತ್ತಿದ್ದು, ಈ ನಾರ್ಮಲ್ 15wನ ಚಾರ್ಜರ್ ಸುಮಾರು 30 ನಿಮಿಷಕ್ಕೆ ಸ್ಮಾರ್ಟ್‌ಫೋನ್‌ಗಳಿಗೆ ಶೇ.26%ರಷ್ಟು ಚಾರ್ಜ್ ಒದಗಿಸುವ ಶಕ್ತಿಯನ್ನು ಹೊಂದಿದೆ.

ಗ್ಯಾಲ್ಯಾಕ್ಸಿ ಸರಣಿಯಲ್ಲಿ ಲಭ್ಯ
ಸ್ಯಾಮ್‌ಸಂಗ್ ಸೂಪರ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವು ಗ್ಯಾಲ್ಯಾಕ್ಸಿಯ ನೂತನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಈ ವೇಗದ ಚಾರ್ಜೀಂಗ ಸೌಲಭ್ಯವನ್ನು ಒದಗಿಸಲಿದೆ. ಗ್ಯಾಲ್ಯಾಕ್ಸಿ ಎ70, ಗ್ಯಾಲ್ಯಾಕ್ಸಿ ಎಸ್10 ಮತ್ತು ಗ್ಯಾಲ್ಯಕ್ಸಿ ಎಸ್10 ಪ್ಲಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ.
ಓದಿರಿ : ಏರ್‌ಟೆಲ್‌ನ 'Wynk Tube' ಆಪ್ ಲಾಂಚ್!.40ಲಕ್ಷ ಹಾಡುಗಳ ಸಂಗಮ!
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090