ಫೇಸ್‌ಬುಕ್‌ನಲ್ಲಿ ಡಾರ್ಕ್‌ಮೋಡ್ ಆನ್ ಮಾಡುವುದು ಹೇಗೆ?
ಪ್ರಸ್ತುತ ಸ್ಮಾರ್ಟ್‌ಫೋನ್ ಬಳಕೆಯಲ್ಲಿ ಹೆಚ್ಚು ಕೇಳಿಬರುತ್ತಿರುವುದು ಡಾರ್ಕ್‌ಮೋಡ್ ಫೀಚರ್. ಸ್ಕ್ರೀನ್ ಬೆಳಕಿನ ಪ್ರಖರತೆಯನ್ನು ತಗ್ಗಿಸಿ ಕಣ್ಣುಗಳಿಗೆ ಹಿತ ಅನುಭವ ನೀಡುವ ಈ ಫೀಚರ್ಸ್ ಅನ್ನು ಇದೀಗ ಪ್ರಮುಖ ಅಪ್ಲಿಕೇಶನ್‌ಗಳು ಅಳವಡಿಸಿಕೊಳ್ಳುತ್ತಿವೆ. ಆ ಪೈಕಿ ಇದೀಗ ಸಾಮಾಜಿಕ ಜಾಲತಾಣಗಳ ದೊಡ್ಡಣ್ಣ ಎಂದೆನಿಸಿಕೊಂಡಿರುವ ಫೇಸ್‌ಬುಕ್ ಸಹ ಡಾರ್ಕ್ ಮೋಡ್ ಅಳವಡಿಸಿಕೊಂಡಿದ್ದು, ತನ್ನ ಬಳಕೆದಾರರಿಗೆ ಖುಷಿ ತಂದಿದೆ.

ಹೌದು, ಇತ್ತೀಚಿಗೆ ಫೇಸ್‌ಬುಕ್ ತನ್ನ ಅಂಗ ಸಂಸ್ಥೆಗಳಾದ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮೆಸೆಂಜರ್ ಮತ್ತು ವಾಟ್ಸಪ್‌ಗಳಲ್ಲಿ ಡಾರ್ಕ್ ಮೋಡ್ ಫೀಚರ್ ಅನ್ನು ಪರಿಚಯಿಸಿತ್ತು. ಅದರ ಮುಂದುವರಿದ ಭಾಗವಾಗಿ ಡೆಸ್ಕ್‌ಟಾಪ್ ಆವೃತ್ತಿಯ ಫೇಸ್‌ಬುಕ್ ಆಪ್‌ನಲ್ಲಿಯೂ ಈಗ ಡಾರ್ಕ್‌ಮೋಡ್ ರೋಲ್ ಔಟ್ ಮಾಡಿದೆ. ಸದ್ಯ ಪ್ರಾಯೋಗಿಕ ಹಂತದಲ್ಲಿ ಈ ಸೌಲಭ್ಯವನ್ನು ಶುರುಮಾಡಿರುವ ಫೇಸ್‌ಬುಕ್ ಸದ್ಯದಲ್ಲಿಯೇ ಸಾಮಾನ್ಯ ಆವೃತ್ತಿಯಲ್ಲಿಯು ಅಪ್‌ಡೇಟ್ ಮಾಡಲಿದೆ. ಹಾಗಾದರೇ ಡೆಸ್ಕ್ ಟಾಪ್ ಆವೃತ್ತಿಯ ಫೇಸ್‌ಬುಕ್‌ನಲ್ಲಿ ಡಾರ್ಕ್ ಮೋಡ್ ಸಕ್ರಿಯಗೊಳಿಸುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಾರ್ಕ್‌ಮೋಡ್ ವಿಶೇಷತೆ
ಇಂದಿನ ಬಹುತೇಕ ಹೊಸ ಸ್ಮಾರ್ಟ್‌ಫೋನ್‌ಗಳು ಅಧಿಕ ಸ್ಕ್ರೀನ್ ರೆಸಲ್ಯೂಶನ್ ಹೊಂದಿರುತ್ತವೆ. ಡಿಸ್‌ಪ್ಲೇಯು ಹೆಚ್ಚು ಪ್ರಖರವಾಗಿರುತ್ತದೆ. ಅತೀಯಾಗ ಬಳಕೆಯು ಕಣ್ಣುಗಳ ಮೇಲೆ ಒತ್ತಡ ಹೇರುತ್ತದೆ ಮುಖ್ಯವಾಗಿ ರಾತ್ರಿ ಅಥವಾ ಮಂದ ಬೆಳಕಿನಲ್ಲಿ ಕಣ್ಣುಗಳ ಮೇಲೆ ಇನ್ನಷ್ಟು ಇತ್ತಡ ಆಗುತ್ತದೆ. ಆದರೆ ಡಾರ್ಕ್‌ಮೋಡ್ ಆ ಆಯ್ಕೆಯು ಈ ಒತ್ತಡ ಕಡಿಮೆಗೊಳಿಸಲು ನೆರವಾಗಲಿದೆ. ಜೊತೆಗೆ ಫೋನ್ ಬ್ಯಾಟರಿ ಉಳಿಕೆಗೂ ನೆರವಾಗಲಿದೆ.

ಡೆಸ್ಕ್‌ಟಾಪ್ ಆವೃತ್ತಿಯ ಫೇಸ್‌ಬುಕ್‌ನಲ್ಲಿ ಡಾರ್ಕ್ ಮೋಡ್ ಆನ್ ಮಾಡಲು ಹೀಗೆ ಮಾಡಿ
* ಡೆಸ್ಕ್‌ಟಾಪ್‌ನಲ್ಲಿ ಫೇಸ್‌ಬುಕ್ ಅಕೌಂಟ್ ತೆರೆಯಿರಿ.
* ನಂತರ ಬಲಭಾಗದಲ್ಲಿ ಕಾಣುವ drop-down arrow-ಕೆಳಮುಖದ ಬಾಣದ ಗುರುತನ್ನು ಕ್ಲಿಕ್ಕ ಮಾಡಿರಿ.
* ಆನಂತರ ಕೆಳಗೆ ಸ್ಕ್ರಾಲ್ ಮಾಡಿ, ಸ್ವೀಚ್ ಟು ನ್ಯೂ ಫೇಸ್‌ಬುಕ್ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ.
* ಆಗ ಡೈಲಾಗ್ ಬಾಕ್ಸ್ ಕಾಣಿಸುತ್ತದೆ. ಅಲ್ಲಿಯೇ ರೆಗ್ಯುಲರ್ ಮೋಡ್ ಮತ್ತು ಡಾರ್ಕ್‌ಮೋಡ್ ಆಯ್ಕೆಗಳು ಕಾಣಿಸುತ್ತವೆ.
* ಡಾರ್ಕ್‌ಮೋಡ್ ಆನ್ ಮಾಡಲು ಆ ಆಯ್ಕೆಯನ್ನು ಸೆಲೆಕ್ಟ್ ಮಾಡುವುದು.

ವಾಟ್ಸಪ್‌ನಲ್ಲಿಯೂ ಡಾರ್ಕ್‌ಮೋಡ್
* ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ವಾಟ್ಸಪ್ ಆಪ್ ತೆರೆಯಿರಿ.
* ಮೆನು(ಮೂರು ಡಾಟ್) ಸೆಟ್ಟಿಂಗ್ ಕ್ಲಿಕ್ ಮಾಡಿರಿ.
* ನಂತರ ಚಾಟ್ಸ್(chats) ಆಯ್ಕೆ ಸೆಲೆಕ್ಟ್ ಮಾಡಿರಿ.
* ಚಾಟ್ಸ್ ಆಯ್ಕೆ ತೆರೆದಾಗ (Theme) 'ಥೀಮ್' ಆಯ್ಕೆ ಕಾಣಿಸುತ್ತದೆ.
* ಥೀಮ್ ಆಯ್ಕೆಯಲ್ಲಿ- ಸೆಟ್ ಬೈ ಬ್ಯಾಟರಿ ಸೇವರ್, ಲೈಟ್ ಮತ್ತು ಡಾರ್ಕ್ ಆಯ್ಕೆಗಳು ಕಾಣಿಸುತ್ತವೆ.
* ಅವುಗಳಲ್ಲಿ ಡಾರ್ಕ್ ಆಯ್ಕೆ ಸೆಲೆಕ್ಟ್ ಮಾಡಿರಿ.

ಇನ್‌ಸ್ಟಾಗ್ರಾಂ ಮತ್ತು ಮೆಸೆಂಜರ್‌ನಲ್ಲಿಯೂ ಡಾರ್ಕ್‌ಮೋಡ್
ಇತ್ತೀಚಿಗೆ ಫೇಸ್‌ಬುಕ್ ತನ್ನ ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಮೆಸೆಂಜರ್‌ಗಳಲ್ಲಿಯೂ ಡಾರ್ಕ್‌ಮೋಡ್ ಫೀಚರ್ ಲಭ್ಯಮಾಡಿದೆ. ಈ ಮಂದ ಬೆಳಕಿನಲ್ಲಿ ಹಾಗೂ ರಾತ್ರಿ ವೇಳೆ ಈ ಆಪ್ಸ್ ಬಳಕೆ ಮಾಡುವಾಗ ಡಾರ್ಕ್‌ಮೋಡ್ ಆಯ್ಕೆಯನ್ನು ಸಕ್ರಿಯ ಮಾಡಿಕೊಳ್ಳಬಹುದಾಗಿದೆ.


Click it and Unblock the Notifications








